IPL 2021 Final CSK vs KKR: ಐಪಿಎಲ್ 2021 ಫೈನಲ್​ನಲ್ಲಿ ಸಿಎಸ್​ಕೆ-ಕೆಕೆಆರ್ ಕಾದಾಟ: ಯಾವ ತಂಡ ಬಲಿಷ್ಠ, ಪಂದ್ಯ ಎಲ್ಲಿ, ಪಿಚ್ ಹೇಗಿದೆ?

IPL 2021: Final, CSK vs KKR Match Prediction: ಒಂಬತ್ತನೇ ಬಾರಿ ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯ ಫೈನಲ್ ಪ್ರವೇಶಿಸಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡ ಈಗ ನಾಲ್ಕನೇ ಬಾರಿ ಪ್ರಶಸ್ತಿ ಜಯಿಸುತ್ತಾ ಎಂಬುದೇ ಕುತೂಹಲ. ಇತ್ತ ಮೂರನೇ ಬಾರಿಗೆ ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ ಫೈನಲ್ ತಲುಪಿರುವ ಕೆಕೆಆರ್ ಕೂಡ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡವಾಗಿದೆ.

IPL 2021 Final CSK vs KKR: ಐಪಿಎಲ್ 2021 ಫೈನಲ್​ನಲ್ಲಿ ಸಿಎಸ್​ಕೆ-ಕೆಕೆಆರ್ ಕಾದಾಟ: ಯಾವ ತಂಡ ಬಲಿಷ್ಠ, ಪಂದ್ಯ ಎಲ್ಲಿ, ಪಿಚ್ ಹೇಗಿದೆ?
IPL 2021 Final CSK vs KKR

14ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ (IPL 2021) ಅಂತಿಮ ಹಂತಕ್ಕೆ ಬಂದುನಿಂತಿದೆ. ಶುಕ್ರವಾರ ಎಂ. ಎಸ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಇಯಾನ್ ಮಾರ್ಗನ್ ನೇತೃತ್ವದ ಕೋಲ್ಕತ್ತಾ ನೈಟ್ ರೈಡರ್ಸ್ (CSK vs KKR, IPL 2021 Final) ತಂಡ ಫೈನಲ್ ಪಂದ್ಯದಲ್ಲಿ ಪ್ರಶಸ್ತಿಗಾಗಿ ಕಾದಾಟ ನಡೆಸಲಿದೆ. ಕಳೆದ ವರ್ಷದ ಐಪಿಎಲ್ ಟೂರ್ನಿಯಲ್ಲಿ ಮೊದಲ ತಂಡವಾಗಿ ಲೀಗ್​ನಿಂದ ಹೊರಬಿದ್ದ ಧೋನಿ (MS Dhoni) ಪಡೆ ಈ ಬಾರಿ ಮೊದಲ ತಂಡವಾಗಿ ಫೈನಲ್​ಗೆ ತಲುಪಿ ಊಹಿಸಲಾಗದ ರೀತಿಯಲ್ಲಿ ಕಮ್​ಬ್ಯಾಕ್ ಮಾಡಿದೆ. ಇತ್ತ ಕೆಕೆಆರ್ ಯುಎಇ ಲೀಗ್​ನಲ್ಲಿ ಅಚ್ಚರಿ ಎಂಬಂತೆ ಜಯ ಸಾಧಿಸಿ ಇಂದು ಫೈನಲ್​ಗೆ ಬಂದುನಿಂತಿದೆ. ಒಪನರ್​ಗಳ ಬಲ ಮತ್ತು ಸ್ಪಿನ್ನರ್​ಗಳ ಕೈಚಳಕವೇ ಕೋಲ್ಕತ್ತಾ (KKR) ತಂಡದ ಆಸ್ತಿ. ಇತ್ತ ಚೆನ್ನೈ ಕೂಡ ಆರಂಭಿಕರನ್ನೇ ಹೆಚ್ಚಾಗಿ ನೆಚ್ಚಿಕೊಂಡಿದೆ.

ಒಂಬತ್ತನೇ ಬಾರಿ ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯ ಫೈನಲ್ ಪ್ರವೇಶಿಸಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡ ಈಗ ನಾಲ್ಕನೇ ಬಾರಿ ಪ್ರಶಸ್ತಿ ಜಯಿಸುತ್ತಾ ಎಂಬುದೇ ಕುತೂಹಲ. ಇತ್ತ ಮೂರನೇ ಬಾರಿಗೆ ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ ಫೈನಲ್ ತಲುಪಿರುವ ಕೆಕೆಆರ್ ಕೂಡ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡವಾಗಿದೆ.

ಐಪಿಎಲ್ 2021 ಫೈನಲ್ ಯಾವಾಗ?, ಏಲ್ಲಿ?:

ಅಕ್ಟೋಬರ್ 15 ಶುಕ್ರವಾರ, ದುಬೈ ಅಂತರರಾಷ್ಟ್ರೀಯ ಕ್ರೀಡಾಂಗಣ

ಸಮಯ:

ಐಪಿಎಲ್ 2021ರ 60ನೇ ಪಂದ್ಯ ಸಿಎಸ್​ಕೆ ಮತ್ತು ಕೆಕೆಆರ್ ಕದನ ಭಾರತೀಯ ಕಾಲಮಾನದ ಪ್ರಕಾರ ಸಂಜೆ 7:30ಕ್ಕೆ ಆರಂಭವಾಗಲಿದೆ.

ಪಿಚ್ ಹೇಗಿದೆ?:

ದುಬೈನ ಅಂತರರಾಷ್ಟ್ರೀಯ ಮೈದಾನ ಈಗಾಗಲೇ ಹಲವು ಐಪಿಎಲ್‌ ಪಂದ್ಯಗಳಿಗೆ ಸಾಕ್ಷಿಯಾಗಿದೆ. ಇಲ್ಲಿನ ಪಿಚ್‌ ಸಮಯೋಜಿತವಾಗಿದೆ. ಹೊಸ ಚೆಂಡಿನಲ್ಲಿ ವೇಗಿಗಳು ಈ ಪಿಚ್‌ನ ಲಾಭ ಪಡೆದುಕೊಳ್ಳಬಹುದಾಗಿದೆ. ಆದರೆ, ಈ ಪಿಚ್‌ನಲ್ಲಿ ವಿಕೆಟ್‌ಗಳನ್ನು ಉಳಿಸಿಕೊಳ್ಳುವುದು ಬಹುಮುಖ್ಯ ಸಂಗತಿಯಾಗಿದೆ. ಪಂದ್ಯ ಸಾಗುತ್ತಿದ್ದಂತೆ ಬ್ಯಾಟಿಂಗ್ ಸ್ವಲ್ಪ ಸುಲಭವಾಗಲಿದೆ. ಕೊನೆಯ 11 ಪಂದ್ಯಗಳಲ್ಲಿ ಇಲ್ಲಿ ಟಾರ್ಗೆಟ್ ಬೆನ್ನಟ್ಟಿದ ತಂಡ 9 ಪಂದ್ಯಗಳಲ್ಲಿ ಗೆದ್ದಿವೆ.

ಉಭಯ ತಂಡಗಳು ಐಪಿಎಲ್​ನಲ್ಲಿ ಈವರೆಗೆ 27 ಪಂದ್ಯಗಳಲ್ಲಿ ಮುಖಾಮುಖಿ ಆಗಿವೆ. ಇದರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ 17 ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ತಂಡ 9 ಪಂದ್ಯಗಳಲ್ಲಿ ಗೆದ್ದ ಇತಿಹಾಸವಿದೆ. ಯುಎಇ ಪಿಚ್​ನಲ್ಲಿ ಇವರು ಮೂರು ಪಂದ್ಯಗಳಲ್ಲಿ ಎದುರಾಗಿದ್ದಾರೆ. ಇದರಲ್ಲಿ ಸಿಎಸ್​ಕೆ 2 ಮತ್ತು ಕೆಕೆಆರ್ ಒಂದರಲ್ಲಿ ಜಯ ಸಾಧಿಸಿದೆ.

Team India jersey: ಬುರ್ಜ್ ಖಲೀಫಾದಲ್ಲಿ ರಾರಾಜಿಸಿದ ಟೀಮ್ ಇಂಡಿಯಾ ನೂತನ ಜರ್ಸಿ

Rishabh Pant: ಫೈನಲ್​ಗೇರಲು ಡೆಲ್ಲಿ ವಿಫಲ: ಕೆಕೆಆರ್ ವಿರುದ್ಧ ಸೋತ ಬಳಿಕ ರಿಷಭ್ ಪಂತ್ ಏನಂದ್ರು ಕೇಳಿ

(IPL 2021 Final CSK vs KKR IPL Final Match Date IST Time Live Streaming Pitch report Head to Head)

Read Full Article

Click on your DTH Provider to Add TV9 Kannada