ವಿಶ್ರಾಂತಿ ಸಾಕು… ರೋಹಿತ್ ಶರ್ಮಾ, ವಿರಾಟ್ ಕೊಹ್ಲಿನೂ ಆಡಬೇಕು: ಗಂಭೀರ್ ಖಡಕ್ ಸೂಚನೆ..!
India vs Sri Lanka: ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ನಿಂದ ನಿವೃತ್ತಿ ಘೋಷಿಸಿರುವ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಶ್ರೀಲಂಕಾ ವಿರುದ್ಧದ ಟಿ20 ಸರಣಿಯಲ್ಲಿ ಕಾಣಿಸಿಕೊಳ್ಳುವುದಿಲ್ಲ. ಆದರೆ ಲಂಕಾ ವಿರುದ್ಧದ ಏಕದಿನ ಸರಣಿಗೆ ಇವರನ್ನು ಆಯ್ಕೆ ಮಾಡಬೇಕೆಂದು ಟೀಮ್ ಇಂಡಿಯಾದ ನೂತನ ಕೋಚ್ ಗೌತಮ್ ಗಂಭೀರ್ ಒತ್ತಾಯಿಸಿದ್ದಾರೆ.
ಶ್ರೀಲಂಕಾ ವಿರುದ್ಧದ ಸರಣಿಯಲ್ಲಿ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಸೇರಿದಂತೆ ಹಿರಿಯ ಆಟಗಾರರನ್ನು ಆಯ್ಕೆ ಮಾಡಬೇಕು ಎಂದು ಟೀಮ್ ಇಂಡಿಯಾದ ನೂತನ ಕೋಚ್ ಗೌತಮ್ ಗಂಭೀರ್ ಆಯ್ಕೆ ಸಮಿತಿಗೆ ತಿಳಿಸಿದ್ದಾರೆ ಎಂದು ವರದಿಯಾಗಿದೆ. ಟಿ20 ವಿಶ್ವಕಪ್ ಬಳಿಕ ಟೀಮ್ ಇಂಡಿಯಾ ಆಟಗಾರರಿಗೆ ವಿಶ್ರಾಂತಿ ಸಿಕ್ಕಿದೆ. ಹೀಗಾಗಿ ರೋಹಿತ್ ಶರ್ಮಾ ಸೇರಿದಂತೆ ಪ್ರಮುಖರನ್ನು ತಂಡದ ಆಯ್ಕೆ ಪರಿಗಣಿಸಬೇಕೆಂದು ಎಂದು ಗಂಭೀರ್ ತಿಳಿಸಿದ್ದಾರೆ.
ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಹಾಗೂ ಜಸ್ಪ್ರೀತ್ ಬುಮ್ರಾಗೆ ಮುಂಬರುವ ಸರಣಿವರೆಗೆ ವಿಶ್ರಾಂತಿ ನೀಡುವ ಅಗತ್ಯವಿಲ್ಲ. ಏಕೆಂದರೆ ಶ್ರೀಲಂಕಾ ವಿರುದ್ಧದ ಏಕದಿನ ಸರಣಿ ಶುರುವಾಗುವುದು ಆಗಸ್ಟ್ 2 ರಿಂದ, ಹಾಗೆಯೇ ಆಗಸ್ಟ್ 7 ಕ್ಕೆ ಸರಣಿ ಮುಗಿಯಲಿದೆ. ಇದಾದ ಬಳಿಕ ಬಾಂಗ್ಲಾದೇಶ್ ವಿರುದ್ಧದ ಸರಣಿಗಾಗಿ 6 ವಾರಗಳ ಅಂತರವಿದೆ. ಹೀಗಾಗಿ ಹಿರಿಯ ಆಟಗಾರರನ್ನು ಶ್ರೀಲಂಕಾ ಸರಣಿಯಿಂದ ಹೊರಗಿಡುವುದು ಸೂಕ್ತವಲ್ಲ ಎಂದು ಗೌತಮ್ ಗಂಭೀರ್ ಆಯ್ಕೆಗಾರರಿಗೆ ತಿಳಿಸಿದ್ದಾರೆ.
ಬಾಂಗ್ಲಾದೇಶ್ ವಿರುದ್ಧದ ಸರಣಿಯು ಸೆಪ್ಟೆಂಬರ್ 19 ರಿಂದ ಶುರುವಾಗಲಿದೆ. ಅತ್ತ ಶ್ರೀಲಂಕಾ ವಿರುದ್ಧದ ಸರಣಿ ಆಗಸ್ಟ್ 7 ಕ್ಕೆ ಮುಗಿಯಲಿದೆ. ಈ ಎರಡು ಸರಣಿಗಳ ನಡುವೆ ಸುದೀರ್ಘ ವಿರಾಮವನ್ನು ಪಡೆಯಬಹುದು. ಹಾಗಾಗಿ ಶ್ರೀಲಂಕಾ ವಿರುದ್ಧದ ಏಕದಿನ ಸರಣಿ ವೇಳೆ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಹಾಗೂ ಜಸ್ಪ್ರೀತ್ ಬುಮ್ರಾ ಅವರಿಗೆ ವಿಶ್ರಾಂತಿ ನೀಡುವುದು ಸರಿಯಲ್ಲ ಎಂಬ ವಾದವನ್ನು ಗಂಭೀರ್ ಆಯ್ಕೆ ಸಮಿತಿಯ ಮುಂದಿಟ್ಟಿದ್ದಾರೆ. ಈ ಮೂಲಕ ಪ್ರಮುಖ ಆಟಗಾರರನ್ನು ಲಂಕಾ ವಿರುದ್ಧದ ಏಕದಿನ ಸರಣಿಗೆ ಆಯ್ಕೆ ಮಾಡುವಂತೆ ಗೌತಮ್ ಗಂಭೀರ್ ಒತ್ತಾಯಿಸಿದ್ದಾರೆ ಎಂದು ವರದಿಯಾಗಿದೆ.
ಇದಕ್ಕೂ ಮುನ್ನ ಬಾಂಗ್ಲಾದೇಶ್ ವಿರುದ್ಧದ ಸರಣಿ ಮೂಲಕ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಹಾಗೂ ಜಸ್ಪ್ರೀತ್ ಬುಮ್ರಾ ಕಂಬ್ಯಾಕ್ ಮಾಡಲಿದ್ದಾರೆ ಎನ್ನಲಾಗಿತ್ತು. ಆದರೀಗ ಶ್ರೀಲಂಕಾ ಮತ್ತು ಬಾಂಗ್ಲಾದೇಶ್ ಸರಣಿಗಳ ನಡುವಣ ಅಂತರವನ್ನು ಗೌತಮ್ ಗಂಭೀರ್ ಬಿಸಿಸಿಐ ಆಯ್ಕೆಗಾರರ ಮುಂದಿಟ್ಟಿದ್ದಾರೆ. ಹೀಗಾಗಿ ಶ್ರೀಲಂಕಾ ವಿರುದ್ಧದ ಸರಣಿಯಲ್ಲಿ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಮತ್ತು ಜಸ್ಪ್ರೀತ್ ಬುಮ್ರಾ ಕಾಣಿಸಿಕೊಳ್ಳಲಿದ್ದಾರಾ ಎಂಬುದೇ ಈಗ ಕುತೂಹಲ.
ಭಾರತ ಮತ್ತು ಶ್ರೀಲಂಕಾ ಟಿ20 ಸರಣಿ ವೇಳಾಪಟ್ಟಿ:
- ಮೊದಲ ಟಿ20: ಜುಲೈ 27 (ಪಲ್ಲೆಕೆಲೆ) – 7 PM IST
- ಎರಡನೇ ಟಿ20: ಜುಲೈ 28 (ಪಲ್ಲೆಕೆಲೆ) – 7 PM IST
- ಮೂರನೇ ಟಿ20: ಜುಲೈ 30 (ಪಲ್ಲೆಕೆಲೆ) – 7 PM IST
ಇದನ್ನೂ ಓದಿ: ಚಾಂಪಿಯನ್ಸ್ ಟ್ರೋಫಿಯಿಂದ ಟೀಮ್ ಇಂಡಿಯಾ ಹಿಂದೆ ಸರಿದರೆ, ಯಾವ ತಂಡಕ್ಕೆ ಚಾನ್ಸ್?
ಭಾರತ ಮತ್ತು ಶ್ರೀಲಂಕಾ ಏಕದಿನ ಸರಣಿ ವೇಳಾಪಟ್ಟಿ:
- ಮೊದಲ ಏಕದಿನ: ಆಗಸ್ಟ್ 2 (ಕೊಲಂಬೊ) – 2.30 PM IST
- ಎರಡನೇ ಏಕದಿನ: ಆಗಸ್ಟ್ 4 (ಕೊಲಂಬೊ) – 2.30 PM IST
- ಮೂರನೇ ಏಕದಿನ: ಆಗಸ್ಟ್ 7 (ಕೊಲಂಬೊ) – 2.30 PM IST