3 ಬೌಂಡರಿ, 6 ಸಿಕ್ಸರ್.. 16 ಎಸೆತಗಳಲ್ಲಿ 50 ರನ್ ಚಚ್ಚಿದ 18 ವರ್ಷದ ಯುವ ಬ್ಯಾಟ್ಸ್‌ಮನ್ ಹೆಸರಲ್ಲಿ ವಿಶಿಷ್ಟ ದಾಖಲೆ
19 ಎಸೆತಗಳಲ್ಲಿ 51 ರನ್ ಗಳ ಇನ್ನಿಂಗ್ಸ್ ಆಡಿದ ಈ ಬ್ಯಾಟ್ಸ್ ಮನ್ ರುವಾಂಡಾಗೆ ಒಂದು ವಿಕೆಟ್ ರೋಚಕ ಗೆಲುವು ನೀಡಿದರು. ಮಾರ್ಟಿನ್ ಅಕೈಜು ತನ್ನ ಅರ್ಧಶತಕದ ಇನ್ನಿಂಗ್ಸ್‌ನಲ್ಲಿ ಮೂರು ಬೌಂಡರಿ ಮತ್ತು ಆರು ಸಿಕ್ಸರ್‌ಗಳನ್ನು ಹೊಡೆದರು.
18 ವರ್ಷದ ಬ್ಯಾಟ್ಸ್‌ಮನ್ ತನ್ನ ಚೊಚ್ಚಲ ಟಿ 20 ಪಂದ್ಯದಲ್ಲಿ ತನ್ನ ಬ್ಯಾಟಿಂಗ್ ಮೂಲಕ ಜಗತ್ತಿನ ಗಮನ ಸೆಳೆದಿದ್ದಾನೆ. ಈ ಆಟಗಾರ ಕಠಿಣ ಪರಿಸ್ಥಿತಿಯಲ್ಲಿ ತನ್ನ ತಂಡಕ್ಕೆ ನೆರವಾಗಿದ್ದಾನೆ. ಈ ಬ್ಯಾಟಿಂಗ್‌ನಿಂದಾಗಿ ಅನೇಕ ದಾಖಲೆಗಳು ಈತನ ಪಾಲಾಗಿವೆ. ಇಲ್ಲಿ ನಾವು ಘಾನಾ ಮತ್ತು ರುವಾಂಡಾ ನಡುವಿನ ಮೊದಲ ಟಿ 20 ಪಂದ್ಯದ ಬಗ್ಗೆ ಮಾತನಾಡುತ್ತಿದ್ದೇವೆ. ಇದರಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಘಾನಾ ಐದು ವಿಕೆಟ್ಗೆ 164 ರನ್ ಗಳಿಸಿತು. ನಂತರ ರುವಾಂಡಾ ಎದುರಾಳಿ ವಿರುದ್ಧ ಮಂಕಅಯಿತು. ಆದರೆ 18 ವರ್ಷದ ಮಾರ್ಟಿನ್ ಅಕಾಯೆಜು ಪಂದ್ಯದ ಗತ್ತಿಯನ್ನೆ ಬದಲಾಯಿಸಿದರು. 19 ಎಸೆತಗಳಲ್ಲಿ 51 ರನ್ ಗಳ ಇನ್ನಿಂಗ್ಸ್ ಆಡಿದ ಈ ಬ್ಯಾಟ್ಸ್ ಮನ್ ರುವಾಂಡಾಗೆ ಒಂದು ವಿಕೆಟ್ ರೋಚಕ ಗೆಲುವು ನೀಡಿದರು. ಮಾರ್ಟಿನ್ ಅಕೈಜು ತನ್ನ ಅರ್ಧಶತಕದ ಇನ್ನಿಂಗ್ಸ್‌ನಲ್ಲಿ ಮೂರು ಬೌಂಡರಿ ಮತ್ತು ಆರು ಸಿಕ್ಸರ್‌ಗಳನ್ನು ಹೊಡೆದರು. ಇದು ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಅವರ ಚೊಚ್ಚಲ ಪಂದ್ಯವಾಗಿತ್ತು. ಈ ಗೆಲುವಿನೊಂದಿಗೆ ರುವಾಂಡಾ ಐದು ಪಂದ್ಯಗಳ ಸರಣಿಯಲ್ಲಿ 1-0ಯಿಂದ ಮುನ್ನಡೆ ಸಾಧಿಸಿತು.
ಟಾಸ್ ಗೆದ್ದ ಘಾನಾ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿತು. ಆರಂಭಿಕ ಅಮೋಲಕ್ ಸಿಂಗ್ 40 ಎಸೆತಗಳಲ್ಲಿ 58 ರನ್ ಗಳಿಸಿದರು. ಸಿಂಗ್ ತಮ್ಮ ಇನ್ನಿಂಗ್ಸ್‌ನಲ್ಲಿ ಒಂಬತ್ತು ಬೌಂಡರಿ ಮತ್ತು ಒಂದು ಸಿಕ್ಸರ್ ಬಾರಿಸಿದರು. ಅವರ ಹೊರತಾಗಿ, ಜೇಮ್ಸ್ ವೈಫಾ 29 ಮತ್ತು ಸ್ಯಾಮ್ಸನ್ ಏವಿಯಾ 22 ರನ್ ಗಳಿಸಿದರು. ಘಾನಾ ಬ್ಯಾಟಿಂಗ್‌ನಲ್ಲಿ ಸ್ಟ್ರೈಕ್ ರೇಟ್ ತುಂಬಾ ಕಡಿಮೆಯಿತ್ತು ಮತ್ತು ಇಡೀ ಇನ್ನಿಂಗ್ಸ್‌ನಲ್ಲಿ ಕೇವಲ ಒಂದು ಸಿಕ್ಸರ್ ಮಾತ್ರ ದಾಖಲಾಯಿತು. ಆದರೆ 23 ರನ್ಗಳು ಹೆಚ್ಚುವರಿ ರನ್ ಮೂಲಕ ಬಂದವು. ಈ ಕಾರಣದಿಂದಾಗಿ ಸ್ಕೋರ್ ಐದು ವಿಕೆಟ್ಗೆ 164 ರನ್ ತಲುಪಿತು. ರುವಾಂಡಾದ ಪರವಾಗಿ ಜಪಿ ಬಿಮೆನಿಮಾನಾ ಅತಿ ಹೆಚ್ಚು ಎರಡು ವಿಕೆಟ್ ಪಡೆದರು. ಗುರಿಯನ್ನು ಬೆನ್ನಟ್ಟಿದ ರುವಾಂಡಾದ ಆರಂಭವೂ ದುರ್ಬಲ ಮತ್ತು ನಿಧಾನವಾಗಿತ್ತು. ಓಪನರ್ ಡಿಡಿಯರ್ ಎನ್ಬಿಕುವಿಮಾನ 30 ಎಸೆತಗಳನ್ನು ಎದುರಿಸಿ ಕೇವಲ 11 ರನ್ ಗಳಿಸಿದರು. ಎರಡನೇ ಆರಂಭಿಕ ಎರಿಕ್ ಡುಸಿಂಗಿಜಿಮಾನ 22 ಎಸೆತಗಳಲ್ಲಿ ಐದು ಬೌಂಡರಿ ಹಾಗೂ ಒಂದು ಸಿಕ್ಸರ್ ಸಹಿತ 34 ರನ್ ಗಳಿಸಿದರು.
ಸಿಕ್ಸರ್ ಹೊಡೆಯುವ ಮೂಲಕ ಐವತ್ತನ್ನು ಪೂರೈಸಿದರು ಇಂತಹ ಪರಿಸ್ಥಿತಿಯಲ್ಲಿ, ಆರ್ಕಿಡ್ ಟ್ಯುಯೆಂಜ್ ಮತ್ತು ಮಾರ್ಟಿನ್ ಅಕಾಯೇಜು ಒಟ್ಟಾಗಿ ಮಧ್ಯಮ ಕ್ರಮಾಂಕದಲ್ಲಿ ಇನ್ನಿಂಗ್ಸ್‌ಗೆ ವೇಗ ನೀಡಿದರು. ತುಯಿಸೆಂಗ್ 10 ಎಸೆತಗಳಲ್ಲಿ ಮೂರು ಬೌಂಡರಿ ಮತ್ತು ಒಂದು ಸಿಕ್ಸರ್ ನೊಂದಿಗೆ 23 ರನ್ ಗಳಿಸಿದರು. ಅದೇ ಸಮಯದಲ್ಲಿ, ಅಕಾಯೇಜು ಕೂಡ ವೇಗವಾಗಿ ರನ್ ಗಳಿಸಿದರು. ಆದರೆ ಇನ್ನೊಂದು ತುದಿಯಲ್ಲಿ ಸತತ ವಿಕೆಟ್ ಪತನದಿಂದಾಗಿ ಅವರು ಏಕಾಂಗಿಯಾಗಿದ್ದರು. ಆದರೆ ತನ್ನ ಆಟದಲ್ಲಿ ಯಾವುದೇ ಬದಲಾವಣೆ ತೋರಲಿಲ್ಲ. ಕೇವಲ 16 ಎಸೆತಗಳಲ್ಲಿ ಸಿಕ್ಸರ್ ಸಹಾಯದಿಂದ ತನ್ನ ಅರ್ಧಶತಕವನ್ನು ಪೂರ್ಣಗೊಳಿಸಿದನು. ಈ ಮೂಲಕ ಅವರು ಚೊಚ್ಚಲ ಪಂದ್ಯದಲ್ಲೇ ಅರ್ಧಶತಕವನ್ನು ಪೂರೈಸಿದರು. ಆದಾಗ್ಯೂ, ಅವರು ಗುರಿಗಿಂತ ಮುಂಚೆಯೇ ಔಟಾದರು. ಅವರು ತಮ್ಮ 19 ಎಸೆತಗಳಲ್ಲಿ ಮೂರು ಬೌಂಡರಿ ಮತ್ತು ಆರು ಸಿಕ್ಸರ್‌ಗಳನ್ನು ಬಾರಿಸಿದರು. ಅಕಾಯೇಜು 268.4 ಸ್ಟ್ರೈಕ್ ರೇಟ್ ನಲ್ಲಿ ರನ್ ಗಳಿಸಿದರು. ಆದರೆ ಕೊನೆಯ ಜೋಡಿ ಎರಡು ಎಸೆತಗಳು ಬಾಕಿ ಇರುವಾಗ ತಂಡದ ಗೆಲುವನ್ನು ನೀಡಿತು.