Glenn Maxwell: ಆರ್​ಸಿಬಿ ಸೋತ ತಕ್ಷಣ ಅಭಿಮಾನಿಗಳ ಮೇಲೆ ಕೆಂಡಾಮಂಡಲರಾದ ಗ್ಲೆನ್ ಮ್ಯಾಕ್ಸ್​ವೆಲ್: ಯಾಕೆ ಗೊತ್ತಾ?

| Updated By: Vinay Bhat

Updated on: Oct 12, 2021 | 12:32 PM

RCB vs KKR, IPL 2021 Eliminator: ಐಪಿಎಲ್ 2021ರ ಎಲಿಮಿನೇಟರ್ ಪಂದ್ಯದಲ್ಲಿ ಕೆಕೆಆರ್ ವಿರುದ್ಧ ಆರ್​ಸಿಬಿ ಸೋತ ಬೆನ್ನಲ್ಲೇ ಕೆಲ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಕೆಟ್ಟದಾಗಿ ಪೋಸ್ಟ್ ಹಾಕಿದ್ದಾರೆ. ಇಂತವರಿಗೆ ಮ್ಯಾಕ್ಸ್​ವೆಲ್ ಖಡಕ್ ಉತ್ತರ ಕೂಡ ಕೊಟ್ಟಿದ್ದಾರೆ.

Glenn Maxwell: ಆರ್​ಸಿಬಿ ಸೋತ ತಕ್ಷಣ ಅಭಿಮಾನಿಗಳ ಮೇಲೆ ಕೆಂಡಾಮಂಡಲರಾದ ಗ್ಲೆನ್ ಮ್ಯಾಕ್ಸ್​ವೆಲ್: ಯಾಕೆ ಗೊತ್ತಾ?
Glenn Maxwell Twitter RCB vs KKR
Follow us on

ಆರ್​ಸಿಬಿ (RCB) ತಂಡ 14ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್​ನಿಂದ (IPL 2021) ಹೊರಬಿದ್ದಾಗಿದೆ. ಈ ಬಾರಿಯೂ ಕಪ್ ಗೆಲ್ಲುವಲ್ಲಿ ರಾಯಲ್ ಚಾಲೆಂಜರ್ಸ್ (Royal Challengers Bangalore) ವಿಫಲವಾದರೆ ಕೋಟ್ಯಾಂತರ ಅಭಿಮಾನಿಗಳು ಕನಸು ಕೂಡ ಈಡೇರಲಿಲ್ಲ. ಇದರ ನಡುವೆ ವಿರಾಟ್ ಕೊಹ್ಲಿ (Virat Kohli) ಇನ್ನುಂದೆ ಆರ್​ಸಿಬಿಯ ನಾಯಕನಾಗಿ ಮುಂದುವರೆಯುವುದಿಲ್ಲ ಎಂಬ ಬೇಸರವೂ ಮನೆಮಾಡಿದೆ. ಹೆಚ್ಚಿನ ಆರ್​ಸಿಬಿ ಅಭಿಮಾನಿಗಳು (RCB Fans) ತಮ್ಮ ತಂಡ ಸೋತ ಬಗ್ಗೆ ಬೇಜಾರಿದ್ದರೂ ಹಿಂದಿಗಿಂತ ಈ ಬಾರಿ ಅತ್ಯುತ್ತಮ ಪ್ರದರ್ಶನ ನೀಡಿದ ಬಗ್ಗೆ ಬೆಂಗಾವಲಾಗಿ ನಿಂತಿದ್ದಾರೆ. ಆದರೆ, ಕೆಲ ಕ್ರಿಕೆಟ್ ಅಭಿಮಾನಿಗಳು ಆರ್​ಸಿಬಿ ಸೋತ ಬಗ್ಗೆ ಕೆಟ್ಟದಾಗಿ ಕಮೆಂಟ್, ಪೋಸ್ಟ್ ಹಾಕಿ ಟ್ರೋಲ್ ಮಾಡುತ್ತಿದ್ದಾರೆ. ಇಂತವರಿಗೆ ಗ್ಲೆನ್ ಮ್ಯಾಕ್ಸ್​ವೆಲ್ (Glenn Maxwell) ಸರಿಯಾಗಿ ಮೈಚಳಿ ಬಿಡಿಸಿದ್ದಾರೆ.

ಹೌದು, ಸೋಮವಾರ ಶಾರ್ಜಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಎಲಿಮಿನೇಟರ್ ಪಂದ್ಯದಲ್ಲಿ ಆರ್​ಸಿಬಿ ಗೆಲುವು ಸಾಧಿಸುವಲ್ಲಿ ಎಡವಿತು. ಬ್ಯಾಟಿಂಗ್- ಬೌಲಿಂಗ್​ನಲ್ಲಿ ನಿರೀಕ್ಷೆಗೆ ತಕ್ಕಂತೆ ಪ್ರದರ್ಶನ ನೀಡಿದ ಕೊಹ್ಲಿ ಹುಡುಗರು ಸತತ 14ನೇ ಬಾರಿಯೂ ಪ್ರಶಸ್ತಿ ಎತ್ತಿಹಿಡಿಯಲು ಸಾಧ್ಯವಾಗದೆ ಹೋಯಿತು. ಆರ್​ಸಿಬಿ ಸೋತ ಬೆನ್ನಲ್ಲೇ ಕೆಲ ಕ್ರಿಕೆಟ್ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಕೆಟ್ಟದಾಗಿ ಪೋಸ್ಟ್ ಹಾಕಿದ್ದಾರೆ. ಇಂತವರಿಗೆ ಮ್ಯಾಕ್ಸ್​ವೆಲ್ ಸರಿಯಾಗೇ ಉತ್ತರ ಕೂಡ ಕೊಟ್ಟಿದ್ದಾರೆ.

ಪಂದ್ಯ ಮುಗಿದ ಬಳಿಕ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಟ್ವೀಟ್ ಮಾಡಿರುವ ಗ್ಲೆನ್ ಮ್ಯಾಕ್ಸ್​ವೆಲ್, “ಈ ಬಾರಿಯ ಐಪಿಎಲ್ ಟೂರ್ನಿ ಅತ್ಯುತ್ತಮವಾಗಿತ್ತು. ದುರಾದೃಷ್ಟವಶಾತ್​ ನಮಗೆ ಟ್ರೋಫಿ ಗೆಲ್ಲಲು ಸಾಧ್ಯವಾಗಲಿಲ್ಲ. ಅಂತಿಮ ಹಂತದಲ್ಲಿ ಎಡವಿದೆವು. ಈ ಅದ್ಭುತ ಸೀಸನ್​ನಿಂದ ದೂರಾಗುವುದಿಲ್ಲ. ಆದರೆ, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಕೆಲವು ಕಸಗಳು ಸಂಪೂರ್ಣವಾಗಿ ಅಸಹ್ಯಕರವಾಗಿದೆ. ನಾವು ಕೂಡ ಮನುಷ್ಯರು ಪ್ರತಿದಿನ ದಿನ ನಮ್ಮ ಕೈಲಾದಷ್ಟು ಉತ್ತಮ ಪ್ರಯತ್ನವನ್ನೇ ನೀಡಿದ್ದೇವೆ. ಅಸಹ್ಯವನ್ನು ಹರಡುವ ಬದಲು ಉತ್ತ, ವ್ಯಕ್ತಿಯಾಗಿರಲು ಪ್ರಯತ್ನಿಸಿ” ಎಂದು ಮ್ಯಾಕ್ಸ್‌ವೆಲ್ ಖಡಕ್ ಆಗಿ ಬರೆದು ಪೋಸ್ಟ್ ಮಾಡಿದ್ದಾರೆ.

 

ಇನ್ನು ಇದೇ ಸಂದರ್ಭದಲ್ಲಿ ಆರ್​ಸಿಬಿಯ ನಿಜವಾರ ಅಭಿಮಾನಿಗಳಿಗೆ ಧನ್ಯವಾದ ಹೇಳಿರುವ ಮ್ಯಾಕ್ಸ್​ವೆಲ್​, ಯಾವುದೇ ಸಂದರ್ಭದಲ್ಲೂ ನಮ್ಮ ಬೆನ್ನಿಗೆ ನಿಲ್ಲುವ ಅಭಿಮಾನಿಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಆದರೆ, ಕೆಲವರು ಸಾಮಾಜಿಕ ಜಾಲತಾಣವನ್ನು ಕಟ್ಟದಾಗಿ ಉಪಯೋಗಿಸಿಕೊಳ್ಳುತ್ತಿದ್ದಾರೆ. ದಯವಿಟ್ಟು ಅವರಂತೆ ನೀವು ಮಾಡಬೇಡಿ ಎಂದು ​ಮನವಿ ಮಾಡಿದ್ದಾರೆ.

 

ಮಾಡು ಇಲ್ಲವೇ ಮಡಿ ಎಲಿಮಿನೇಟರ್ ಪಂದ್ಯದಲ್ಲಿ ಆರ್​ಸಿಬಿ ತಂಡ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ 4 ವಿಕೆಟ್ ಗಳಿಂದ ಸೋಲು ಅನುಭವಿಸಿತು. ಈ ಮೂಲಕ ಈ ಬಾರಿ ಸಹ ಟ್ರೋಫಿ ಗೆಲ್ಲುವ ಕನಸು ನುಚ್ಚು ನೂರಾಯಿತು. ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿದ್ದ ಆರ್​ಸಿಬಿ ನಿಗದಿತ 20 ಓವರ್​ಗಳಲ್ಲಿ 7 ವಿಕೆಟ್ ನಷ್ಟಕ್ಕೆ 138 ರನ್ ಗಳಿಸಿತು. ಸುಲಭ ಗುರಿ ಬೆನ್ನಟ್ಟಿದ ಕೋಲ್ಕತ್ತಾ ಪಡೆ 6 ವಿಕೆಟ್ ನಷ್ಟಕ್ಕೆ 139 ರನ್ ಸಿಡಿಸುವ ಮೂಲಕ ಗೆಲುವಿನ ನಗೆ ಬೀರಿತು. ಬೌಲಿಂಗ್​ನಲ್ಲಿ 4 ವಿಕೆಟ್ ಮತ್ತು ಬ್ಯಾಟಿಂಗ್ 26 ರನ್ ಚಚ್ಚಿ ಮಿಂಚಿದ ಸುನಿಲ್ ನರೈನ್ ತಂಡಕ್ಕೆ ಗೆಲುವು ತಂದುಕೊಡುವಲ್ಲಿ ಪ್ರಮುಖ ಪಾತ್ರವಹಿಸಿದರು.

Virat Kohli, RCB vs KKR: ಸದ್ಯದಲ್ಲೇ ಆರ್​ಸಿಬಿ ಹೊಸ ಕ್ಯಾಪ್ಟನ್ ಘೋಷಣೆ: ವಿರಾಟ್ ಕೊಹ್ಲಿ ರಿವೀಲ್ ಮಾಡಿದ್ರು ವಿಶೇಷ ಮಾಹಿತಿ

RCB vs KKR, IPL 2021 Eliminator: ಪಂದ್ಯ ಮುಗಿದ ಬಳಿಕ ವಿರಾಟ್ ಕೊಹ್ಲಿ ಆಡಿದ ಬೇಸರದ ಮಾತು ಕೇಳಿ: ಸೋಲಿಗೆ ಇದುವೇ ಕಾರಣವಂತೆ

(Glen Maxwell was furious after the RCB vs KKR match due to the repeated abuse hurled by fans)