Yuvraj Singh: 1 ಲಕ್ಷ ರೂ. ದಂಡದ ಬರೆ..! ಕ್ರಿಕೆಟರ್ ಯುವರಾಜ್ ಸಿಂಗ್ಗೆ ಗೋವಾ ಸರ್ಕಾರದಿಂದ ನೋಟಿಸ್
Yuvraj Singh: ಗೋವಾದಲ್ಲಿರುವ ತನ್ನ ಮನೆಯನ್ನು ಸರ್ಕಾರದ ಅನುಮತಿಯಿಲ್ಲದೆ ಬಾಡಿಗೆಗೆ ನೀಡುವುದಾಗಿ ಆನ್‌ಲೈನ್‌ನಲ್ಲಿ ಜಾಹೀರಾತು ನೀಡಿದ್ದ ಯುವರಾಜ್ ಸಿಂಗ್ಗೆ ಇದೀಗ ಗೋವಾ ಅಧಿಕಾರಿಗಳು ನೋಟಿಸ್ ನೀಡಿದ್ದಾರೆ.
ಟೀಂ ಇಂಡಿಯಾ (Team India) ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ (Yuvraj Singh) ವಿವಾದದಲ್ಲಿ ಸಿಲುಕಿಕೊಂಡಿದ್ದಾರೆ. ಗೋವಾದಲ್ಲಿರುವ ತನ್ನ ಮನೆಯನ್ನು ಸರ್ಕಾರದ ಅನುಮತಿಯಿಲ್ಲದೆ ಬಾಡಿಗೆಗೆ ನೀಡುವುದಾಗಿ ಆನ್‌ಲೈನ್‌ನಲ್ಲಿ ಜಾಹೀರಾತು ನೀಡಿದ್ದ ಯುವರಾಜ್ ಸಿಂಗ್ಗೆ ಇದೀಗ ಗೋವಾ ಅಧಿಕಾರಿಗಳು ನೋಟಿಸ್ ನೀಡಿದ್ದಾರೆ. ಗೋವಾ ಪ್ರವಾಸೋದ್ಯಮ ಇಲಾಖೆಯ ಉಪ ನಿರ್ದೇಶಕರು ನವೆಂಬರ್ 18 ರಂದು ಯುವಿಗೆ ನೋಟಿಸ್ ಕಳುಹಿಸಿದ್ದು, ವಿಚಾರಣೆಗಾಗಿ ಡಿಸೆಂಬರ್ 8 ರಂದು ಬೆಳಿಗ್ಗೆ 11 ಗಂಟೆಗೆ ತಮ್ಮ ಮುಂದೆ ಹಾಜರಾಗುವಂತೆ ಸೂಚಿನೆ ನೀಡಲಾಗಿದೆ ಎಂದು ಆ ನೋಟಿಸ್‌ನಲ್ಲಿ ತಿಳಿಸಲಾಗಿದೆ.
ಕಾಸಾ ಸಿಂಗ್ ಹೆಸರಿನ ಐಷಾರಾಮಿ ವಿಲ್ಲಾ
ವಾಸ್ತವವಾಗಿ ಟೀಂ ಇಂಡಿಯಾದ ಮಾಜಿ ಆಲ್ರೌಂಡರ್ ಯುವರಾಜ್ ಸಿಂಗ್ ಗೋವಾದ ಮೊರ್ಜಿಮ್ನಲ್ಲಿ ಐಷಾರಾಮಿ ಕಟ್ಟಡ ಹೊಂದಿದ್ದಾರೆ. ಕಾಸಾ ಸಿಂಗ್ ಹೆಸರಿನ ಈ ಐಷಾರಾಮಿ ವಿಲ್ಲಾವನ್ನು ಪ್ರವಾಸಿಗರಿಗೆ ಬಾಡಿಗೆಗೆ ನೀಡುವುದಾಗಿ ಯುವರಾಜ್ ಸಿಂಗ್ ಆನ್‌ಲೈನ್‌ನಲ್ಲಿ ಪ್ರಕಟಣೆ ನೀಡಿದ್ದರು. ಆದರೆ ಗೋವಾ ಕಾನೂನಿನ ಪ್ರಕಾರ, ಮನೆಯನ್ನು ಬಾಡಿಗೆಗೆ ನೀಡುವುದಕ್ಕೂ ಮೊದಲು ಗೋವಾ ಸರ್ಕಾರದ ಅನುಮತಿಯನ್ನು ತೆಗೆದುಕೊಳ್ಳಬೇಕು. ಟೂರಿಸ್ಟ್ ಟ್ರೇಡ್ ಆಕ್ಟ್-1982 ರ ಗೋವಾ ನೋಂದಣಿ ಪ್ರಕಾರ ನೋಂದಣಿ ಮಾಡಬೇಕು.
ಇದನ್ನೂ ಓದಿ: ಕಿಂಗ್ ಕೊಹ್ಲಿಯ ದೊಡ್ಡ ದಾಖಲೆ ಮುರಿದ ಸೂರ್ಯಕುಮಾರ್..! ಟಿ20 ಸರಣಿಯ ಪ್ರಮುಖ 5 ದಾಖಲೆಗಳಿವು
ನೋಂದಣಿ ಮಾಡದೆ ಬಾಡಿಗೆಗೆ ಜಾಹೀರಾತು
ಆದರೆ ಮನೆಯನ್ನು ನೋಂದಣಿ ಮಾಡದೆ ಪ್ರವಾಸಿಗರಿಗೆ ಬಾಡಿಗೆಗೆ ನೀಡುವುದಾಗಿ ಯುವರಾಜ್ ಆನ್‌ಲೈನ್‌ನಲ್ಲಿ ಜಾಹೀರಾತು ನೀಡಿದ್ದರು. ಇದೀಗ ಯುವಿಯ ಈ ಜಾಹೀರಾತಿಗೆ ಗೋವಾ ಅಧಿಕಾರಿಗಳು ಪ್ರತಿಕ್ರಿಯಿಸಿದ್ದು, ಪ್ರವಾಸೋದ್ಯಮ ಇಲಾಖೆಯ ನಿಯಮಗಳ ಪ್ರಕಾರ ನೋಂದಣಿ ಮಾಡದೆ ಬಾಡಿಗೆಗೆ ಜಾಹೀರಾತು ನೀಡುವುದು ನಿಯಮಗಳಿಗೆ ವಿರುದ್ಧವಾಗಿದೆ ಎಂದು ಗೋವಾ ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಗಳು ಹೇಳಿಕೆ ನೀಡಿದ್ದಾರೆ.
Goa Tourism Department issued notice to former cricketer Yuvraj Singh yesterday and initiated proceedings under the Registration of Tourist Trade Act for failure to register his villa, situated in Varchawada, Morjim, with the department: Department of Tourism, Goa
(File pic) pic.twitter.com/nppvoWp2Hr
— ANI (@ANI) November 23, 2022
ಡಿಸೆಂಬರ್ 8 ರಂದು ಖುದ್ದು ಹಾಜರಾಗಿ
ಅಲ್ಲದೆ ಗೋವಾ ಸರ್ಕಾರದ ಅನುಮತಿ ಪಡೆಯದೆ ಈ ಜಾಹೀರಾತು ನೀಡಿದಕ್ಕಾಗಿ ಯುವರಾಜ್ ಸಿಂಗ್ ಅವರಿಗೆ 1 ಲಕ್ಷ ರೂ. ದಂಡ ವಿಧಿಸಲಾಗಿದೆ. ಹಾಗೆಯೇ ಹೋಟೆಲ್, ಅತಿಥಿ ಗೃಹ ಅಥವಾ ವಿಲ್ಲಾ ಆಗಿರಲಿ ಆತಿಥ್ಯ ಚಟುವಟಿಕೆಗಳನ್ನು ನಡೆಸಲು ನೋಂದಣಿ ಕಡ್ಡಾಯ ಎಂದು ಗೋವಾ ಸರ್ಕಾರ ಸ್ಪಷ್ಟಪಡಿಸಿದೆ. ಡಿಸೆಂಬರ್ 8 ರಂದು ಖುದ್ದು ಹಾಜರಾಗಿ ನೀಡಿರುವ ನೋಟಿಸ್‌ಗಳ ಬಗ್ಗೆ ವಿವರಣೆ ನೀಡುವಂತೆ ಯುವರಾಜ್ ಸಿಂಗ್ ಅವರಿಗೆ ಗೋವಾ ಸರ್ಕಾರ ಸೂಚಿಸಿದೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:22 am, Wed, 23 November 22