‘ಭಾರತ ನೀಡಿದ ಚಿನ್ನದ ಪದಕವನ್ನು ಕೇವಲ 3000 ರೂ.ಗೆ ಇಮ್ರಾನ್ ಮಾರಿದ್ದಾರೆ’; ಪಾಕ್ ರಕ್ಷಣಾ ಸಚಿವ

ವಾಸ್ತವವಾಗಿ ಇಮ್ರಾನ್ ಖಾನ್​ಗೆ ಗೌರವಾರ್ಥವಾಗಿ ನೀಡಿದ್ದ ಈ ಪದಕ ಹಾಗೂ ಪಂದ್ಯ ಉಭಯ ದೇಶಗಳಿಗೂ ಹಾಗೂ ಭಾರತದ ಶ್ರೇಷ್ಠ ಬ್ಯಾಟ್ಸ್‌ಮನ್ ಸಚಿನ್ ತೆಂಡೂಲ್ಕರ್‌ಗೂ ತುಂಬಾ ವಿಶೇಷವಾಗಿತ್ತು.

‘ಭಾರತ ನೀಡಿದ ಚಿನ್ನದ ಪದಕವನ್ನು ಕೇವಲ 3000 ರೂ.ಗೆ ಇಮ್ರಾನ್ ಮಾರಿದ್ದಾರೆ’; ಪಾಕ್ ರಕ್ಷಣಾ ಸಚಿವ
Imran Khan
TV9kannada Web Team

| Edited By: pruthvi Shankar

Nov 23, 2022 | 1:17 PM

ಪಾಕಿಸ್ತಾನ ಮತ್ತು ಭಾರತ (Pakistan and India) ನಡುವಿನ ಅದಗೆಟ್ಟ ಸಂಬಂಧ ಎರಡೂ ದೇಶಗಳ ಕ್ರಿಕೆಟ್ ತಂಡದ ಮೇಲೂ ಪರಿಣಾಮ ಬೀರಿದೆ. ಐಸಿಸಿ ಟ್ರೋಫಿ (ICC Trophy) ಹೊರತುಪಡಿಸಿ, ಈ ಎರಡೂ ದೇಶಗಳು ದ್ವಿಪಕ್ಷೀಯ ಸರಣಿಯನ್ನು ಆಡಿ ಬಹಳ ವರ್ಷಗಳೇ ಕಳೆದಿವೆ. ಆದರೆ ಭಾರತ- ಪಾಕ್ ಸಂಬಂಧ ಹದಗೆಡುವ ಮೊದಲು ಈ ಎರಡೂ ದೇಶಗಳ ಕ್ರಿಕೆಟ್ ತಂಡಗಳು ಹಲವು ಬಾರಿ ಮುಖಾಮುಖಿಯಾಗಿದ್ದವು. ಈ ವೇಳೆ ಭಾರತ ಪ್ರವಾಸಕ್ಕೆ ಬರುತ್ತಿದ್ದ ಪಾಕ್ ಕ್ರಿಕೆಟಿಗರಿಗೆ ವಿಶೇಷ ಗೌರವವನ್ನು ನೀಡಲಾಗುತ್ತಿತ್ತು. ಇದಕ್ಕಾಗಿ ಕೆಲವೊಮ್ಮೆ ಪದಕವನ್ನು ನೀಡಿದರೆ, ಇನ್ನೂ ಕೆಲವೊಮ್ಮೆ ಬೇರೆ ಏನನ್ನಾದರೂ ಉಡುಗೊರೆಯಾಗಿ ನೀಡಲಾಗುತ್ತಿತ್ತು. ಅದೇ ರೀತಿ 1987ರಲ್ಲಿ ಭಾರತ ಪ್ರವಾಸ ಮಾಡಿದ್ದ ಪಾಕ್ ಆಟಗಾರಿಗೆ ಚಿನ್ನದ ಪದಕ ನೀಡಿ ಗೌರವಿಸಲಾಗಿತ್ತು. ಆ ಪದಕ ಪಡೆದ ಆಟಗಾರರಲ್ಲಿ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಕೂಡ ಇದ್ದರು. ಆಗ ಪಡೆದ ಚಿನ್ನದ ಪದಕವನ್ನು ಇಮ್ರಾನ್ ಖಾನ್ (Imran Khan) ಕೇವಲ 3 ಸಾವಿರ ರೂ.ಗೆ ಮಾರಾಟ ಮಾಡಿದ್ದಾರೆ ಎಂದು ಪಾಕಿಸ್ತಾನದ ರಕ್ಷಣಾ ಸಚಿವ ಅಚ್ಚರಿಯ ಹೇಳಿಕೆ ನೀಡಿದ್ದಾರೆ.

ಜಿಯೋ ಟಿವಿ ಕಾರ್ಯಕ್ರಮವೊಂದರಲ್ಲಿ ಈ ಬಗ್ಗೆ ಮಾತನಾಡಿರುವ ಪಾಕಿಸ್ತಾನದ ರಕ್ಷಣಾ ಸಚಿವ ಖ್ವಾಜಾ ಆಸಿಫ್, ನಮ್ಮ ದೇಶದ ಮಾಜಿ ನಾಯಕ ಮತ್ತು ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರು ಭಾರತದಿಂದ ಪಡೆದಿದ್ದ ಚಿನ್ನದ ಪದಕವನ್ನು ಕೆಲವೇ ಕೆಲವು ರೂಪಾಯಿಗಳಿಗೆ ಮಾರಾಟ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

ವಾಸ್ತವವಾಗಿ ಇಮ್ರಾನ್ ಖಾನ್​ಗೆ ಗೌರವಾರ್ಥವಾಗಿ ನೀಡಿದ್ದ ಈ ಪದಕ ಹಾಗೂ ಪಂದ್ಯ ಉಭಯ ದೇಶಗಳಿಗೂ ಹಾಗೂ ಭಾರತದ ಶ್ರೇಷ್ಠ ಬ್ಯಾಟ್ಸ್‌ಮನ್ ಸಚಿನ್ ತೆಂಡೂಲ್ಕರ್‌ಗೂ ತುಂಬಾ ವಿಶೇಷವಾಗಿತ್ತು.

1987 ರಲ್ಲಿ ಪ್ರದರ್ಶನ ಪಂದ್ಯವನ್ನಾಡಿದ ಪಾಕಿಸ್ತಾನ

1987ರಲ್ಲಿ ಪಾಕಿಸ್ತಾನ ತಂಡ ಐದು ಟೆಸ್ಟ್‌ಗಳ ಸರಣಿಗಾಗಿ ಭಾರತಕ್ಕೆ ಬಂದಿತ್ತು. ಈ ಸರಣಿ ಆರಂಭಕ್ಕೂ ಮೊದಲು, 20 ಜನವರಿ 1987 ರಂದು, ಕ್ರಿಕೆಟ್ ಕ್ಲಬ್ ಆಫ್ ಇಂಡಿಯಾ (CCI) ತನ್ನ 50 ವರ್ಷಗಳನ್ನು (ಗೋಲ್ಡನ್ ಜುಬಿಲಿ) ಪೂರ್ಣಗೊಳಿಸಿದ ಸವಿನೆನಪಿಗಾಗಿ ಮುಂಬೈನ ಬ್ರಬೋರ್ನ್ ಕ್ರೀಡಾಂಗಣದಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವೆ ಪ್ರದರ್ಶನ ಪಂದ್ಯವನ್ನು ಆಯೋಜಿಸಲಾಗಿತ್ತು. ಈ ಪಂದ್ಯ ತಲಾ 40 ಓವರ್‌ಗಳ ಪಂದ್ಯವಾಗಿದ್ದು, ಈ ಪಂದ್ಯದಲ್ಲಿ 14 ವರ್ಷದ ಸಚಿನ್ ತೆಂಡೂಲ್ಕರ್ ಪಾಕ್ ಪರ ಫೀಲ್ಡಿಂಗ್‌ಗೆ ಇಳಿದಿದ್ದರು. ಆ ಪಂದ್ಯದ ವೇಳೆ ಪಾಕಿಸ್ತಾನದ ಆಟಗಾರ ಅಬ್ದುಲ್ ಖಾದಿರ್ ಗಾಯಗೊಂಡಿದ್ದರಿಂದ ಅವರ ಜಾಗದಲ್ಲಿ ತೆಂಡೂಲ್ಕರ್ ಅವರನ್ನು ಬದಲಿ ಫೀಲ್ಡರ್ ಆಗಿ ಕಣಕ್ಕಿಳಿಸಲಾಗಿತ್ತು. ಸಚಿನ್ ತಮ್ಮ ಆತ್ಮಚರಿತ್ರೆಯಲ್ಲಿಯೂ ಈ ಘಟನೆಯನ್ನು ಉಲ್ಲೇಖಿಸಿದ್ದಾರೆ.

3000 ರೂ.ಗಿಂತ ಕಡಿಮೆ ಬೆಲೆಗೆ ಪದಕ ಮಾರಾಟ

ಈ ಪಂದ್ಯದ ನಂತರ ಗೌರವಾರ್ಥವಾಗಿ ಕ್ರಿಕೆಟ್ ಕ್ಲಬ್ ಆಫ್ ಇಂಡಿಯಾ ಪಾಕಿಸ್ತಾನಿ ಆಟಗಾರರಿಗೆ ಚಿನ್ನದ ಪದಕಗಳನ್ನು ಉಡುಗೊರೆಯಾಗಿ ನೀಡಿತ್ತು. ಆಗ ಪಡೆದ ಪದಕವನ್ನೇ ಇಮ್ರಾನ್ ಖಾನ್ ಮಾರಾಟ ಮಾಡಿರುವುದಾಗಿ ಈಗ ಪಾಕಿಸ್ತಾನದ ರಕ್ಷಣಾ ಸಚಿವ ಖ್ವಾಜಾ ಆಸಿಫ್ ಆರೋಪಿಸಿದ್ದಾರೆ. ಇದುವರೆಗೂ ಇಮ್ರಾನ್ ಖಾನ್ ಈ ವಿಚಾರವಾಗಿ ಏನನ್ನೂ ಹೇಳಿದೆ ಇದ್ದರೂ, ಈ ಹಿಂದೆಯೂ ಸಹ ವಿದೇಶಿ ಪ್ರವಾಸದಲ್ಲಿ ಸಿಕ್ಕ ದುಬಾರಿ ಉಡುಗೊರೆಗಳನ್ನು ಇಮ್ರಾನ್ ಖಾನ್ ಮಾರಾಟ ಮಾಡಿದ್ದಾರೆ ಎಂ ಆರೋಪ ಕೇಳಿಬಂದಿತ್ತು.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada