IPL 2022ರ ನಾಲ್ಕನೇ ಪಂದ್ಯದಲ್ಲಿ ಹೊಸ ತಂಡಗಳಾದ ಲಕ್ನೋ ಸೂಪರ್ ಜೈಂಟ್ಸ್ ಮತ್ತು ಗುಜರಾತ್ ಟೈಟನ್ಸ್ ಮುಖಾಮುಖಿಯಾಗಿತ್ತು. ಈ ಪಂದ್ಯದಲ್ಲಿ (LSG vs GT) ಮೊದಲು ಬ್ಯಾಟ್ ಮಾಡಿದ ಲಕ್ನೋ ಸೂಪರ್ ಜೈಂಟ್ಸ್ ತಂಡ ಉತ್ತಮ ಆರಂಭ ಪಡೆದಿರಲಿಲ್ಲ. ಕೇವಲ 29 ರನ್ಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಟೈಟನ್ಸ್ ತಂಡದ ವೇಗದ ಬೌಲರ್ ಮೊಹಮ್ಮದ್ ಶಮಿ ಆರಂಭದಲ್ಲೇ 3 ವಿಕೆಟ್ ಉರುಳಿಸಿ ತಂಡಕ್ಕೆ ಮೇಲುಗೈ ತಂದುಕೊಟ್ಟಿದ್ದರು. ಮತ್ತೊಂದೆಡೆ ವರುಣ್ ಆರೋನ್ ಕೂಡ ಒಂದು ವಿಕೆಟ್ ಪಡೆದರು. ಈ ವಿಕೆಟ್ ಮೂಡಿಬಂದಿದ್ದು ಶುಭ್ಮನ್ ಗಿಲ್ ಅವರ ಅತ್ಯಾದ್ಭುತ ಕ್ಯಾಚ್ನಿಂದಾಗಿ ಎಂಬುದು ವಿಶೇಷ.
ಪಂದ್ಯದ ನಾಲ್ಕನೇ ಓವರ್‌ನಲ್ಲಿ, ಎವಿನ್ ಲೂಯಿಸ್ ಸ್ಕ್ವೇರ್ ಲೆಗ್‌ನತ್ತ ಭರ್ಜರಿ ಶಾಟ್ ಬಾರಿಸಿದ್ದರು. ಆಕಾಶದತ್ತ ಚಿಮ್ಮಿದ ಚೆಂಡನ್ನು ಹಿಡಿಯಲು ಹಿಂದಕ್ಕೆ ಓಡಿದ ಗಿಲ್ ಅಂತಿಮ ಹಂತದಲ್ಲಿ ಅದ್ಭುತ ಡೈವಿಂಗ್ ಮಾಡುವ ಮೂಲಕ ಉತ್ತಮ ಕ್ಯಾಚ್ ಹಿಡಿದರು. ಇತ್ತ ಗಿಲ್ ಅವರ ಈ ಅತ್ಯಾಧ್ಬುತ ಕ್ಯಾಚ್ ನೋಡಿ ಕಾಮೆಂಟೇಟರ್ ಸೇರಿದಂತೆ ಎಲ್ಲರೂ ನಿಬ್ಬೆರಗಾಗಿದ್ದರು. ಇದೀಗ ಗಿಲ್ ಅವರ ಈ ಫೆಂಟಾಸ್ಟಿಕ್ ಕ್ಯಾಚ್ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಗಿಲ್ ಅವರ ಅತ್ಯಾಧ್ಬುತ ಪ್ರಯತ್ನಕ್ಕೆ ಭಾರೀ ಮೆಚ್ಚುಗೆಗಳು ವ್ಯಕ್ತವಾಗುತ್ತಿದೆ.
CATCH THAT, Shubman ??
ICYMI – An outstanding leaping catch from @ShubmanGill that ended Evin Lewis’s stay out there in the middle.
Full video ?️?️https://t.co/le0ebbkUdw #TATAIPL #GTvLSG pic.twitter.com/90Sq0Qkdrt
— IndianPremierLeague (@IPL) March 28, 2022
ಕ್ಯಾಚ್ ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.
ಲಕ್ನೋ ಕಳಪೆ ಆರಂಭ:
ಈ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಕಳಪೆ ಆರಂಭ ಪಡೆದಿತ್ತು. ಇನಿಂಗ್ಸ್‌ನ ಮೊದಲ ಎಸೆತದಲ್ಲಿಯೇ ನಾಯಕ ಕೆಎಲ್ ರಾಹುಲ್ ಶಮಿಗೆ ವಿಕೆಟ್ ಒಪ್ಪಿಸಿದ್ದರು. ಇದರ ಬೆನ್ನಲ್ಲೇ ಕ್ವಿಂಟನ್ ಡಿ ಕಾಕ್ ಅವರನ್ನು ಶಮಿ ಕ್ಲೀನ್ ಬೌಲ್ಡ್ ಮಾಡಿದ್ದರು. ಇನ್ನು ಲೂಯಿಸ್ 10 ರನ್ ಗಳಿಸಿ ಔಟಾದರು. ಹಾಗೆಯೇ ಮನೀಶ್ ಪಾಂಡೆ 6 ರನ್ ಗಳಿಸಲಷ್ಟೇ ಶಕ್ತರಾದರು. ಈ ಹಂತದಲ್ಲಿ ಜೊತೆಗೂಡಿದ ದೀಪಕ್ ಹೂಡಾ ಹಾಗೂ ಅಯುಷ್ ಬದೋನಿ ಆಕರ್ಷಕ ಅರ್ಧಶತಕ ಬಾರಿಸುವ ಮೂಲಕ ಮಿಂಚಿದರು.
ದೀಪಕ್ ಹೂಡಾ (55) ಹಾಗೂ ಅಯುಷ್ ಬದೋನಿ (54) ಅವರ ಅತ್ಯುತ್ತಮ ಬ್ಯಾಟಿಂಗ್ ನೆರವಿನಿಂದ ಲಕ್ನೋ ಸೂಪರ್ ಜೈಂಟ್ಸ್ ತಂಡವು 20 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು 158 ರನ್ ಕಲೆಹಾಕಿತು.
ಇದನ್ನೂ ಓದಿ: IPL ಆಡಿದ್ದ 11 ಪಾಕಿಸ್ತಾನಿ ಆಟಗಾರರು ಯಾರು ಗೊತ್ತಾ?
ಇದನ್ನೂ ಓದಿ: IPL 2022: ಇವರೇ RCB ಪರ ಹ್ಯಾಟ್ರಿಕ್ ವಿಕೆಟ್ ಪಡೆದ ಮೂವರು ಬೌಲರುಗಳು