
ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು 55 ರನ್‌ಗಳಿಂದ ಸೋಲಿಸಿದ ಹಾಲಿ ಚಾಂಪಿಯನ್ ಗುಜರಾತ್ ಟೈಟಾನ್ಸ್ ತವರಿನಲ್ಲಿ ಆಡಿದ ನಾಲ್ಕು ಪಂದ್ಯಗಳಲ್ಲಿ ಎರಡನೇ ಗೆಲುವು ಸಾಧಿಸಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಗುಜರಾತ್, ಶುಭಮನ್ ಗಿಲ್ ಅವರ ಅರ್ಧಶತಕದ ನಂತರ, ಅಭಿನವ್ ಮನೋಹರ್ ಮತ್ತು ಡೇವಿಡ್ ಮಿಲ್ಲರ್ ಅವರ ಬಿರುಸಿನ ಇನ್ನಿಂಗ್ಸ್‌ನ ಆಧಾರದ ಮೇಲೆ 20 ಓವರ್‌ಗಳಲ್ಲಿ ಆರು ವಿಕೆಟ್‌ಗಳನ್ನು ಕಳೆದುಕೊಂಡು 207 ರನ್ ಗಳಿಸಿತು. ಈ ಗುರಿ ಬೆನ್ನಟ್ಟಿದ ಮುಂಬೈ ಇಡೀ ಓವರ್ ಆಡಿ, ಒಂಬತ್ತು ವಿಕೆಟ್ ಕಳೆದುಕೊಂಡು 159 ರನ್ ಗಳಿಸಲಷ್ಟೇ ಶಕ್ತವಾಯಿತು.
ಅಂತಿಮ ಓವರ್‌ನಲ್ಲಿ ಅರ್ಜುನ್ ತೆಂಡೂಲ್ಕರ್ ತಮ್ಮ ವೃತ್ತಿಜೀವನದ ಮೊದಲ ಐಪಿಎಲ್ ಸಿಕ್ಸರ್ ಬಾರಿಸಿದರು. ಅಂತಿಮವಾಗಿ 13 ರನ್ ಗಳಿಸಿ ಔಟಾದರು. ಗುಜರಾತ್ ಟೈಟಾನ್ಸ್ 55 ರನ್‌ಗಳ ಜಯ ಸಾಧಿಸಿತು. ಇದು ಗುಜರಾತ್ ಟೈಟಾನ್ಸ್‌ಗೆ ಸತತ ಎರಡನೇ ಗೆಲುವು, ಮುಂಬೈ ಇಂಡಿಯನ್ಸ್‌ಗೆ ಇದು ಸತತ ಎರಡನೇ ಸೋಲು.
ಮುಂಬೈ ಒಂಬತ್ತನೇ ವಿಕೆಟ್ ಕಳೆದುಕೊಂಡಿತು. ಕೊನೆಯ ಓವರ್‌ನಲ್ಲಿ ಮೋಹಿತ್ ಶರ್ಮಾ ಅರ್ಜುನ್ ತೆಂಡೂಲ್ಕರ್ (13) ಅವರ ವಿಕೆಟ್ ಉರುಳಿಸಿದರು.
18ನೇ ಓವರ್ನ ಮೊದಲ ಎಸೆತದಲ್ಲಿ ಪಿಯೂಷ್ ಚಾವ್ಲಾ ವಿಕೆಟ್ ಉರುಳಿಸಿದ ಮೋಹಿತ್ 4ನೇ ಎಸೆತದಲ್ಲಿ ನೆಹಲ್ ವದೇರಾ ವಿಕೆಟ್ ಪಡೆದರು.
17ನೇ ಓವರ್ನ ಕೊನೆಯ ಎಸೆತದಲ್ಲಿ ವದೇರಾ ಮಿಡ್ ಆಫ್ ಮೇಲೆ ಸಿಕ್ಸರ್ ಬಾರಿಸಿದರು.
ಮೋಹಿತ್ ಬೌಲ್ ಮಾಡಿದ ಈ ಓವರ್‌ನಲ್ಲಿ ಚಾವ್ಲಾ ಹಾಗೂ ವದೇರಾ ತಲಾ ಒಂದೊಂದು ಸಿಕ್ಸರ್ ಹೊಡೆದರು. ಮುಂಬೈ ಇಂಡಿಯನ್ಸ್ ಪರ ಪಿಯೂಷ್ ಚಾವ್ಲಾ 17 ಮತ್ತು ವಧೇರಾ 34 ರನ್‌ಗಳೊಂದಿಗೆ ಆಡುತ್ತಿದ್ದಾರೆ. ಗೆಲುವಿಗೆ 24 ಎಸೆತಗಳಲ್ಲಿ 79 ರನ್‌ಗಳ ಅಗತ್ಯವಿದೆ. 16 ಓವರ್‌ಗಳ ನಂತರ ಮುಂಬೈ ಇಂಡಿಯನ್ಸ್ ಸ್ಕೋರ್ – 129/6
15ನೇ ಓವರ್ನ ಮೊದಲ ಎಸೆತದಲ್ಲೇ ಬೌಂಡರಿ ಬಾರಿಸಿದ ವದೇರಾ ಮುಂಬೈ ಸ್ಕೋರ್ ಅನ್ನು 100ರ ಗಡಿ ದಾಟಿಸಿದರು. ಹಾಗೆಯೇ ಈ ಓವರ್ನ ಕೊನೆಯ ಎಸೆತದಲ್ಲಿ ಸಿಕ್ಸರ್ ಕೂಡ ಬಂತು.
13ನೇ ಓವರ್ ಬೌಲ್ ಮಾಡಲು ಬಂದ ಅಹಮದ್ಗೆ ವದೇರಾ 2 ಬೌಂಡರಿ ಹಾಗೂ 1 ಸಿಕ್ಸರ್ ಬಾರಿಸಿದರು. ಆದರೆ ಅದೇ ಓವರ್‌ನಲ್ಲಿ ಸೂರ್ಯ ಸೀದಾ ಬೌಲರ್ ಕೈಗೆ ಕ್ಯಾಚಿತ್ತು ಔಟಾದರು.
ರಶೀದ್ ಬೌಲ್ ಮಾಡಿದ 11ನೇ ಓವರ್‌ನಲ್ಲಿ ಸೂರ್ಯ 2 ಬೌಂಡರಿ ಹಾಗೂ 1 ಸಿಕ್ಸರ್ ಬಾರಿಸಿದರು.
ನೂರು ಅಹಮದ್ 11ನೇ ಓವರ್‌ನಲ್ಲಿ 2 ವಿಕೆಟ್ ಉರುಳಿಸಿದರು. 2ನೇ ಎಸೆತದಲ್ಲಿ ಗ್ರೀನ್ ಬೌಲ್ಡ್ ಆದರೆ, 4ನೇ ಎಸೆತದಲ್ಲಿ ಡೇವಿಡ್ ಕ್ಯಾಚಿತ್ತು ಔಟಾದರು.
9ನೇ ಓವರ್‌ನಲ್ಲಿ ಗ್ರೀನ್ 1 ಭರ್ಜರಿ ಸಿಕ್ಸರ್ ಬಾರಿಸಿದರು. ಅದನ್ನು ಬಿಟ್ಟರೆ 10ನೇ ಓವರ್‌ನಲ್ಲಿ ಯಾವುದೇ ಬೌಂಡರಿ ಬರಲಿಲ್ಲ. 10ನೇ ಓವರ್ ಅಂತ್ಯಕ್ಕೆ 58/3
ರಶೀದ್ ಖಾನ್ ಒಂದು ಓವರ್‌ನಲ್ಲಿ ಮತ್ತೊಂದು ವಿಕೆಟ್ ಪಡೆದರು. ತಿಲಕ್ ವರ್ಮಾ 2 ರನ್‌ಗಳಿಸಿ ಎಲ್ಬಿ ಬಲೆಗೆ ಬಿದ್ದರು. 8 ಓವರ್‌ಗಳ ನಂತರ ಮುಂಬೈ ಇಂಡಿಯನ್ಸ್ ಸ್ಕೋರ್ 45/3. ಮುಂಬೈ ಗೆಲುವಿಗೆ 72 ಎಸೆತಗಳಲ್ಲಿ 163 ರನ್ ಅಗತ್ಯವಿದೆ.
8ನೇ ಓವರ್ ಬೌಲ್ ಮಾಡಿದ ರಶೀದ್ ಬಿಗ್ ವಿಕೆಟ್ ಪಡೆದರು. ಕಿಸನ್ ಮಿಡ್ ವಿಕೆಟ್ನಲ್ಲಿ ಕ್ಯಾಚಿತ್ತು ನಿರ್ಗಮಿಸಿದರು.
7ನೇ ಓವರ್ ಬೌಲ್ ಮಾಡಿದ ಅಹಮದ್ 13 ರನ್ ನೀಡಿದರು. ಓವರ್ನ 4ನೇ ಎಸೆತದಲ್ಲಿ ಗ್ರೀನ್ ಮಿಡ್ ವಿಕೆಟ್ ಮೇಲೆ ಸಿಕ್ಸರ್ ಹೊಡೆದರು.
ಗುಜರಾತ್ ಬಿಗಿ ಬೌಲಿಂಗ್ ಮುಂದೆ ಮುಂಬೈ ಬ್ಯಾಟರ್ಗಳು ಸರಾಗವಾಗಿ ರನ್ ಗಳಿಸಲು ಸಾಧ್ಯವಾಗುತ್ತಿಲ್ಲ. ಪವರ್ ಪ್ಲೇನಲ್ಲಿ 1 ವಿಕೆಟ್ ಕಳೆದುಕೊಂಡ ಮುಂಬೈ ಕೇವಲ 29 ರನ್ ಮಾತ್ರ ಕಲೆಹಾಕಿದೆ.
ಶಮಿ ಬೌಲ್ ಮಾಡಿದ ಈ ಓವರ್ನ 3ನೇ ಎಸೆತದಲ್ಲಿ ಕಿಶನ್ ಓವರ್ ಮಿಡ್ ವಿಕೆಟ್ ಕಡೆ ಬೌಂಡರಿ ಹೊಡೆದರು. 3 ಓವರ್ ಅಂತ್ಯಕ್ಕೆ 26/1
4ನೇಧ ಓವರ್ ಬೌಲ್ ಮಾಡಿದ ಪಾಂಡ್ಯ 12 ರನ್ ಬಿಟ್ಟುಕೊಟ್ಟರು. ಈ ಓವರ್‌ನಲ್ಲಿ ಗ್ರೀನ್ ಲಾಂಗ್ ಆಫ್ ಮೇಲೆ ಸಿಕ್ಸರ್ ಹೊಡೆದರು.
2ನೇ ಓವರ್ ಬೌಲ್ ಮಾಡಿದ ಪಾಂಡ್ಯ ಕೊನೆಯ ಎಸೆತದಲ್ಲಿ ರೋಹಿತ್ ವಿಕೆಟ್ ಉರುಳಿಸಿದರು. ರೋಹಿತ್ ಸೀದಾ ಬೌಲರ್ಗೆ ಕ್ಯಾಚಿತ್ತು ಔಟಾದರು.
ಮುಂಬೈ ಪರ ರೋಹಿತ್ ಹಾಗೂ ಕಿಶನ್ ಇನ್ನಿಂಗ್ಸ್ ಆರಂಭಿಸಿದ್ದು, ಶಮಿ ಎಸೆದ ಈ ಓವರ್‌ನಲ್ಲಿ 2 ರನ್ ಬಂತು.
ಗಿಲ್, ಮನೋಹರ್, ಮಿಲ್ಲರ್, ತೆವಾಟಿಯಾ ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದಾಗಿ ಗುಜರಾತ್ ತಂಡ 20 ಓವರ್‌ಗಳಲ್ಲಿ 207 ರನ್ ಕಲೆಹಾಕಿದೆ.
20ನೇ ಓವರ್ನ ಮೊದಲ ಎರಡು ಎಸೆತಗಳಲ್ಲಿ ತೆವಾಟಿಯಾ 2 ಸಿಕ್ಸರ್ ಹೊಡೆದರು.
ಮನೋಹರ್ ವಿಕೆಟ್ ಬಳಿಕ ಬಂದ ತೆವಾಟಿಯಾ ಮೊದಲ ಎಸೆತದಲ್ಲೇ ಸಿಕ್ಸರ್ ಹೊಡೆದರು. ಆ ಬಳಿಕ ಮಿಲ್ಲರ್ 2 ಸಿಕ್ಸರ್ ಹೊಡೆದರು.
21 ಎಸೆತಗಳಲ್ಲಿ 42 ರನ್ ಚಚ್ಚಿದ ಮನೋಹರ್ 19ನೇ ಓವರ್ನ ಮೊದಲ ಎಸೆತದಲ್ಲೇ ಸಿಕ್ಸರ್ ಬಾರಿಸುವ ಯತ್ನದಲ್ಲಿ ಕ್ಯಾಚಿತ್ತು ಔಟಾದರು.
18ನೇ ಓವರ್‌ನಲ್ಲಿ ಕನ್ನಡಿಗ ಮನೋಹರ್ 1 ಬೌಂಡರಿ ಹಾಗೂ 1 ಸಿಕ್ಸರ್ ಬಾರಿಸಿದರು. ಕೊನೆಯ ಎಸೆತದಲ್ಲಿ ಮಿಲ್ಲರ್ ಕೂಡ ಸಿಕ್ಸರ್ ಹೊಡೆದರು.
17ನೇ ಓವರ್ನ ಮೂರನೇ ಎಸೆತದಲ್ಲಿ ಮನೋಹರ್ ಥರ್ಡ್ಮ್ಯಾನ್ನಲ್ಲಿ ಬೌಂಡರಿ ಹೊಡೆದರೆ, 5ನೇ ಎಸೆತದಲ್ಲಿ ಮಿಲ್ಲರ್ ಬೌಂಡರಿ ಹೊಡೆದರು.
ಗುಜರಾತ್ ಟೈಟಾನ್ಸ್ ಪರ ಡೇವಿಡ್ ಮಿಲ್ಲರ್ 19 ಹಾಗೂ ಅಭಿನವ್ 22 ರನ್ ಗಳಿಸಿ ಆಡುತ್ತಿದ್ದಾರೆ. ಈ ಓವರ್‌ನಲ್ಲಿ ಕೇವಲ 7 ರನ್ ಮಾತ್ರ ಬಂದಿತು.16 ಓವರ್‌ಗಳ ನಂತರ ಗುಜರಾತ್ ಟೈಟಾನ್ಸ್ ಸ್ಕೋರ್ – 137/4
15ನೇ ಓವರ್‌ನಲ್ಲಿ ಬರೋಬ್ಬರಿ 17 ರನ್ ಬಂತು. ಚಾವ್ಲಾ ಬೌಲ್ ಮಾಡಿದ ಈ ಓವರ್‌ನಲ್ಲಿ ಮನೋಹರ್ 2 ಬೌಂಡರಿ ಹಾಗೂ 1 ಸಿಕ್ಸರ್ ಬಾರಿಸಿದರು.
16 ಎಸೆತದಲ್ಲಿ 19 ರನ್ ಬಾರಿಸಿದ್ದ ಶಂಕರ್ ಚಾವ್ಲಾ ಓವರ್‌ನಲ್ಲಿ ಲಾಂಗ್ ಆಫ್ನಲ್ಲಿ ಕ್ಯಾಚಿತ್ತು ಔಟಾದರು. ವಿಜಯ್ ಶಂಕರ್ ತಮ್ಮ ಇನ್ನಿಂಗ್ಸ್‌ನಲ್ಲಿ ಒಂದು ಸಿಕ್ಸರ್ ಮತ್ತು ಬೌಂಡರಿ ಬಾರಿಸಿದ್ದರು.
12ನೇ ಓವರ್ನ ಕೊನೆಯ ಎಸೆತದಲ್ಲಿ ಮಿಲ್ಲರ್ ಲಾಂಗ್ ಆಫ್ನಲ್ಲಿ ಬೌಂಡರಿ ಬಾರಿಸಿದರು.
12ನೇ ಓವರ್ನ ಮೊದಲ ಎಸೆತದಲ್ಲಿ ಗಿಲ್ ಲಾಂಗ್ ಆನ್ನಲ್ಲಿ ಸೂರ್ಯಕುಮಾರ್ ಯಾದವ್ಗೆ ಕ್ಯಾಚಿತ್ತು ಔಟಾದರು.
ಕಾರ್ತಿಕೇಯ ಬೌಲ್ ಮಾಡಿದ 10ನೇ ಓವರ್‌ನಲ್ಲಿ ಶಂಕರ್ 1 ಬೌಂಡರಿ ಹಾಗೂ 1 ಸಿಕ್ಸರ್ ಬಾರಿಸಿದರೆ, ಗಿಲ್ ಕೂಡ ಬೌಂಡರಿ ಬಾರಿಸಿದರು. ಆ ಮುಂದಿನ ಬಾಲ್ನಲ್ಲಿ ಸಿಂಗಲ್ ಕದ್ದ ಗಿಲ್ ತಮ್ಮ ಅರ್ಧಶತಕ ಪೂರೈಸಿದರು.
ಚಾವ್ಲಾ ಬೌಲ್ ಮಾಡಿದ 9ನೇ ಓವರ್ನ ಮೊದಲ ಎಸೆತದಲ್ಲಿ ಗಿಲ್ ಎಕ್ಸ್ಟ್ರಾ ಕವರ್ನಲ್ಲಿ ಬೌಂಡರಿ ಹೊಡೆದರು.
ಗುಜರಾತ್ ಟೈಟಾನ್ಸ್ ಪರ ಶುಭಮನ್ ಗಿಲ್ 38 ರನ್ ಹಾಗೂ ಶಂಕರ್ 2 ರನ್ ಗಳಿಸಿ ಆಡುತ್ತಿದ್ದಾರೆ. ಈ ಓವರ್‌ನಲ್ಲಿ ಕೇವಲ 5 ರನ್ ಬಂತು. 8 ಓವರ್‌ಗಳ ನಂತರ ಗುಜರಾತ್ ಟೈಟಾನ್ಸ್ ಸ್ಕೋರ್ – 60/2
ಚಾವ್ಲಾ ತಮ್ಮ ಕೋಟಾದ ಮೊದಲ ಓವರ್ ಮೊದಲ ಎಸೆತದಲ್ಲೇ ಪಾಂಡ್ಯ ವಿಕೆಟ್ ಉರುಳಿಸಿದರು. ಪಾಂಡ್ಯ ಲಾಂಗ್ ಆಫ್ನಲ್ಲಿ ಸೂರ್ಯಕುಮಾರ್ಗೆ ಕ್ಯಾಚ್ ನೀಡಿದರು.
ಪವರ್ ಪ್ಲೇನ ಕೊನೆಯ ಓವರ್ ಬೌಲ್ ಮಾಡಿದ ಗ್ರೀನ್ 2 ಬೌಂಡರಿ ಹಾಗೂ 1 ಸಿಕ್ಸರ್ ಹೊಡೆಸಿಕೊಂಡರು.ಈ ಓವರ್‌ನಲ್ಲಿ 17 ರನ್ ಬಂದವು.
5ನೇ ಓವರ್ನ ಮೊದಲ ಎಸೆತದಲ್ಲಿ ಡೀಪ್ ಪಾಯಿಂಟ್ನಲ್ಲಿ ಗಿಲ್ ಬೌಂಡರಿ ಹೊಡೆದರು. ಇನ್ನುಳಿದಂತೆ ಈ ಓವರ್‌ನಲ್ಲಿ 10 ರನ್ ಬಂದವು.
ಬೆಹ್ರೆನ್ಡಾರ್ಫ್ ಎಸೆದ 4ನೇ ಓವರ್ನ ಕೊನೆಯ ಎಸೆತದಲ್ಲಿ ಡೀಪ್ ಮಿಡ್ ವಿಕೆಟ್ ಮೇಲೆ ಪಾಂಡ್ಯ ಬೌಂಡರಿ ಬಾರಿಸಿದರು.
3ನೇ ಓವರ್ ಬೌಲ್ ಮಾಡಲು ಬಂದ ಅರ್ಜುನ್, ಆರಂಭಿಕ ಗಿಲ್ ವಿಕೆಟ್ ಉರುಳಿಸಿದ್ದಾರೆ. ಗಿಲ್ ಕೀಪರ್ ಕೈಗೆ ಕ್ಯಾಚಿತ್ತು ಔಟಾದರು.
ಜೇಸನ್ ಬೆಹ್ರೆನ್ಡಾರ್ಫ್ ಬೌಲ್ ಮಾಡಿದ ಎರಡನೇ ಓವರ್ನ 3ನೇ ಎಸೆತದಲ್ಲಿ ಗಿಲ್ ಡೀಪ್ ಸ್ಕ್ವೇರ್ ಲೆಗ್ ಮೇಲೆ ಬೌಂಡರಿ ಹೊಡೆದರು.
ಗುಜರಾತ್ ಬ್ಯಾಟಿಂಗ್ ಆರಂಭಿಸಿದ್ದು, ತಂಡದ ಪರ ಸಹಾ ಹಾಗೂ ಗಿಲ್ ಇನ್ನಿಂಗ್ಸ್ ಆರಂಭಿಸಿದ್ದಾರೆ. ಅರ್ಜುನ್ ಬೌಲ್ ಮಾಡಿದ ಮೊದಲ ಓವರ್‌ನಲ್ಲಿ 4 ರನ್ ಬಂತು.
A look at the Playing XIs of both sides ??
Follow the match ▶️ https://t.co/PXDi4zeBoD#TATAIPL | #GTvMI pic.twitter.com/z2sPKaRfsx
— IndianPremierLeague (@IPL) April 25, 2023
ವೃದ್ಧಿಮಾನ್ ಸಹಾ (ವಿಕೆಟ್ ಕೀಪರ್), ಶುಭ್ಮನ್ ಗಿಲ್, ಹಾರ್ದಿಕ್ ಪಾಂಡ್ಯ (ನಾಯಕ), ವಿಜಯ್ ಶಂಕರ್, ಡೇವಿಡ್ ಮಿಲ್ಲರ್, ಅಭಿನವ್ ಮನೋಹರ್, ರಾಹುಲ್ ತೆವಾಟಿಯಾ, ರಶೀದ್ ಖಾನ್, ಮೊಹಮ್ಮದ್ ಶಮಿ, ನೂರ್ ಅಹ್ಮದ್, ಮೋಹಿತ್ ಶರ್ಮಾ
ರೋಹಿತ್ ಶರ್ಮಾ (ನಾಯಕ), ಇಶಾನ್ ಕಿಶನ್ (ವಿಕೆಟ್ ಕೀಪರ್), ಕ್ಯಾಮೆರಾನ್ ಗ್ರೀನ್, ಸೂರ್ಯಕುಮಾರ್ ಯಾದವ್, ಟಿಮ್ ಡೇವಿಡ್, ನೆಹಾಲ್ ವಡೇರಾ, ಕುಮಾರ್ ಕಾರ್ತಿಕೇಯ, ಅರ್ಜುನ್ ತೆಂಡೂಲ್ಕರ್, ರಿಲೆ ಮೆರೆಡಿತ್, ಪಿಯೂಷ್ ಚಾವ್ಲಾ, ಜೇಸನ್ ಬೆಹ್ರೆನ್ಡಾರ್ಫ್
ಬೆಳಗಾವಿ ಜಿಲ್ಲೆ ನಿಪ್ಪಾಣಿಯ ವಿಎಸ್‌ಎಂ ಕಾಲೇಜು ಮೈದಾನದಲ್ಲಿ ಬಿಜೆಪಿ ಮಹಿಳಾ ಸಮಾವೇಶ ಉದ್ದೇಶಿಸಿ ಕೇಂದ್ರ ಸಚಿವೆ ಸ್ಮೃತಿ ಇರಾನಿ ಮಾತನಾಡಿ, ಕಾಂಗ್ರೆಸ್ ಹಾಗೂ ಎನ್ಸಿಪಿ ವಿರುದ್ಧ ವಾಗ್ದಾಳಿ ನಡೆಸಿದರು. ಶಶಿಕಲಾ ಜೊಲ್ಲೆ ಎಷ್ಟು ಬಲಿಷ್ಠರು ಅಂದ್ರೆ ಇಬ್ಬರು ಗಂಡಸರು ಒಟ್ಟಿಗೆ ಒಬ್ಬ ಮಹಿಳೆಯ ವಿರುದ್ದ ನಿಂತಿದ್ದಾರೆ. ಶಶಕಲಾ ಜೊಲ್ಲೆ ತವರು ಈ ಕ್ಷೇತ್ರ, ಆದ್ರೆ ಮಹಿಳೆಗೆ ಅವಾಮಾನ ಮಾಡಲು ಎನ್ಸಿಪಿ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ. ಎನ್ಸಿಪಿಯನ್ನು ಗೆಲ್ಲಿಸಿ ರಾಜ್ಯದಲ್ಲಿ ಪ್ರಯೋಜನವಿಲ್ಲ ಎಂದು ಇರಾನಿ ಹೇಳಿದರು.
ಟಾಸ್ ಗೆದ್ದ ಮುಂಬೈ ನಾಯಕ ರೋಹಿತ್ ಶರ್ಮಾ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದ್ದಾರೆ.
Published On - 7:01 pm, Tue, 25 April 23