IPL 2023: ಪ್ಲೇ ಆಫ್​ನಲ್ಲಿ ಮುಂದುವರೆದ ರೋಹಿತ್ ಫ್ಲಾಪ್ ಶೋ; ಇದು 16 ಸೀಸನ್​ಗಳ ಬದಲಾಗದ ಕಥೆ..!

Rohit Sharma Playoff Record: ರೋಹಿತ್ ಅವರ ಕಳಪೆ ಆಟ ಕೇವಲ ಪ್ಲೇ ಆಫ್ ಪಂದ್ಯಗಳಿಗೆ ಮಾತ್ರ ಸೀಮಿತವಾಗಿಲ್ಲ. ಬದಲಿಗೆ ಇಡೀ ಸೀಸನ್​ನಲ್ಲಿ ರೋಹಿತ್ ಬ್ಯಾಟ್ ರನ್ ಬರ ಎದುರಿಸಿದೆ.

IPL 2023: ಪ್ಲೇ ಆಫ್​ನಲ್ಲಿ ಮುಂದುವರೆದ ರೋಹಿತ್ ಫ್ಲಾಪ್ ಶೋ; ಇದು 16 ಸೀಸನ್​ಗಳ ಬದಲಾಗದ ಕಥೆ..!
ರೋಹಿತ್ ಶರ್ಮಾ
Follow us
|

Updated on: May 27, 2023 | 3:48 PM

ಕ್ವಾಲಿಫೈಯರ್ 2 ಪಂದ್ಯದಲ್ಲಿ ಗುಜರಾತ್ ವಿರುದ್ಧ ಹೀನಾಯ ಸೋಲುಂಡ ರೋಹಿತ್ (Rohit Sharma) ಪಡೆ ದಾಖಲೆಯ 6ನೇ ಬಾರಿಗೆ ಕಪ್ ಗೆಲ್ಲುವ ಅವಕಾಶವನ್ನು ತಪ್ಪಿಸಿಕೊಂಡಿದೆ. ಮೇ 26 ರಂದು ಮೋದಿ ಮೈದಾನದಲ್ಲಿ (Narendra Modi Stadium in Ahmedabad) ಗಿಲ್ ಅಬ್ಬರಕ್ಕೆ ಮಣಿದ ಮುಂಬೈ ಬರೋಬ್ಬರಿ 61 ರನ್​ಗಳ ಸೋಲು ಕಂಡು ಲೀಗ್​ನಲ್ಲಿ 3ನೇ ಸ್ಥಾನಕ್ಕೆ ತೃಪ್ತಿಕೊಂಡಿದೆ. ವಾಸ್ತವವಾಗಿ ಹೇಳಬೇಕೆಂದರೆ ಮುಂಬೈ ಇಂಡಿಯನ್ಸ್‌ಗೆ (mumbai indians ) ಮೇ 26 ಬಹಳ ವಿಶೇಷವಾದ ದಿನವಾಗಿದೆ. ಇದೇ ದಿನ ಮುಂಬೈ 10 ವರ್ಷಗಳ ಹಿಂದೆ 2013ರಲ್ಲಿ ಮೊದಲ ಬಾರಿಗೆ ಪ್ರಶಸ್ತಿ ಗೆದ್ದಿತ್ತು. ಅದೇ ಸೀಸನ್​ನಲ್ಲಿ ರೋಹಿತ್ ಶರ್ಮಾ ತಂಡದ ನಾಯಕತ್ವವನ್ನು ವಹಿಸಿಕೊಂಡಿದಲ್ಲದೆ ಐದು ವರ್ಷಗಳ ವೈಫಲ್ಯದ ನಂತರ ಮುಂಬೈ ತಂಡವನ್ನು ಮೊದಲ ಬಾರಿಗೆ ಚಾಂಪಿಯನ್ ಮಾಡಿದ್ದರು. ಹೀಗಾಗಿ ನಿನ್ನೆ ಶುಕ್ರವಾರ ಈ ಗೆಲುವಿನ 10ನೇ ವರ್ಷಾಚರಣೆಯಾಗಿದ್ದು ಮುಂಬೈಗೆ ಮತ್ತೊಂದು ಗೆಲುವು ದಾಖಲಿಸುವ ಅವಕಾಶವಿತ್ತು. ಆದರೆ ಅದು ಸಂಭವಿಸಲಿಲ್ಲ. ತಂಡದ ಸೋಲಿಗೆ ಬೌಲಿಂಗ್ ವಿಭಾಗ ಕಾರಣವೆಂದು ಹಲವರ ಅಭಿಪ್ರಾಯವಾಗಿರಬಹುದು. ಆದರೆ ತಂಡದ ಈ ಸೋಲಿಗೆ ಮತ್ತೊಂದು ಪ್ರಮುಖ ಕಾರಣವೆಂದರೆ ನಾಯಕ ರೋಹಿತ್ ಅವರ ಕಳಪೆ ಬ್ಯಾಟಿಂಗ್. ಇದು ಕೇವಲ ನಿನ್ನೆಯ ಪಂದ್ಯಕ್ಕೆ ಮಾತ್ರ ಸೀಮಿತವಾಗಿಲ್ಲ. ಬದಲಿಗೆ ಕಳೆದ 15 ಪ್ಲೇ ಆಫ್​ ಪಂದ್ಯಗಳಲ್ಲಿ ರೋಹಿತ್ ಬ್ಯಾಟ್ ಮಂಕಾಗಿರುವುದು ಇದಕ್ಕೆ ಪೂರಕ ಸಾಕ್ಷಿಯಾಗಿದೆ.

16 ವರ್ಷಗಳಿಂದ ಪ್ಲೇಆಫ್‌ನಲ್ಲಿ ಮಂಕಾಗುವ ರೋಹಿತ್

ಗುಜರಾತ್ ನೀಡಿದ್ದ 234 ರನ್​ಗಳ ಗುರಿ ನೋಡಿದ್ದ ಮುಂಬೈ ಅದಾಗಲೇ ಪಂದ್ಯದಲ್ಲಿ ಕೊಂಚ ಹಿನ್ನಡೆ ಅನುಭವಿಸಿತ್ತು. ಅದರಲ್ಲೂ ಆರಂಭಿಕ ಕಿಶನ್ ಇಂಜುರಿ ಹಾಗೂ ಗ್ರೀನ್ ಇಂಜುರಿ ತಂಡಕ್ಕೆ ಮತ್ತಷ್ಟು ಹೊಡೆತ ನೀಡಿತ್ತು. ಆ ನಂತರ ಗ್ರೀನ್ ಬ್ಯಾಟಿಂಗ್​ಗೆ ಬಂದರಾದರೂ ಹೆಚ್ಚಿನ ಕೊಡುಗೆ ನೀಡಲು ಸಾಧ್ಯವಾಗಲ್ಲಿಲ್ಲ. ಇದೆಲ್ಲದರ ನಡುವೆ ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ ಕೊಂಚ ಹೋರಾಟ ನಿಡುವ ಮೂಲಕ ತಂಡದಲ್ಲಿ ಕೊಂಚ ಗೆಲುವಿನ ಭರವಸೆ ಮೂಡಿಸಿದರು. ಇವರೊಂದಿಗೆ ನಾಯಕ ರೋಹಿತ್ ಕೂಡ ತಮ್ಮ ಬ್ಯಾಟ್‌ನಿಂದ ಏನಾದರೂ ಕೊಡುಗೆ ನೀಡಿದ್ದರೆ, ಮುಂಬೈ ಕೇವಲ 171 ರನ್‌ಗಳಿಗೆ ಔಟಾಗುವ ಬದಲು ಗುರಿಯ ಹತ್ತಿರ ತಲುಪಬಹುದಿತ್ತು.

IPL 2023 Prize Money: ಚಾಂಪಿಯನ್​ಗೆ 20 ಕೋಟಿ! ಆರೆಂಜ್, ಪರ್ಪಲ್ ಕ್ಯಾಪ್ ಗೆದ್ದವರಿಗೆ ಸಿಗುವ ಬಹುಮಾನವೆಷ್ಟು ಗೊತ್ತಾ?

ಆದರೆ ನಾಯಕನ ಜವಬ್ದಾರಿ ಮರೆತ ರೋಹಿತ್​ಗೆ ಈ ಬಾರಿಯೂ ಯಾವುದೇ ಮಹತ್ವದ ಕೊಡುಗೆ ನೀಡಲು ಸಾಧ್ಯವಾಗಲಿಲ್ಲ. ಈ ಪಂದ್ಯದ ಮೂರನೇ ಓವರ್‌ನಲ್ಲಿ 7 ಎಸೆತಗಳಲ್ಲಿ ಕೇವಲ 8 ರನ್ ಗಳಿಸಿ ಪೆವಿಲಿಯನ್‌ ಸೇರಿಕೊಂಡರು. ಇದಕ್ಕೂ ಮುನ್ನ ಎಲಿಮಿನೇಟರ್‌ ಪಂದ್ಯದಲ್ಲೂ ರೋಹಿತ್‌ ಬ್ಯಾಟ್‌ನಿಂದ ಕೇವಲ 11 ರನ್‌ಗಳು ಹೊರಬಂದಿದ್ದವು.

ಈ ಮೂಲಕ ಐಪಿಎಲ್ ಪ್ಲೇಆಫ್ ಪಂದ್ಯಗಳಲ್ಲಿ (ಫೈನಲ್ ಹೊರತುಪಡಿಸಿ) ರೋಹಿತ್ ಅವರ ಕಳಪೆ ಪ್ರದರ್ಶನ ಈ ಆವೃತ್ತಿಯಲ್ಲೂ ಮುಂದುವರೆದಂತ್ತಾಗಿದೆ. ಮುಂಬೈ ನಾಯಕ ಒಟ್ಟು 15 ಪ್ಲೇಆಫ್ ಪಂದ್ಯಗಳನ್ನು ಆಡಿದ್ದು, 89.26 ರ ಸ್ಟ್ರೈಕ್ ರೇಟ್​ನಲ್ಲಿ ಬ್ಯಾಟ್ ಬೀಸಿರುವ ರೋಹಿತ್ ಕೇವಲ 9.50 ರ ಸರಾಸರಿಯಲ್ಲಿ 133 ರನ್ ಮಾತ್ರ ಬಾರಿಸಿದ್ದಾರೆ.

ಮುಂದುವರೆದ ಫ್ಲಾಪ್ ಶೋ

ರೋಹಿತ್ ಅವರ ಕಳಪೆ ಆಟ ಕೇವಲ ಪ್ಲೇ ಆಫ್ ಪಂದ್ಯಗಳಿಗೆ ಮಾತ್ರ ಸೀಮಿತವಾಗಿಲ್ಲ. ಬದಲಿಗೆ ಇಡೀ ಸೀಸನ್​ನಲ್ಲಿ ರೋಹಿತ್ ಬ್ಯಾಟ್ ರನ್ ಬರ ಎದುರಿಸಿದೆ. ಈ ಸೀಸನ್​ನಲ್ಲಿ 16 ಇನ್ನಿಂಗ್ಸ್‌ ಆಡಿರುವ ರೋಹಿತ್ 20 ರ ಸರಾಸರಿ ಮತ್ತು 132 ರ ಸ್ಟ್ರೈಕ್ ರೇಟ್‌ನಲ್ಲಿ ಕೇವಲ 332 ರನ್ ಬಾರಿಸಿದ್ದಾರೆ. ಈ 16 ಇನ್ನಿಂಗ್ಸ್‌ಗಳಲ್ಲಿ ಕೇವಲ 2 ಅರ್ಧಶತಕಗಳು ಮಾತ್ರ ಅವರ ಬ್ಯಾಟ್‌ನಿಂದ ಸಿಡಿದಿವೆ. ಆದರೆ ಆರಂಭಿಕ ಪಂದ್ಯಗಳಲ್ಲಿ ಸತತ ಸೋಲುಗಳ ನಡುವೆಯೂ ಮುಂಬೈ ಪ್ಲೇ ಆಫ್ ತಲುಪಲು ರೋಹಿತ್ ಅವರ ನಾಯಕತ್ವವು ಕೊಡುಗೆ ನೀಡಿದೆಯಾದರೂ ಅವರ ಬ್ಯಾಟ್‌ ಮಾತ್ರ ಕೆಲಸ ಮಾಡಲಿಲ್ಲ.

ಕಳೆದ ಕೆಲವು ಸೀಸನ್‌ಗಳು ರೋಹಿತ್ ಅವರಿಗೆ ಉತ್ತಮವಾಗಿಲ್ಲ. 2019ರ ಆವೃತ್ತಿಯಲ್ಲಿ ರೋಹಿತ್ ಬ್ಯಾಟ್ 400ಕ್ಕೂ ಹೆಚ್ಚು ರನ್ ಗಳಿಸಿದ್ದನ್ನು ಬಿಟ್ಟರೆ 2013ರ ಸೀಸನ್​ನಲ್ಲಿ ಒಮ್ಮೆ ಮಾತ್ರ 500ಕ್ಕೂ ಹೆಚ್ಚು ರನ್ ಗಳಿಸಿದ್ದರು. ಅದನ್ನು ಬಿಟ್ಟರೆ ಉಳಿದ ಆವೃತ್ತಿಗಳಲ್ಲಿ ರೋಹಿತ್ ಹೇಳಿಕೊಳ್ಳುವಂತಹ ಪ್ರದರ್ಶನ ನೀಡಿಲ್ಲ. ಈ ಆವೃತ್ತಿಯನ್ನು ಸಪ್ಪೆ ಸಪ್ಪೆಯಾಗಿ ಮುಗಿಸಿರುವ ರೋಹಿತ್ ಮುಂದಿನ ಆವೃತ್ತಿಯಲ್ಲಾದರೂ ಲಯ ಕಂಡುಕೊಳ್ಳುತ್ತಾರಾ ಎಂಬುದನ್ನು ಕಾದುನೋಡಬೇಕಿದೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇಲ್ಲಿ ನಾನೇ ಅಭ್ಯರ್ಥಿ: ಅಚ್ಚರಿ ಹೇಳಿಕೆ ನೀಡಿದ ಡಿಸಿಎಂ ಡಿಕೆ ಶಿವಕುಮಾರ್​
ಇಲ್ಲಿ ನಾನೇ ಅಭ್ಯರ್ಥಿ: ಅಚ್ಚರಿ ಹೇಳಿಕೆ ನೀಡಿದ ಡಿಸಿಎಂ ಡಿಕೆ ಶಿವಕುಮಾರ್​
ಬಿಹಾರದಲ್ಲಿ ಪ್ರವಾಹ ಭೀತಿ; ನೂರಾರು ಹಳ್ಳಿಗಳಿಗೆ ನುಗ್ಗಿದ ಗಂಗಾ ನದಿ ನೀರು
ಬಿಹಾರದಲ್ಲಿ ಪ್ರವಾಹ ಭೀತಿ; ನೂರಾರು ಹಳ್ಳಿಗಳಿಗೆ ನುಗ್ಗಿದ ಗಂಗಾ ನದಿ ನೀರು
ಹಾಡಹಗಲೇ ಮೆಡಿಕಲ್ ಶಾಪ್​ಗೆ ನುಗ್ಗಿ ದರೋಡೆ ಮಾಡಿದ ಕಳ್ಳರು; ವಿಡಿಯೋ ವೈರಲ್
ಹಾಡಹಗಲೇ ಮೆಡಿಕಲ್ ಶಾಪ್​ಗೆ ನುಗ್ಗಿ ದರೋಡೆ ಮಾಡಿದ ಕಳ್ಳರು; ವಿಡಿಯೋ ವೈರಲ್
ಇದ್ದಕ್ಕಿದ್ದಂತೆ ರೈಲ್ವೆ ಪ್ಲಾಟ್​ಫಾರ್ಮ್​ ಮೇಲೆ 6 ಅಡಿ ಉದ್ದದ ಹಾವು ಪ್ರತ್ಯ
ಇದ್ದಕ್ಕಿದ್ದಂತೆ ರೈಲ್ವೆ ಪ್ಲಾಟ್​ಫಾರ್ಮ್​ ಮೇಲೆ 6 ಅಡಿ ಉದ್ದದ ಹಾವು ಪ್ರತ್ಯ
ರಾಮನಗರದಲ್ಲಿ ಕೇಂದ್ರ ಸಚಿವ ಕುಮಾರಸ್ವಾಮಿಗೆ ಕೌಂಟರ್ ಕೊಟ್ಟ ಡಿಕೆಶಿ
ರಾಮನಗರದಲ್ಲಿ ಕೇಂದ್ರ ಸಚಿವ ಕುಮಾರಸ್ವಾಮಿಗೆ ಕೌಂಟರ್ ಕೊಟ್ಟ ಡಿಕೆಶಿ
ಕಾರು ಡಿಕ್ಕಿ ಹೊಡೆದ ರಭಸಕ್ಕೆ ಫ್ಲೈಓವರ್ ಪಿಲ್ಲರ್ ಮೇಲೆ ಸಿಲುಕಿದ ಯುವತಿ
ಕಾರು ಡಿಕ್ಕಿ ಹೊಡೆದ ರಭಸಕ್ಕೆ ಫ್ಲೈಓವರ್ ಪಿಲ್ಲರ್ ಮೇಲೆ ಸಿಲುಕಿದ ಯುವತಿ
ಬೀದರ್​​ನ ಐತಿಹಾಸಿಕ ಕೋಟೆ ಆವರಣದಲ್ಲಿ ಏರ್ ಶೋ ಪ್ರದರ್ಶನ
ಬೀದರ್​​ನ ಐತಿಹಾಸಿಕ ಕೋಟೆ ಆವರಣದಲ್ಲಿ ಏರ್ ಶೋ ಪ್ರದರ್ಶನ
ದರ್ಬಾರ್ ಗಲ್ಲಿಯಲ್ಲಿ ರಸ್ತೆಯುದ್ದಕ್ಕೂ ಪ್ಯಾಲೆಸ್ತೀನ್ ಧ್ವಜ ಶಾಮಿಯಾನ
ದರ್ಬಾರ್ ಗಲ್ಲಿಯಲ್ಲಿ ರಸ್ತೆಯುದ್ದಕ್ಕೂ ಪ್ಯಾಲೆಸ್ತೀನ್ ಧ್ವಜ ಶಾಮಿಯಾನ
ಚನ್ನಪಟ್ಟಣ: ಹೈಟೆಕ್ ಕ್ರೀಡಾಂಗಣ ನಿರ್ಮಾಣಕ್ಕೆ ಡಿಕೆಶಿ ಶಂಕುಸ್ಥಾಪನೆ
ಚನ್ನಪಟ್ಟಣ: ಹೈಟೆಕ್ ಕ್ರೀಡಾಂಗಣ ನಿರ್ಮಾಣಕ್ಕೆ ಡಿಕೆಶಿ ಶಂಕುಸ್ಥಾಪನೆ
ಬೆಳಗಾವಿ: ರೋಗಿ ಕೈಗೆ ಕೊಳಲು ಕೊಟ್ಟು ಶಸ್ತ್ರ ಚಿಕಿತ್ಸೆ ಮಾಡಿದ ವೈದ್ಯರು
ಬೆಳಗಾವಿ: ರೋಗಿ ಕೈಗೆ ಕೊಳಲು ಕೊಟ್ಟು ಶಸ್ತ್ರ ಚಿಕಿತ್ಸೆ ಮಾಡಿದ ವೈದ್ಯರು