
ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಗುಜರಾತ್ ಟೈಟಾನ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ನಡುವಿನ ಕದನ ರೋಚಕ ರೀತಿಯಲ್ಲಿ ಅಂತ್ಯಗೊಂಡಿದೆ. ಹಾಲಿ ಚಾಂಪಿಯನ್ ಗುಜರಾತ್ ಟೈಟಾನ್ಸ್ ತಂಡವನ್ನು 3 ವಿಕೆಟ್ಗಳಿಂದ ಮಣಿಸಿತು. ಈ ಪಂದ್ಯದಲ್ಲಿ ಟಾಸ್ ಸೋತ ಗುಜರಾತ್ ಟೈಟಾನ್ಸ್ ತಂಡ 20 ಓವರ್‌ಗಳ ಅಂತ್ಯಕ್ಕೆ 7 ವಿಕೆಟ್ ನಷ್ಟಕ್ಕೆ 177 ರನ್ ಗಳಿಸಿತು. 178 ರನ್‌ಗಳ ಗುರಿ ಬೆನ್ನತ್ತಿದ್ದ ರಾಜಸ್ಥಾನ ತಂಡದ ಪರ ಸ್ಫೋಟಕ ಬ್ಯಾಟಿಂಗ್ ಮಾಡಿದ ಹೆಟ್ಮೆಯರ್ ಮತ್ತು ಸಂಜು ತಲಾ ಅರ್ಧಶತಕ ಸಿಡಿಸಿ ತಂಡವನ್ನು 19.2 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ ಗೆಲುವಿನ ದಡ ಸೇರಿಸಿದರು.
20ನೇ ಓವರ್‌ನ ಮೊದಲ ಎಸೆತದಲ್ಲಿ ಡಬಲ್ ಕದ್ದು ತಮ್ಮ ಅರ್ಧಶತಕ ಪೂರೈಸಿದ ಹೆಟ್ಮಾಯಿರ್ 2ನೇ ಎಸೆತದಲ್ಲಿ ಭರ್ಜರಿ ಸಿಕ್ಸರ್ ಬಾರಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು.
ಜುರೆಲ್ ವಿಕೆಟ್ ಬಳಿಕ ಬಂದ ಅಶ್ವಿನ್ ಆಡಿದ ಎರಡು ಎಸೆತಗಳಲ್ಲಿ 1 ಬೌಂಡರಿ ಹಾಗೂ 1 ಸಿಕ್ಸರ್ ಬಾರಿಸಿದರು. ಆನಂತರ ಮುಂದಿನ ಎಸೆತದಲ್ಲಿ ಔಟಾದರು.
19ನೇ ಓವರ್ ಎಸೆದ ಶಮಿಗೆ ಮೊದಲ ಎಸೆತದಲ್ಲಿ ಜುರೆಲ್ ಸಿಕ್ಸರ್ ಬಾರಿಸಿದರು. ಆದರೆ ಮುಂದಿನ ಎಸೆತದಲ್ಲಿ ಕ್ಯಾಚಿತ್ತು ಔಟಾದರು.
17ನೇ ಓವರ್‌ನಲ್ಲಿ ದೃವ್ ಒಂದು ಬೌಂಡರಿ ಬಾರಿಸಿದರೆ, 18ನೇ ಓವರ್‌ನಲ್ಲಿ ಹೆಟ್ಮಾಯಿರ್, ರಶೀದ್ಗೆ 1 ಬೌಂಡರಿ ಹಾಗೂ 1 ಸಿಕ್ಸರ್ ಬಾರಿಸಿದರು.
16ನೇ ಓವರ್‌ನಲ್ಲಿ ಹೆಟ್ಮಾಯಿರ್ 2 ಸಿಕ್ಸರ್ ಬಾರಿಸಿದರೆ, ಜುರೆಲ್ ಬೌಂಡರಿ ಹೊಡೆದರು. ರಾಜಸ್ಥಾನ್ ಗೆಲುವಿಗೆ 24 ಎಸೆತಗಳಲ್ಲಿ 44 ರನ್ ಬೇಕು
15ನೇ ಓವರ್‌ನಲ್ಲಿ 1 ಸಿಕ್ಸ್ ಹಾಗೂ 1 ಬೌಂಡರಿ ಬಾರಿಸಿದ ಸಂಜು ಕೊನೆಯ ಎಸೆತದಲ್ಲಿ ಕ್ಯಾಚಿತ್ತು ಔಟಾದರು.
14ನೇ ಓವರ್‌ನ 2ನೇ ಎಸೆತದಲ್ಲಿ ಸಿಂಗಲ್ ಕದ್ದ ನಾಯಕ ಸಂಜು 29 ಎಸೆತಗಳಲ್ಲಿ ತಮ್ಮ ಅರ್ಧಶತಕ ಪೂರೈಸಿದ್ದಾರೆ.
14ನೇ ಓವರ್‌ನಲ್ಲಿ ಒಂದು ಸಿಕ್ಸರ್ ಹಾಗೂ ಬೌಂಡರಿ ಬಾರಿಸಿದ ಹೆಟ್ಮಾಯಿರ್ ತಂಡದ ಮೊತ್ತವನ್ನು 100ರ ಗಡಿ ದಾಟಿಸಿದರು.
ತಮ್ಮ ಕೋಟಾದ 3ನೇ ಓವರ್ ಬೌಲ್ ಮಾಡಲು ಬಂದ ರಶೀದ್ ಖಾನ್ಗೆ ರಾಜಸ್ಥಾನ್ ನಾಯಕ ಸಂಜು ಮೂರು ಎಸೆತಗಳಲ್ಲಿ ಮೂರು ಸಿಕ್ಸರ್ ಬಾರಿಸಿದರು.
ಪರಾಗ್ ವಿಕೆಟ್ ಉರುಳಿಸಿದ ರಶೀದ್ ಓವರ್‌ನ ಕೊನೆಯ ಎಸೆತವನ್ನು ಸಂಜು ಡೀಪ್ ಮಿಡ್ ವಿಕೆಟ್ನಲ್ಲಿ ಸಿಕ್ಸರ್ಗಟ್ಟಿದರು.
ಹಿಂದಿನ ಓವರ್‌ನಲ್ಲಿ ಪಡಿಕಲ್ ವಿಕೆಟ್ ಉರುಳಿಸಿದ್ದ ರಶೀದ್ ತಮ್ಮ ಮುಂದಿನ ಓವರ್‌ನಲ್ಲಿ ಪರಾಗ್ ವಿಕೆಟ್ ಉರುಳಿಸಿದ್ದಾರೆ. ಲಾಂಗ್ ಆಫ್ನಲ್ಲಿ ಮಿಲ್ಲರ್ ಕ್ಯಾಚ್ ತೆಗೆದುಕೊಂಡರು.
25 ಎಸೆತಗಳಲ್ಲಿ 26 ರನ್ ಬಾರಿಸಿದ್ದ ಪಡಿಕಲ್ ಶಾರ್ಟ್ ಥರ್ಡ್ಮ್ಯಾನ್ನಲ್ಲಿ ಕ್ಯಾಚಿತ್ತು ಔಟಾದರು. 9ನೇ ಓವರ್‌ನಲ್ಲಿ ರಶೀದ್ ಖಾನ್ ಈ ವಿಕೆಟ್ ಪಡೆದರು.
7ನೇ ಓವರ್‌ನ 2ನೇ ಎಸೆತವನ್ನು ಸಂಜು ಡೀಪ್ ಸ್ಕ್ವೇರ್ ಲೆಗ್ನಲ್ಲಿ ಸಿಕ್ಸರ್ಗಟ್ಟಿದರೆ, 5ನೇ ಎಸೆತವನ್ನು ಎಕ್ಸ್ಟ್ರಾ ಕವರ್ನಲ್ಲಿ ಪಡಿಕಲ್ ಬೌಂಡರಿಗಟ್ಟಿದರು.
6ನೇ ಓವರ್‌ನ 4ನೇ ಎಸೆತವನ್ನು ಪಡಿಕಲ್ ವೈಡ್ ಲಾಂಗ್ ಆಫ್ನಲ್ಲಿ ಸಿಕ್ಸರ್ ಬಾರಿಸಿದರು. ರಾಜಸ್ಥಾನ್ ರಾಯಲ್ಸ್ ಪರ ಪಡಿಕ್ಕಲ್ 19 ರನ್ ಹಾಗೂ ಸಂಜು 4 ರನ್ ಗಳಿಸಿ ಆಡುತ್ತಿದ್ದಾರೆ. 6 ಓವರ್‌ಗಳ ನಂತರ ರಾಜಸ್ಥಾನ ಸ್ಕೋರ್ 26/2
5ನೇ ಓವರ್‌ನಲ್ಲಿ ಪಡಿಕಲ್ ಸಿಕ್ಸರ್ ಬಾರಿಸಿದರು. ರಾಜಸ್ಥಾನ್ ರಾಯಲ್ಸ್ ಪರ ಪಡಿಕ್ಕಲ್ 13 ರನ್ ಮತ್ತು ಸಂಜು 4 ರನ್ ಗಳಿಸಿ ಆಡುತ್ತಿದ್ದಾರೆ.ರಾಜಸ್ಥಾನ್ ಸ್ಕೋರ್ 5 ಓವರ್‌ಗಳ ನಂತರ 20/2. ಈ ಓವರ್‌ನಲ್ಲಿ ಶುಭಮನ್ ಗಿಲ್ ವಿಕೆಟ್ ಹಿಂದೆ ಕ್ಯಾಚ್ ಕೈಬಿಟ್ಟರು.
ಮೂರನೇ ಓವರ್‌ನ 5ನೇ ಎಸೆತದಲ್ಲಿ ಮೊಹಮ್ಮದ್ ಶಮಿ ಜೋಸ್ ಬಟ್ಲರ್ ಅವರನ್ನು ಬೌಲ್ಡ್ ಮಾಡಿದರು. 3 ಓವರ್‌ಗಳ ನಂತರ ರಾಜಸ್ಥಾನ ಸ್ಕೋರ್ 4/2. ರಾಜಸ್ಥಾನ ಗೆಲ್ಲಲು ಇನ್ನೂ 174 ರನ್‌ಗಳ ಅಗತ್ಯವಿದೆ.
ನಾಯಕ ಹಾರ್ದಿಕ್ ಪಾಂಡ್ಯ ಎಸೆತದಲ್ಲಿ 1 ರನ್ ಗಳಿಸಿ ಯಶಸ್ವಿ ಜೈಸ್ವಾಲ್ ಔಟಾದರು. 2 ಓವರ್‌ಗಳ ನಂತರ ರಾಜಸ್ಥಾನ ಸ್ಕೋರ್ 3/1
ರಾಜಸ್ಥಾನದ ಆರಂಭಿಕ ಆಟಗಾರ ಜೋಸ್ ಬಟ್ಲರ್ 0 ಮತ್ತು ಯಶ್ವಿ ಜೈಸ್ವಾಲ್ 1 ರನ್‌ಗಳೊಂದಿಗೆ ಆಡುತ್ತಿದ್ದಾರೆ. 1 ಓವರ್ ನಂತರ ರಾಜಸ್ಥಾನ ಸ್ಕೋರ್ 1/0. ಗುಜರಾತ್ ಟೈಟಾನ್ಸ್ 178 ರನ್ ಟಾರ್ಗೆಟ್ ನೀಡಿದೆ.
20ನೇ ಓವರ್‌ನಲ್ಲಿ 2 ಬೌಂಡರಿ ಬಾರಿಸಿದ ಮಿಲ್ಲರ್, ಆ ನಂತರದ ಎಸೆತದಲ್ಲಿ ಸಿಕ್ಸರ್ ಬಾರಿಸಲು ಯತ್ನಿಸಿ ಕ್ಯಾಚಿತ್ತು ಔಟಾದರು. ಆ ನಂತರ ಬಂದ ರಶೀದ್ ಖಾನ್ ಕೂಡ ರನೌಟ್ ಆದರು. ಅಂತಿಮವಾಗಿ ಗುಜರಾತ್ 7 ವಿಕೆಟ್ ಕಳೆದುಕೊಂಡು 177 ರನ್ ಕಲೆಹಾಕಿದೆ.
ಝಂಪಾ ಎಸೆದ 19ನೇ ಓವರ್‌ನಲ್ಲಿ ಮಿಲ್ಲರ್ 1 ಬೌಂಡರಿ ಬಾರಿಸಿದರೆ, ಕನ್ನಡಿಗ ಮನೋಹರ್ ಭರ್ಜರಿ ಸಿಕ್ಸರ್ ಬಾರಿಸಿದರು. ಆದರೆ ಕೊನೆಯ ಎಸೆತದಲ್ಲಿ ಕ್ಯಾಚಿತ್ತು ಔಟಾದರು.
18ನೇ ಓವರ್‌ನ ಮೂರು ಮತ್ತು ನಾಲ್ಕನೇ ಎಸೆತವನ್ನು ಕನ್ನಡಿಗ ಮನೋಹರ್ ಎರಡು ಸಿಕ್ಸರ್ ಬಾರಿಸಿದರು. ಇದರೊಂದಿಗೆ ಗುಜರಾತ್ 150 ರನ್ ಕೂಡ ಪೂರ್ಣಗೊಂಡಿದೆ.
ಸಂದೀಪ್ ಶರ್ಮಾ ಎಸೆದ 16ನೇ ಓವರ್‌ನ 2ನೇ ಎಸೆತದಲ್ಲಿ ಗಿಲ್ ಲಾಂಗ್ ಆಫ್ನಲ್ಲಿ ಕ್ಯಾಚಿತ್ತು ಔಟಾದರು.
ಕೊನೆಯದಾಗಿ 10ನೇ ಓವರ್‌ನಲ್ಲಿ ಬೌಂಡರಿ ಬಾರಿಸಿದ್ದ ಗುಜರಾತ್ ಇದೀಗ 15ನೇ ಓವರ್‌ನ 4ನೇ ಎಸೆತದಲ್ಲಿ ಸಿಕ್ಸರ್ ಕಂಡಿದೆ.
12ನೇ ಓವರ್‌ನ ಕೊನೆಯ ಎಸೆತದಲ್ಲಿ ಡಬಲ್ ಕದಿಯುವುದರೊಂದಿಗೆ ಮಿಲ್ಲರ್, ಗುಜರಾತ್ ತಂಡದ ಸ್ಕೋರ್ ಅನ್ನು ಶತಕ ದಾಟಿಸಿದ್ದಾರೆ.
11ನೇ ಓವರ್ ಎಸೆಯಲು ಬಂದ ಚಹಲ್, ಗುಜರಾತ್ ನಾಯಕ ಪಾಂಡ್ಯರನ್ನು ಔಟ್ ಮಾಡಿದ್ದಾರೆ. ಕವರ್ರ್ಸ್ನಲ್ಲಿ ಜೈಸ್ವಾಲ್ ಕ್ಯಾಚ್ ತೆಗೆದುಕೊಂಡರು.
ಗುಜರಾತ್ ಇನ್ನಿಂಗ್ಸ್ನ 10 ಓವರ್ ಮುಗಿದಿದೆ. ಈ ಓವರ್‌ನಲ್ಲಿ ಬೌಂಡರಿ ಬಾರಿಸಿದ ಪಾಂಡ್ಯ, ಗಿಲ್ ಜೊತೆಗೆ ಅರ್ಧಶತಕದ ಜೊತೆಯಾಟವನ್ನು ಪೂರೈಸಿದರು.
8ನೇ ಓವರ್‌ನಲ್ಲಿ ಗಿಲ್ ಅಬ್ಬರಿಸಿದರು. ಅಶ್ವಿನ್ ಎಸೆದ ಈ ಓವರ್‌ನಲ್ಲಿ ಗಿಲ್ 2 ಬೌಂಡರಿ ಹಾಗೂ 2 ಸಿಕ್ಸರ್ ಬಾರಿಸಿದರು. ಈ ಓವರ್ನಿಂದ 18 ರನ್ ಬಂದವು.
ಸುದರ್ಶನ್ ವಿಕೆಟ್ ಬಳಿಕ ಬಂದ ಪಾಂಡ್ಯ 7ನೇ ಓವರ್‌ನ ಮೊದಲ ಎಸೆತವನ್ನು ಸಿಕ್ಸರ್ಗಟ್ಟಿದರೆ, 2ನೇ ಎಸೆತದಲ್ಲಿ ಬೌಂಡರಿ ಬಾರಿಸಿದರು.
6ನೇ ಓವರ್‌ನ ಮೊದಲ ಎಸೆತವನ್ನು ಸ್ಕ್ವೇರ್ ಲೆಗ್ನಲ್ಲಿ ಬೌಂಡರಿಗಟ್ಟಿದ ಗಿಲ್, 6ನೇ ಎಸೆತವನ್ನು ಮಿಡ್ ಆಫ್ನಲ್ಲಿ ಬೌಂಡರಿ ಬಾರಿಸಿದರು.
ಸಾಯಿ ಸುದರ್ಶನ್ ರನ್ ಔಟ್ ಆಗಿದ್ದಾರೆ. ಗುಜರಾತ್ ಟೈಟಾನ್ಸ್ 2ನೇ ವಿಕೆಟ್ ಪತನವಾಯಿತು. ರಾಜಸ್ಥಾನದ ಅದ್ಭುತ ಫೀಲ್ಡಿಂಗ್. ಸುದರ್ಶನ್ 20 ರನ್ ಗಳಿಸಿ ಪೆವಿಲಿಯನ್ಗೆ ಮರಳಿದರು.
ಗುಜರಾತ್ ಪರ ಸಾಯಿ ಸುದರ್ಶನ್ 16 ರನ್ ಹಾಗೂ ಶುಭಮನ್ ಗಿಲ್ 5 ರನ್ ಗಳಿಸಿ ಆಡುತ್ತಿದ್ದಾರೆ. 4 ಓವರ್‌ಗಳ ನಂತರ ಗುಜರಾತ್ ಸ್ಕೋರ್ 27/1
2ನೇ ಓವರ್‌ನಲ್ಲಿ ಸುದರ್ಶನ್ ಫೋರ್ ಬಾರಿಸಿದರು. ಸದ್ಯ ಕ್ರೀಸ್‌ನಲ್ಲಿ ಶುಭಮನ್ ಗಿಲ್ ಮತ್ತು ಸಾಯಿ ಸುದರ್ಶನ್ ಇದ್ದಾರೆ.
ಮೊದಲ ಓವರ್‌ನಲ್ಲಿಯೇ ಗುಜರಾತ್ ಟೈಟಾನ್ಸ್‌ಗೆ ದೊಡ್ಡ ಪೆಟ್ಟು ಬಿದ್ದಿತು. ಬೋಲ್ಟ್ ಎಸೆದ ಮೊದಲ ಓವರ್‌ನ ಮೂರನೇ ಎಸೆತದಲ್ಲಿ ಸಹಾ ಕ್ಯಾಚ್ ನೀಡಿದರು. ಸಂಜು ಸ್ಯಾಮ್ಸನ್, ಹೆಟ್ಮೆಯರ್ ಮತ್ತು ಜುರೆಲ್ ಈ ಕ್ಯಾಚ್ ಹಿಡಿಯಲು ಮುಂದಾದರು. ಮೂವರೂ ಪ್ರಯತ್ನಿಸಿದರು, ಚೆಂಡು ಸ್ಯಾಮ್ಸನ್ ಅವರ ಕೈಗವಸುಗಳನ್ನು ತಾಗಿ ಬೋಲ್ಟ್ ಕೈಗೆ ಹೋಯಿತು.
ಜೋಸ್ ಬಟ್ಲರ್, ಯಶಸ್ವಿ ಜೈಸ್ವಾಲ್, ಸಂಜು ಸ್ಯಾಮ್ಸನ್, ರಿಯಾನ್ ಪರಾಗ್, ಶಿಮ್ರಾನ್ ಹೆಟ್ಮೆಯರ್, ಧ್ರುವ್ ಜುರೆಲ್, ಆರ್ ಅಶ್ವಿನ್, ಟ್ರೆಂಟ್ ಬೌಲ್ಟ್, ಆಡಮ್ ಝಂಪಾ, ಸಂದೀಪ್ ಶರ್ಮಾ ಮತ್ತು ಯುಜ್ವೇಂದ್ರ ಚಹಾಲ್
ವೃದ್ಧಿಮಾನ್ ಸಹಾ, ಶುಭಮನ್ ಗಿಲ್, ಸಾಯಿ ಸುದರ್ಶನ್, ಹಾರ್ದಿಕ್ ಪಾಂಡ್ಯ, ಅಭಿನವ್ ಮನೋಹರ್, ಡೇವಿಡ್ ಮಿಲ್ಲರ್, ರಾಹುಲ್ ತೆವಾಟಿಯಾ, ರಶೀದ್ ಖಾನ್, ಅಲ್ಜಾರಿ ಜೋಸೆಫ್, ಮೊಹಮ್ಮದ್ ಶಮಿ, ಮೋಹಿತ್ ಶರ್ಮಾ
ಟಾಸ್ ಗೆದ್ದ ರಾಜಸ್ಥಾನ್ ನಾಯಕ ಸಂಜು ಸ್ಯಾಮ್ಸನ್ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದ್ದಾರೆ.
Published On - 7:05 pm, Sun, 16 April 23