MI vs GG , WPL 2023: ಮುಂಬೈನ ಬ್ರಬೋರ್ನ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ವುಮೆನ್ಸ್ ಪ್ರೀಮಿಯರ್ ಲೀಗ್ನ 12ನೇ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ವಿರುದ್ಧ ಮುಂಬೈ ಇಂಡಿಯನ್ಸ್ ಭರ್ಜರಿ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಗುಜರಾತ್ ಜೈಂಟ್ಸ್ ತಂಡದ ನಾಯಕಿ ಸ್ನೇಹ್ ರಾಣಾ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಮುಂಬೈ ಇಂಡಿಯನ್ಸ್ ಪರ ನಾಯಕ ಹರ್ಮನ್‌ಪ್ರೀತ್ ಕೌರ್ (51) ಸ್ಪೋಟಕ ಅರ್ಧಶತಕ ಬಾರಿಸಿ ಮಿಂಚಿದರು. ಪರಿಣಾಮ ನಿಗದಿತ 20 ಓವರ್ಗಳಲ್ಲಿ ಮುಂಬೈ ಇಂಡಿಯನ್ಸ್ ವಿಕೆಟ್ ನಷ್ಟಕ್ಕೆ 162 ರನ್ ಕಲೆಹಾಕಿತು.
163 ರನ್ಗಳ ಸರ್ಧಾತ್ಮಕ ಗುರಿ ಪಡೆದ ಗುಜರಾತ್ ಜೈಂಟ್ಸ್ ತಂಡವು ಮುಂಬೈ ಬೌಲರ್ಗಳ ಮುಂದೆ ಕ್ರೀಸ್ ಕಚ್ಚಿ ನಿಲ್ಲಲು ಪರದಾಡಿದರು. ಪರಿಣಾಮ 9 ವಿಕೆಟ್ ಕಳೆದುಕೊಂಡು ಗುಜರಾತ್ ಜೈಂಟ್ಸ್ ತಂಡವು 107 ರನ್ಗಳಿಸಲಷ್ಟೇ ಶಕ್ತರಾದರು. ಇದರೊಂದಿಗೆ ಮುಂಬೈ ಇಂಡಿಯನ್ಸ್ ತಂಡವು 55 ರನ್ಗಳ ಭರ್ಜರಿ ಜಯ ಸಾಧಿಸಿತು. ವಿಶೇಷ ಎಂದರೆ ಈ ಬಾರಿಯ ವುಮೆನ್ಸ್ ಪ್ರೀಮಿಯರ್ ಲೀಗ್ನಲ್ಲಿ ಸೋಲಿಲ್ಲದ ಸರದಾರರಾಗಿ ಮುಂಬೈ ಇಂಡಿಯನ್ಸ್ 5 ಗೆಲುವಿನೊಂದಿಗೆ ಜಯದ ನಾಗಾಲೋಟ ಮುಂದುವರೆಸಿದೆ.
ಗುಜರಾತ್ ಜೈಂಟ್ಸ್ (ಪ್ಲೇಯಿಂಗ್ XI): ಸಬ್ಬಿನೇನಿ ಮೇಘನಾ, ಸೋಫಿಯಾ ಡಂಕ್ಲಿ, ಹರ್ಲೀನ್ ಡಿಯೋಲ್, ಆಶ್ಲೀಗ್ ಗಾರ್ಡ್ನರ್, ದಯಾಲನ್ ಹೇಮಲತಾ, ಅನ್ನಾಬೆಲ್ ಸದರ್ಲ್ಯಾಂಡ್, ಸುಷ್ಮಾ ವರ್ಮಾ, ಕಿಮ್ ಗಾರ್ತ್, ತನುಜಾ ಕನ್ವರ್, ಸ್ನೇಹ ರಾಣಾ(ನಾಯಕಿ), ಮಾನ್ಸಿ ಜೋಶಿ.
ಮುಂಬೈ ಇಂಡಿಯನ್ಸ್ (ಪ್ಲೇಯಿಂಗ್ XI): ಹೇಲಿ ಮ್ಯಾಥ್ಯೂಸ್, ಯಾಸ್ತಿಕಾ ಭಾಟಿಯಾ, ನ್ಯಾಟ್ ಸಿವರ್-ಬ್ರಂಟ್, ಹರ್ಮನ್‌ಪ್ರೀತ್ ಕೌರ್ (ನಾಯಕಿ), ಧಾರಾ ಗುಜ್ಜರ್, ಅಮೆಲಿಯಾ ಕೆರ್, ಇಸ್ಸಿ ವಾಂಗ್, ಅಮನ್ಜೋತ್ ಕೌರ್, ಹುಮೈರಾ ಕಾಜಿ, ಜಿಂಟಿಮಣಿ ಕಲಿತಾ, ಸೈಕಾ ಇಶಾಕ್.
ಮುಂಬೈ ಇಂಡಿಯನ್ಸ್ ತಂಡ: ಹೇಲಿ ಮ್ಯಾಥ್ಯೂಸ್, ಯಾಸ್ತಿಕಾ ಭಾಟಿಯಾ (ವಿಕೆಟ್ ಕೀಪರ್), ನ್ಯಾಟ್ ಸಿವರ್-ಬ್ರಂಟ್, ಹರ್ಮನ್‌ಪ್ರೀತ್ ಕೌರ್ (ನಾಯಕಿ), ಧಾರಾ ಗುಜ್ಜರ್, ಅಮೆಲಿಯಾ ಕೆರ್, ಇಸ್ಸಿ ವೊಂಗ್, ಅಮನ್ಜೋತ್ ಕೌರ್, ಹುಮೈರಾ ಕಾಜಿ, ಜಿಂಟಿಮಣಿ ಕಲಿತಾ, ಸೈಕಾ ಇಶಾಕ್, ಸೋನಮ್ ಯಾದವ್, ನೀಲ್ ಬಿಶ್ತ್, ಪ್ರಿಯಾಂಕಾ ಬಾಲಾ, ಪೂಜಾ ವಸ್ತ್ರಾಕರ್, ಹೀದರ್ ಗ್ರಹಾಂ, ಕ್ಲೋಯ್ ಟ್ರಯಾನ್.
ಗುಜರಾತ್ ಜೈಂಟ್ಸ್ ತಂಡ: ಸಬ್ಬಿನೇನಿ ಮೇಘನಾ, ಲಾರಾ ವೊಲ್ವಾರ್ಡ್, ಹರ್ಲೀನ್ ಡಿಯೋಲ್, ಆಶ್ಲೀಗ್ ಗಾರ್ಡ್ನರ್, ದಯಾಲನ್ ಹೇಮಲತಾ, ಜಾರ್ಜಿಯಾ ವೇರ್ಹ್ಯಾಮ್, ಸುಷ್ಮಾ ವರ್ಮಾ(ವಿಕೆಟ್ ಕೀಪರ್), ಕಿಮ್ ಗಾರ್ತ್, ತನುಜಾ ಕನ್ವರ್, ಸ್ನೇಹ್ ರಾಣಾ(ನಾಯಕಿ), ಮಾನ್ಸಿ ಜೋಶಿ, ಸೋಫಿಯಾ ಡಂಕ್ಲೆ, ಅಶ್ವನಿಕಾ ಪಟೇಲ್, ಮೋನಿಕಾ ಪಟೇಲ್ ಕುಮಾರಿ, ಹರ್ಲಿ ಗಾಲಾ, ಶಬ್ನಮ್ ಎಂಡಿ ಶಕಿಲ್, ಪರುನಿಕಾ ಸಿಸೋಡಿಯಾ, ಅನ್ನಾಬೆಲ್ ಸದರ್ಲ್ಯಾಂಡ್.
ಹೇಲಿ ಮ್ಯಾಥ್ಯೂಸ್ ಎಸೆತದಲ್ಲಿ ವಿಕೆಟ್ ಕೀಪರ್ಗೆ ಕ್ಯಾಚ್ ನೀಡಿ ಔಟಾದ ತನುಜಾ ಕನ್ವರ್
ಬ್ರಂಟ್ ಎಸೆತದಲ್ಲಿ ಹರ್ಮನ್‌ಪ್ರೀತ್ ಕೌರ್ ಹಿಡಿದ ಅತ್ಯುತ್ತಮ ಕ್ಯಾಚ್ಗೆ ಬಲಿಯಾದ ಕಿಮ್ ಗಾರ್ತ್ (8)
ಬ್ರಂಟ್ ಎಸೆತದಲ್ಲಿ ಎಲ್ಬಿ ಡಬ್ಲ್ಯೂ ಆಗಿ ಔಟಾದ ಸ್ನೇಹ್ ರಾಣಾ (20)
ಕ್ರೀಸ್ನಲ್ಲಿ ಸುಷ್ಮಾ ವರ್ಮಾ – ಸ್ನೇಹ್ ರಾಣಾ ಬ್ಯಾಟಿಂಗ್
ಅಮೆಲಿಯಾ ಕೆರ್ ಎಸೆತದಲ್ಲಿ ಡೀಪ್ ಮಿಡ್ ವಿಕೆಟ್ನತ್ತ ಬೌಂಡರಿ ಬಾರಿಸಿದ ಸ್ನೇಹ್ ರಾಣಾ
ಕ್ರೀಸ್ನಲ್ಲಿ ಹೇಮಲತಾ – ಸ್ನೇಹ್ ರಾಣಾ ಬ್ಯಾಟಿಂಗ್
ಅಮೆಲಿಯಾ ಕೆರ್ ಎಸೆತದಲ್ಲಿ ಭರ್ಜರಿ ಹೊಡೆತಕ್ಕೆ ಯತ್ನಿಸಿದ ಗಾರ್ಡ್ನರ್…ಅತ್ಯುತ್ತಮ ಡೈವಿಂಗ್ ಕ್ಯಾಚ್ ಹಿಡಿದ ಕಲಿತಾ…ಗಾರ್ಡ್ನರ್ (8) ಔಟ್
ವೊಂಗ್ ಎಸೆತದಲ್ಲಿ ಎಲ್ಬಿಡಬ್ಲ್ಯೂ ಆಗಿ ಹೊರ ನಡೆದ ಹರ್ಲೀನ್ ಡಿಯೋಲ್ (22)
ಕ್ರೀಸ್ನಲ್ಲಿ ಹರ್ಲೀನ್ ಡಿಯೋಲ್ – ಗಾರ್ಡ್ನರ್ ಬ್ಯಾಟಿಂಗ್
ಹೇಲಿ ಮ್ಯಾಥ್ಯೂಸ್ ಎಸೆತದಲ್ಲಿ ಬೌಂಡರಿ ಲೈನ್ನಲ್ಲಿ ಕ್ಯಾಚ್ ನೀಡಿ ಹೊರನಡೆದ ಮೇಘನಾ (16)
ಕ್ರೀಸ್ನಲ್ಲಿ ಮೇಘನಾ – ಹರ್ಲೀನ್ ಡಿಯೋಲ್ ಬ್ಯಾಟಿಂಗ್
ಸ್ಕಿವರ್ ಬ್ರಂಟ್ ಎಸೆದ ಮೊದಲ ಎಸೆತದಲ್ಲೇ ಎಲ್ಬಿಡಬ್ಲ್ಯೂ ಆಗಿ ಹೊರನಡೆದ ಸೋಫಿಯಾ ಡಂಕ್ಲಿ (0)
ಗುಜರಾತ್ ಜೈಂಟ್ಸ್ ತಂಡಕ್ಕೆ 163 ರನ್ಗಳ ಗುರಿ ನೀಡಿದ ಮುಂಬೈ ಇಂಡಿಯನ್ಸ್
ಗಾರ್ಡ್ನರ್ ಎಸೆತದಲ್ಲಿ ಬಿಗ್ ಹಿಟ್ಗೆ ಯತ್ನ…ಬೌಂಡರಿ ಲೈನ್ನಲ್ಲಿ ಹರ್ಲೀನ್ ಅತ್ಯುತ್ತಮ ಡೈವಿಂಗ್ ಕ್ಯಾಚ್…ಹರ್ಮನ್‌ಪ್ರೀತ್ ಕೌರ್ (51) ಔಟ್
ಗಾರ್ಡ್ನರ್ ಎಸೆತಗಳಲ್ಲಿ ಬ್ಯಾಕ್ ಟು ಬ್ಯಾಕ್ ಫೋರ್
29 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಹರ್ಮನ್‌ಪ್ರೀತ್ ಕೌರ್
ಸದರ್ಲ್ಯಾಂಡ್ ಎಸೆತದಲ್ಲಿ ಡೀಪ್ ಮಿಡ್ ವಿಕೆಟ್ನತ್ತ ಭರ್ಜರಿ ಸಿಕ್ಸ್ ಸಿಡಿಸಿದ ಹರ್ಮನ್‌ಪ್ರೀತ್ ಕೌರ್
ಹರ್ಲೀನ್ ಡಿಯೋಲ್ ಅತ್ಯುತ್ತಮ ಥ್ರೋ..ಡೈರೆಕ್ಟ್ ಹಿಟ್…2ನೇ ರನ್ ಓಡುತ್ತಿದ್ದ ಹುಮೈರಾ ಖಾಜಿ (2) ರನೌಟ್.
ಸದರ್ಲ್ಯಾಂಡ್ ಎಸೆತದಲ್ಲಿ ಡೀಪ್ ಸ್ಕ್ವೇರ್ನತ್ತ ಭರ್ಜರಿ ಸಿಕ್ಸ್ ಸಿಡಿಸಿದ ಹರ್ಮನ್‌ಪ್ರೀತ್ ಕೌರ್
ಕ್ರೀಸ್ನಲ್ಲಿ ಹರ್ಮನ್‌ಪ್ರೀತ್ ಕೌರ್ – ಹುಮೈರಾ ಖಾಜಿ ಬ್ಯಾಟಿಂಗ್
ಹರ್ಮನ್‌ಪ್ರೀತ್ ಕೌರ್ – ಅಮೆಲಿಯಾ ಕೆರ್
ಹರ್ಮನ್‌ಪ್ರೀತ್ ಕೌರ್ – ಅಮೆಲಿಯಾ ಕೆರ್
ರನ್ ಕದಿಯುವ ಯತ್ನ…ಓಡಲು ನಿರಾಕರಿಸಿದ ಹರ್ಮನ್‌ಪ್ರೀತ್ ಕೌರ್…ಯಾಸ್ತಿಕಾ ಭಾಟಿಯಾ (44) ರನೌಟ್.
ಕಿಮ್ ಗಾರ್ತ್ ಎಸೆತದಲ್ಲಿ ಎಲ್ಬಿಡಬ್ಲ್ಯೂ ಆಗಿ ಹೊರನಡೆದ ಸ್ಕಿವರ್ ಬ್ರಂಟ್ (36)
ಕ್ರೀಸ್ನಲ್ಲಿ ಸ್ಕಿವರ್ ಬ್ರಂಟ್ – ಯಾಸ್ತಿಕಾ ಭಾಟಿಯಾ ಬ್ಯಾಟಿಂಗ್
ಸದರ್ಲ್ಯಾಂಡ್ ಎಸೆತದಲ್ಲಿ ಲಾಂಗ್ ಆನ್ನತ್ತ ಭರ್ಜರಿ ಸಿಕ್ಸ್ ಬಾರಿಸಿದ ಯಾಸ್ತಿಕಾ ಭಾಟಿಯಾ
ಕ್ರೀಸ್ನಲ್ಲಿ ಸ್ಕಿವರ್ ಬ್ರಂಟ್ – ಯಾಸ್ತಿಕಾ ಭಾಟಿಯಾ ಬ್ಯಾಟಿಂಗ್
ಮೊದಲ 6 ಓವರ್ಗಳಲ್ಲಿ 1 ವಿಕೆಟ್ ನಷ್ಟಕ್ಕೆ 40 ರನ್ ಕಲೆಹಾಕಿದ ಮುಂಬೈ ಇಂಡಿಯನ್ಸ್
ಕ್ರೀಸ್ನಲ್ಲಿ ಸ್ಕಿವರ್ ಬ್ರಂಟ್ – ಯಾಸ್ತಿಕಾ ಭಾಟಿಯಾ ಬ್ಯಾಟಿಂಗ್
ಗಾರ್ಡ್ನರ್ ಓವರ್ನಲ್ಲಿ ಬ್ಯಾಕ್ ಟು ಬ್ಯಾಕ್ ಬೌಂಡರಿ ಬಾರಿಸಿದ ಯಾಸ್ತಿಕಾ ಭಾಟಿಯಾ
ಕಿಮ್ ಗಾರ್ತ್ ಎಸೆತದಲ್ಲಿ ಡೀಪ್ ಮಿಡ್ ವಿಕೆಟ್ನತ್ತ ಮತ್ತೊಂದು ಫೋರ್ ಬಾರಿಸಿದ ಬ್ರಂಟ್
ಕಿಮ್ ಗಾರ್ತ್ ಎಸೆತದಲ್ಲಿ ಆಕರ್ಷಕ ಕವರ್ ಡ್ರೈವ್ ಬಾರಿಸಿದ ಸ್ಕಿವರ್ ಬ್ರಂಟ್…ಫೋರ್
ಕ್ರೀಸ್ನಲ್ಲಿ ಸ್ಕಿವರ್ ಬ್ರಂಟ್ – ಯಾಸ್ತಿಕಾ ಭಾಟಿಯಾ ಬ್ಯಾಟಿಂಗ್
ಗಾರ್ಡ್ನರ್ ಎಸೆತದಲ್ಲಿ ಕ್ಯಾಚ್ ನೀಡಿ ಹೊರನಡೆದ ಹೇಲಿ ಮ್ಯಾಥ್ಯೂಸ್ (0)
ಗುಜರಾತ್ ಜೈಂಟ್ಸ್ಗೆ ಆರಂಭಿಕ ಯಶಸ್ಸು
ಮುಂಬೈ ಇಂಡಿಯನ್ಸ್ (ಪ್ಲೇಯಿಂಗ್ XI): ಹೇಲಿ ಮ್ಯಾಥ್ಯೂಸ್, ಯಾಸ್ತಿಕಾ ಭಾಟಿಯಾ, ನ್ಯಾಟ್ ಸಿವರ್-ಬ್ರಂಟ್, ಹರ್ಮನ್‌ಪ್ರೀತ್ ಕೌರ್ (ನಾಯಕಿ), ಧಾರಾ ಗುಜ್ಜರ್, ಅಮೆಲಿಯಾ ಕೆರ್, ಇಸ್ಸಿ ವಾಂಗ್, ಅಮನ್ಜೋತ್ ಕೌರ್, ಹುಮೈರಾ ಕಾಜಿ, ಜಿಂಟಿಮಣಿ ಕಲಿತಾ, ಸೈಕಾ ಇಶಾಕ್.
ಗುಜರಾತ್ ಜೈಂಟ್ಸ್ (ಪ್ಲೇಯಿಂಗ್ XI): ಸಬ್ಬಿನೇನಿ ಮೇಘನಾ, ಸೋಫಿಯಾ ಡಂಕ್ಲಿ, ಹರ್ಲೀನ್ ಡಿಯೋಲ್, ಆಶ್ಲೀಗ್ ಗಾರ್ಡ್ನರ್, ದಯಾಲನ್ ಹೇಮಲತಾ, ಅನ್ನಾಬೆಲ್ ಸದರ್ಲ್ಯಾಂಡ್, ಸುಷ್ಮಾ ವರ್ಮಾ, ಕಿಮ್ ಗಾರ್ತ್, ತನುಜಾ ಕನ್ವರ್, ಸ್ನೇಹ ರಾಣಾ(ನಾಯಕಿ), ಮಾನ್ಸಿ ಜೋಶಿ.
ಈ ಪಂದ್ಯದಲ್ಲಿ ಟಾಸ್ ಗೆದ್ದಿರುವ ಗುಜರಾತ್ ಜೈಂಟ್ಸ್ ತಂಡದ ನಾಯಕಿ ಸ್ನೇಹ್ ರಾಣಾ ಬೌಲಿಂಗ್ ಆಯ್ದುಕೊಂಡಿದ್ದಾರೆ.
Hello from the Brabourne Stadium, CCI ??
The @mipaltan take on @GujaratGiants in Match 1️⃣2️⃣ of the #TATAWPL!
Follow the match ▶️ https://t.co/Hr0F1X3aj4
Which side will come out on ? tonight ? #MIvGG pic.twitter.com/SlX3BWtplL
— Women’s Premier League (WPL) (@wplt20) March 14, 2023
ಟಾಸ್ ಪ್ರಕ್ರಿಯೆ: 7 ಗಂಟೆಗೆ
ಪಂದ್ಯದ ಆರಂಭ; 7.30 ಕ್ಕೆ
ಸ್ಥಳ: ಬ್ರಬೋರ್ನ್ ಸ್ಟೇಡಿಯಂ, ಮುಂಬೈ
Published On - 6:30 pm, Tue, 14 March 23