GT vs RR, IPL 2022 Final: ಐಪಿಎಲ್ 2022ಕ್ಕೆ ಇಂದು ತೆರೆ: ಯಾರಾಗಲಿದ್ದಾರೆ ಚಾಂಪಿಯನ್?

| Updated By: Vinay Bhat

Updated on: May 29, 2022 | 8:54 AM

Gujarat Titans vs Rajasthan Royals, Final: ಐಪಿಎಲ್ 2022 ಅಂತಿಮ ಫೈನಲ್ ಕಾದಾಟದಲ್ಲಿ ಹಾರ್ದಿಕ್ ಪಾಂಡ್ಯ ನಾಯಕತ್ವದ ಗುಜರಾತ್ ಟೈಟಾನ್ಸ್ ಹಾಗೂ ಸಂಜು ಸ್ಯಾಮ್ಸನ್ ನೇತೃತ್ವದ ರಾಜಸ್ಥಾನ್ ರಾಯಲ್ಸ್ ತಂಡಗಳು ಮುಖಾಮುಖಿ ಆಗಲಿದೆ. ವಿಶ್ವದ ಅತಿದೊಡ್ಡ ಕ್ರಿಕೆಟ್ ಸ್ಟೇಡಿಯಂ ನರೇಂದ್ರ ಮೋದಿ ಮೈದಾನ ಈ ಹೈವೋಲ್ಟೇಜ್ ಪಂದ್ಯಕ್ಕೆ ಸಾಕ್ಷಿಯಾಗಲಿದೆ.

GT vs RR, IPL 2022 Final: ಐಪಿಎಲ್ 2022ಕ್ಕೆ ಇಂದು ತೆರೆ: ಯಾರಾಗಲಿದ್ದಾರೆ ಚಾಂಪಿಯನ್?
GT vs RR IPL 2022
Follow us on

15ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಗೆ ಇಂದು ಅದ್ಧೂರಿ ತೆರೆ ಬೀಳಲಿದೆ. ಅಂತಿಮ ಫೈನಲ್ ಕಾದಾಟದಲ್ಲಿ ಹಾರ್ದಿಕ್ ಪಾಂಡ್ಯ (Hardik Pandya) ನಾಯಕತ್ವದ ಗುಜರಾತ್ ಟೈಟಾನ್ಸ್ ಹಾಗೂ ಸಂಜು ಸ್ಯಾಮ್ಸನ್ ನೇತೃತ್ವದ ರಾಜಸ್ಥಾನ್ ರಾಯಲ್ಸ್ (GT vs RR) ತಂಡಗಳು ಮುಖಾಮುಖಿ ಆಗಲಿದೆ. ವಿಶ್ವದ ಅತಿದೊಡ್ಡ ಕ್ರಿಕೆಟ್ ಸ್ಟೇಡಿಯಂ ನರೇಂದ್ರ ಮೋದಿ ಮೈದಾನ ಈ ಹೈವೋಲ್ಟೇಜ್ ಪಂದ್ಯಕ್ಕೆ ಸಾಕ್ಷಿಯಾಗಲಿದೆ. ಪದಾರ್ಪಣೆ ಆವೃತ್ತಿಯಲ್ಲೇ ಅಂಕಪಟ್ಟಿಯಲ್ಲಿ ಅಗ್ರಸ್ಥಾನಿಯೊಂದಿಗೆ ಪ್ರಶಸ್ತಿ ಸುತ್ತಿಗೆ ಎಂಟ್ರಿಕೊಟ್ಟಿರುವ ಗುಜರಾತ್ ತಂಡ ಮೊದಲ ಯತ್ನದಲ್ಲೇ ಚಾಂಪಿಯನ್‌ಪಟ್ಟ ಅಲಂಕರಿಸುವ ಕನಸಿನಲ್ಲಿದೆ. ಇತ್ತ ರಾಜಸ್ಥಾನ್ 2008ರ ಬಳಿಕ ಇದೀಗ ಮತ್ತೆ ಟ್ರೋಫಿ ಮೇಲೆ ಕಣ್ಣಿಟ್ಟಿದ್ದು ಪ್ರಶಸ್ತಿ ಗೆದ್ದು ದಂತಕಥೆ ಶೇನ್ ವಾರ್ನ್ (Shane Warne) ಅವರಿಗೆ ಅರ್ಪಿಸಲು ಕಾತುರವಾಗಿದೆ.

ಫೈನಲ್‌ ಪಂದ್ಯ ಆರಂಭವಾಗುವ ಮೊದಲು ಅದ್ದೂರಿ ಸಮಾರೋಪ ಸಮಾರಂಭ ನಡೆಯಲಿದೆ ಎಂದು ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ ತಿಳಿಸಿದೆ. ಬಾಲಿವುಡ್‌ನ‌ ದೊಡ್ಡ ಕಲಾವಿದರು ಭಾಗವಹಿಸಿ ಕಾರ್ಯಕ್ರಮ ನೀಡಲಿದ್ದಾರೆ. ಬಾಲಿವುಡ್‌ ತಾರೆ ರಣವೀರ್‌ ಸಿಂಗ್‌ ಮತ್ತು ಆಸ್ಕರ್‌ ವಿಜೇತ ಸಂಗೀತಗಾರ ಎ.ಆರ್‌. ರೆಹಮಾನ್‌ ಕಾರ್ಯಕ್ರಮ ನೀಡಲಿದ್ದಾರೆ. ಝಾರ್ಖಂಡ್‌ನ‌ ಪ್ರಸಿದ್ಧ ಛಾವು ನೃತ್ಯವೂ ಅಭಿಮಾನಿಗಳ ಗಮನ ಸೆಳೆಯಲಿದೆ. 10 ಸದಸ್ಯರ ತಂಡ ನೃತ್ಯ ಕಾರ್ಯಕ್ರಮ ನೀಡಲಿದೆ. ಈ ಸಂದರ್ಭ ಬಿಸಿಸಿಐ ಅಧ್ಯಕ್ಷ ಸೌರವ್‌ ಗಂಗೂಲಿ ಕೂಡ ಉಪಸ್ಥಿತರಿರಲಿದ್ದಾರೆ.

ಮೊದಲ ಯತ್ನದಲ್ಲೇ ಗುಜರಾತ್ ತಂಡವನ್ನು ಪ್ರಶಸ್ತಿ ಸುತ್ತಿಗೆ ಕೊಂಡೊಯ್ದಿರುವ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ, ತಂಡದ ಸಂಘಟನೆಯ ಜತೆಗೆ ನಾಯಕತ್ವದಲ್ಲಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಪವರ್‌ಪ್ಲೇ ಹಂತದಲ್ಲಿ ವೃದ್ಧಿಮಾನ್ ಸಾಹ, ಶುಭ್ಮನ್ ಗಿಲ್, ಮ್ಯಾಥ್ಯೂ ವೇಡ್, ಮಧ್ಯಮ ಕ್ರಮಾಂಕದಲ್ಲಿ ಡೇವಿಡ್ ಮಿಲ್ಲರ್ ಒಳಗೊಂಡ ಬ್ಯಾಟಿಂಗ್ ಪಡೆ ಬಲಿಷ್ಠವಾಗಿದೆ. ಮಿಲ್ಲರ್ ಹಾಗೂ ತೇವಾಟಿಯ ಫಿನಿಶರ್ ಪಾತ್ರವನ್ನು ಚೆನ್ನಾಗಿ ನಿರ್ವಹಿಸಿದ್ದಾರೆ. ಮಿಲ್ಲರ್ 449 ರನ್ ಗಳಿಸಿದ್ದಾರೆ. ಹೀಗಿರುವಾಗ ಫೈನಲ್ ಪಂದ್ಯದಲ್ಲಿ ಚಹಲ್ ಅವರನ್ನು ಎದುರಿಸುವುದು ಯಾವಾಗ, ಆಗ ಇಬ್ಬರ ನಡುವೆ ರೋಚಕ ಕದನ ನಡೆಯಬಹುದು.

ಇದನ್ನೂ ಓದಿ
Sanju Samson: ರಾಜಸ್ಥಾನ್ ಕ್ಯಾಪ್ಟನ್ ಸಂಜು ಸ್ಯಾಮ್ಸನ್ ಲವ್ ಸ್ಟೋರಿ, ವೈವಾಹಿಕ ಬದುಕು ಹೇಗಿದೆ ಗೊತ್ತಾ? ಫೋಟೋ ನೋಡಿ
GT vs RR, Final Match Preview: ಕಿರೀಟ ಮುಡಿಗೇರಿಸಿಕೊಳ್ಳಲು ಗುಜರಾತ್- ರಾಜಸ್ಥಾನ ನಡುವೆ ಚಾಂಪಿಯನ್ ಹೋರಾಟ
IPL 2022: ನಾಯಕ ಬದಲಾದರೂ ಹಣೆಬರಹ ಬದಲಾಗಲಿಲ್ಲ! ಬೇಡದ ದಾಖಲೆಯೊಂದಿಗೆ ಚೆನ್ನೈ ಹಿಂದಿಕ್ಕಿದ ಆರ್​ಸಿಬಿ
GT vs RR Prediction Playing XI IPL 2022 Final: ಫೈನಲ್ ಕದನಕ್ಕೆ ಉಭಯ ತಂಡಗಳ ಸಂಭಾವ್ಯ ಇಲೆವೆನ್

Women’s T20 Challenge: ರಣ ರೋಚಕ ಕದನದಲ್ಲಿ ಕೌರ್ ಪಡೆಗೆ ಗೆಲುವು: 3ನೇ ಬಾರಿ ಪ್ರಶಸ್ತಿ ಗೆದ್ದ ಸೂಪರ್‌ ನೋವಾಸ್

ಇತ್ತ ಜೋಸ್ ಬಟ್ಲರ್ ರಾಜಸ್ಥಾನ ತಂಡದ ಬ್ಯಾಟಿಂಗ್ ಶಕ್ತಿ. ಈಗಾಗಲೇ 4 ಶತಕ ಸಿಡಿಸಿರುವ ಇಂಗ್ಲಿಷ್‌ಮ್ಯಾನ್‌ ರಾಜಸ್ಥಾನ್‌ ತಂಡದ ಅಪಾಯಕಾರಿ ಬ್ಯಾಟರ್‌. ಇಡೀ ಬ್ಯಾಟಿಂಗ್‌ ವಿಭಾಗ ಬಟ್ಲರ್‌ ಅವರ ನಿರ್ವಹಣೆಯನ್ನು ಅವಲಂಬಿಸಿದೆ. ಅಕಸ್ಮಾತ್‌ ಬಟ್ಲರ್‌ ಬೇಗ ನಿರ್ಗಮಿಸಿದರೆ ರಾಜಸ್ಥಾನ್‌ ಅರ್ಧ ಸೋತಂತೆ.  ಸಂಜು ಸ್ಯಾಮ್ಸನ್, ಯಶಸ್ವಿ ಜೈಸ್ವಾಲ್ ಬ್ಯಾಟಿಂಗ್ ವೇಗಕ್ಕೆ ಮತ್ತಷ್ಟು ಚುರುಕು ಮುಟ್ಟಿಸಬೇಕಿದೆ. ವೇಗಿಗಳಾದ ಟ್ರೆಂಟ್ ಬೌಲ್ಟ್, ಒಬೆಡ್ ಮೆಕ್‌ಕಾಯ್, ಆರ್.ಅಶ್ವಿನ್. ಯುಜ್ವೇಂವೇಂದ್ರ ಚಹಲ್ ಒಳಗೊಂಡ ಬೌಲಿಂಗ್ ಪಡೆ ಟೈಟಾನ್ಸ್‌ಗೆ ಕಡಿವಾಣ ಹಾಕುವ ಸಾಮರ್ಥ್ಯ ಹೊಂದಿದೆ.

ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಗುಜರಾತ್ ಟೈಟಾನ್ಸ್ ಪದಾರ್ಪಣೆ ಮಾಡಿರುವ ಕಾರಣ ಇತ್ತಂಡಗಳ ನಡುವೆ ಕೇವಲ 2 ಮುಖಾಮುಖಿ ಪಂದ್ಯಗಳು ಮಾತ್ರ ನಡೆದಿವೆ. ಲೀಗ್ ಹಂತದಲ್ಲಿ 1 ಪಂದ್ಯದಲ್ಲಿ ಹಾಗೂ ಪ್ಲೇ ಆಫ್ ಸುತ್ತಿನ 1 ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ಮತ್ತು ಗುಜರಾತ ಟೈಟಾನ್ಸ್ ತಂಡಗಳು ಮುಖಾಮುಖಿಯಾಗಿವೆ. ಈ ಪೈಕಿ ಎರಡೂ ಪಂದ್ಯಗಳಲ್ಲಿಯೂ ಸಹ ಹಾರ್ದಿಕ್ ಪಾಂಡ್ಯ ಪಡೆ ರಾಜಸ್ಥಾನಕ್ಕೆ ತಂಡಕ್ಕೆ ಮಣ್ಣುಮುಕ್ಕಿಸಿದೆ. ಹೀಗಾಗಿ ಆರ್​ಆರ್​ಗೆ ಇದು ಸೇಡಿನ ಪಂದ್ಯ ಕೂಡ ಹೌದು.

ಪಿಚ್ ಹೇಗಿದೆ?:

ಅಹ್ಮದಾಬಾದ್​ನಲ್ಲಿರುವುದು ಹೊಸ ಪಿಚ್. ಈ ಕ್ರಿಕೆಟ್ ಕ್ರೀಡಾಂಗಣದ ಕೆಂಪು ಮಣ್ಣಿನ ಪಿಚ್‌ಗಳು ಬೇಗ ಒಣಗುವ ಲಕ್ಷಣಗಳನ್ನು ಹೊಂದಿದ್ದು, ಸ್ಪಿನ್ ಬೌಲರ್‌ಗಳಿಗೆ ಹೆಚ್ಚು ಸಹಾಯಕವಾಗಿರಲಿವೆ. ಇನ್ನು ಹಿಂದಿನ ಪಂದ್ಯಗಳನ್ನು ಗಮನಿಸಿದರೆ ಈ ಪಿಚ್‌ನಲ್ಲಿ ಸ್ಪಿನ್ನರ್‌ಗಳು ಹೆಚ್ಚು ವಿಕೆಟ್ ಕಬಳಿಸಲಿದ್ದು, ಬ್ಯಾಟ್ಸ್‌ಮನ್‌ಗಳು ಹೆಚ್ಚು ರನ್ ಬಾರಿಸಲು ತಿಣುಕಾಡಬಹುದು. ಈ ಕ್ರೀಡಾಂಗಣದಲ್ಲಿ ನಡೆದಿರುವ ಪಂದ್ಯಗಳು ಕಡಿಮೆ ರನ್ ಮೊತ್ತದ ಪಂದ್ಯಗಳಾಗಿದ್ದು, ದೊಡ್ಡ ಬೌಂಡರಿಗಳಾಗಿರುವುದರಿಂದ ಬ್ಯಾಟ್ಸ್‌ಮನ್‌ಗಳು ಹೆಚ್ಚು ಅಬ್ಬರಿಸುವುದೂ ಕಷ್ಟ.

ಸಂಭಾವ್ಯ ಪ್ಲೇಯಿಂಗ್ XI:

ರಾಜಸ್ಥಾನ್ ರಾಯಲ್ಸ್: ಸಂಜು ಸ್ಯಾಮ್ಸನ್ (ನಾಯಕ), ಜೋಸ್ ಬಟ್ಲರ್, ಯಶಸ್ವಿ ಜೈಸ್ವಾಲ್, ದೇವದತ್ ಪಡಿಕ್ಕಲ್, ಶಿಮ್ರಾನ್ ಹೆಟ್ಮೆಯರ್, ರಿಯಾನ್ ಪರಾಗ್, ರವಿಚಂದ್ರನ್ ಅಶ್ವಿನ್, ಯುಜ್ವೇಂದ್ರ ಚಾಹಲ್, ಟ್ರೆಂಟ್ ಬೌಲ್ಟ್, ಪ್ರಸಿದ್ಧ್ ಕೃಷ್ಣ, ಒಬೆದ್ ಮೆಕಾಯ್.

ಗುಜರಾತ್ ಟೈಟಾನ್ಸ್: ಹಾರ್ದಿಕ್ ಪಾಂಡ್ಯ, ವೃದ್ಧಿಮಾನ್ ಸಹಾ, ಶುಭಮನ್ ಗಿಲ್, ಮ್ಯಾಥ್ಯೂ ವೇಡ್, ಡೇವಿಡ್ ಮಿಲ್ಲರ್, ರಾಹುಲ್ ತೆವಾಟಿಯಾ, ರಶೀದ್ ಖಾನ್, ಆರ್ ಸಾಯಿ ಕಿಶೋರ್, ಅಲ್ಜಾರಿ ಜೋಸೆಫ್, ಯಶ್ ದಯಾಳ್, ಮೊಹಮ್ಮದ್ ಶಮಿ.

ಹೆಚ್ಚಿನ IPL 2022 ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 8:54 am, Sun, 29 May 22