Gujarat Titans, IPL 2022: ಪಾಂಡ್ಯ ನಾಯಕತ್ವಕ್ಕೆ ಅಗ್ನಿಪರೀಕ್ಷೆ! ಹೇಗಿರಲಿದೆ ತಂಡದ ಆಡುವ ಹನ್ನೊಂದರ ಬಳಗ?
Gujarat Titans, IPL 2022: ಹಾರ್ದಿಕ್ ಪಾಂಡ್ಯ ಈ ತಂಡದ ನಾಯಕರಾಗಿದ್ದು, ರಶೀದ್ ಖಾನ್, ಶುಬ್ಮನ್ ಗಿಲ್ ಅವರಂತಹ ಆಟಗಾರರನ್ನು ತಂಡವು ಡ್ರಾಫ್ಟ್ ಆಟಗಾರರಾಗಿ ತಂಡಕ್ಕೆ ಸೇರಿಸಿಕೊಂಡಿದೆ.
ಮತ್ತೊಂದು ಹೊಸ ತಂಡ ಐಪಿಎಲ್ (IPL 2022) ನ 15 ನೇ ಋತುವಿನಲ್ಲಿ ಪಾದಾರ್ಪಣೆ ಮಾಡಲಿದೆ, ಅದರ ಹೆಸರು ಗುಜರಾತ್ ಟೈಟಾನ್ಸ್ (Gujarat Titans). ಹಾರ್ದಿಕ್ ಪಾಂಡ್ಯ (Hardik Pandya) ಈ ತಂಡದ ನಾಯಕರಾಗಿದ್ದು, ರಶೀದ್ ಖಾನ್, ಶುಬ್ಮನ್ ಗಿಲ್ ಅವರಂತಹ ಆಟಗಾರರನ್ನು ತಂಡವು ಡ್ರಾಫ್ಟ್ ಆಟಗಾರರಾಗಿ ತಂಡಕ್ಕೆ ಸೇರಿಸಿಕೊಂಡಿದೆ. ಇದರ ನಂತರ, ಐಪಿಎಲ್ 2022 ರ ಹರಾಜಿನಲ್ಲಿ, ಗುಜರಾತ್ ತನ್ನದೇ ಆದ ಪಂದ್ಯಗಳನ್ನು ಗೆಲ್ಲಿಸುವ ಶಕ್ತಿಯನ್ನು ಹೊಂದಿರುವ ಹಲವಾರು ಆಟಗಾರರನ್ನು ಖರೀದಿಸಿತು. ತಂಡವು ಯುವ ಮತ್ತು ಪ್ರಸಿದ್ಧ ಆಟಗಾರರ ಮೇಲೆ ಬಾಜಿ ಕಟ್ಟಿತ್ತು. ಐಪಿಎಲ್ 2022 ರಲ್ಲಿ ಗುಜರಾತ್ ಟೈಟಾನ್ಸ್ ತನ್ನ ಮೊದಲ ಪಂದ್ಯವನ್ನು ಲಕ್ನೋ ಸೂಪರ್‌ಜೈಂಟ್ಸ್ ವಿರುದ್ಧ ಆಡಬೇಕಾಗಿದೆ. ಇದೇ ಮೊದಲ ಬಾರಿಗೆ ಈ ತಂಡ ಐಪಿಎಲ್ ಪ್ರವೇಶಿಸಲಿದೆ. ಎರಡೂ ತಂಡಗಳಿಗೂ ಇದು ಮೊದಲ ಆವೃತ್ತಿಯಾಗಿದ್ದು, ಎಲ್ಲಾ ಅಭಿಮಾನಿಗಳು ಈ ಇಬ್ಬರ ನಡುವಿನ ಕಾಳಗ ನೋಡಲು ತುಂಬಾ ಆಸಕ್ತಿಯಿಂದ ಕಾಯುತ್ತಿದ್ದಾರೆ.
ಈಗ ಪ್ರಶ್ನೆ ಏನೆಂದರೆ, ಒಂದಕ್ಕಿಂತ ಹೆಚ್ಚು ಮ್ಯಾಚ್ ವಿನ್ನರ್ ಆಟಗಾರರನ್ನು ಹೊಂದಿರುವ ಗುಜರಾತ್ ಟೈಟಾನ್ಸ್ ತಂಡದ ಆಡುವ XI ನಲ್ಲಿ ಯಾವ ಆಟಗಾರರಿಗೆ ಅವಕಾಶ ನೀಡಲಾಗುತ್ತದೆ? ಎಂಬುದಾಗಿದೆ. ಈ ತಂಡ ಮೈದಾನಕ್ಕೆ ಇಳಿದರೆ ದೊಡ್ಡ ದೊಡ್ಡ ತಂಡಗಳಿಗೆ ಸೋಲು ಖಚಿತ. ಗುಜರಾತ್ ಟೈಟಾನ್ಸ್ ಯಾವ 11 ಆಟಗಾರರಿಗೆ (ಗುಜರಾತ್ ಟೈಟಾನ್ಸ್ ಆಡುವ 11) ಅವಕಾಶ ನೀಡಬಹುದು ಎಂಬುದರ ಬಗ್ಗೆ ಇಲ್ಲಿದೆ ಮಾಹಿತಿ.
ಗುಜರಾತ್ ಟೈಟಾನ್ಸ್‌ನ ಬ್ಯಾಟಿಂಗ್ ವಿಭಾಗ ಓಪನಿಂಗ್ ಬಗ್ಗೆ ಮಾತನಾಡುವುದಾದರೆ, ಗುಜರಾತ್ ಟೈಟಾನ್ಸ್ ಮ್ಯಾಥ್ಯೂ ವೇಡ್ ಅವರನ್ನು ಶುಭಮನ್ ಗಿಲ್ ಅವರೊಂದಿಗೆ ಓಪನಿಂಗ್ ಮಾಡಬಹುದು. ಈ ಆಸ್ಟ್ರೇಲಿಯಾದ ವಿಕೆಟ್ ಕೀಪರ್ ಬಿರುಸಿನ ಬ್ಯಾಟಿಂಗ್‌ಗೆ ಹೆಸರುವಾಸಿಯಾಗಿದ್ದಾರೆ. ಈ ಹಿಂದೆ ತಂಡವು ಜೇಸನ್ ರಾಯ್ ಅವರನ್ನು ಖರೀದಿಸಿತ್ತು ಆದರೆ ಈ ಆಟಗಾರ ಪಂದ್ಯಾವಳಿಯಿಂದ ಹಿಂದೆ ಸರಿದಿದ್ದಾರೆ. ಇವರಲ್ಲದೇ ಡೇವಿಡ್ ಮಿಲ್ಲರ್, ಗುರುಕೀರತ್ ಮಾನ್ ಕೂಡ ಈ ತಂಡದ ಬ್ಯಾಟಿಂಗ್ ಬೆನ್ನೆಲುಬಾಗಿದ್ದಾರೆ.
ಗುಜರಾತ್ ಟೈಟಾನ್ಸ್ ತಂಡದ ಆಲ್ ರೌಂಡರ್ಸ್ ಸ್ವತಃ ನಾಯಕ ಹಾರ್ದಿಕ್ ಪಾಂಡ್ಯ ಈ ತಂಡದ ದೊಡ್ಡ ಆಲ್ ರೌಂಡರ್. ಇವರೊಂದಿಗೆ ವಿಜಯ್ ಶಂಕರ್, ರಾಹುಲ್ ಟಿಯೋಟಿಯಾ ಕೂಡ ಚೆಂಡು ಮತ್ತು ಬ್ಯಾಟಿಂಗ್ ಮೂಲಕ ಈ ತಂಡವನ್ನು ಬಲಪಡಿಸಲಿದ್ದಾರೆ.
ಗುಜರಾತ್ ಟೈಟಾನ್ಸ್ ಬೌಲಿಂಗ್ ಗುಜರಾತ್ ಟೈಟಾನ್ಸ್ ತಂಡದ ಬೌಲಿಂಗ್ ನಾಯಕರಾಗಿ ರಶೀದ್ ಖಾನ್ ಕಾರ್ಯನಿರ್ವಹಿಸಲಿದ್ದಾರೆ. ಇವರಲ್ಲದೆ ಎಡಗೈ ಸ್ಪಿನ್ನರ್ ಆರ್ ಸಾಯಿ ಕಿಶೋರ್ ಗುಜರಾತ್ ಟೈಟಾನ್ಸ್ ಬೌಲಿಂಗ್ ಬಲಗೊಳಿಸುತ್ತಿದ್ದಾರೆ. ವೇಗದ ಬೌಲಿಂಗ್‌ನಲ್ಲಿ ಮೊಹಮ್ಮದ್ ಶಮಿ ಮತ್ತು ಲೋಕಿ ಫರ್ಗುಸನ್ ಈ ತಂಡಕ್ಕೆ ವೇಗ ನೀಡುತ್ತಿದ್ದಾರೆ.
ಗುಜರಾತ್ ಸಂಭಾವ್ಯ 11: ಶುಭಮನ್ ಗಿಲ್, ಮ್ಯಾಥ್ಯೂ ವೇಡ್, ವಿಜಯ್ ಶಂಕರ್, ಗುರುಕೀರತ್ ಸಿಂಗ್ ಮಾನ್, ಡೇವಿಡ್ ಮಿಲ್ಲರ್, ಹಾರ್ದಿಕ್ ಪಾಂಡ್ಯ, ರಾಹುಲ್ ತೆವಾಟಿಯಾ, ರಶೀದ್ ಖಾನ್, ಆರ್ ಸಾಯಿ ಕಿಶೋರ್, ಮೊಹಮ್ಮದ್ ಶಮಿ ಮತ್ತು ಲೋಕಿ ಫರ್ಗುಸನ್.
View this post on Instagram
ಇದನ್ನೂ ಓದಿ:IPL 2022, Lucknow Super Giants: ಕನ್ನಡಿಗ ರಾಹುಲ್ ನಾಯಕತ್ವದ ಲಕ್ನೋ ತಂಡದ ಬಲಿಷ್ಠ ಸಂಭಾವ್ಯ ಪ್ಲೇಯಿಂಗ್ 11