GT vs CSK, IPL 2023 Final Highlights: 5ನೇ ಬಾರಿಗೆ ಚಾಂಪಿಯನ್ ಪಟ್ಟಕ್ಕೇರಿದ ಸಿಎಸ್ಕೆ..!
Gujarat Titans vs Chennai Super Kings, IPL 2023 Final Updates: ಕೊನೆಗೂ ಕೋಟ್ಯಂತರ ಅಭಿಮಾನಿಗಳ ನಿರೀಕ್ಷೆ ನಿಜವಾಗಿದೆ. ರೋಚಕ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ತಂಡವನ್ನು 5 ವಿಕೆಟ್ಗಳಿಂದ ಸೋಲಿಸಿದ ಚೆನ್ನೈ ಸೂಪರ್ ಕಿಂಗ್ಸ್ 5ನೇ ಬಾರಿಗೆ ಐಪಿಎಲ್ ಪ್ರಶಸ್ತಿ ಗೆದ್ದುಕೊಂಡಿದೆ.
ಕೊನೆಗೂ ಕೋಟ್ಯಂತರ ಅಭಿಮಾನಿಗಳ ನಿರೀಕ್ಷೆ ನಿಜವಾಗಿದೆ. ರೋಚಕ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ತಂಡವನ್ನು 5 ವಿಕೆಟ್ಗಳಿಂದ ಸೋಲಿಸಿದ ಚೆನ್ನೈ ಸೂಪರ್ ಕಿಂಗ್ಸ್ 5ನೇ ಬಾರಿಗೆ ಐಪಿಎಲ್ ಪ್ರಶಸ್ತಿ ಗೆದ್ದುಕೊಂಡಿದೆ. 15ನೇ ಓವರ್ನ ಕೊನೆಯ ಎರಡು ಎಸೆತಗಳಲ್ಲಿ ಒಂದು ಸಿಕ್ಸರ್ ಹಾಗೂ 1 ಬೌಂಡರಿ ಬಾರಿಸಿದ ಜಡೇಜಾ ಚೆನ್ನೈಗೆ ರೋಚಕ ಜಯ ತಂದುಕೊಟ್ಟರು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ ಸಾಯಿ ಸುದರ್ಶನ್ ಹಾಗೂ ಸಾಹ ಅವರ ಅದ್ಭುತ ಅರ್ಧಶತಕದ ನೆರವಿನಿಂದಾಗಿ 4 ವಿಕೆಟ್ ಕಳೆದುಕೊಂಡು 214 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಚೆನ್ನೈಗೆ ವರುಣ ಅಡ್ಡಗಾಲು ಹಾಕಿದ. ಹೀಗಾಗಿ ಪಂದ್ಯವನ್ನು ನಿಲ್ಲಿಸಬೇಕಾಯಿತು. ಅಂತಿಮವಾಗಿ ಪಂದ್ಯ ಆರಂಭವಾದಾಗ ಚೆನ್ನೈ ಗೆಲುವಿಗೆ 15 ಓವರ್ಗಳಲ್ಲಿ 171 ರನ್ ಟಾರ್ಗೆಟ್ ನೀಡಲಾಯಿತು. ಈ ಗುರಿ ಬೆನ್ನಟ್ಟಿದ ಚೆನ್ನೈ ಸಾಂಘಿಕ ಹೋರಾಟದಿಂದಾಗಿ ಕೊನೆಯ ಎಸೆತದಲ್ಲಿ ಗೆದ್ದು ಬೀಗಿತು.
LIVE NEWS & UPDATES
-
ಕೊನೆಯ ಎಸೆತದಲ್ಲಿ ಗೆದ್ದ ಚೆನ್ನೈ
ಕೊನೆಯ ಎರಡು ಎಸೆತಗಳಲ್ಲಿ ಪಂದ್ಯ ಗೆಲ್ಲಿಸಿದ ಜಡೇಜಾ
5ನೇ ಎಸೆತವನ್ನು ಲಾಂಗ್ ಆಫ್ನಲ್ಲಿ ಸಿಕ್ಸರ್ಗಟ್ಟಿದ ಜಡೇಜಾ, ಕೊನೆಯ ಎಸೆತಸದಲ್ಲಿ ಬೌಂಡರಿ ಬಾರಿಸಿ ಚೆನ್ನೈ ತಂಡಕ್ಕೆ ರೋಚಕ ಜಯ ತಂದುಕೊಟ್ಟರು.
-
6 ಎಸೆತಗಳಲ್ಲಿ 13 ರನ್ ಬೇಕು
19ನೇ ಓವರ್ನಲ್ಲಿ ಶಮಿ 8 ರನ್ ನೀಡಿದರು.
ಈ ಓವರ್ನಲ್ಲಿ ಯಾವುದೇ ಬೌಂಡರಿ ಬರಲಿಲ್ಲ.
6 ಎಸೆತಗಳಲ್ಲಿ 13 ರನ್ ಬೇಕು
-
ಧೋನಿ ಔಟ್
ಬ್ಯಾಟಿಂಗ್ಗೆ ಬಂದ ಮೊದಲ ಎಸೆತದಲ್ಲೇ ಧೋನಿ ಕ್ಯಾಚಿತ್ತು ಔಟಾದರು.
ಚೆನ್ನೈ 149/5
ಗೆಲುವಿಗೆ 12 ಎಸೆತಗಳಲ್ಲಿ 21 ರನ್ ಬೇಕು
ರಾಯುಡು ಔಟ್
13ನೇ ಓವರ್ನ ಮೊದಲ 3 ಎಸೆತಗಳಲ್ಲಿ 2 ಸಿಕ್ಸ್ ಹಾಗೂ 1 ಬೌಂಡರಿ ಬಾರಿಸಿದ ರಾಯುಡು 4ನೇ ಎಸೆತದಲ್ಲಿ ಕ್ಯಾಚಿತ್ತು ಔಟಾದರು.
ದುಬೆ ಸಿಕ್ಸ್
12ನೇ ಓವರ್ನಲ್ಲಿ 15 ರನ್ ಬಂದವು
ಓವರ್ನ ಕೊನೆಯ 2 ಎಸೆತಗಳನ್ನು ದುಬೆ ಲಾಂಗ್ ಆಫ್ನಲ್ಲಿ ಸಿಕ್ಸರ್ಗಟ್ಟಿದರು.
ಚೆನ್ನೈ 133/3
ರಹಾನೆ ಔಟ್
ಚೆನ್ನೈ 3ನೇ ವಿಕೆಟ್ ಪತನವಾಗಿದೆ
11ನೇ ಓವರ್ನ 5ನೇ ಎಸೆತದಲ್ಲಿ ರಹಾನೆ ಕ್ಯಾಚಿತ್ತು ಔಟಾದರು.
ರಹಾನೆ 27 (13)
ಚೆನ್ನೈ 118/3
ಚೆನ್ನೈ ಶತಕ ಪೂರ್ಣ
10ನೇ ಓವರ್ನಲ್ಲಿ ಚೆನ್ನೈ ಶತಕ ಪೂರ್ಣಗೊಳಿಸಿದೆ.
ಈ ಓವರ್ನ ಕೊನೆಯ 2 ಎಸೆತಗಳಲ್ಲಿ ರಹಾನೆ ಬೌಂಡರಿ ಬಾರಿಸಿದರು.
10 ಓವರ್ ಅಂತ್ಯಕ್ಕೆ ಚೆನ್ನೈ 112/2
ನೂರ್ ಖೋಟಾ ಅಂತ್ಯ
ತಮ್ಮ ಖೋಟಾದ 3 ಓವರ್ಗಳಲ್ಲಿ ನೂರ್ ಅಹ್ಮದ್ ಕೇವಲ 16 ರನ್ ನೀಡಿ 2 ವಿಕೆಟ್ ಉರುಳಿಸಿದ್ದಾರೆ. ಇವರ ಓವರ್ನಲ್ಲಿ ಒಂದೇ ಒಂದು ಬೌಂಡರಿ ಬರದಿರುವುದು ಇವರ ಪರಿಣಾಮಕಾರಿ ಬೌಲಿಂಗ್ ಅನ್ನು ಸೂಚಿಸುತ್ತಿದೆ.
ರಹಾನೆ ಸಿಕ್ಸ್
8ನೇ ಓವರ್ನಲ್ಲಿ 16 ರನ್ ಬಂದವು.
ಓವರ್ನ 3 ಮತ್ತು 5ನೇ ಎಸೆತವನ್ನು ರಹಾನೆ ಸಿಕ್ಸರ್ಗಟ್ಟಿದರು,
8 ಓವರ್ ಅಂತ್ಯಕ್ಕೆ 94/2
ಕಾನ್ವೇ ಕೂಡ ಔಟ್
ನೂರ್ ಅಹ್ಮದ್ ಒಂದೇ ಓವರ್ನಲ್ಲಿ 2 ವಿಕೆಟ್ ಉರುಳಿಸಿದ್ದಾರೆ.
ಮೊದಲು ರುತುರಾಜ್ ವಿಕೆಟ್ ಬಿದ್ದರೆ, ಓವರ್ನ ಕೊನೆಯ ಎಸೆತದಲ್ಲಿ ಕಾನ್ವೇ ಲಾಂಗ್ ಆನ್ನಲ್ಲಿ ಕ್ಯಾಚಿ್ತ್ತು ಔಟಾದರು.
ಕಾನ್ವೇ 47 (25)
ಚೆನ್ನೈ 78/2
ರುತುರಾಜ್ ಔಟ್
ಚೆನ್ನೈ ಮೊದಲ ವಿಕೆಟ್ ಪತನವಾಗಿದೆ.
7ನೇ ಓವರ್ನ 3ನೇ ಎಸೆತದಲ್ಲಿ ರುತುರಾಜ್ ಕ್ಯಾಚಿತ್ತು ಔಟಾದರು.
ರುತುರಾಜ್ 26 (16)
ಕಾನ್ವೇ ಸಿಕ್ಸ್
6ನೇ ಓವರ್ನಲ್ಲಿ 14 ರನ್ ಬಂದವು
ಕೊನೆಯ 2 ಓವರ್ಗಳಲ್ಲಿ ಬೌಂಡರಿ ಬಂದಿರಲಿಲ್ಲ. ಹಾಗಾಗಿ ಒತ್ತಡದಲ್ಲಿದ್ದ ಕಾನ್ವೇ 6ನೇ ಓವರ್ನ ಕೊನೆಯ ಎಸೆತವನ್ನು ಮಿಡ್ ಆಫ್ನಲ್ಲಿ ಸಿಕ್ಸರ್ಗಟ್ಟಿದರು.
ಚೆನ್ನೈ 72/0
ಡೆವೊನ್ ಕಾನ್ವೇ 44* (22)
ರುತುರಾಜ್ ಗಾಯಕ್ವಾಡ್ 25* (14)
ಪವರ್ ಪ್ಲೇ ಅಂತ್ಯ
ಚೆನ್ನೈ ಪಾಲಿನ ಪವರ್ ಪ್ಲೇ ಮುಗಿದಿದೆ.
ಈ 4 ಓವರ್ಗಳಲ್ಲಿ ಚೆನ್ನೈ 52 ರನ್ ಬಾರಿಸಿದೆ.
ಈ 4ನೇ ಓವರ್ನಲ್ಲಿ 17 ರನ್ ಬಂದವು.
ಶಮಿ ದುಬಾರಿ
3ನೇ ಓವರ್ನಲ್ಲಿ 11 ರನ್ ಬಂದವು
ಈ ಓವರ್ನ ಮೊದಲ ಎರಡು ಎಸೆತಗಳನ್ನು ಕಾನ್ವೇ ಬೌಂಡರಿಗಟ್ಟಿದರು.
3 ಓವರ್ ಅಂತ್ಯಕ್ಕೆ 33/0
ಕಾನ್ವೇ ಸಿಕ್ಸ್
2ನೇ ಓವರ್ನಲ್ಲಿ 14 ರನ್ ಬಂದವು
ಓವರ್ನ 2ನೇ ಎಸೆತವನ್ನು ಕಾನ್ವೇ ಕವರ್ಸ್ನಲ್ಲಿ ಸಿಕ್ಸರ್ಗಟ್ಟಿದರು. ಹಾಗೆಯೇ 5ನೇ ಎಸೆತವನ್ನು ಬೌಂಡರಿಗಟ್ಟಿದರು.
ಚೆನ್ನೈ 23/0
ಪಂದ್ಯ ಆರಂಭ
ಕೊನೆಗೂ ಪಂದ್ಯ ಆರಂಭಚವಾಗಿದೆ. 15 ಓವರ್ಗಳಲ್ಲಿ ಚೆನ್ನೈ 171 ರನ್ ಬಾರಿಸಬೇಕಿದೆ.
11:30 ಕ್ಕೆ ಮತ್ತೊಂದು ತಪಾಸಣೆ
10:45ಕ್ಕೆ ಆಗಬೇಕಿದ್ದ ತಪಾಸಣೆ ನಡೆದಿದ್ದರೂ ಮೈದಾನದ ಸ್ಥಿತಿಗತಿ ಬಗ್ಗೆ ಅಂಪೈರ್‌ಗಳು ತೃಪ್ತರಾಗಿಲ್ಲ. ಮೈದಾನದವರು ಇನ್ನೂ ನೆಲವನ್ನು ಒಣಗಿಸಲು ಪ್ರಯತ್ನಿಸುತ್ತಿದ್ದಾರೆ. ಹೀಗಾಗಿ 11.30ಕ್ಕೆ ಮತ್ತೊಮ್ಮೆ ತಪಾಸಣೆ ನಡೆಯಲಿದೆ.
10:45 ಕ್ಕೆ ತಪಾಸಣೆ
ಮಳೆ ನಿಂತಿದ್ದು, ಈಗ ಅಂಪೈರ್‌ಗಳು 10:45 ಕ್ಕೆ ಮೈದಾನವನ್ನು ಪರಿಶೀಲಿಸುತ್ತಾರೆ. ಆ ನಂತರ ಓವರ್‌ಗಳನ್ನು ಕಡಿತಗೊಳಿಸಬೇಕೇ ಅಥವಾ ಬೇಡವೇ ಎಂದು ನಿರ್ಧರಿಸಲಾಗುತ್ತದೆ.
ಮಳೆಯಿಂದಾಗಿ ಪಂದ್ಯ ಸ್ಥಗಿತಗೊಂಡಿದೆ
ಮಳೆಯಿಂದಾಗಿ ಪಂದ್ಯ ಸ್ಥಗಿತಗೊಂಡಿದೆ. ಮೈದಾನದಲ್ಲಿ ಕವರ್‌ಗಳನ್ನು ಹಾಸಲಾಗಿದೆ. ಚೆನ್ನೈ ಕೇವಲ ಮೂರು ಎಸೆತಗಳನ್ನು ಆಡಿದ ಬಳಿಕ ಮಳೆ ಬಂದಿದ್ದರಿಂದ ಪಂದ್ಯವನ್ನು ನಿಲ್ಲಿಸಬೇಕಾಯಿತು.
ರುತುರಾಜ್ ಫೋರ್
ಚೆನ್ನೈ ಪರ ರುತುರಾಜ್ ಹಾಗೂ ಕಾನ್ವೇ ಇನ್ನಿಂಗ್ಸ್ ಆರಂಭಿಸಿದ್ದಾರೆ
ಓವರ್ನ 3ನೇ ಎಸೆತವನ್ನು ರುತುರಾಜ್ ಬೌಂಡರಿಗಟ್ಟಿದರು
215 ರನ್ ಟಾರ್ಗೆಟ್
ಸುದರ್ಶನ್ ಹಾಗೂ ಸಾಹ ಅವರ ಅರ್ಧಶತಕದ ನೆರವಿನಿಂದ ಗುಜರಾತ್ 20 ಓವರ್ಗಳಲ್ಲಿ 4 ವಿಕೆಟ್ ಕಳೆದುಕೊಂಡು 214 ರನ್ ಕಲೆ ಹಾಕಿದೆ.
ಶತಕ ವಂಚಿತ ಸುದರ್ಶನ್
20ನೇ ಓವರ್ನ ಮೊದಲ ಎರಡು ಎಸೆತಗಳಲ್ಲಿ ಸಿಕ್ಸರ್ ಬಾರಿಸಿದ ಸುದರ್ಶನ್, 3ನೇ ಎಸೆತದಲ್ಲಿ ಎಲ್ಬಿ ಬಲೆಗೆ ಬಿದ್ದರು.
ಸುದರ್ಶನ್ ಕೇವಲ 47 ಎಸೆತಗಳಲ್ಲಿ 96 ರನ್ ಚಚ್ಚಿದರು
ಜಿಟಿ 212/3
ಪಾಂಡ್ಯ ಸಿಕ್ಸ್
19ನೇ ಓವರ್ ಮೊದಲ ಎಸೆತವನ್ನ ಪಾಂಡ್ಯ ಎಕ್ಸ್ಟ್ರಾ ಕವರ್ ಮೇಲೆ ಸಿಕ್ಸರ್ಗಟ್ಟಿದರು.
3ನೇ ಎಸೆತದಲ್ಲಿ ಸುದರ್ಶನ್ ಬೌಂಡರಿ ಬಾರಿಸಿದರೆ, ಕೊನೆಯ ಎಸೆತವನ್ನು ಪಾಂಡ್ಯ ಲಾಂಗ್ ಆನ್ನಲ್ಲಿ ಸಿಕ್ಸರ್ಗಟ್ಟಿದರು.
ಈ ಓವರ್ನಲ್ಲಿ 19 ರನ್ ಬಂದವು
ಹಾಗೆಯೇ ಗುಜರಾತ್ 200 ರನ್ ಪೂರೈಸಿತು.
ಜಿಟಿ 200/2
ಸುದರ್ಶನ್ ಅಬ್ಬರ
17ನೇ ಓವರ್ನಲ್ಲಿ ಸುದರ್ಶನ್ 1 ಸಿಕ್ಸ್, 3 ಬೌಂಡರಿ ಹೊಡೆದರು.
ಈ ಓವರ್ನಲ್ಲಿ 20 ರನ್ ಬಂದವು
ಜಿಟಿ 173/2
ಸುದರ್ಶನ್ ಅರ್ಧಶತಕ
ಸಾಹ ನಂತರ ಸುದರ್ಶನ್ ಕೂಡ ಅರ್ಧಶತಕ ಪೂರೈಸಿದ್ದಾರೆ.
16ನೇ ಓವರ್ನಲ್ಲಿ 2 ಬೌಂಡರಿ ಬಾರಿಸಿದ ಸುದರ್ಶನ್ ಅರ್ಧಶತಕ ಪೂರೈಸಿದರು.
ಇದರೊಂದಿಗೆ ಗುಜರಾತ್ 150 ರನ್ ಪೂರೈಸಿತು.
ಜಿಟಿ 153/2
ಸುದರ್ಶನ್ ಸಿಕ್ಸರ್
15ನೇ ಓವರ್ನಲ್ಲಿ ಸುದರ್ಶನ್ 2 ಸಿಕ್ಸರ್ ಬಾರಿಸಿದರು
ಮೊದಲ ಸಿಕ್ಸರ್ ಡೀಪ್ ಸ್ಕ್ವೇರ್ ಲೆಗ್ನಲ್ಲಿ ಬಂದರೆ, 2ನೇಯದ್ದು ಡೀಪ್ ಮಿಡ್ ವಿಕೆಟ್ನಲ್ಲಿ ಬಂತು
15 ಓವರ್ ಅಂತ್ಯಕ್ಕೆ 143/2
ಸಾಹ ಔಟ್
ಗುಜರಾತ್ 2ನೇ ವಿಕೆಟ್ ಪತನವಾಗಿದೆ
14ನೇ ಓವರ್ನ ಕೊನೆಯ ಎಸೆತದಲ್ಲಿ ಸಾಹ ಕೀಪರ್ ಕೈಗೆ ಕ್ಯಾಚಿತ್ತು ಔಟಾದರು
ಸಾಹ 54 (39)
14 ಓವರ್ ಅಂತ್ಯಕ್ಕೆ 131/2
ಸಾಹ ಅರ್ಧಶತಕ
13ನೇ ಓವರ್ನಲ್ಲಿ ಬೌಂಡರಿ ಬಾರಿಸಿದ ಸಾಹ ಅರ್ಧಶತಕ ಪೂರೈಸಿದರು.
36 ಎಸೆತಗಳಲ್ಲಿ ಈ ಅರ್ಧಶತಕ ಬಂತು.
ಈ ಓವರ್ನಲ್ಲಿ 15 ರನ್ ಬಂತು
ಜಿಟಿ 124/1
ಗುಜರಾತ್ ಶತಕ ಪೂರ್ಣ
12ನೇ ಓವರ್ನಲ್ಲಿ 13 ರನ್ ಬಂದವು
ಈ ಓವರ್ನಲ್ಲಿ ಸುದರ್ಶನ್ 2 ಫೋರ್ ಬಾರಿಸಿದರು
ಇದೇ ಓವರ್ನಲ್ಲಿ ಗುಜರಾತ್ ಶತಕ ಪೂರೈಸಿತು.
ಸಾಯಿ ಸುದರ್ಶನ್20* (17)
ವೃದ್ಧಿಮಾನ್ ಸಹಾ48* (35)
ಸಾಹ ಫೋರ್
11ನೇ ಓವರ್ನ ಮೊದಲ ಎಸೆತವನ್ನು ಸಾಹ ಡೀಪ್ ಬ್ಯಾಕ್ವರ್ಡ್ ಪಾಯಿಂಟ್ನಲ್ಲಿ ಬೌಂಡರಿಗಟ್ಟಿದರು
11 ಓವರ್ ಅಂತ್ಯಕ್ಕೆ 96/1
9 ಓವರ್ ಅಂತ್ಯ
ಗುಜರಾತ್ ಇನ್ನಿಂಗ್ಸ್ನ 9 ಓವರ್ ಮುಗಿದಿದೆ
ಇ 9 ಓವರ್ಗಳಲ್ಲಿ ಜಿಟಿ 1 ವಿಕೆಟ್ ಕಳೆದುಕೊಂಡು 80 ರನ್ ಬಾರಿಸಿದೆ.
ಈ ಓವರ್ನಲ್ಲಿ ಸಾಹ ಬ್ಯಾಕ್ವರ್ಡ್ ಪಾಯಿಂಟ್ನಲ್ಲಿ ಬೌಂಡರಿ ಹೊಡೆದರು.
ಗಿಲ್ ಔಟ್
ಗುಜರಾತ್ ಮೊದಲ ವಿಕೆಟ್ ಪತನವಾಗಿದೆ
ಜಡೇಜಾ ಬೌಲ್ ಮಾಡಿದ 7ನೇ ಓವರ್ನಲ್ಲಿ ಗಿಲ್ ಸ್ಟಂಪ್ ಔಟ್ ಆದರು
ಗಿಲ್ 39 (20)
ಗುಜರಾತ್ ಅರ್ಧಶತಕ ಪೂರ್ಣ
ಪವರ್ ಪ್ಲೇ ಮೊದಲ ಎಸೆತದಲ್ಲಿ ಗುಜರಾತ್ ಅರ್ಧಶತಕ ಪೂರೈಸಿದೆ.
ಈ ಓವರ್ನಲ್ಲೂ ಗಿಲ್ ಹ್ಯಾಟ್ರಿಕ್ ಫೋರ್ ಹೊಡೆದರು
ಜಿಟಿ 62/0
ಶುಭಮನ್ ಗಿಲ್ 36* (17)
ವೃದ್ಧಿಮಾನ್ ಸಹಾ26* (19)
ಗಿಲ್ ಫೋರ್
5ನೇ ಓವರ್ನಲ್ಲಿ 11 ರನ್ ಬಂದವು
ಓವರ್ನ 3ನೇ ಎಸೆತವನ್ನು ಗಿಲ್ ಡೀಪ್ ಬ್ಯಾಕ್ವರ್ಡ್ ಪಾಯಿಂಟ್ನಲ್ಲಿ ಬೌಂಡರಿಗಟ್ಟಿದರು.
ಜಿಟಿ 49/0
ಗಿಲ್ ಹ್ಯಾಟ್ರಿಕ್ ಫೋರ್
4ನೇ ಓವರ್ನಲ್ಲಿ 14 ರನ್ ಬಂದವು
ಈ ಓವರ್ನ ಮೊದಲ 3 ಎಸೆತಗಳನ್ನು ಗಿಲ್ ಬೌಂಡರಿಗಟ್ಟಿದರು
ಜಿಟಿ 38/0
ಸಾಹ ಸಿಕ್ಸ್
2ನೇ ಓವರ್ನಲ್ಲಿ ಕ್ಯಾಚ್ ಬಿಟ್ಟಿದ ಚಹರ್ ಬೌಲಿಂಗ್ನಲ್ಲಿ ದುಬಾರಿಯಾಗಿದ್ದಾರೆ.
3ನೇ ಓವರ್ನಲ್ಲಿ ಚಹರ್ 16 ರನ್ ಬಿಟ್ಟುಕೊಟ್ಟರು
ಈ ಓವರ್ನಲ್ಲಿ ಸಾಹ 1 ಸಿಕ್ಸ್ ಹಾಗೂ 2 ಬೌಂಡರಿ ಹೊಡೆದರು.
ಜಿಟಿ 24/0
ಗಿಲ್ಗೆ ಜೀವದಾನ
2ನೇ ಓವರ್ನಲ್ಲಿ ಗಿಲ್ಗೆ ಜೀವದಾನ ಸಿಕ್ಕಿದೆ. ಗಿಲ್ ನೀಡಿದ ಸುಲಭ ಕ್ಯಾಚನ್ನು ಚಹರ್ ಕೈ ಚೆಲ್ಲಿದ್ದಾರೆ.
2 ಓವರ್ ಅಂತ್ಯಕ್ಕೆ 8/0
ಗುಜರಾತ್ ಬ್ಯಾಟಿಂಗ್ ಆರಂಭ
ಗುಜರಾತ್ ಪರ ಗಿಲ್ ಹಾಗೂ ಸಾಹ ಬ್ಯಾಟಿಂಗ್ ಆರಂಭಿಸಿದ್ದಾರೆ.
ಮೊದಲ ಓವರ್ ಅಂತ್ಯಕ್ಕೆ ಜಿಟಿ 4/0
ಗುಜರಾತ್ ಟೈಟಾನ್ಸ್
ಹಾರ್ದಿಕ್ ಪಾಂಡ್ಯ (ನಾಯಕ), ವೃದ್ಧಿಮಾನ್ ಸಹಾ (ವಿಕೆಟ್ ಕೀಪರ್), ಶುಭ್ಮನ್ ಗಿಲ್, ಸಾಯಿ ಸುದರ್ಶನ್, ವಿಜಯ್ ಶಂಕರ್, ಡೇವಿಡ್ ಮಿಲ್ಲರ್, ರಾಹುಲ್ ತೆವಾಟಿಯಾ, ರಶೀದ್ ಖಾನ್, ಮೋಹಿತ್ ಶರ್ಮಾ, ನೂರ್ ಅಹ್ಮದ್, ಮೊಹಮ್ಮದ್ ಶಮಿ.
ಚೆನ್ನೈ ಸೂಪರ್ ಕಿಂಗ್ಸ್
ಎಂಎಸ್ ಧೋನಿ (ನಾಯಕ), ರುತುರಾಜ್ ಗಾಯಕ್ವಾಡ್, ಡೆವೊನ್ ಕಾನ್ವೆ, ಅಜಿಂಕ್ಯ ರಹಾನೆ, ಮೊಯಿನ್ ಅಲಿ, ಅಂಬಟಿ ರಾಯುಡು, ರವೀಂದ್ರ ಜಡೇಜಾ, ದೀಪಕ್ ಚಾಹರ್, ಮತಿಶಾ ಪತಿರಾನ, ತುಷಾರ್ ದೇಶಪಾಂಡೆ, ಮಹಿಷ್ ತೀಕ್ಷಣ.
ಫೈನಲ್ ಪಂದ್ಯದ ಟಾಸ್ ಗೆದ್ದ ಧೋನಿ
ಫೈನಲ್ ಪಂದ್ಯದ ಟಾಸ್ ಗೆದ್ದ ಧೋನಿ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದ್ದಾರೆ. ಉಭಯ ತಂಡಗಳಲ್ಲೂ ಯಾವುದೇ ಬದಲಾವಣೆ ಇಲ್ಲ
ಅಹಮದಾಬಾದ್‌ನಲ್ಲಿ ಸ್ಪಷ್ಟ ಹವಾಮಾನ
ಸದ್ಯ ಅಹಮದಾಬಾದ್‌ನಲ್ಲಿ ಹವಾಮಾನ ಸ್ಪಷ್ಟವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಗುಜರಾತ್ ಮತ್ತು ಚೆನ್ನೈ ನಡುವಿನ ಫೈನಲ್ ಪಂದ್ಯ ನಿಗದಿತ ಸಮಯಕ್ಕೆ ಆರಂಭವಾಗುವ ನಿರೀಕ್ಷೆ ಇದೆ.
Published On - May 29,2023 6:14 PM