ಒಲಂಪಿಕ್ಸ್​ನಲ್ಲಿ ಪದಕ ಗೆದ್ದ ಪ್ರಿಯಾ ಮಲಿಕ್​ ಅವರಿಗೆ ಅಭಿನಂದನೆಗಳು; ಇಶಾಂತ್ ಶರ್ಮಾ- ಹನುಮಾ ವಿಹಾರಿ ಎಡವಟ್ಟು

ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದ ಪ್ರಿಯಾ ಮಲಿಕ್ ಅವರನ್ನು ಇಶಾಂತ್ ಶರ್ಮಾ ಮತ್ತು ಹನುಮಾ ವಿಹಾರಿ ಟ್ವಿಟರ್​ನಲ್ಲಿ ಅಭಿನಂದಿಸಿದ್ದಾರೆ. ಆದರೆ ತಮ್ಮ ತಪ್ಪನ್ನು ಅರಿತ ತಕ್ಷಣ, ಅವರು ತಮ್ಮ ಟ್ವೀಟ್ ಅನ್ನು ಡಿಲೀಟ್ ಮಾಡಿದ್ದಾರೆ.

ಒಲಂಪಿಕ್ಸ್​ನಲ್ಲಿ ಪದಕ ಗೆದ್ದ ಪ್ರಿಯಾ ಮಲಿಕ್​ ಅವರಿಗೆ ಅಭಿನಂದನೆಗಳು; ಇಶಾಂತ್ ಶರ್ಮಾ- ಹನುಮಾ ವಿಹಾರಿ ಎಡವಟ್ಟು
ಹನುಮಾ ವಿಹಾರಿ, ಪ್ರಿಯಾ ಮಲಿಕ್, ಇಶಾಂತ್ ಶರ್ಮಾ,
Follow us
| Updated By: ಪೃಥ್ವಿಶಂಕರ

Updated on:Jul 25, 2021 | 4:35 PM

ಪ್ರಸ್ತುತ ದೇಶದ ಜನರ ಕಣ್ಣುಗಳು ಟೋಕಿಯೊ ಒಲಿಂಪಿಕ್ಸ್‌ನತ್ತ ನಿಂತಿವೆ. ಶನಿವಾರ ಮೀರಾಬಾಯಿ ಚಾನು ವೇಟ್‌ಲಿಫ್ಟಿಂಗ್‌ನಲ್ಲಿ ಬೆಳ್ಳಿ ಪದಕ ಗೆಲ್ಲುವ ಮೂಲಕ ಭಾರತಕ್ಕೆ ಮೊದಲ ಪದಕ ಗೆದ್ದರು. ಕ್ರೀಡೆಯ ವಿಷಯದಲ್ಲಿ, ಭಾನುವಾರವೂ ಭಾರತಕ್ಕೆ ಉತ್ತಮ ದಿನವಾಗಿದೆ. ಹಂಗೇರಿಯಲ್ಲಿ ನಡೆದ ವಿಶ್ವ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಮಹಿಳಾ ಕುಸ್ತಿಪಟು ಪ್ರಿಯಾ ಮಲಿಕ್ ಭಾರತ ಪರ ಚಿನ್ನದ ಪದಕ ಗೆದ್ದಿದ್ದಾರೆ. ಆದರೆ ಈ ಚಾಂಪಿಯನ್‌ಶಿಪ್ ಬಗ್ಗೆ ಕೆಲವೇ ಜನರಿಗೆ ತಿಳಿದಿತ್ತು. ಟೋಕಿಯೊ ಒಲಿಂಪಿಕ್ಸ್‌ನಲ್ಲಿಯೇ ಪ್ರಿಯಾ ಮಲಿಕ್ ಪದಕ ಗೆದ್ದಿದ್ದಾರೆ ಎಂದು ಹಲವರು ಭಾವಿಸಿದ್ದರು. ಭಾರತೀಯ ಕ್ರಿಕೆಟಿಗರಾದ ಇಶಾಂತ್ ಶರ್ಮಾ ಮತ್ತು ಹನುಮಾ ವಿಹಾರಿ ಕೂಡ ಈ ಭ್ರಮೆಯ ಬಲೆಗೆ ಬಿದ್ದು ದೊಡ್ಡ ತಪ್ಪು ಮಾಡಿದ್ದಾರೆ.

ವಾಸ್ತವವಾಗಿ, ಪ್ರಿಯಾ ಮಲಿಕ್ ವಿಶ್ವ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ. ಆದರೆ ಟೋಕಿಯೊ ಒಲಿಂಪಿಕ್ಸ್‌ನಲ್ಲಿಯೇ ಅವರು ಈ ಸಾಧನೆ ಮಾಡಿದ್ದಾರೆ ಎಂದು ಹಲವರು ಭಾವಿಸಿದ್ದರು. ಇದಕ್ಕಾಗಿ, ಅವರಿಗೆ ಅಭಿನಂದನೆಗಳ ಮಹಾಪೂರವನ್ನೇ ಹರಿಸಲು ಪ್ರಾರಂಭಿಸಿದ್ದಾರೆ. ಇದರಲ್ಲಿ ಇಶಾಂತ್ ಮತ್ತು ವಿಹಾರಿ ಕೂಡ ಸೇರಿದ್ದಾರೆ.

ಒಲಿಂಪಿಕ್ ಪದಕ ಗೆದ್ದ ಪ್ರಿಯಾ ಮಲಿಕ್ ಅವರಿಗೆ ಅಭಿನಂದನೆಗಳು ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದ ಪ್ರಿಯಾ ಮಲಿಕ್ ಅವರನ್ನು ಇಶಾಂತ್ ಶರ್ಮಾ ಮತ್ತು ಹನುಮಾ ವಿಹಾರಿ ಟ್ವಿಟರ್​ನಲ್ಲಿ ಅಭಿನಂದಿಸಿದ್ದಾರೆ. ಆದರೆ ತಮ್ಮ ತಪ್ಪನ್ನು ಅರಿತ ತಕ್ಷಣ, ಅವರು ತಮ್ಮ ಟ್ವೀಟ್ ಅನ್ನು ಡಿಲೀಟ್ ಮಾಡಿದ್ದಾರೆ.

75 ಕೆಜಿ ತೂಕ ವಿಭಾಗದಲ್ಲಿ ಪ್ರಿಯಾ ಚಿನ್ನ ಗೆದ್ದರು ಹಂಗೇರಿಯಲ್ಲಿ ನಡೆಯುತ್ತಿರುವ ಚಾಂಪಿಯನ್‌ಶಿಪ್‌ನಲ್ಲಿ ಪ್ರಿಯಾ ಮಲಿಕ್ ಮಹಿಳೆಯರ 75 ಕೆಜಿ ತೂಕ ವಿಭಾಗದ ಚಿನ್ನದ ಪದಕ ಗೆದ್ದಿದ್ದಾರೆ. ಅವರು ಬೆಲರೂಸಿಯನ್ ಕುಸ್ತಿಪಟುವನ್ನು 5-0 ಗೋಲುಗಳಿಂದ ಸೋಲಿಸಿ ಚಿನ್ನದ ಪದಕ ಗೆದ್ದರು.

ಇಶಾಂತ್ ಶರ್ಮಾ ಪೋಸ್ಟ್

ಹನುಮಾ ವಿಹಾರಿ ಪೋಸ್ಟ್

ಇಶಾಂತ್ ಮತ್ತು ಹನುಮಾ ಇಂಗ್ಲೆಂಡಿನಲ್ಲಿದ್ದಾರೆ ಇಶಾಂತ್ ಶರ್ಮಾ ಮತ್ತು ಹನುಮಾ ವಿಹಾರಿ ಇಬ್ಬರೂ ಆತಿಥೇಯರ ವಿರುದ್ಧ ಮುಂಬರುವ ಐದು ಪಂದ್ಯಗಳ ಟೆಸ್ಟ್ ಸರಣಿಗೆ ತಯಾರಿ ನಡೆಸುತ್ತಿದ್ದಾರೆ. ಜಸ್ಪ್ರೀತ್ ಬುಮ್ರಾ ಮತ್ತು ಮೊಹಮ್ಮದ್ ಶಮಿ ಅವರೊಂದಿಗೆ ಇಶಾಂತ್ ಭಾರತದ ದಾಳಿಯ ಭಾಗವಾಗಿದ್ದಾರೆ. ಆಗಸ್ಟ್ 4 ರಿಂದ ಪ್ರಾರಂಭವಾಗುವ ಮೊದಲ ಟೆಸ್ಟ್‌ನಲ್ಲಿ ಇಶಾಂತ್ ಆಡುವ ನಿರೀಕ್ಷೆಯಿದೆ.

ಮೊದಲ ಟೆಸ್ಟ್ ಪಂದ್ಯದ ಇಲೆವೆನ್‌ನಲ್ಲಿ ವಿಹಾರಿ ಸ್ಥಾನವು ಭಾರತ ಯಾವ ಸಂಯೋಜನೆಯೊಂದಿಗೆ ಹೋಗುತ್ತದೆ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ. ಹೆಚ್ಚುವರಿ ಬ್ಯಾಟ್ಸ್‌ಮನ್‌ ಆಡಲು ತಂಡವು ನಿರ್ಧರಿಸಿದರೆ, ವಿಹಾರಿ ಮತ್ತು ಕೆ.ಎಲ್.ರಾಹುಲ್ ಇಬ್ಬರೂ ಅವಕಾಶವನ್ನು ಪಡೆಯಬಹುದು. ವಿಹಾರಿ ಕೊನೆಯ ಬಾರಿಗೆ ಸಿಡ್ನಿಯಲ್ಲಿ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಭಾರತ ಪರ ಆಡಿದ್ದರು.

Published On - 4:34 pm, Sun, 25 July 21

ಸಾವಿನ ನಂತರದ ಕಥೆ; ಸ್ಮಶಾನದಲ್ಲಿ ಭೈರಾದೇವಿ ಶೂಟಿಂಗ್; ರಮೇಶ್ ಹೇಳಿದ್ದಿಷ್ಟು
ಸಾವಿನ ನಂತರದ ಕಥೆ; ಸ್ಮಶಾನದಲ್ಲಿ ಭೈರಾದೇವಿ ಶೂಟಿಂಗ್; ರಮೇಶ್ ಹೇಳಿದ್ದಿಷ್ಟು
ಮಹಿಷಾ ದಸರಾ ಆಚರಣೆ ಬಗ್ಗೆ ಸಂಸದ ಯದುವೀರ್ ಏನಂದ್ರು ಗೊತ್ತಾ?
ಮಹಿಷಾ ದಸರಾ ಆಚರಣೆ ಬಗ್ಗೆ ಸಂಸದ ಯದುವೀರ್ ಏನಂದ್ರು ಗೊತ್ತಾ?
ಕಿಯೋನಿಕ್ಸ್ 400 ಕೋಟಿ ರೂ. ಅಕ್ರಮ ಪ್ರಕರಣ; ಅಶ್ವತ್ಥನಾರಾಯಣ ಹೇಳಿದ್ದಿಷ್ಟು
ಕಿಯೋನಿಕ್ಸ್ 400 ಕೋಟಿ ರೂ. ಅಕ್ರಮ ಪ್ರಕರಣ; ಅಶ್ವತ್ಥನಾರಾಯಣ ಹೇಳಿದ್ದಿಷ್ಟು
ಹಿಂದೂ ಮೆರವಣಿಗೆಯಲ್ಲಿ ರಕ್ಷಣೆಗೆ ಶಸ್ತ್ರ ಸಮೇತ ನಾವು ಸಜ್ಜು: ಶ್ರೀರಾಮ ಸೇನೆ
ಹಿಂದೂ ಮೆರವಣಿಗೆಯಲ್ಲಿ ರಕ್ಷಣೆಗೆ ಶಸ್ತ್ರ ಸಮೇತ ನಾವು ಸಜ್ಜು: ಶ್ರೀರಾಮ ಸೇನೆ
ಕಾಳಿ ವೇಷ ಧರಿಸುತ್ತಿದ್ದಂತೆ ಏನಾಗುತ್ತಿತ್ತು, ವಿವರಿಸಿದ ನಟಿ ರಾಧಿಕಾ
ಕಾಳಿ ವೇಷ ಧರಿಸುತ್ತಿದ್ದಂತೆ ಏನಾಗುತ್ತಿತ್ತು, ವಿವರಿಸಿದ ನಟಿ ರಾಧಿಕಾ
ವಾರಣಾಸಿಯಲ್ಲಿ ಗಂಗಾ ಆರತಿ ವೀಕ್ಷಿಸಿದ ಕಾಂಗ್ರೆಸ್ ನಿಯೋಗ
ವಾರಣಾಸಿಯಲ್ಲಿ ಗಂಗಾ ಆರತಿ ವೀಕ್ಷಿಸಿದ ಕಾಂಗ್ರೆಸ್ ನಿಯೋಗ
Daily Devotional: ಹನುಮಾನ್ ಕಾರ್ಯಫಲ ಮಂತ್ರ ಬಗ್ಗೆ ತಿಳಿಯಿರಿ
Daily Devotional: ಹನುಮಾನ್ ಕಾರ್ಯಫಲ ಮಂತ್ರ ಬಗ್ಗೆ ತಿಳಿಯಿರಿ
Weekly Horoscope: ಸೆಪ್ಟೆಂಬರ್​​ 23 ರಿಂದ 29ರ ವಾರ ಭವಿಷ್ಯ ತಿಳಿಯಿರಿ
Weekly Horoscope: ಸೆಪ್ಟೆಂಬರ್​​ 23 ರಿಂದ 29ರ ವಾರ ಭವಿಷ್ಯ ತಿಳಿಯಿರಿ
Nithya Bhavishya: ಈ ರಾಶಿಯವರು ವ್ಯಾವಹಾರದಲ್ಲಿ ಇಂದು ಬದಲಾವಣೆಯನ್ನು ತರು
Nithya Bhavishya: ಈ ರಾಶಿಯವರು ವ್ಯಾವಹಾರದಲ್ಲಿ ಇಂದು ಬದಲಾವಣೆಯನ್ನು ತರು
ನಾಗವಲ್ಲಿ ಮಿಂಚು ರಾಧಿಕಾ ಕಣ್ಣಲ್ಲಿ ಕಾಣಿಸಿತು: ರಮೇಶ್ ಅರವಿಂದ್
ನಾಗವಲ್ಲಿ ಮಿಂಚು ರಾಧಿಕಾ ಕಣ್ಣಲ್ಲಿ ಕಾಣಿಸಿತು: ರಮೇಶ್ ಅರವಿಂದ್