Hardik Pandya: ಖಾಸಗಿ ಜೆಟ್‌, ದುಬಾರಿ ಕಾರು; ಹಾರ್ದಿಕ್ ಪಾಂಡ್ಯರ ಐಷಾರಾಮಿ ಜೀವನದ ವಿಡಿಯೋ ನೋಡಿ

| Updated By: ಪೃಥ್ವಿಶಂಕರ

Updated on: Aug 24, 2022 | 10:28 PM

Hardik Pandya: ಈ ಬಾರಿ ಹೊಸದಾಗಿ ಎಂಟ್ರಿಕೊಟ್ಟ ಗುಜರಾತ್ ಟೈಟಾನ್ಸ್‌ ತಂಡದ ನಾಯಕತ್ವ ವಹಿಸಿದ ಪಾಂಡ್ಯ, ಚೊಚ್ಚಲ ಸೀಸನ್​ನಲ್ಲಿಯೇ ತಮ್ಮ ತಂಡವನ್ನು ಚಾಂಪಿಯನ್ ಮಾಡಿದರು.

Hardik Pandya: ಖಾಸಗಿ ಜೆಟ್‌, ದುಬಾರಿ ಕಾರು; ಹಾರ್ದಿಕ್ ಪಾಂಡ್ಯರ ಐಷಾರಾಮಿ ಜೀವನದ ವಿಡಿಯೋ ನೋಡಿ
Follow us on

ಏಷ್ಯಾಕಪ್ 2022 (Asia Cup 2022)ರ ಆರಂಭಕ್ಕೆ ಕೌಂಟ್​ಡೌನ್ ಆರಂಭವಾಗಿದೆ. ಭಾರತ ಆಗಸ್ಟ್ 28 ರಂದು ಪಾಕಿಸ್ತಾನ ವಿರುದ್ಧ ತನ್ನ ಅಭಿಯಾನವನ್ನು ಆರಂಭಿಸಲಿದೆ. ಇಡೀ ವಿಶ್ವವೇ ಈ ಪಂದ್ಯಕ್ಕಾಗಿ ಕಾತರದಿಂದ ಕಾಯುತ್ತಿದೆ. ಈ ಪಂದ್ಯಕ್ಕಾಗಿ ಟೀಂ ಇಂಡಿಯಾ ಕೂಡ ತನ್ನ ತಯಾರಿಯನ್ನು ಬಿಗಿಗೊಳಿಸಿದೆ. ಪಾಕಿಸ್ತಾನದ ವಿರುದ್ಧ ಮೈದಾನಕ್ಕಿಳಿಯುವ ಮುನ್ನ ಭಾರತದ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ (Hardik Pandya) ತಮ್ಮ ಉತ್ಸಾಹವನ್ನು ತೋರಿಸಿದ್ದು, ತಮ್ಮ ಐಷಾರಾಮಿ ಜೀವನದ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಈಗ ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಬಿರುಗಾಳಿ ಎಬ್ಬಿಸಿದೆ.

ತರಬೇತಿಯಲ್ಲಿ ರಾಜಿ ಮಾಡಿಕೊಳ್ಳದ ಪಾಂಡ್ಯ

ಇದನ್ನೂ ಓದಿ
Asia Cup 2022: ಏಷ್ಯಾಕಪ್​ಗೆ ಟೀಂ ಇಂಡಿಯಾ ಹಂಗಾಮಿ ಕೋಚ್ ಆಗಿ ವಿವಿಎಸ್ ಲಕ್ಷ್ಮಣ್ ಆಯ್ಕೆ..!
Asia Cup 2022: ಕಿಂಗ್ ಕೊಹ್ಲಿ ಎಂದರೆ ಪಾಕ್ ತಂಡಕ್ಕೆ ಯಾಕಷ್ಟು ಭಯ? ಈ ರೆಕಾರ್ಡ್​ ನೋಡಿ
Asia Cup 2022: ಏಷ್ಯಾಕಪ್ ಇತಿಹಾಸದಲ್ಲಿ ಅತಿ ಹೆಚ್ಚು ರನ್ ಗಳಿಸಿರುವ ಟೀಂ ಇಂಡಿಯಾ ಕ್ರಿಕೆಟಿಗರಿವರು

ಏಷ್ಯಾಕಪ್‌ಗೂ ಮುನ್ನ ಪಾಂಡ್ಯ ತಮ್ಮ ಕುಟುಂಬ ಮತ್ತು ಸ್ನೇಹಿತರೊಂದಿಗೆ ಸಮಯ ಕಳೆಯುತ್ತಿದ್ದಾರೆ. ಆದರೆ ಈ ಸಮಯದಲ್ಲಿ ಅವರು ತಮ್ಮ ಅಭ್ಯಾಸದಲ್ಲಿ ರಾಜಿ ಮಾಡಿಕೊಂಡಿಲ್ಲ. ಬಿಡುವಿನ ವೇಳೆಯಲ್ಲೂ ಭಾರತದ ಸ್ಟಾರ್ ಆಲ್​ರೌಂಡರ್ ಮೈದಾನದಲ್ಲಿ ಬೆವರು ಸುರಿಸುತ್ತಿದ್ದಾರೆ. ಇದಕ್ಕೆ ಪೂರಕವೆಂಬಂತೆ ಪಾಂಡ್ಯ ತಮ್ಮ Instagram ನಲ್ಲಿ ರೀಲ್ ಒಂದನ್ನು ಪೋಸ್ಟ್ ಮಾಡಿದ್ದು, ಅದರಲ್ಲಿ ಪಾಂಡ್ಯರ ಇಡೀ ದಿನದ ದಿನಚರಿ ಹೇಗಿರುತ್ತದೆ ಎಂಬುದನ್ನು ತೋರಿಸಲಾಗಿದೆ. ಈ ವಿಡಿಯೋದಲ್ಲಿ ಭಾರತದ ಸ್ಟಾರ್ ಆಲ್​ರೌಂಡರ್ ತನ್ನ ಖಾಸಗಿ ಜೆಟ್​ನಲ್ಲಿ ಪ್ರಯಾಣಿಸುತ್ತಿರುವುದನ್ನು ಕಾಣಬಹುದು. ಬಿಡುವಿಲ್ಲದ ವೇಳಾಪಟ್ಟಿಯಿಂದಲೂ ಅವರು ತಮ್ಮ ತಾಯಿ, ಹೆಂಡತಿ ಮತ್ತು ಮಕ್ಕಳೊಂದಿಗೆ ಸಮಯ ಕಳೆಯುವುದನ್ನು ಮರೆತಿಲ್ಲ ಎಂಬುದನ್ನು ಈ ವಿಡಿಯೋದಲ್ಲಿ ತೋರಿಸಲಾಗಿದೆ.

ಪಾಂಡ್ಯ ಲಕ್ ಬದಲಿಸಿದ 2022

ಕಳಪೆ ಫಾರ್ಮ್ ಹಾಗೂ ಇಂಜುರಿಯಿಂದ ಬಳಲುತ್ತಿದ್ದ ಪಾಂಡ್ಯ ಈ ವರ್ಷದ IPL ನಲ್ಲಿ ಭರ್ಜರಿ ಪುನರಾಗಮನ ಮಾಡಿದರು. ಈ ಬಾರಿ ಹೊಸದಾಗಿ ಎಂಟ್ರಿಕೊಟ್ಟ ಗುಜರಾತ್ ಟೈಟಾನ್ಸ್‌ ತಂಡದ ನಾಯಕತ್ವ ವಹಿಸಿದ ಪಾಂಡ್ಯ, ಚೊಚ್ಚಲ ಋತುವಿನಲ್ಲಿಯೇ ಗುಜರಾತ್ ತಂಡವನ್ನು ಚಾಂಪಿಯನ್ ಮಾಡಿದರು. ಇದಾದ ಬಳಿಕ ಐರ್ಲೆಂಡ್ ವಿರುದ್ಧದ 2 ಟಿ20 ಪಂದ್ಯಗಳ ಸರಣಿಯಲ್ಲಿ ಭಾರತ ತಂಡದ ನಾಯಕತ್ವ ವಹಿಸಿ ತಂಡವನ್ನು ಗೆಲುವಿನತ್ತ ಮುನ್ನಡೆಸಿದರು. ವೆಸ್ಟ್ ಇಂಡೀಸ್ ವಿರುದ್ಧದ 5ನೇ ಮತ್ತು ಕೊನೆಯ ಟಿ20 ಪಂದ್ಯದಲ್ಲೂ ಪಾಂಡ್ಯ ಟೀಂ ಇಂಡಿಯಾದ ಜವಾಬ್ದಾರಿ ವಹಿಸಿಕೊಂಡಿದ್ದರು. ವೆಸ್ಟ್ ಇಂಡೀಸ್ ಪ್ರವಾಸ ಮುಗಿಸಿ ತವರಿಗೆ ವಾಪಸಾಗಿದ್ದ ಪಾಂಡ್ಯ, ಜಿಂಬಾಬ್ವೆ ಪ್ರವಾಸದ ಭಾಗವಾಗಿರಲಿಲ್ಲ. ಈಗ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಸೇರಿದಂತೆ ಹೆಚ್ಚಿನ ಭಾರತೀಯ ಆಟಗಾರರು ಏಷ್ಯಾಕಪ್‌ಗಾಗಿ ಯುಎಇ ತಲುಪಿದ್ದಾರೆ.

Published On - 10:28 pm, Wed, 24 August 22