Asia Cup 2022: ಕಿಂಗ್ ಕೊಹ್ಲಿ ಎಂದರೆ ಪಾಕ್ ತಂಡಕ್ಕೆ ಯಾಕಷ್ಟು ಭಯ? ಈ ರೆಕಾರ್ಡ್​ ನೋಡಿ

Asia Cup 2022: ವಿರಾಟ್ ಕೊಹ್ಲಿ ಏಕದಿನ-ಟಿ20 ಮಾದರಿಯಲ್ಲಿ ಪಾಕಿಸ್ತಾನ ವಿರುದ್ಧ ಒಟ್ಟು 2 ಶತಕಗಳನ್ನು ಗಳಿಸಿದ್ದಾರೆ. ಇದರೊಂದಿಗೆ 2 ಅರ್ಧಶತಕಗಳು ಕೂಡ ಅವರ ಬ್ಯಾಟ್‌ನಿಂದ ಹೊರಬಿದ್ದಿವೆ.

Asia Cup 2022: ಕಿಂಗ್ ಕೊಹ್ಲಿ ಎಂದರೆ ಪಾಕ್ ತಂಡಕ್ಕೆ ಯಾಕಷ್ಟು ಭಯ? ಈ ರೆಕಾರ್ಡ್​ ನೋಡಿ
Virat Kohli
Follow us
| Updated By: ಪೃಥ್ವಿಶಂಕರ

Updated on:Aug 24, 2022 | 7:17 PM

ಭಾರತ ಮತ್ತು ಪಾಕಿಸ್ತಾನ (India Vs Pakistan) ನಡುವಿನ ಪಂದ್ಯ ಆಗಸ್ಟ್ 28 ರಂದು ನಡೆಯಲಿದೆ. ಏಷ್ಯಾಕಪ್ (Asia Cup 2022) ನಲ್ಲಿ ಎರಡು ತಂಡಗಳ ನಡುವಿನ ಈ ಪಂದ್ಯವನ್ನು ಲಕ್ಷಾಂತರ ಅಭಿಮಾನಿಗಳು ವೀಕ್ಷಿಸಲು ಕಾಯುತ್ತಿದ್ದಾರೆ. ಆದರೆ ಪಂದ್ಯಾವಳಿ ಆರಂಭಕ್ಕೂ ಮುನ್ನ ಟೀಂ ಇಂಡಿಯಾದಲ್ಲಿರುವ ಆ ಆಟಗಾರನ ಬಗ್ಗೆ ಪಾಕಿಸ್ತಾನಕ್ಕೆ ನಡುಕ ಶುರುವಾಗಿದೆ. ಪಾಕಿಸ್ತಾನದ ಬೌಲರ್‌ಗಳನ್ನು ಸದಾ ಅಳುವಂತೆ ಮಾಡುವ ವಿರಾಟ್ ಕೊಹ್ಲಿ (Virat Kohli) ಬಗ್ಗೆ ನಾವೀಲ್ಲಿ ಹೇಳುತ್ತಿದ್ದೇವೆ. ಪ್ರತಿ ಬಾರಿ ಪಾಕಿಸ್ತಾನಕ್ಕೆ ನಡುಕ ಹುಟ್ಟಿಸಿರುವ ವಿರಾಟ್ ಕೊಹ್ಲಿ ತಮ್ಮ ಬ್ಯಾಟ್‌ನ ಅಬ್ಬರವನ್ನು ತೋರಿಸಿದ್ದಾರೆ. ಅವರ ಅದ್ಭುತ ಪ್ರದರ್ಶನವು ಕೂಡ ಅದಕ್ಕೆ ಸಾಕ್ಷಿಯಾಗಿದೆ. ವಿರಾಟ್ ಕೊಹ್ಲಿ ಈ ಬಾರಿಯ ಏಷ್ಯಾಕಪ್‌ನಲ್ಲೂ ಪಾಕಿಸ್ತಾನಕ್ಕೆ ದೊಡ್ಡ ಎದುರಾಳಿ ಆಗಲಿದ್ದಾರೆ ಎಂಬುದಕ್ಕೆ ಇಲ್ಲಿವೆ ಪ್ರಮುಖ ಕಾರಣಗಳು.

1- ಪಾಕಿಸ್ತಾನ ವಿರುದ್ಧದ ಟಿ20ಯಲ್ಲಿ ವಿರಾಟ್ ಕೊಹ್ಲಿ ಅವರ ದಾಖಲೆ ಅದ್ಭುತವಾಗಿದೆ. ಅನುಭವಿ ಬಲಗೈ ಬ್ಯಾಟ್ಸ್‌ಮನ್ ಪಾಕಿಸ್ತಾನ ವಿರುದ್ಧ 7 ಪಂದ್ಯಗಳಲ್ಲಿ 311 ರನ್ ಗಳಿಸಿದ್ದಾರೆ. ಈ ವೇಳೆ ವಿರಾಟ್ ಕೊಹ್ಲಿ ಅವರ ಬ್ಯಾಟಿಂಗ್ ಸರಾಸರಿ 77.75 ಆಗಿದ್ದು, ಅವರು ಪಾಕಿಸ್ತಾನದ ವಿರುದ್ಧ ಮೂರು T20 ಅರ್ಧಶತಕಗಳನ್ನು ಕೂಡ ಬಾರಿಸಿದ್ದಾರೆ.

2- ಏಷ್ಯಾಕಪ್ ಬಗ್ಗೆ ಮಾತನಾಡುವುದಾದರೆ, ವಿರಾಟ್ ಕೊಹ್ಲಿ ಪಾಕಿಸ್ತಾನದ ವಿರುದ್ಧ 68 ಕ್ಕಿಂತ ಸರಾಸರಿ ಹೊಂದಿದ್ದಾರೆ. ವಿರಾಟ್ 3 ಪಂದ್ಯಗಳಲ್ಲಿ 206 ರನ್ ಗಳಿಸಿದ್ದು, ಪಾಕಿಸ್ತಾನ ವಿರುದ್ಧ ಶತಕ ಕೂಡ ಸಿಡಿಸಿದ್ದಾರೆ. ವಿರಾಟ್ ಕೊಹ್ಲಿ ಏಷ್ಯಾಕಪ್‌ನಲ್ಲಿ ಪಾಕಿಸ್ತಾನದ ವಿರುದ್ಧ 183 ರನ್‌ಗಳ ಇನ್ನಿಂಗ್ಸ್‌ ಆಡಿದ್ದು, ಇದು ಏಕದಿನ ಕ್ರಿಕೆಟ್​ನಲ್ಲಿ ಅವರ ಅತ್ಯುತ್ತಮ ಪ್ರದರ್ಶನವಾಗಿದೆ.

ಇದನ್ನೂ ಓದಿ
Image
Asia Cup 2022: ಏಷ್ಯಾಕಪ್ ಇತಿಹಾಸದಲ್ಲಿ ಅತಿ ಹೆಚ್ಚು ರನ್ ಗಳಿಸಿರುವ ಟೀಂ ಇಂಡಿಯಾ ಕ್ರಿಕೆಟಿಗರಿವರು
Image
Asia Cup 2022: ಏಷ್ಯಾಕಪ್ ಕ್ವಾಲಿಫೈಯರ್‌ನಲ್ಲಿ ಕುವೈತ್​ಗೆ ಗೆಲುವು; ಯುಎಇ ಸೋಲಿಗೆ ಕಾರಣನಾದ ದಾವೂದ್‌..!
Image
Asia Cup 2022: ಏಷ್ಯಾಕಪ್​ನಲ್ಲಿ ಕ್ರಿಕೆಟ್ ಅಭಿಮಾನಿಗಳ ಕಣ್ಣು ಈ ಐದು ಆಟಗಾರರ ಮೇಲಿರಲಿದೆ

3- ವಿರಾಟ್ ಕೊಹ್ಲಿ ಏಕದಿನ-ಟಿ20 ಮಾದರಿಯಲ್ಲಿ ಪಾಕಿಸ್ತಾನ ವಿರುದ್ಧ ಒಟ್ಟು 2 ಶತಕಗಳನ್ನು ಗಳಿಸಿದ್ದಾರೆ. ಇದರೊಂದಿಗೆ 2 ಅರ್ಧಶತಕಗಳು ಕೂಡ ಅವರ ಬ್ಯಾಟ್‌ನಿಂದ ಹೊರಬಿದ್ದಿವೆ. ಸೀಮಿತ ಓವರ್‌ಗಳ ಪ್ರತಿಯೊಂದು ಸ್ವರೂಪದಲ್ಲಿ, ಪ್ರತಿ ಪಂದ್ಯಾವಳಿಯಲ್ಲಿ, ಕೊಹ್ಲಿ ಪಾಕಿಸ್ತಾನದ ವಿರುದ್ಧ ಅದ್ಭುತ ಪ್ರದರ್ಶನ ನೀಡಿದ್ದಾರೆ.

4- ಭಾರತ-ಪಾಕಿಸ್ತಾನ ಹಣಾಹಣಿ ನಡೆಯಲಿರುವ ದುಬೈ ಮೈದಾನದಲ್ಲಿ ವಿರಾಟ್ ಕೊಹ್ಲಿ ಭರ್ಜರಿ ಅರ್ಧಶತಕ ಸಿಡಿಸಿದ್ದಾರೆ. ಈ ಅರ್ಧಶತಕ 2021 ರ T20 ವಿಶ್ವಕಪ್‌ನಲ್ಲಿ ಪಾಕಿಸ್ತಾನದ ವಿರುದ್ಧ ಬಂದಿತು. ಭಾರತ ಆ ಪಂದ್ಯದಲ್ಲಿ ರೋಹಿತ್-ಕೆಎಲ್ ರಾಹುಲ್, ಸೂರ್ಯಕುಮಾರ್ ಅವರ ವಿಕೆಟ್‌ಗಳನ್ನು ಬೇಗನೆ ಕಳೆದುಕೊಂಡಿತ್ತು ಆದರೆ ವಿರಾಟ್ ಕೊಹ್ಲಿ ತಂಡವನ್ನು ನಿಭಾಯಿಸುವ ಸಂದರ್ಭದಲ್ಲಿ 57 ರನ್‌ಗಳ ಇನ್ನಿಂಗ್ಸ್‌ನೊಂದಿಗೆ ತಂಡವನ್ನು ಮುನ್ನಡೆಸಿದರು. ಆದರೆ, ಈ ಪಂದ್ಯದಲ್ಲಿ ಟೀಂ ಇಂಡಿಯಾ ಸೋಲನುಭವಿಸಬೇಕಾಯಿತು.

Published On - 7:17 pm, Wed, 24 August 22