Marnus Labuschagne: ಭಾರತದ ಕ್ರಿಕೆಟ್ ಫ್ಯಾನ್ಸ್ ಬಗ್ಗೆ ಆಸ್ಟ್ರೇಲಿಯಾ ಕ್ರಿಕೆಟಿಗ ಲಾಬುಶೇನ್ ಹೇಳಿದ್ದೇನು?

Marnus Labuschagne: ವಿರಾಟ್ ಕೊಹ್ಲಿ ವಿಷಯದಲ್ಲೂ ಅದೇ ಆಗಿದೆ ಎಂದು ಭಾವಿಸುತ್ತೇನೆ. ಕೊಹ್ಲಿ ಅತ್ಯುತ್ತಮ ಆಟಗಾರ. ಮುಂಬರುವ ಕೆಲ ವರ್ಷಗಳಲ್ಲಿ ಅವರು ಸಾಕಷ್ಟು ರನ್ ಗಳಿಸಲಿದ್ದಾರೆ.

Marnus Labuschagne: ಭಾರತದ ಕ್ರಿಕೆಟ್ ಫ್ಯಾನ್ಸ್ ಬಗ್ಗೆ ಆಸ್ಟ್ರೇಲಿಯಾ ಕ್ರಿಕೆಟಿಗ ಲಾಬುಶೇನ್ ಹೇಳಿದ್ದೇನು?
Marnus Labuschagne
Follow us
TV9 Web
| Updated By: ಝಾಹಿರ್ ಯೂಸುಫ್

Updated on: Aug 24, 2022 | 4:09 PM

ಮಾರ್ನಸ್ ಲಾಬುಶೇನ್…ಟೆಸ್ಟ್ ಕ್ರಿಕೆಟ್ ಪ್ರೇಮಿಗಳಿಗೆ ಈ ಹೆಸರು ಚಿರಪರಿಚಿತ. ಏಕೆಂದರೆ ಹೊಸ ತಲೆಮಾರಿನ ಅತ್ಯುತ್ತಮ ಟೆಸ್ಟ್​ ಪ್ಲೇಯರ್​ಗಳಲ್ಲಿ ಮಾರ್ನಸ್ ಕೂಡ ಒಬ್ಬರು. ಇದೇ ಕಾರಣದಿಂದಾಗಿ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಕೂಡ ಮಾರ್ನಸ್ ಲಾಬುಶೇನ್ ಅವರಲ್ಲಿ ವಿಶೇಷ ಬ್ಯಾಟಿಂಗ್ ಸಾಮರ್ಥ್ಯವಿದೆ ಎಂದಿದ್ದರು. ಕುತೂಹಲಕಾರಿ ಸಂಗತಿಯೆಂದರೆ ಮಾರ್ನಸ್ ಬ್ಯಾಟಿಂಗ್ ಮಾಡುವಾಗ ಕಿರುಚಾಡುತ್ತಾ, ನಗಿಸುತ್ತಾ, ಬೌಲರುಗಳನ್ನು ಕೆಣಕುತ್ತಾ ಬ್ಯಾಟ್ ಬೀಸುವ ಆಟಗಾರ ಎಂಬುದು.

ಬ್ಯಾಟಿಂಗ್ ಮಾಡುವಾಗ ಇಷ್ಟೆಲ್ಲಾ ಕೀಟಲೆ ಮಾಡಿದ್ರೂ ತನ್ನ ಬ್ಯಾಟಿಂಗ್​ ಮೇಲೆ ಏಕಾಗ್ರತೆಯನ್ನು ಕಳೆದುಕೊಳ್ಳುವುದಿಲ್ಲ ಎಂಬುದು ವಿಶೇಷ. ಇದಕ್ಕೆ ಸಾಕ್ಷಿಯೇ ಇದೀಗ ಟೆಸ್ಟ್​ ಕ್ರಿಕೆಟ್​ ಶ್ರೇಯಾಂಕದಲ್ಲಿ ಮಾರ್ನಸ್ ಲಾಬುಶೇನ್ 2ನೇ ಸ್ಥಾನದಲ್ಲಿದ್ದಾರೆ. ಟಿವಿ9 ನ ಅಂಗಸಂಸ್ಥೆ ನ್ಯೂಸ್​9 ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಅದರಲ್ಲೂ ವಿರಾಟ್ ಕೊಹ್ಲಿಯ ಫಾರ್ಮ್​ ಬಗ್ಗೆ ಕೂಡ ಮಾತನಾಡಿದ್ದಾರೆ. ಹಾಗಿದ್ರೆ ಕಿಂಗ್ ಕೊಹ್ಲಿ ಬಗ್ಗೆ ಲಾಬುಶೇನ್ ಹೇಳಿದ್ದೇನು…?

ವಿರಾಟ್ ಕೊಹ್ಲಿಯ ಫಾರ್ಮ್​ ಬಗ್ಗೆ ಕೇಳಿದಾಗ, ಅವರೊಬ್ಬರು ಅದ್ಭುತ ಆಟಗಾರ. ನೀವು ಅವರ ಫಾರ್ಮ್​ ಅನ್ನು ನಿರ್ಧರಿಸುವುದು ಶತಕ ಬಾರಿಸಿಲ್ಲ ಎಂಬ ವಿಚಾರದಿಂದ. ಇದೇ ರೀತಿಯಲ್ಲಿ ಸ್ಟೀವ್ ಸ್ಮಿತ್ ಅವರನ್ನು ಟೀಕಿಸಲಾಗಿತ್ತು. ಆದರೆ ಅವರು ಆ ಸಂದರ್ಭದಲ್ಲಿ ಅವರು ಅರ್ಧಶತಕದೊಂದಿಗೆ ಉತ್ತಮವಾಗಿಯೇ ಬ್ಯಾಟ್ ಮಾಡುತ್ತಿದ್ದರು.

ಇದನ್ನೂ ಓದಿ
Image
RCB ತಂಡದ ಮೊದಲ ಪ್ಲೇಯಿಂಗ್ ಇಲೆವೆನ್​ನಲ್ಲಿ ಯಾರೆಲ್ಲಾ ಇದ್ದರು ಗೊತ್ತಾ?
Image
Team India: ಟೀಮ್ ಇಂಡಿಯಾದ ಸರ್ವಶ್ರೇಷ್ಠ ಆರಂಭಿಕ ಆಟಗಾರ ಯಾರು ಗೊತ್ತಾ?
Image
Sanju Samson: ಧೋನಿ, ದ್ರಾವಿಡ್​ಗೂ ಸಾಧ್ಯವಾಗದ ದಾಖಲೆ ನಿರ್ಮಿಸಿದ ಸಂಜು ಸ್ಯಾಮ್ಸನ್
Image
T20 World Cup 2022: ಟಿ20 ವಿಶ್ವಕಪ್​ನಲ್ಲಿ ಕಣಕ್ಕಿಳಿಯುವ 16 ತಂಡಗಳು ಫೈನಲ್

ಇಲ್ಲಿ ವಿರಾಟ್ ಕೊಹ್ಲಿ ವಿಷಯದಲ್ಲೂ ಅದೇ ಆಗಿದೆ ಎಂದು ಭಾವಿಸುತ್ತೇನೆ. ಕೊಹ್ಲಿ ಅತ್ಯುತ್ತಮ ಆಟಗಾರ. ಮುಂಬರುವ ಕೆಲ ವರ್ಷಗಳಲ್ಲಿ ಅವರು ಸಾಕಷ್ಟು ರನ್ ಗಳಿಸಲಿದ್ದಾರೆ. ಹಾಗೆಯೇ ಶತಕಗಳನ್ನು ಬಾರಿಸಲಿದ್ದಾರೆ ಎಂಬುದರ ಬಗ್ಗೆ ನನಗೆ ಖಚಿತತೆ ಇದೆ. ಆದರೆ, ಅದು ಆಸ್ಟ್ರೇಲಿಯಾ ವಿರುದ್ದ ಆಗದಿರಲಿ ಎಂದು ಬಯಸುತ್ತೇನೆ ಎಂದು ಲಾಬುಶೇನ್ ನಕ್ಕರು.

ಇದೇ ವೇಳೆ ಆಸ್ಟ್ರೇಲಿಯ ಆಟಗಾರನಿಗೆ ಒಂದಷ್ಟು ರ್ಯಾಪಿಡ್ ಫೈರ್ ಪ್ರಶ್ನೆಗಳನ್ನು ಕೇಳಲಾಗಿತ್ತು. ಈ ಪ್ರಶ್ನೋತ್ತರಗಳು ಈ ಕೆಳಗಿನಂತಿವೆ…

  • 1- ವಿರಾಟ್ ಕೊಹ್ಲಿ, ಸ್ಟೀವ್ ಸ್ಮಿತ್, ಜೋ ರೂಟ್, ಕೇನ್ ವಿಲಿಯಮ್ಸನ್, ಬಾಬರ್ ಅಜಮ್ …ಟೆಸ್ಟ್​ ಕ್ರಿಕೆಟ್​ನಲ್ಲಿ ಇವರಿಗೆ ಯಾವ ರ್ಯಾಂಕ್ ನೀಡುತ್ತೀರಿ? ಉತ್ತರ: 1- ಸ್ಟೀವ್ ಸ್ಮಿತ್, 2- ವಿರಾಟ್ ಕೊಹ್ಲಿ, 3- ಜೋ ರೂಟ್, 4- ಬಾಬರ್ ಆಜಂ, 5- ಕೇನ್​ ವಿಲಿಯಮ್ಸನ್
  • 2- ಎಲ್ಲಿ ಶತಕ ಬಾರಿಸಲು ಬಯಸುತ್ತೀರಿ? ಇಂಗ್ಲೆಂಡ್‌ನಲ್ಲಿ ಅಥವಾ ಭಾರತದಲ್ಲಿ? ಉತ್ತರ: ಲಾರ್ಡ್ಸ್‌ನಲ್ಲಿ ಇಂಗ್ಲೆಂಡ್ ವಿರುದ್ದ ಶತಕ ಬಾರಿಸುವುದನ್ನು ಎದುರು ನೋಡುತ್ತಿದ್ದೇನೆ.
  • 3- ಆ್ಯಶಸ್ ಅಥವಾ ವಿಶ್ವಕಪ್ ಗೆಲ್ಲುವುದು? ಯಾವುದು ನಿಮ್ಮ ಗುರಿ? ಉತ್ತರ: ಇಂಗ್ಲೆಂಡ್​ನಲ್ಲಿ ಆ್ಯಶಸ್ ಸರಣಿ ಗೆಲ್ಲುವುದು.
  • 4- ಪ್ರಸ್ತುತ ಅತ್ಯುತ್ತಮ ಟೆಸ್ಟ್ ಬೌಲರ್ ಯಾರು? ಉತ್ತರ: ಪ್ಯಾಟ್ ಕಮಿನ್ಸ್ (ಆಸ್ಟ್ರೇಲಿಯಾ)
  • 5- ಕ್ರಿಕೆಟ್ ಹೊರತಾಗಿ ನಿಮ್ಮ ನೆಚ್ಚಿನ ಕ್ರೀಡಾಪಟು? ಉತ್ತರ: ರೋಜರ್ ಫೆಡರರ್ (ಟೆನಿಸ್)
  • 6- ನಿಮಗೆ ಕ್ರೇಜಿ ಫ್ಯಾನ್ಸ್​ ಅನುಭವ ಆಗಿದೆಯಾ? ಉತ್ತರ: ಹಲವು ಬಾರಿ ಆಗಿವೆ. ಭಾರತದಲ್ಲಿನ ಅಭಿಮಾನಿಗಳನ್ನು ನೋಡುತ್ತಿದ್ದರೆ, ಅದೊಂದು ಅದ್ಭುತ ಅನುಭವ. ಆಟದ ಮೇಲಿನ ಪ್ರೀತಿ ಮತ್ತು ಉತ್ಸಾಹ ಮತ್ತು ಆಟಗಾರರ ಮೇಲಿನ ಗೌರವ..ನಿಜವಾಗಿಯೂ ನಾನು ಭಾರತೀಯ ಅಭಿಮಾನಿಗಳನ್ನು ಸಿಕ್ಕಾಪಟ್ಟೆ ಇಷ್ಟಪಡುತ್ತೇನೆ ಎಂದು ಮಾರ್ನಸ್ ಲಾಬುಶೇನ್ ತಿಳಿಸಿದ್ದಾರೆ.
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್