Shubman Gill and Sara Tendulkar: ಇನ್​​ಸ್ಟಾಗ್ರಾಂನಲ್ಲಿ ಅನ್ ಫಾಲೋ! ಬ್ರೇಕಪ್ ಮಾಡಿಕೊಂಡ್ರಾ ಸಾರಾ- ಶುಭ್​ಮನ್?

Shubman Gill and Sara Tendulkar: ಆದರೆ ಗಿಲ್ ಮತ್ತು ಸಾರಾ ತೆಂಡೂಲ್ಕರ್ ಈಗ ಸಖತ್ ಸುದ್ದಿಯಲ್ಲಿದ್ದು, ಇದಕ್ಕೆ ಪ್ರಮುಖ ಕಾರಣ ಈ ಇಬ್ಬರೂ ಸೋಶಿಯಲ್ ಮೀಡಿಯಾದಲ್ಲಿ ಪರಸ್ಪರ ಒಬ್ಬರನೊಬ್ಬರ ಅನ್ ಫಾಲೋ ಮಾಡಿದ್ದಾರೆ ಎಂಬುದಾಗಿದೆ.

TV9 Web
| Updated By: ಪೃಥ್ವಿಶಂಕರ

Updated on: Aug 24, 2022 | 6:13 PM

ಭಾರತದ ಯುವ ಓಪನರ್ ಶುಭ್​ಮನ್ ಗಿಲ್ ಹಾಗೂ ಸಚಿನ್ ತೆಂಡೂಲ್ಕರ್ ಅವರ ಪುತ್ರಿ ಸಾರಾ ತೆಂಡೂಲ್ಕರ್ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಈ ಇಬ್ಬರ ಹೆಸರುಗಳು ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಟ್ರೆಂಡ್ ಆಗಿವೆ. ಈ ಹಿಂದೆಯೂ ಕೂಡ ಇವರಿಬ್ಬರ ನಡುವಿನ ಪ್ರೇಮ ಕಾವ್ಯಾದ ಬಗ್ಗೆ ಹಲವು ಊಹಾಪೋಹಗಳು ಎದ್ದಿದ್ದವು

1 / 5
ಗಿಲ್ ಇತ್ತೀಚೆಗೆ ಮುಕ್ತಾಯಗೊಂಡ ಜಿಂಬಾಬ್ವೆ ವಿರುದ್ಧ ಏಕದಿನ ಸರಣಿಯಲ್ಲಿ ಅದ್ಭುತ ಪ್ರದರ್ಶನ ನೀಡಿ, ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ಗೆದ್ದಿದ್ದರು. ಜೊತೆಗೆ ತಮ್ಮ ವೃತ್ತಿಜೀವನದ ಮೊದಲ ಶತಕ ಬಾರಿಸುವುದರೊಂದಿಗೆ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ದಾಖಲೆಯನ್ನೂ ಸಹ ಮುರಿದಿದ್ದರು.

2 / 5
ಆದರೆ ಗಿಲ್ ಮತ್ತು ಸಾರಾ ತೆಂಡೂಲ್ಕರ್ ಈಗ ಸಖತ್ ಸುದ್ದಿಯಲ್ಲಿದ್ದು, ಇದಕ್ಕೆ ಪ್ರಮುಖ ಕಾರಣ ಈ ಇಬ್ಬರೂ ಸೋಶಿಯಲ್ ಮೀಡಿಯಾದಲ್ಲಿ ಪರಸ್ಪರ ಒಬ್ಬರನೊಬ್ಬರ ಅನ್ ಫಾಲೋ ಮಾಡಿದ್ದಾರೆ ಎಂಬುದಾಗಿದೆ. ಈ ಸುದ್ದಿ ಈಗ ಕಾಡ್ಗಿಚ್ಚಿನಂತೆ ಹಬ್ಬಲಾರಂಭಿಸಿದ್ದು, ಇವರಿಬ್ಬರ ಮಧ್ಯೆ ಬ್ರೇಕ್​ಅಪ್ ಆಗಿದೆ ಎಂಬ ಊಹಾಪೋಹಗಳು ಹರಿದಾಡುತ್ತಿವೆ.

3 / 5
2019 ರ ಐಪಿಎಲ್ ಸಮಯದಲ್ಲಿ ಇಬ್ಬರೂ ಮೊದಲ ಬಾರಿಗೆ ಸೋಶಿಯಲ್  ಮೀಡಿಯಾದ ಗಮನ ಸೆಳೆದಿದ್ದರು. ಇದಾದ ನಂತರ ಅವರಿಬ್ಬರ ಸಂಬಂಧದ ಬಗ್ಗೆ ಸುದ್ದಿ ಬರಲಾರಂಭಿಸಿತು. ಆದರೆ, ಈ ವರದಿಗಳಿಗೆ ಸಾರಾ ಮತ್ತು ಶುಭಮನ್ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ.

4 / 5
ಈ ಹಿಂದೆ, ಸಾರಾ ಕೂಡ ಶುಭ್​ಮನ್ ಗಿಲ್ ಅವರ ಪೋಸ್ಟ್‌ಗೆ ಕಾಮೆಂಟ್ ಮಾಡಿದ್ದರು. ಅವರ ಕಾಮೆಂಟ್‌ಗೆ ಶುಭಮನ್ ಗಿಲ್ ಕೂಡ ಪ್ರತಿಕ್ರಿಯಿಸಿದ್ದರು. ಆ ಬಳಿಕ ಈ ಇಬ್ಬರ ಮಧ್ಯೆ ಪ್ರೇಮಾಂಕುರವಾಗಿದೆ ಎಂದು ಸಾಕಷ್ಟು ಜನ ಮಾತನಾಡಿಕೊಳ್ಳಲು ಆರಂಭಿಸಿದ್ದರು.

5 / 5
Follow us