Virat Kohli: ಅಭ್ಯಾಸದ ವೇಳೆ ಜಡೇಜಾ, ಚಹಲ್ ಬೌಲಿಂಗ್​ನಲ್ಲಿ ವಿರಾಟ್ ಕೊಹ್ಲಿಯಿಂದ ಸಿಕ್ಸರ್​ಗಳ ಸುರಿಮಳೆ: ವಿಡಿಯೋ

Asia Cup 2022: ಏಷ್ಯಾಕಪ್ 2022ಕ್ಕಾಗಿ ಯುಎಇನಲ್ಲಿ ಬುಧವಾರ ಟೀಮ್ ಇಂಡಿಯಾ ಮೊದಲ ಟ್ರೈನಿಂಗ್ ಸೆಷನ್ ನಡೆಸಿದೆ. ಇದರಲ್ಲಿ ವಿರಾಟ್ ಕೊಹ್ಲಿ ಅವರ ಹೊಡೆತವನ್ನು ಕಂಡು ಅಭಿಮಾನಿಗಳಂತು ಶಾಕ್ ಆಗಿದ್ದಾರೆ. ಇಲ್ಲಿದೆ ನೋಡಿ ವಿಡಿಯೋ

Virat Kohli: ಅಭ್ಯಾಸದ ವೇಳೆ ಜಡೇಜಾ, ಚಹಲ್ ಬೌಲಿಂಗ್​ನಲ್ಲಿ ವಿರಾಟ್ ಕೊಹ್ಲಿಯಿಂದ ಸಿಕ್ಸರ್​ಗಳ ಸುರಿಮಳೆ: ವಿಡಿಯೋ
Virat Kohli Asia Cup 2022
Follow us
TV9 Web
| Updated By: Vinay Bhat

Updated on:Aug 25, 2022 | 8:27 AM

ಕ್ರಿಕೆಟ್ ಅಭಿಮಾನಿಗಳು ತುದಿಗಾಲಿನಲ್ಲಿ ನಿಂತು ಕಾಯುತ್ತಿರುವ ಬಹುನಿರೀಕ್ಷಿತ ಏಷ್ಯಾಕಪ್ 2022 (Asia Cup 2022) ಟೂರ್ನಿ ಆರಂಭಕ್ಕೆ ಕ್ಷಣಗಣನೆ ಶುರುವಾಗಿದೆ. ಇದರ ಮೂಲಕ ಟೀಮ್ ಇಂಡಿಯಾ ಚುಟುಕು ಕ್ರಿಕೆಟ್​ಗೆ ಮತ್ತೆ ಮರಳುತ್ತಿದೆ. ಆಗಸ್ಟ್ 28 ರಂದು ಭಾರತ ತಂಡ ಬದ್ದ ವೈರಿ ಪಾಕಿಸ್ತಾನ (India vs Pakistan) ವಿರುದ್ಧ ಆಡುವ ಮೂಲಕ ತನ್ನ ಅಭಿಯಾನ ಆರಂಭಿಸಲಿದೆ. ಅನೇಕ ಕಾರಣಗಳಿಂದ ಈ ಟೂರ್ನಿ ಟೀಮ್ ಇಂಡಿಯಾಕ್ಕೆ ಮುಖ್ಯವಾಗಿದೆ. ರೋಹಿತ್ ಶರ್ಮಾ ಪರಿಪೂರ್ಣ ನಾಯಕನಾಗಿ ಮೊದಲ ಬಾರಿ ಏಷ್ಯಾಕಪ್​ನಲ್ಲಿ ತಂಡವನ್ನು ಮುನ್ನಡೆಸುತ್ತಿದ್ದರೆ, ವಿರಾಟ್ ಕೊಹ್ಲಿ (Virat Kohli) ಕಮ್​ಬ್ಯಾಕ್ ಮಾಡಲೇಬೇಕಾದ ಒತ್ತಡದಲ್ಲಿದ್ದಾರೆ. ಕಳಪೆ ಫಾರ್ಮ್ ಮಧ್ಯೆ ವಿಶ್ರಾಂತಿ ಪಡೆದುಕೊಂಡು ಇದೀಗ ಏಷ್ಯಾಕಪ್​ನಲ್ಲಿ ಕಣಕ್ಕಿಳಿಯಲಿರುವ ಕೊಹ್ಲಿಗೆ ಈ ಟೂರ್ನಿ ಮಹತ್ವದ್ದಾಗಿದೆ. ಇದಕ್ಕಾಗಿ ಭರ್ಜರಿ ಅಭ್ಯಾಸದಲ್ಲಿ ಕೂಡ ನಿರತರಾಗಿದ್ದಾರೆ.

ಯುಎಇನಲ್ಲಿ ಬುಧವಾರ ಭಾರತದ ಮೊದಲ ಟ್ರೈನಿಂಗ್ ಸೆಷನ್ ನಡೆಸಲಾಗಿದೆ. ಇದರಲ್ಲಿ ಕೊಹ್ಲಿಯ ಹೊಡೆತವನ್ನು ಕಂಡು ಅಭಿಮಾನಿಗಳಂತು ಶಾಕ್ ಆಗಿದ್ದಾರೆ. ಯುಜ್ವೇಂದ್ರ ಚಹಲ್, ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್ ಅವರ ಬೌಲಿಂಗ್​ಗೆ ಮುಂದೆ ಬಂದು ಭರ್ಜರಿ ಶಾಟ್ ಹೊಡೆದಿದ್ದು ಚೆಂಡು ಬೌಂಡರಿ ಗೆರೆ ದಾಟಿದೆ. ಇದರ ವಿಡಿಯೋವನ್ನು ಯೂಟ್ಯೂಬ್​ನಲ್ಲಿ ಶೇರ್ ಮಾಡಿಕೊಳ್ಳಲಾಗಿದ್ದು, ಸಖತ್ ವೈರಲ್ ಆಗುತ್ತಿದೆ. ಕೊಹ್ಲಿಯ ಬ್ಯಾಟಿಂಗ್ ವೈಖರಿ ಕಂಡು ಈ ಬಾರಿ ಇವರು ಅಬ್ಬರಿಸುವುದು ಖಚಿತ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ.

ಇದನ್ನೂ ಓದಿ
Image
Asia cup 2022: ಏಷ್ಯಾಕಪ್​ಗೂ ಮುನ್ನ ಟೀಮ್ ಇಂಡಿಯಾದಲ್ಲಿ ದೊಡ್ಡ ಬದಲಾವಣೆ: ಹೊಸ ಕೋಚ್
Image
Hardik Pandya: ಖಾಸಗಿ ಜೆಟ್‌, ದುಬಾರಿ ಕಾರು; ಹಾರ್ದಿಕ್ ಪಾಂಡ್ಯರ ಐಷಾರಾಮಿ ಜೀವನದ ವಿಡಿಯೋ ನೋಡಿ
Image
ನ್ಯೂಜಿಲೆಂಡ್ ವಿರುದ್ಧದ ಸರಣಿಗೆ ಭಾರತ ತಂಡ ಪ್ರಕಟ; ಪ್ರಿಯಾಂಕ್ ಪಾಂಚಾಲ್​ಗೆ ನಾಯಕತ್ವ
Image
ಇಂಜುರಿಂದ ಗುಣಮುಖರಾದ ರಹಾನೆಗೆ ನಾಯಕತ್ವ; ಶ್ರೇಯಸ್, ಶಾರ್ದೂಲ್, ಜೈಸ್ವಾಲ್​ಗೂ ತಂಡದಲ್ಲಿ ಸ್ಥಾನ

ಯುಎಇಗೆ ತೆರಳುವ ಮುನ್ನ ಕೂಡ ಕೊಹ್ಲಿ ಭಾರತದಲ್ಲಿ ಸಾಕಷ್ಟು ಬೆವರಿಳಿಸಿದ್ದರು. ಜಿಮ್​​​ ಹಾಗೂ ಒಳಾಂಗಣ ಕ್ರೀಡಾಂಗಣದಲ್ಲಿ ತಯಾರಿ ನಡೆಸುತ್ತಿರುವ ವಿಡಿಯೋ ವೈರಲ್ ಆಗಿತ್ತು. ಅಲ್ಲದೆ ವೇಟ್‌ಲಿಫ್ಟಿಂಗ್ ಕೌಶಲ್ಯ ಪ್ರದರ್ಶಿಸಿ ಎಲ್ಲರನ್ನೂ ದಂಗಾಗಿಸಿದ್ದರು. ಇದರ ನಡುವೆ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಕಣಕ್ಕಿಳಿಯುವ ಮೂಲಕ ಕೊಹ್ಲಿ​​ 100ನೇ ಟಿ20 ಅಂತರರಾಷ್ಟ್ರೀಯ ಪಂದ್ಯ ಆಡಿರುವ ಸಾಧನೆ ಮಾಡುವರು. ಜೊತೆಗೆ ಈ ರೆಕಾರ್ಡ್ ನಿರ್ಮಿಸುವ ಎರಡನೇ ಭಾರತೀಯ ಆಟಗಾರನಾಗಲಿದ್ದಾರೆ.

ಇನ್ನು ಏಷ್ಯಾಕಪ್​​​​​ ಏಕದಿನ ಟೂರ್ನಿಯಲ್ಲಿ ಕೊಹ್ಲಿ ಪ್ರದರ್ಶನ ಅದ್ಭುತವಾಗಿದೆ. 10 ಪಂದ್ಯಗಳಲ್ಲಿ 61.30ರ ಸರಾಸರಿಯಲ್ಲಿ 613 ರನ್​ ಸಿಡಿಸಿದ್ದಾರೆ. 3 ಶತಕ, 1 ಅರ್ಧಶತಕ ಬಾರಿಸಿದ್ದಾರೆ. ಏಷ್ಯಾಕಪ್​​ T20ಯಲ್ಲಿ ಆಡಿದ್ದು ಕಡಿಮೆ ಪಂದ್ಯಗಳಾದರೂ, ಭರ್ಜರಿ ಸರಾಸರಿ ಹೊಂದಿದ್ದಾರೆ. ಕೊಹ್ಲಿ 4 ಪಂದ್ಯಗಳಲ್ಲಿ ಬ್ಯಾಟ್​ ಬೀಸಿದ್ದು, 76.50ರ ಸರಾಸರಿಯಲ್ಲಿ 153 ರನ್​​ ಕಲೆ ಹಾಕಿದ್ದಾರೆ. ಅಜೇಯ 56 ರನ್,​ ಕೊಹ್ಲಿಯ ಬೆಸ್ಟ್​ ಸ್ಕೋರ್​ ಆಗಿದೆ.

ಲಕ್ಷ್ಮಣ್ ಹಂಗಾಮಿ ಕೋಚ್:

ಟೀಮ್ ಇಂಡಿಯಾ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರಿಗೆ ಕೋವಿಡ್ ಪಾಸಿಟಿವ್ ಕಾಣಿಸಿಕೊಂಡ ಕಾರಣ ದುಬೈಗೆ ಪ್ರಯಾಣ ಬೆಳೆಸಿಲ್ಲ. ದ್ರಾವಿಡ್ ಅಲಭ್ಯತೆಯಿರುವ ಕಾರಣ ತಂಡಕ್ಕೆ ಇದೀಗ ಹೊಸ ಕೋಚ್ ನೇಮಕ ಮಾಡಲಾಗಿದೆ. ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ ಮುಖ್ಯಸ್ಥ ವಿವಿಎಸ್ ಲಕ್ಷ್ಮಣ್ ಅವರನ್ನು ಏಷ್ಯಾಕಪ್ ಟಿ20 ಟೂರ್ನಿಯಲ್ಲಿ ಆಡಲಿರುವ ಭಾರತ ತಂಡಕ್ಕೆ ಹಂಗಾಮಿ ಮುಖ್ಯ ಕೋಚ್ ಆಗಿ ನೇಮಕ ಮಾಡಲಾಗಿದೆ. ಈ ಬಗ್ಗೆ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಖಚಿತ ಪಡಿಸಿದ್ದಾರೆ.

Published On - 8:26 am, Thu, 25 August 22