Asia Cup 2022: ಏಷ್ಯಾಕಪ್​ಗೆ ಕ್ವಾಲಿಫೈ ಆದ ಹಾಂಗ್​ ಕಾಂಗ್ ತಂಡ: ಭಾರತ-ಪಾಕ್ ವಿರುದ್ಧ ಸೆಣೆಸಾಟಕ್ಕೆ ಸಜ್ಜು

Hong Kong vs United Arab Emirates: ಏಷ್ಯಾಕಪ್​ಗೆ ಕ್ವಾಲಿಫೈ ಆಗಲು ನಡೆದ ಏಷ್ಯಾಕಪ್ ಕ್ವಾಲಿಫೈಯರ್ ಪಂದ್ಯದಲ್ಲಿ ಗೆದ್ದ ಹಾಂಕ್ ಗಾಂಗ್ ತಂಡ ಗ್ರೂಪ್ ಎ ನಲ್ಲಿ ಭಾರತ, ಪಾಕಿಸ್ತಾನ ಜೊತೆ ಸ್ಥಾನ ಪಡೆದುಕೊಂಡಿದೆ.

Asia Cup 2022: ಏಷ್ಯಾಕಪ್​ಗೆ ಕ್ವಾಲಿಫೈ ಆದ ಹಾಂಗ್​ ಕಾಂಗ್ ತಂಡ: ಭಾರತ-ಪಾಕ್ ವಿರುದ್ಧ ಸೆಣೆಸಾಟಕ್ಕೆ ಸಜ್ಜು
Hong Kong Cricket Team
Follow us
TV9 Web
| Updated By: Vinay Bhat

Updated on: Aug 25, 2022 | 10:38 AM

ಬಹುನಿರೀಕ್ಷಿತ ಏಷ್ಯಾಕಪ್ 2022 (Asia Cup 2022) ಟೂರ್ನಿಗೆ ಆಗಸ್ಟ್ 27ಕ್ಕೆ ಚಾಲನೆ ಸಿಗಲಿದೆ. ಮೊದಲ ಪಂದ್ಯದಲ್ಲಿ ಶ್ರೀಲಂಕಾ ಹಾಗೂ ಅಫ್ಘಾನಿಸ್ತಾನ ತಂಡ ಮುಖಾಮುಖಿ ಆಗಲಿದೆ. ಇದಕ್ಕೂ ಮುನ್ನ ಏಷ್ಯಾಕಪ್​ಗೆ ಕ್ವಾಲಿಫೈ ಆಗಲು ನಡೆದ ಏಷ್ಯಾಕಪ್ ಕ್ವಾಲಿಫೈಯರ್ ಪಂದ್ಯದಲ್ಲಿ ಗೆದ್ದ ಹಾಂಕ್ ಗಾಂಗ್ (Hong Kong) ತಂಡ ಗ್ರೂಪ್ ಎ ನಲ್ಲಿ ಭಾರತ, ಪಾಕಿಸ್ತಾನ (India vs Pakistan) ಜೊತೆ ಸ್ಥಾನ ಪಡೆದುಕೊಂಡಿದೆ. ಯುನೈಟೆಡ್ ಅರಬ್ ಎಮಿರೇಟ್ಸ್ ತಂಡದ ವಿರುದ್ಧ ನಡೆದ ಪಂದ್ಯದಲ್ಲಿ ಹಾಂಕ್ ಗಾಂಗ್ 8 ವಿಕೆಟ್​ಗಳ ಭರ್ಜರಿ ಗೆಲುವು ಸಾಧಿಸಿ ಏಷ್ಯಾಕಪ್​ಗೆ ಲಗ್ಗೆಯಿಟ್ಟಿದೆ.

ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಯುನೈಟೆಡ್ ಅರಬ್ ಎಮಿರೇಟ್ಸ್ ತಂಡ 19.3 ಓವರ್​ಗಳಲ್ಲಿ 147 ರನ್​ಗೆ ಆಲೌಟ್ ಆಯಿತು. ತಂಡದ ಪರ ನಾಯಕ ಸಿ. ರಿಜ್ವಾನ್ 44 ಎಸೆತಗಳಲ್ಲಿ 49 ರನ್ ಗಳಿಸಿದರೆ, ಜವಾರ್ ಫಾರಿದ್ 27 ಎಸೆತಗಳಲ್ಲಿ 41 ರನ್ ಸಿಡಿಸಿದರು. ಉಳಿದ ಬ್ಯಾಟರ್​ಗಳೆಲ್ಲ ಸಂಪೂರ್ಣ ವೈಫಲ್ಯ ಅನುಭವಿಸಿದರು. ಹಾಂಕ್ ಕಾಂಗ್ ಪರ ಎಸ್ ಖಾನ್ 4 ವಿಕೆಟ್ ಕಿತ್ತರೆ, ಆಯುಶ್ ಶುಕ್ಲಾ 3 ವಿಕೆಟ್ ಪಡೆದರು.

148 ರನ್​ಗಳ ಸಾಧಾರಣ ಟಾರ್ಗೆಟ್ ಬೆನ್ನಟ್ಟಿದ ಹಾಂಕ್ ಕಾಂಗ್ ತಂಡ ಭರ್ಜರಿ ಆರಂಭ ಪಡೆದುಕೊಂಡಿತು. ಓಪನರ್​ಗಳಾದ ನಾಯಕ ನಿಜಕತ್ ಖಾನ್ ಹಾಗೂ ಯಾಸಿಮ್ ಮುರ್ತಾಜ ಬೊಂಬಾಟ್ ಬ್ಯಾಟಿಂಗ್ ನಡೆಸಿದರು. ಇವರಿಬ್ಬರು 10.5 ಓವರ್​ನಲ್ಲಿ 85 ರನ್​ಗಳ ಕಾಣಿಕೆ ನೀಡಿದರು. ನಿಜಕತ್ 39 ಎಸೆತಗಳಲ್ಲಿ 39 ರನ್ ಗಳಿಸಿ ಔಟಾದರೆ, ಮುರ್ತಾಜ 43 ಎಸೆತಗಳಲ್ಲಿ 58 ರನ್ ಸಿಡಿಸಿದರು. ನಂತರ ಬಂದ ಬಾಬರ್ ಹಯಾತ್ 26 ಎಸೆತಗಳಲ್ಲಿ ಅಜೇಯ 38 ರನ್ ಹಾಗೂ ಕಿಂಚಿತ್ ಶಾ ಅಜೇಯ 6 ರನ್ ಗಳಿಸಿ ತಂಡಕ್ಕೆ 19 ಓವರ್​ನಲ್ಲೇ ಗೆಲುವು ತಂದಿಟ್ಟರು.

ಇದನ್ನೂ ಓದಿ
Image
Virat Kohli: ಅಭ್ಯಾಸದ ವೇಳೆ ಮೈದಾನದಲ್ಲಿ ಮುಖಾಮುಖಿಯಾದ ವಿರಾಟ್ ಕೊಹ್ಲಿ-ಬಾಬರ್ ಅಜಮ್
Image
Virat Kohli: ಅಭ್ಯಾಸದ ವೇಳೆ ಜಡೇಜಾ, ಚಹಲ್ ಬೌಲಿಂಗ್​ನಲ್ಲಿ ವಿರಾಟ್ ಕೊಹ್ಲಿಯಿಂದ ಸಿಕ್ಸರ್​ಗಳ ಸುರಿಮಳೆ: ವಿಡಿಯೋ
Image
Asia cup 2022: ಏಷ್ಯಾಕಪ್​ಗೂ ಮುನ್ನ ಟೀಮ್ ಇಂಡಿಯಾದಲ್ಲಿ ದೊಡ್ಡ ಬದಲಾವಣೆ: ಹೊಸ ಕೋಚ್
Image
Hardik Pandya: ಖಾಸಗಿ ಜೆಟ್‌, ದುಬಾರಿ ಕಾರು; ಹಾರ್ದಿಕ್ ಪಾಂಡ್ಯರ ಐಷಾರಾಮಿ ಜೀವನದ ವಿಡಿಯೋ ನೋಡಿ

ಇದೀಗ ಏಷ್ಯಾಕಪ್ 2022 ರ ಗ್ರೂಪ್ ಎ ನಲ್ಲಿ ಸ್ಥಾನ ಪಡೆದುಕೊಂಡಿರುವ ಹಾಂಕ್ ಕಾಂಗ್ ಭಾರತ ಹಾಗೂ ಪಾಕಿಸ್ತಾನ ವಿರುದ್ಧ ಸೆಣೆಸಾಟ ನಡೆಸಲಿದೆ. ಆಗಸ್ಟ್ 31 ರಂದು ಭಾರತ ವಿರುದ್ಧ ಆಡುವ ಮೂಲಕ ತನ್ನ ಅಭಿಯಾನ ಆರಂಭಿಸಲಿದೆ. ಸೆಪ್ಟೆಂಬರ್ 2 ರಂದು ಪಾಕ್ ವಿರುದ್ಧ ಕಣಕ್ಕಿಳಿಯಲಿದೆ. ಅಫ್ಘಾನಿಸ್ತಾನ, ಬಾಂಗ್ಲಾದೇಶ ಮತ್ತು ಶ್ರೀಲಂಕಾ ಗ್ರೂಪ್ ಬಿಯಲ್ಲಿ ಸ್ಥಾನ ಪಡೆದುಕೊಂಡಿದೆ.

ಭಾರತ ಆ. 28 ರಂದು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ಆಡುವ ಮೂಲಕ ತನ್ನ ಅಭಿಯಾನವನ್ನು ಆರಂಭಿಸಲಿದೆ. ಇದರ ನಡುವೆ ಟೀಮ್ ಇಂಡಿಯಾ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರಿಗೆ ಕೋವಿಡ್ ಪಾಸಿಟಿವ್ ಕಾಣಿಸಿಕೊಂಡ ಕಾರಣ ದುಬೈಗೆ ಪ್ರಯಾಣ ಬೆಳೆಸಿಲ್ಲ. ದ್ರಾವಿಡ್ ಅಲಭ್ಯತೆಯಿರುವ ಕಾರಣ ತಂಡಕ್ಕೆ ಇದೀಗ ಹೊಸ ಕೋಚ್ ನೇಮಕ ಮಾಡಲಾಗಿದೆ. ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ ಮುಖ್ಯಸ್ಥ ವಿವಿಎಸ್ ಲಕ್ಷ್ಮಣ್ ಅವರನ್ನು ಏಷ್ಯಾಕಪ್ ಟಿ20 ಟೂರ್ನಿಯಲ್ಲಿ ಆಡಲಿರುವ ಭಾರತ ತಂಡಕ್ಕೆ ಹಂಗಾಮಿ ಮುಖ್ಯ ಕೋಚ್ ಆಗಿ ನೇಮಕ ಮಾಡಲಾಗಿದೆ.