Virat Kohli: ಅಭ್ಯಾಸದ ವೇಳೆ ಮೈದಾನದಲ್ಲಿ ಮುಖಾಮುಖಿಯಾದ ವಿರಾಟ್ ಕೊಹ್ಲಿ-ಬಾಬರ್ ಅಜಮ್

Babar Azam: ಏಷ್ಯಾಕಪ್ 2022 ರಲ್ಲಿ ಭಾರತ ಹಾಗೂ ಪಾಕಿಸ್ತಾನ ನಡುವೆ ಆಗಸ್ಟ್ 28 ರಂದು ಪಂದ್ಯ ನಡೆಯಲಿದೆ. ಇದಕ್ಕೂ ಮುನ್ನ ವಿರಾಟ್ ಕೊಹ್ಲಿ-ಬಾಬರ್ ಅಜಮ್ ಮೈದಾನದಲ್ಲಿ ಅಭ್ಯಾಸ ನಡೆಸುತ್ತಿರುವಾಗ ಮುಖಾಮುಖಿ ಆಗಿದ್ದಾರೆ.

Virat Kohli: ಅಭ್ಯಾಸದ ವೇಳೆ ಮೈದಾನದಲ್ಲಿ ಮುಖಾಮುಖಿಯಾದ ವಿರಾಟ್ ಕೊಹ್ಲಿ-ಬಾಬರ್ ಅಜಮ್
Virat Kohli and Babar Azam
Follow us
TV9 Web
| Updated By: Vinay Bhat

Updated on:Aug 25, 2022 | 9:39 AM

ಏಷ್ಯಾಕಪ್ 2022 (Asia Cup 2022) ಆರಂಭಕ್ಕೆ ಇನ್ನೇನು ಎರಡು ದಿನಗಳಿರುವಾಗ ಎಲ್ಲ ತಂಡದ ಆಟಗಾರರು ಯುಎಇ ಮೈದಾನದಲ್ಲಿ ಭರ್ಜರಿ ಅಭ್ಯಾಸ ನಡೆಸುತ್ತಿದ್ದಾರೆ. ಬುಧವಾರ ಟೀಮ್ ಇಂಡಿಯಾ (Team India) ಆಟಗಾರರು ಹಂಗಾಮಿ ಕೋಚ್ ವಿವಿಎಸ್ ಲಕ್ಷ್ಮಣ್ ಮಾರ್ಗದರ್ಶನದಲ್ಲಿ ಮೊದಲ ಪ್ರ್ಯಾಕ್ಟೀಸ್ ಸೆಷನ್​ನಲ್ಲಿ ಭಾಗಿಯಾದರು. ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ದಿನೇಶ್ ಕಾರ್ತಿಕ್, ಸೂರ್ಯಕುಮಾರ್ ಸೇರಿದಂತೆ ಅನೇಕರು ಬ್ಯಾಟಿಂಗ್ ಅಭ್ಯಾಸ ನಡೆಸಿದರು. ಇದೇವೇಳೆ ಮೈದಾನಕ್ಕೆ ಪಾಕಿಸ್ತಾನ, ಅಫ್ಘಾನಿಸ್ತಾನ ಆಟಗಾರರು ಕೂಡ ಆಗಮಿಸಿದ್ದಾರೆ. ಆಗ ಕೊಹ್ಲಿ ಹಾಗೂ ಬಾಬರ್ ಅಜಮ್ (Kohli Babar) ಮುಖಾಮುಖಿ ಆಗಿದ್ದಾರೆ.

ಭಾರತ ಹಾಗೂ ಪಾಕಿಸ್ತಾನ ನಡುವೆ ಆಗಸ್ಟ್ 28 ರಂದು ಪಂದ್ಯ ನಡೆಯಲಿದೆ. ಈ ಪಂದ್ಯದಲ್ಲಿ ಕೊಹ್ಲಿಬಾಬರ್ ಮೇಲೆ ಎಲ್ಲರ ಕಣ್ಣಿದೆ. ಬೊಂಬಾಟ್ ಫಾರ್ಮ್​ನಲ್ಲಿರುವ ಬಾಬರ್ ಮತ್ತು ಕೊಹ್ಲಿ ಆಟ ಹೇಗಿರಲಿದೆ ಎಂದು ನೋಡಲು ಅನೇಕರು ಕಾದುಕುಳಿತಿದ್ದಾರೆ. ಇದೀಗ ಇಬ್ಬರು ಶ್ರೇಷ್ಠ ಆಟಗಾರರು ಮೈದಾನದಲ್ಲಿ ಅಭ್ಯಾಸ ನಡೆಸುತ್ತಿರುವಾಗ ಮುಖಾಮುಖಿ ಆಗಿದ್ದಾರೆ. ಇಬ್ಬರೂ ಶೇಕ್​ಹ್ಯಾಂಡ್ ಮಾಡಿ ತೆರಳಿದ್ದಾರೆ. ಬಿಸಿಸಿಐ ಮೊದಲ ದಿನದ ಪ್ರ್ಯಾಕ್ಟೀಸ್ ಸೆಷನ್ ವಿಡಿಯೋ ಹಂಚಿಕೊಂಡಿದ್ದು ಇದರಲ್ಲಿ ಕೊಹ್ಲಿಬಾಬರ್ ಎದುರಾಗಿರುವುದು ಸೆರೆಯಾಗಿದೆ.

ಇದನ್ನೂ ಓದಿ
Image
Virat Kohli: ಅಭ್ಯಾಸದ ವೇಳೆ ಜಡೇಜಾ, ಚಹಲ್ ಬೌಲಿಂಗ್​ನಲ್ಲಿ ವಿರಾಟ್ ಕೊಹ್ಲಿಯಿಂದ ಸಿಕ್ಸರ್​ಗಳ ಸುರಿಮಳೆ: ವಿಡಿಯೋ
Image
Asia cup 2022: ಏಷ್ಯಾಕಪ್​ಗೂ ಮುನ್ನ ಟೀಮ್ ಇಂಡಿಯಾದಲ್ಲಿ ದೊಡ್ಡ ಬದಲಾವಣೆ: ಹೊಸ ಕೋಚ್
Image
Hardik Pandya: ಖಾಸಗಿ ಜೆಟ್‌, ದುಬಾರಿ ಕಾರು; ಹಾರ್ದಿಕ್ ಪಾಂಡ್ಯರ ಐಷಾರಾಮಿ ಜೀವನದ ವಿಡಿಯೋ ನೋಡಿ
Image
ನ್ಯೂಜಿಲೆಂಡ್ ವಿರುದ್ಧದ ಸರಣಿಗೆ ಭಾರತ ತಂಡ ಪ್ರಕಟ; ಪ್ರಿಯಾಂಕ್ ಪಾಂಚಾಲ್​ಗೆ ನಾಯಕತ್ವ

ಕೊಹ್ಲಿ ಸತತವಾಗಿ ಕಳಪೆ ಪ್ರದರ್ಶನ ನೀಡುತ್ತಿದ್ದ ನಡುವೆ ಇತ್ತೀಚೆಗಷ್ಟೆ ಪಾಕ್ ನಾಯಕ ಬಾಬರ್ ಅಜಮ್ ಟ್ವೀಟ್ ಮಾಡಿ ಕೊಹ್ಲಿಗೆ ವಿಶೇಷ ಸಂದೇಶ ರವಾನಿಸಿದ್ದರು. ‘ಇದೂ ಸಾಗಿಹೋಗಲಿದೆ, ಗಟ್ಟಿಯಾಗಿರಿಎಂದು ಬರೆದಿದ್ದರು. ಇದಕ್ಕೆ ಕೊಹ್ಲಿ ಕೂಡ ಪ್ರತಿಕ್ರಿಯಿಸಿ, ‘ಧನ್ಯವಾದಗಳು. ಹೀಗೇ ಮಿಂಚುತ್ತಿರಿ ಮತ್ತು ಮೇಲೇರುತ್ತಿರಿ. ನಿಮಗೆ ಶುಭವಾಗಲಿ’ ಎಂದು ಮರು ಟ್ವೀಟ್ ಮಾಡಿದ್ದರು.

ಕೊಹ್ಲಿ ಭರ್ಜರಿ ಅಭ್ಯಾಸ:

ಜಿಂಬಾಬ್ವೆ ವಿರುದ್ಧದ ಏಕದಿನ ಸರಣಿಯಿಂದ ವಿಶ್ರಾಂತಿ ಪಡೆದುಕೊಂಡು ಇದೀಗ ಏಷ್ಯಾಕಪ್​ನಲ್ಲಿ ಕಣಕ್ಕಿಳಿಯಲಿರುವ ಕೊಹ್ಲಿಗೆ ಈ ಟೂರ್ನಿ ಮಹತ್ವದ್ದಾಗಿದೆ. ಇದಕ್ಕಾಗಿ ಭರ್ಜರಿ ಅಭ್ಯಾಸದಲ್ಲಿ ಕೂಡ ನಿರತರಾಗಿದ್ದಾರೆ. ಟ್ರೈನಿಂಗ್ ಸೆಷನ್​ನಲ್ಲಿ ಕೊಹ್ಲಿಯ ಹೊಡೆತವನ್ನು ಕಂಡು ಅಭಿಮಾನಿಗಳಂತು ಶಾಕ್ ಆಗಿದ್ದಾರೆ. ಯುಜ್ವೇಂದ್ರ ಚಹಲ್, ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್ ಅವರ ಬೌಲಿಂಗ್​ಗೆ ಮುಂದೆ ಬಂದು ಭರ್ಜರಿ ಶಾಟ್ ಹೊಡೆದಿದ್ದು ಚೆಂಡು ಬೌಂಡರಿ ಗೆರೆ ದಾಟಿದೆ. ಇದರ ವಿಡಿಯೋವನ್ನು ಯೂಟ್ಯೂಬ್​ನಲ್ಲಿ ಶೇರ್ ಮಾಡಿಕೊಳ್ಳಲಾಗಿದ್ದು, ಸಖತ್ ವೈರಲ್ ಆಗುತ್ತಿದೆ. ಕೊಹ್ಲಿಯ ಬ್ಯಾಟಿಂಗ್ ವೈಖರಿ ಕಂಡು ಈ ಬಾರಿ ಇವರು ಅಬ್ಬರಿಸುವುದು ಖಚಿತ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ.

ಏಷ್ಯಾಕಪ್ 2022ಕ್ಕೆ ಆಗಸ್ಟ್ 27ರಂದು ಚಾಲನೆ ಸಿಗಲಿದ್ದು ಉದ್ಘಾಟನಾ ಪಂದ್ಯದಲ್ಲಿ ಶ್ರೀಲಂಕಾ ಹಾಗೂ ಅಫ್ಘಾನಿಸ್ತಾನ ತಂಡ ಮುಖಾಮುಖಿ ಆಗಲಿದೆ. ಭಾರತ ಆ. 28 ರಂದು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ಆಡುವ ಮೂಲಕ ತನ್ನ ಅಭಿಯಾನವನ್ನು ಆರಂಭಿಸಲಿದೆ. ಬಳಿಕ ಆಗಸ್ಟ್ 31 ರಂದು ಹಾಂಗ್​ಕಾಂಗ್ ವಿರುದ್ಧ ಸೆಣೆಸಾಟ ನಡೆಸಲಿದೆ. ಈ ಟೂರ್ನಿಯ ಎಲ್ಲ ಪಂದ್ಯಗಳು ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಆಯೋಜಿಸಲಾಗಿದೆ.

Published On - 9:39 am, Thu, 25 August 22