ಹಾರ್ದಿಕ್ ಪಾಂಡ್ಯ ಅತ್ಯಂತ ಕೆಟ್ಟ ನಾಯಕ: ಸರಣಿ ಸೋಲಿನ ಬಳಿಕ ಫುಲ್ ಟ್ರೋಲ್ ಆದ ಪಾಂಡ್ಯ
Hardik Pandya Troll, IND vs WI 5th T20I: ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಸರಣಿಯಲ್ಲಿ 2-3 ಅಂಕಗಳ ಅಂತರದಿಂದ ಹೀನಾಯ ಸೋಲು ಕಂಡ ಬಳಿಕ ಭಾರತದ ನಾಯಕ ಹಾರ್ದಿಕ್ ಪಾಂಡ್ಯ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಟ್ರೋಲ್ ಆಗುತ್ತಿದ್ದಾರೆ. ಇವರ ನಾಯಕತ್ವದ ಬಗ್ಗೆ ಅಭಿಮಾನಿಗಳು ಪ್ರಶ್ನೆ ಮಾಡುತ್ತಿದ್ದಾರೆ.
ಐದು ಪಂದ್ಯಗಳ ಟಿ20 ಸರಣಿಯಲ್ಲಿ ಭಾರತ ಮೊದಲ ಬಾರಿಗೆ ವೆಸ್ಟ್ ಇಂಡೀಸ್ ವಿರುದ್ಧ ಸೋಲು ಕಂಡಿದೆ. 3-2 ಅಂತರದ ಗೆಲುವಿನೊಂದಿಗೆ ಕೆರಿಬಿಯನ್ ತಂಡವು ದ್ವಿಪಕ್ಷೀಯ ಸರಣಿಯಲ್ಲಿ 2016 ರ ನಂತರ ತಮ್ಮ ಮೊದಲ ಸರಣಿ ಜಯವನ್ನು ಗೆದ್ದ ಸಾಧನೆ ಮಾಡಿದೆ. ಭಾರತದ ಯುವ ಪಡೆ ನಿರೀಕ್ಷೆಗೆ ತಕ್ಕಂತೆ ಪ್ರದರ್ಶನ ತೋರಲಿಲ್ಲ. ಇದರ ಜೊತೆಗೆ ಹಾರ್ದಿಕ್ ಪಾಂಡ್ಯ (Hardik Pandya) ಕಡೆಯಿಂದ ಕೂಡ ನಾಯಕನ ಆಟ ಬರಲಿಲ್ಲ. ಇದೀಗ 5ನೇ ಟಿ20 ಪಂದ್ಯದಲ್ಲಿ ಭಾರತ ಹೊರಬಿದ್ದ ಬೆನ್ನಲ್ಲೆ ಸಾಮಾಜಿಕ ಮಾಧ್ಯಮದಲ್ಲಿ ಅಭಿಮಾನಿಗಳು ಕೋಪ ಹೊರಹಾಕಿದರು. ನಾಯಕ ಹಾರ್ದಿಕ್ ಪಾಂಡ್ಯ ಅವರ ಕಳಪೆ ನಾಯಕತ್ವದ ಬಗ್ಗೆ ಟೀಕೆ ಮಾಡುತ್ತಿದ್ದಾರೆ.
ಮೊದಲ ಎರಡು ಟಿ20 ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಭರ್ಜರಿ ಜಯ ಸಾಧಿಸಿ 2-0 ಅಂತರದ ಮುನ್ನಡೆ ಪಡೆದುಕೊಂಡಿತು. ನಂತರದ ಎರಡು ಪಂದ್ಯಗಳಲ್ಲಿ ಕಮ್ಬ್ಯಾಕ್ ಮಾಡಿದ ಟೀಮ್ ಇಂಡಿಯಾ 2-2 ಅಂಕಗಳ ಅಂತರದಿಂದ ಸರಣಿ ಸಮಬಲ ಸಾಧಿಸಿತು. ಹೀಗಾಗಿ ಕೊನೆಯ ಐದನೇ ಟಿ20 ಪಂದ್ಯ ಉಭಯ ತಂಡಗಳಿಗೆ ಮಾಡು ಇಲ್ಲವೇ ಮಡಿ ಎಂಬಂತಾಗಿತ್ತು. ಆದರೆ, ನಿರ್ಣಾಯಕ ಕದನದಲ್ಲಿ ಭಾರತ ನೀಡಿದ್ದ 165 ರನ್‌ಗಳ ಗುರಿಯನ್ನು ಆತಿಥೇಯರು 8 ವಿಕೆಟ್ ಬಾಕಿ ಇರುವಂತೆಯೇ ಗೆದ್ದು ಬೀಗಿದರು.
IND vs WI: ಪೆವಿಲಿಯನ್ ಪರೇಡ್ ನಡುವೆಯೂ ಟಿ20 ಕ್ರಿಕೆಟ್ನಲ್ಲಿ ದಾಖಲೆ ಬರೆದ ಸಂಜು ಸ್ಯಾಮ್ಸನ್
”ವಿರಾಟ್ ಕೊಹ್ಲಿ ಮತ್ತು ರೋಹಿತ್ ಇಲ್ಲದಿದ್ದರೆ ಭಾರತ ತಂಡ ಗೆಲ್ಲಲು ಸಾಧ್ಯವಿಲ್ಲ. ಈ ತಂಡವನ್ನು ಕಟ್ಟಿಕೊಂಡು ಟೀಮ್ ಇಂಡಿಯಾ ಮುಂದಿನ ವರ್ಷ ಟಿ20 ವಿಶ್ವಕಪ್ ಹೇಗೆ ಗೆಲ್ಲುತ್ತದೆ. ಹಾರ್ದಿಕ್ ಪಾಂಡ್ಯ ಕಡೆಯಿಂದ ಕಳಪೆ ಪ್ರದರ್ಶನ ಬಂದಿದೆ. ಇವರು ನಾಯಕನಾಗಲು ಸೂಕ್ತ ಅಲ್ಲ,” ಎಂದು ಅನೇಕರು ಟ್ವೀಟ್ ಮಾಡಿ ಹೇಳುತ್ತಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳ ಕೆಲವು ಪ್ರತಿಕ್ರಿಯೆಗಳು ಇಲ್ಲಿವೆ:
Can’t ball, can’t bat, can’t captain a side…wasn’t aware #IndianCricketTeam can select one solely for abusing, throwing attitude and BEING UNIQUE. #WorldCup qualifier next for #ICT under the most over-rated player, #HardikPandya ?#BCCI #INDvsWI #RahulDravid pic.twitter.com/vAnL2kJgrn
— Abbyshek Chandra (@abbyshekchandra) August 14, 2023
Hardik Pandya 🤬🤬#IndvsWI pic.twitter.com/Szxd83kwSo
— Sachin Tripathi (@sachintrilko95) August 13, 2023
Hardik pandya The underrated Statpadder 🥵
The Goat finisher, one day he will finish Indian cricket.#INDvsWI #HardikPandya pic.twitter.com/zCDDSsZ5As
— Sonu ✨ (@KLR__1) August 14, 2023
ಹಾರ್ದಿಕ್ ಪಾಂಡ್ಯ ಅವರ ಕಳಪೆ ಬ್ಯಾಟಿಂಗ್ ಸ್ಟ್ರೈಕ್ ರೇಟ್ ಮತ್ತು ಕಳಪೆ ನಾಯಕತ್ವದಿಂದಾಗಿ ಭಾರತ 11-ಸರಣಿ ಗೆಲುವಿನ ಬಳಿಕ ಸೋಲು ಕಂಡಿದೆ ಎಂದು ಕೆಲವರು ಟ್ವೀಟ್ ಮಾಡಿದ್ದಾರೆ. ಐಸಿಸಿ ಏಕದಿನ ವಿಶ್ವಕಪ್‌ಗೆ ಅರ್ಹತೆ ಪಡೆಯುವಲ್ಲಿ ವಿಫಲವಾದ ವೆಸ್ಟ್ ಇಂಡೀಸ್ ತಂಡದ ಎದುರು ಸೋತೊರುವುದು ಹೀನಾಯ ಎಂದು ಹೇಳುತ್ತಿದ್ದಾರೆ.
ಐದನೇ ಟಿ20 ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಭಾರತ ಸಂಪೂರ್ಣ ವೈಫಲ್ಯ ಅನುಭವಿಸಿತು. ಸೂರ್ಯಕುಮಾರ್ ಮತ್ತು ತಿಲಕ್ ವರ್ಮಾ (27) ಬಿಟ್ಟರೆ ಉಳಿದ ಯಾವ ಬ್ಯಾಟರ್ನಿಂದ ನಿರೀಕ್ಷೆಗೆ ತಕ್ಕ ಆಟ ಬರಲಿಲ್ಲ. ಸೂರ್ಯ 45 ಎಸೆತಗಳಲ್ಲಿ 61 ರನ್ ಬಾರಿಸಿದರು. ಭಾರತ 20 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 165 ರನ್ ಗಳಿಸಿತು. ವಿಂಡೀಸ್ ಪರ ರೊಮರಿಯೊ ಶೆಪೆರ್ಡ್ 4 ವಿಕೆಟ್ ಕಿತ್ತರು.
166 ರನ್‌ಗಳ ಟಾರ್ಗೆಟ್ ಬೆನ್ನಟ್ಟಿದ ವೆಸ್ಟ್ ಇಂಡೀಸ್ 2ನೇ ಓವರ್ನಲ್ಲಿ ವಿಕೆಟ್ ಕಳೆದುಕೊಂಡರೂ ನಂತರ ಬ್ರಾಂಡನ್ ಕಿಂಗ್ (ಅಜೇಯ 85) ಮತ್ತು ನಿಕೋಲಸ್ ಪೂರನ್ (47) ಸ್ಫೋಟಕ ಬ್ಯಾಟಿಂಗ್ ನಡೆಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ವಿಂಡೀಸ್ 18 ಓವರ್ಗಳಲ್ಲಿ 1 ವಿಕೆಟ್ ನಷ್ಟಕ್ಕೆ 171 ರನ್ ಬಾರಿಸಿ ಜಯ ಸಾಧಿಸಿತು.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ