ಹೀನಾಯ ಸೋಲು: ಪಂದ್ಯ ಮುಗಿದ ಬಳಿಕ ತನಗೆ ತಾನೇ ಬೈದುಕೊಂಡ ಹಾರ್ದಿಕ್ ಪಾಂಡ್ಯ: ಏನಂದ್ರು ನೋಡಿ

Hardik Pandya Post Match Presentation, IND vs WI 5th T20I: ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್, ಏಕದಿನ ಸರಣಿಯನ್ನು ವಶಪಡಿಸಿಕೊಂಡಿದ್ದ ಭಾರತ ತಂಡ ಇದೀಗ ಟಿ20 ಸರಣಿಯಲ್ಲಿ ಹೀನಾಯ ಸೋಲು ಕಂಡಿದೆ. ಐದನೇ ಟಿ20 ಪಂದ್ಯದಲ್ಲಿ ಗೆಲ್ಲಲು ಟೀಮ್ ಇಂಡಿಯಾ ವಿಫಲವಾಯಿತು. ಪಂದ್ಯ ಮುಗಿದ ಬಳಿಕ ಪೋಸ್ಟ್ ಮ್ಯಾಚ್ ಪ್ರೆಸೆಂಟೇಷನ್ ವೇಳೆ ಮಾತನಾಡಿದ ಹಾರ್ದಿಕ್ ಪಾಂಡ್ಯ ಈ ಬಗ್ಗೆ ಏನು ಹೇಳಿದ್ದಾರೆ ಕೇಳಿ.

Vinay Bhat
|

Updated on: Aug 14, 2023 | 7:19 AM

ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಸರಣಿಯನ್ನು ಭಾರತ ಕಳೆದುಕೊಂಡಿದೆ. ಫ್ಲೋರಿಡಾದ ಸೆಂಟ್ರಲ್ ಬ್ರೋವರ್ಡ್ ರೀಜನಲ್ ಪಾರ್ಕ್ ಸ್ಟೇಡಿಯಂ ಟರ್ಫ್ ಗ್ರೌಂಡ್​ನಲ್ಲಿ ನಡೆದ ನಿರ್ಣಾಯಕ ಐದನೇ ಟಿ20 ಪಂದ್ಯದಲ್ಲಿ ಟೀಮ್ ಇಂಡಿಯಾ ಸೋಲು ಕಾಣುವ ಮೂಲಕ ಕೆರಿಬಿಯನ್ನರ ನಾಡಲ್ಲಿ ಭಾರೀ ಮುಜುಗರಕ್ಕೆ ಒಳಗಾಗಿದೆ.

1 / 8
ಎಂಟು ವಿಕೆಟ್​ಗಳ ಜಯದೊಂದಿಗೆ ವೆಸ್ಟ್ ಇಂಡೀಸ್ 6 ವರ್ಷಗಳ ಬಳಿಕ ಭಾರತವನ್ನು ಟಿ20 ಸರಣಿಯಲ್ಲಿ ಸೋಲಿಸಿದ ಸಾಧನೆ ಮಾಡಿತು. ಅತ್ತ ಹಾರ್ದಿಕ್ ಪಾಂಡ್ಯ ನಾಯಕತ್ವದಲ್ಲಿ ಭಾರತ ಟಿ20ಐ ಸರಣಿಯನ್ನು ಮೊದಲ ಬಾರಿಗೆ ಕಳೆದುಕೊಂಡಿತು. ಪಂದ್ಯ ಮುಗಿದ ಬಳಿಕ ಮಾತನಾಡಿದ ನಾಯಕ ಹಾರ್ದಿಕ್ ಏನು ಹೇಳಿದ್ದಾರೆ ಕೇಳಿ.

2 / 8
ಹತ್ತು ಓವರ್‌ಗಳ ನಂತರ ನಾವು ಆ ಮೂಮೆಂಟಂ ಅನ್ನು ಕಳೆದುಕೊಂಡೆವು. ಇದಕ್ಕೆ ಕಾರಣ ನಾನೇ. ಆ ಸಂದರ್ಭ ನಾನು ಬ್ಯಾಟಿಂಗ್ ಮಾಡಲು ಬಂದೆ, ಕ್ರೀಸ್​ನಲ್ಲಿ ನಿಲ್ಲಲು ಹೆಚ್ಚು ಸಮಯವನ್ನು ತೆಗೆದುಕೊಂಡೆ. ಆದರೆ, ಅದರಿಂದ ನನಗೆ ಲಾಭ ಗಳಿಸಲು ಸಾಧ್ಯವಾಗಲಿಲ್ಲ ಎಂದು ಹಾರ್ದಿಕ್ ತನ್ನನ್ನು ತಾನೇ ಸೋಲಿಗೆ ನೇರ ಹೊಣೆಯನ್ನಾಗಿ ಮಾಡಿದ್ದಾರೆ. ಪಾಂಡ್ಯ 18 ಎಸೆತ ತೆಗೆದುಕೊಂಡು ಗಳಿಸಿದ್ದು ಕೇವಲ 14 ರನ್ಸ್.

3 / 8
ನಮ್ಮ ಹುಡುಗರು ಚೆನ್ನಾಗಿ ಆಡಿದರು ಎಂದು ನಾನು ಭಾವಿಸುತ್ತೇನೆ. ಆದರೆ ಆ ಸಮಯದಲ್ಲಿ ನಾನು ಉತ್ತಮ ಆಟವಾಡಲು ವಿಫಲವಾದೆ. ಈ ಎಲ್ಲಾ ಕ್ಷಣಗಳು ನಮಗೆ ನಾವೇ ಸವಾಲು ಹಾಕುವ ಆಟಗಳಾಗಿವೆ. ನಾವು ಪ್ರಯೋಗ ನಡೆಸುತ್ತಿದ್ದೇವೆ. ಇದು ಸುದೀರ್ಘ ಪ್ರಕ್ರಿಯೆಯಾಗಿದ್ದು, ನಾನು ಹೆಚ್ಚು ವಿವರಿಸುವ ಅಗತ್ಯವಿಲ್ಲ ಎಂದು ಹಾರ್ದಿಕ್ ಹೇಳಿದ್ದಾರೆ.

4 / 8
ನಾವು ಈ ಸರಣಿಯಿಂದ ಸಾಕಷ್ಟು ವಿಚಾರಗಳನ್ನು ಕಲಿತಿದ್ದೇವೆ. ಯುವ ಆಟಗಾರರು ಉತ್ತಮ ಪ್ರದರ್ಶನ ತೋರಿಸಿದರು. ಅವರಿಗೆ ಕ್ರೆಡಿಟ್ ಸಲ್ಲಬೇಕು. ಅವರು ಆಡುವಾಗ ಏನಾದರು ಹೊಸದನ್ನು ಪ್ರಯತ್ನಿಸುತ್ತಿದ್ದರು. ಇದನ್ನು ನೋಡಿದಾಗ ಖುಷಿ ಆಗುತ್ತದೆ ಎಂಬುದು ಹಾರ್ದಿಕ್ ಪಾಂಡ್ಯ ಮಾತು.

5 / 8
ನಮ್ಮ ಹುಡುಗರು ತಮ್ಮನ್ನು ತಾವು ಚೆನ್ನಾಗಿ ಅರ್ಥಹಿಸಲು ಪ್ರಯತ್ನಿಸುತ್ತಿದ್ದಾರೆ. ಮತ್ತು ಅದು ಚೆನ್ನಾಗಿ ನಡೆಯುತ್ತಿದೆ ಕೂಡ. ನನ್ನ ಪ್ರಕಾರ ಟಿ20 ವಿಶ್ವಕಪ್ 2024 ಗೆ ಇನ್ನೂ ಸಾಕಷ್ಟು ಸಮಯವಿದೆ. ನಮ್ಮ ಟಾರ್ಗೆಟ್ ಏಕದಿನ ವಿಶ್ವಕಪ್. ಸೋಲು ಕೆಲವೊಮ್ಮೆ ಒಳ್ಳೆಯದು. ಇದು ನಿಮಗೆ ಬಹಳಷ್ಟು ವಿಷಯಗಳನ್ನು ಕಲಿಸುತ್ತದೆ - ಹಾರ್ದಿಕ್ ಪಾಂಡ್ಯ.

6 / 8
ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಭಾರತ ಸಂಪೂರ್ಣ ವೈಫಲ್ಯ ಅನುಭವಿಸಿತು. ಸೂರ್ಯಕುಮಾರ್ ಮತ್ತು ತಿಲಕ್ ವರ್ಮಾ (27) ಬಿಟ್ಟರೆ ಉಳಿದ ಯಾವ ಬ್ಯಾಟರ್​ನಿಂದ ನಿರೀಕ್ಷೆಗೆ ತಕ್ಕ ಆಟ ಬರಲಿಲ್ಲ. ಸೂರ್ಯ 45 ಎಸೆತಗಳಲ್ಲಿ 61 ರನ್ ಬಾರಿಸಿದರು. ಭಾರತ 20 ಓವರ್​ಗಳಲ್ಲಿ 9 ವಿಕೆಟ್ ನಷ್ಟಕ್ಕೆ 165 ರನ್ ಗಳಿಸಿತು. ವಿಂಡೀಸ್ ಪರ ರೊಮರಿಯೊ ಶೆಪೆರ್ಡ್ 4 ವಿಕೆಟ್ ಕಿತ್ತರು.

7 / 8
166 ರನ್​ಗಳ ಟಾರ್ಗೆಟ್ ಬೆನ್ನಟ್ಟಿದ ವೆಸ್ಟ್ ಇಂಡೀಸ್ 2ನೇ ಓವರ್​ನಲ್ಲಿ ವಿಕೆಟ್ ಕಳೆದುಕೊಂಡರೂ ನಂತರ ಬ್ರಾಂಡನ್ ಕಿಂಗ್ (ಅಜೇಯ 85) ಮತ್ತು ನಿಕೋಲಸ್ ಪೂರನ್ (47) ಸ್ಫೋಟಕ ಬ್ಯಾಟಿಂಗ್ ನಡೆಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ವಿಂಡೀಸ್ 18 ಓವರ್​ಗಳಲ್ಲಿ 1 ವಿಕೆಟ್ ನಷ್ಟಕ್ಕೆ 171 ರನ್ ಬಾರಿಸಿ ಜಯ ಸಾಧಿಸಿತು.

8 / 8
Follow us
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ

ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?

ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್

ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್

ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ

ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್

ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ

ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್

ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್

ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ