Eng Vs Pak: 10 ಎಸೆತಗಳಲ್ಲಿ 5 ರನ್​ ಬೇಕು; 3 ವಿಕೆಟ್ ಕೈಲ್ಲಿದ್ದರು ಪಾಕ್ ಎದುರು ಸೋತ ಇಂಗ್ಲೆಂಡ್..!

| Updated By: ಪೃಥ್ವಿಶಂಕರ

Updated on: Sep 26, 2022 | 3:14 PM

Eng Vs Pak: ಎರಡನೆಯ ಎಸೆತದಲ್ಲಿ ಸ್ಟ್ರೈಕ್​ನಲ್ಲಿದ ಟೋಪ್ಲಿ ಸಿಂಗಲ್ ತೆಗೆದುಕೊಳ್ಳಲು ಪ್ರಯತ್ನಿಸಿದರು. ಆದರೆ ಶಾರ್ಟ್​ ಮಿಡ್​ ವಿಕೆಟ್​ನಲ್ಲಿ ನಿಂತಿದ್ದ ಶಾನ್ ಮಸೂದ್ ಅದ್ಭುತ ಫೀಲ್ಡಿಂಗ್ ಮಾಡಿ ನೇರವಾಗಿ ವಿಕೆಟ್​ಗೆ ಬಾಲನ್ನು ಎಸೆಯುವ ಮೂಲಕ ಟೋಪ್ಲಿಯನ್ನು ರನ್ ಔಟ್ ಮಾಡಿದರು.

Eng Vs Pak: 10 ಎಸೆತಗಳಲ್ಲಿ 5 ರನ್​ ಬೇಕು; 3 ವಿಕೆಟ್ ಕೈಲ್ಲಿದ್ದರು ಪಾಕ್ ಎದುರು ಸೋತ ಇಂಗ್ಲೆಂಡ್..!
Eng Vs Pak
Follow us on

ಕ್ರಿಕೆಟ್ ಒಂದು ಅನ್​ಪ್ರೆಡಿಕ್ಟೇಬಲ್ ಗೇಮ್​ ಎನ್ನುವುದಕ್ಕೆ ನಿನ್ನೆ ನಡೆದ ಪಾಕಿಸ್ತಾನ ಹಾಗೂ ಇಂಗ್ಲೆಂಡ್ (England and Pakistan)​ ನಡುವಿನ 4ನೇ ಟಿ20 ಪಂದ್ಯವೇ ತಾಜಾ ಉದಾಹರಣೆಯಾಗಿದೆ. ಕೊನೆಯ ಓವರ್​ವರೆಗೂ ಗೆಲ್ಲುವ ಫೆವರೇಟ್ ಎನಿಸಿಕೊಂಡಿದ್ದ ಇಂಗ್ಲೆಂಡ್ ತಂಡ ಯಾರೂ ಊಹಿಸದ ರೀತಿಯಲ್ಲಿ ಪಾಕ್ ಬೌಲರ್ ಪರಾಕ್ರಮಕ್ಕೆ ಸೋತು ಸುಣ್ಣವಾಯಿತು. ಒಂದೆಡೆ ಟೀಂ ಇಂಡಿಯಾ ಬಲಿಷ್ಠ ಆಸ್ಟ್ರೇಲಿಯಾವನ್ನು ಮಣಿಸಿ ಸರಣಿ ಗೆದ್ದರೆ, ಇನ್ನೊಂದೆಡೆ 7 ಪಂದ್ಯಗಳ ಟಿ20 ಸರಣಿಯಲ್ಲಿ 4ನೇ ಪಂದ್ಯವನ್ನು ಗೆಲ್ಲುವ ಮೂಲಕ ಇಂಗ್ಲೆಂಡ್ ತಂಡ ಸರಣಿಯಲ್ಲಿ 3-1 ರಿಂದ ಮುನ್ನಡೆ ಕಾಯ್ದುಕೊಳ್ಳುವ ಎಲ್ಲಾ ಲಕ್ಷಣಗಳೊಂದಿಗೆ ಪಾಕಿಸ್ತಾನ ನೀಡಿದ 164 ರನ್​ಗಳ ಗುರಿ ಬೆನ್ನಟ್ಟಿತ್ತು. ಆದರೆ ಕೊನೆಯ 10 ಎಸೆತಗಳಲ್ಲಿ ಪಂದ್ಯದ ಗತ್ತಿಯೇ ಬದಲಾಯಿತು. ಅಷ್ಟಕ್ಕೂ ಕೊನೆಯ 10 ಎಸೆತಗಳಲ್ಲಿ ಆಂಗ್ಲ ತಂಡಕ್ಕೆ ಬೇಕಾಗಿದಿದ್ದು ಕೇವಲ 5 ರನ್​ ಅಷ್ಟೇ. ಈ ಗುರಿ ವಿಶ್ವ ಚಾಂಪಿಯನ್ ಆಂಗ್ಲ ತಂಡಕ್ಕೆ ಅಷ್ಟೇನೂ ಕಷ್ಟವಾಗಿರಲಿಲ್ಲ. ಏಕೆಂದರೆ ಇಂಗ್ಲೆಂಡ್ ತಂಡದ ಕೈಯಲ್ಲಿ ಇನ್ನು 3 ವಿಕೆಟ್​ಳು ಉಳಿದಿದ್ದವು. ಹೀಗಾಗಿ ಇಂಗ್ಲೆಂಡ್ ತಂಡ ಕೊನೆಯ 10 ಎಸೆತಗಳಲ್ಲಿ 5 ರನ್ ಬಾರಿಸಿ ಜಯ ತನ್ನದಾಗಿಸಿಕೊಳ್ಳುತ್ತದೆ ಎಂದು ಎಲ್ಲರೂ ಭಾವಿಸಿದ್ದರು. ಆದರೆ ಕೊನೆಯ ಹಂತದಲ್ಲಿ ಪಂದ್ಯ ರೋಚಕತೆಯ ತಿರುವು ಪಡೆದುಕೊಂಡು ಎಲ್ಲರ ನಿರೀಕ್ಷೆಯನ್ನು ಬುಡಮೇಲು ಮಾಡಿತ್ತು.

ಅದ್ಭುತ ಫೀಲ್ಡಿಂಗ್

ಇದನ್ನೂ ಓದಿ
Pak Vs Eng: 8 ಬೌಂಡರಿ, 5 ಸಿಕ್ಸರ್, 81 ರನ್..! 23ರ ಹರೆಯದ ಬ್ಯಾಟರ್ ಅಬ್ಬರಕ್ಕೆ ತತ್ತರಿಸಿದ ಬಾಬರ್ ಸೇನೆ
PAK vs ENG: ಸೋಲಿನ ಸುಳಿಯಲ್ಲಿರುವ ಪಾಕ್ ತಂಡಕ್ಕೆ ಕೊರೊನಾ ಕಾಟ..!
PAK Vs ENG: ಪಾಕಿಸ್ತಾನದಲ್ಲಿ ಶೌಚಾಲಯಕ್ಕೆ ಹೋಗುವುದಕ್ಕೂ ಭಯವಾಗುತ್ತಿದೆ..! ಇಂಗ್ಲೆಂಡ್ ಆಟಗಾರನ ದ್ವಂದ್ವ ಹೇಳಿಕೆ

ಕೊನೆಯ 10 ಎಸೆತಗಳಲ್ಲಿ 5 ರನ್ ಗಳಿಸುವುದು ಕಷ್ಟದ ಕೆಲಸವಾಗಿರಲಿಲ್ಲ, ಅದೂ ಕೈಯಲ್ಲಿ 3 ವಿಕೆಟ್ ಇದ್ದುಕೊಂಡು ಕೂಡ ಈ ರನ್ ಗಳಿಸುವುದು ಕಷ್ಟವಾಗಿರಲಿಲ್ಲ. ಆದರೆ, ಇದೆಲ್ಲ ಗೊತ್ತಿದ್ದೂ ಕೂಡ ಗೆಲ್ಲುವ ಪಂದ್ಯದಲ್ಲಿ ಇಂಗ್ಲೆಂಡ್ ತಂಡ ಸೋಲನುಭವಿಸಿತು. ಇನ್ನೊಂದು ಆಶ್ಚರ್ಯಕರ ಸಂಗತಿಯೆಂದರೆ ಕಳಪೆ ಫೀಲ್ಡಿಂಗ್ ಮೂಲಕ ಕಳೆದ ಬಾರಿಯ ವಿಶ್ವಕಪ್​ನಲ್ಲಿ ಸೋತು ಮನೆಗೆ ವಾಪಸ್ಸಾಗಿದ್ದ ಪಾಕಿಸ್ತಾನ, ಈ ಪಂದ್ಯದಲ್ಲಿ ಅಚ್ಚರಿಯೆಂಬಂತೆ ಅದ್ಭುತ ಫೀಲ್ಡಿಂಗ್​ ಮಾಡಿ ರನೌಟ್​ ಮಾಡುವುದರೊಂದಿಗೆ ಪಂದ್ಯದ ದಿಕ್ಕನೇ ಬದಲಾಯಿಸಿತು.

19ನೇ ಓವರ್‌ನಲ್ಲಿ ಬ್ಯಾಕ್ ಟು ಬ್ಯಾಕ್ ವಿಕೆಟ್ ಪಡೆದ ಹ್ಯಾರಿಸ್ ರೌಫ್

ಕೊನೆಯ 2 ಓವರ್‌ಗಳ ಅಂದರೆ 19ನೇ ಮತ್ತು 20ನೇ ಓವರ್‌ಗಳ ರೋಚಕತೆಯನ್ನು ಒಂದೊಂದಾಗಿ ಗಮನಿಸುವುದಾದರೆ, ಇಂಗ್ಲೆಂಡ್‌ಗೆ 12 ಎಸೆತಗಳಲ್ಲಿ 9 ರನ್‌ಗಳ ಅಗತ್ಯವಿತ್ತು. 19ನೇ ಓವರ್ ಬೌಲ್ ಮಾಡಲು ಬಂದ ಹ್ಯಾರಿಸ್ ರೌಫ್, ಮೊದಲ ಎಸೆತ ಎಸೆದ ಬಳಿಕ ಎರಡನೇ ಎಸೆತದಲ್ಲಿ ಬೌಂಡರಿ ತಿಂದರು. ಅಂದರೆ, ಈಗ ಇಂಗ್ಲೆಂಡ್​ಗೆ ಮುಂದಿನ 10 ಎಸೆತಗಳಲ್ಲಿ 5 ರನ್ ಗಳಿಸಲು ಬಾಕಿಯಿತ್ತು ಮತ್ತು ಕೈಯಲ್ಲಿ 3 ವಿಕೆಟ್ ಇತ್ತು. ಆದರೆ ಈ ಕ್ರಿಕೆಟ್ ಕಥೆಯಲ್ಲಿ ಟ್ವಿಸ್ಟ್ ಬಂದಿದ್ದು ಇಲ್ಲೇ. ಹ್ಯಾರಿಸ್ ರೌಫ್ ಮೂರನೇ ಎಸೆತದಲ್ಲಿ ಲಿಯಾಮ್ ಡಾಸನ್ ಮತ್ತು ನಾಲ್ಕನೇ ಎಸೆತದಲ್ಲಿ ಸ್ಟೋನ್ ಅವರನ್ನು ಬ್ಯಾಕ್ ಟು ಬ್ಯಾಕ್ ಔಟ್ ಮಾಡಿದರು. ಆದ್ದರಿಂದ ಈಗ 8 ಎಸೆತಗಳಲ್ಲಿ 5 ರನ್ ಗಳಿಸುವ ಗುರಿ ಇಂಗ್ಲೆಂಡಿನ ಮುಂದೆ ಉಳಿದಿತ್ತು. ಆದರೆ ಇಂಗ್ಲೆಂಡ್ ಪಾಳಯದಲ್ಲಿ ಕೇವಲ ಒಂದು ವಿಕೆಟ್ ಮಾತ್ರ ಉಳಿದಿತ್ತು. ರೌಫ್ ಅವರ 5 ನೇ ಎಸೆತದಲ್ಲಿ ಟೋಪ್ಲಿ ಲೆಗ್ ಬೈನಿಂದ ಸಿಂಗಲ್ ಪಡೆದರು. ಬಳಿಕ ಓವರ್‌ನ ಕೊನೆಯ ಎಸೆತವು ಡಾಟ್ ಆಗಿತ್ತು.

ಶಾನ್ ಮಸೂದ್ ಸ್ಟ್ರೈಟ್ ಹಿಟ್

ಅಂತಿಮವಾಗಿ ಇಂಗ್ಲೆಂಡ್​ಗೆ ಕೊನೆಯ ಓವರ್​ನಲ್ಲಿ 4 ರನ್ ಗಳಿಸುವ ಗುರಿ ಇದ್ದರೆ, 1 ವಿಕೆಟ್ ಮಾತ್ರ ಅವರ ಕೈಯಲ್ಲಿತ್ತು. ಕೊನೆಯ ಓವರ್ ಎಸೆತಯಲು ಬಂದ ಮೊಹಮ್ಮದ್ ವಾಸಿಂ, ಓವರ್‌ನ ಮೊದಲ ಎಸೆತವನ್ನು ಡಾಟ್ ಮಾಡಿದರು. ಎರಡನೆಯ ಎಸೆತದಲ್ಲಿ ಸ್ಟ್ರೈಕ್​ನಲ್ಲಿದ ಟೋಪ್ಲಿ ಸಿಂಗಲ್ ತೆಗೆದುಕೊಳ್ಳಲು ಪ್ರಯತ್ನಿಸಿದರು. ಆದರೆ ಶಾರ್ಟ್​ ಮಿಡ್​ ವಿಕೆಟ್​ನಲ್ಲಿ ನಿಂತಿದ್ದ ಶಾನ್ ಮಸೂದ್ ಅದ್ಭುತ ಫೀಲ್ಡಿಂಗ್ ಮಾಡಿ ನೇರವಾಗಿ ವಿಕೆಟ್​ಗೆ ಬಾಲನ್ನು ಎಸೆಯುವ ಮೂಲಕ ಟೋಪ್ಲಿಯನ್ನು ರನ್ ಔಟ್ ಮಾಡಿದರು.

ಈ ರೀತಿಯಾಗಿ ಪಾಕ್ ತಂಡ ಯಾರೂ ಊಹಿಸದ ರೀತಿಯಲ್ಲಿ 3 ರನ್‌ಗಳಿಂದ ರೋಚಕ ಜಯ ದಾಖಲಿಸಿತು. ಮೊದಲು ಬ್ಯಾಟಿಂಗ್ ಮಾಡಿದ್ದ ಪಾಕ್ ತಂಡ 167 ರನ್‌ಗಳ ಗುರಿ ನೀಡಿತ್ತು. ಉತ್ತರವಾಗಿ ಇಂಗ್ಲೆಂಡ್ ತಂಡ 19.2 ಓವರ್‌ಗಳಲ್ಲಿ 163 ರನ್ ಗಳಿಸಲಷ್ಟೇ ಶಕ್ತವಾಯಿತು. ಪಾಕಿಸ್ತಾನದ ಈ ಗೆಲುವಿನೊಂದಿಗೆ 7 ಪಂದ್ಯಗಳ ಟಿ20 ಸರಣಿ 2-2 ರಲ್ಲಿ ಸಮಬಲಗೊಂಡಿದೆ.

Published On - 3:14 pm, Mon, 26 September 22