ಮುಂಬೈ: ಬಿಗ್ ಬ್ಯಾಷ್ ಲೀಗ್ನ (BBL 2023) 13ನೇ ಸೀಸನ್ ವಿಚಿತ್ರ ಘಟನೆಗೆ ಸಾಕ್ಷಿಯಾಗಿದೆ. ಅದು ಕೂಡ ಪ್ಯಾಡ್ ಧರಿಸದೇ ಬ್ಯಾಟರ್ ಕಣಕ್ಕಿಳಿಯುವ ಮೂಲಕ ಎಂಬುದು ವಿಶೇಷ. ಸಿಡ್ನಿ ಥಂಡರ್ ವಿರುದ್ಧದ ಈ ಪಂದ್ಯದಲ್ಲಿ ಟಾಸ್ ಗೆದ್ದ ಮೆಲ್ಬೋರ್ನ್ ಸ್ಟಾರ್ಸ್ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಅದರಂತೆ ಮೊದಲು ಬ್ಯಾಟ್ ಮಾಡಿದ ಮೆಲ್ಬೋರ್ನ್ ಸ್ಟಾರ್ಸ್ 20 ಓವರ್‌ಗಳಲ್ಲಿ 172 ರನ್ ಗಳಿಸಿ ಆಲೌಟ್ ಆದರು. ಈ ಸ್ಪರ್ಧಾತ್ಮಕ ಸವಾಲನ್ನು ಬೆನ್ನತ್ತಿದ ಸಿಡ್ನಿ ಥಂಡರ್ 18.2 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು ಗುರಿ ಮುಟ್ಟುವ ಮೂಲಕ ಭರ್ಜರಿ ಜಯ ಸಾಧಿಸಿತು.
ಈ ಪಂದ್ಯದಲ್ಲಿ ಮೆಲ್ಬೋರ್ನ್ ಸ್ಟಾರ್ಸ್ ಬ್ಯಾಟಿಂಗ್ ಮಾಡುವಾಗ ಪಾಕಿಸ್ತಾನ್ ಆಟಗಾರ ಹ್ಯಾರಿಸ್ ರೌಫ್ ಪ್ಯಾಡ್ ಧರಿಸದೇ ಕಣಕ್ಕಿಳಿದಿದ್ದಾರೆ. ಇನಿಂಗ್ಸ್ನ ಕೊನೆಯ ಓವರ್ನ ಕೊನೆಯ ಎಸೆತದಲ್ಲಿ ಹ್ಯಾರಿಫ್ ರೌಫ್ ಬ್ಯಾಟಿಂಗ್ ಬಂದಿದ್ದರು. ಆದರೆ ಕ್ರೀಸ್ಗೆ ಆಗಮಿಸಿದ ರೌಫ್ ಕಾಲಿಗೆ ಪ್ಯಾಡ್ ಧರಿಸಿರಲಿಲ್ಲ.
ಇದಕ್ಕೆ ಮುಖ್ಯ ಕಾರಣ ರೌಫ್ ನಾನ್ ಸ್ಟ್ರೈಕರ್ನಲ್ಲಿ ಕಣಕ್ಕಿಳಿದಿರುವುದು. ಅಂದರೆ 19.5ನೇ ಓವರ್ನಲ್ಲಿ ಸ್ಟೆಕೆಟೀ (0) ರನೌಟ್ ಆಗಿದ್ದರು. ಹೀಗಾಗಿ ಕೊನೆಯ ಎಸೆತವಿರುವಾಗ ಹ್ಯಾರಿಸ್ ರೌಫ್ ನಾನ್ ಸ್ಟ್ರೈಕರ್ನಲ್ಲಿ ಕಣಕ್ಕಿಳಿದರು. ಅತ್ತ ಕೊನೆಯ ಎಸೆತದಲ್ಲಿ ಬ್ಯಾಟಿಂಗ್ ಇರಲ್ಲ ಎಂದರಿತ ಹ್ಯಾರಿಸ್ ರೌಫ್ ಪ್ಯಾಡ್ ಧರಿಸದೇ ಬಂದು ಎಲ್ಲರ ಗಮನ ಸೆಳೆದರು. ಇದೀಗ ಪಾಕ್ ಕ್ರಿಕೆಟಿಗನ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
No gloves, pads or helmet on 🤣
Haris Rauf was caught by surprise at the end of the Stars innings!@KFCAustralia #BucketMoment #BBL13 pic.twitter.com/ZR9DeP8YhW
— KFC Big Bash League (@BBL) December 23, 2023
ಸಿಡ್ನಿ ಥಂಡರ್ (ಪ್ಲೇಯಿಂಗ್ XI): ಕ್ಯಾಮರೂನ್ ಬ್ಯಾಂಕ್ರಾಫ್ಟ್ (ವಿಕೆಟ್ ಕೀಪರ್), ಅಲೆಕ್ಸ್ ಹೇಲ್ಸ್, ಜೇಸನ್ ಸಂಘ, ಆಲಿವರ್ ಡೇವಿಸ್, ಅಲೆಕ್ಸ್ ರಾಸ್, ಡೇನಿಯಲ್ ಸ್ಯಾಮ್ಸ್, ನಾಥನ್ ಮ್ಯಾಕ್ ಆಂಡ್ರ್ಯೂ, ಕ್ರಿಸ್ ಗ್ರೀನ್ (ನಾಯಕ), ಲಿಯಾಮ್ ಹ್ಯಾಚರ್, ಜಮಾನ್ ಖಾನ್, ತನ್ವೀರ್ ಸಂಘ.
ಇದನ್ನೂ ಓದಿ: IPL 2024: ಬಲಿಷ್ಠ ಪಡೆ…RCB ತಂಡದ ಪ್ಲೇಯಿಂಗ್ ಇಲೆವೆನ್ ಹೀಗಿರಲಿದೆ
ಮೆಲ್ಬೋರ್ನ್ ಸ್ಟಾರ್ಸ್ (ಪ್ಲೇಯಿಂಗ್ XI): ಸ್ಯಾಮ್ ಹಾರ್ಪರ್ (ವಿಕೆಟ್ ಕೀಪರ್), ಥಾಮಸ್ ರೋಜರ್ಸ್, ಬ್ಯೂ ವೆಬ್‌ಸ್ಟರ್, ಗ್ಲೆನ್ ಮ್ಯಾಕ್ಸ್‌ವೆಲ್ (ನಾಯಕ), ಮಾರ್ಕಸ್ ಸ್ಟೊಯಿನಿಸ್, ಹಿಲ್ಟನ್ ಕಾರ್ಟ್‌ರೈಟ್, ಜೊನಾಥನ್ ಮೆರ್ಲೋ, ಲಿಯಾಮ್ ಡಾಸನ್, ಉಸಾಮಾ ಮಿರ್, ಮಾರ್ಕ್ ಸ್ಟೆಕೆಟಿ, ಹ್ಯಾರಿಸ್ ರೌಫ್.