IND-W vs AUS-W: 2ನೇ ಏಕದಿನ ಪಂದ್ಯದಿಂದ ಭಾರತದ ಆಲ್ ರೌಂಡರ್ ಔಟ್! ಆಸಿಸ್ ಬಳಗಕ್ಕೂ ಇಂಜುರಿ ಸಮಸ್ಯೆ
IND-W vs AUS-W: 32 ವರ್ಷದ ಹಿರಿಯ ಆಟಗಾರ್ತಿ ಹರ್ಮನ್‌ಪ್ರೀತ್ ಏಕದಿನ ಸರಣಿಯ ಆರಂಭದ ಮೊದಲು ಅಭ್ಯಾಸದ ಅವಧಿಯಲ್ಲಿ ಹೆಬ್ಬೆರಳಿಗೆ ಗಾಯವಾಗಿತ್ತು. ಈ ಕಾರಣದಿಂದಾಗಿ ಅವರು ಮೊದಲ ಪಂದ್ಯದಲ್ಲೂ ಆಡಲು ಸಾಧ್ಯವಾಗಲಿಲ್ಲ.
ಆಸ್ಟ್ರೇಲಿಯಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಹೀನಾಯ ಸೋಲಿನ ನಂತರ, ಭಾರತೀಯ ಮಹಿಳಾ ಕ್ರಿಕೆಟ್ ತಂಡವು ಸರಣಿಗೆ ಮರಳುವ ನಿರೀಕ್ಷೆಯಲ್ಲಿದೆ. ಮೂರು ಪಂದ್ಯಗಳ ಸರಣಿಯ ಮೊದಲ ಪಂದ್ಯದಲ್ಲಿ ಭಾರತ ತಂಡ 9 ವಿಕೆಟ್ಗಳಿಂದ ಸೋಲನ್ನು ಎದುರಿಸಬೇಕಾಯಿತು. ಈಗ ಎರಡನೇ ಪಂದ್ಯದಲ್ಲಿ, ತಂಡವು ಗೆಲ್ಲಬೇಕು, ಆದರೆ ಅದರ ಹಾದಿಯಲ್ಲಿ ದೊಡ್ಡ ಅಡಚಣೆ ಎದುರಾಗಿದೆ. ಈ ಅಡಚಣೆಯು ತಂಡದ ಸ್ಟಾರ್ ಆಲ್ರೌಂಡರ್ ಹರ್ಮನ್‌ಪ್ರೀತ್ ಕೌರ್ ಅವರ ಫಿಟ್ನೆಸ್ ಆಗಿದೆ. ತಂಡದ ಅನುಭವಿ ಬ್ಯಾಟರ್ ಹರ್ಮನ್‌ಪ್ರೀತ್ ಕೌರ್ ಮೊದಲ ಏಕದಿನ ಪಂದ್ಯದಲ್ಲಿ ಆಡಲು ಸಾಧ್ಯವಾಗಲಿಲ್ಲ ಮತ್ತು ಈಗ ಎರಡನೇ ಏಕದಿನ ಪಂದ್ಯದಲ್ಲೂ ಅವರು ಇಲ್ಲದೆ ಆಸ್ಟ್ರೇಲಿಯಾವನ್ನು ಸೋಲಿಸಲು ತಂಡವು ಕಷ್ಟಪಡಬೇಕಾಗುತ್ತದೆ. ಸೆಪ್ಟೆಂಬರ್ 24 ಶುಕ್ರವಾರದಂದು ನಡೆಯಲಿರುವ ಎರಡನೇ ಏಕದಿನ ಪಂದ್ಯದ ಮೊದಲು, ತಂಡದ ಬ್ಯಾಟಿಂಗ್ ತರಬೇತುದಾರ ಶಿವ ಸುಂದರ್ ದಾಸ್ ಅವರು ಹರ್ಮನ್ಪ್ರೀತ್ ಕೌರ್ ಈ ಪಂದ್ಯದಲ್ಲೂ ಆಡಲು ಸಾಧ್ಯವಿಲ್ಲ ಎಂದು ಹೇಳಿದರು.
32 ವರ್ಷದ ಹಿರಿಯ ಆಟಗಾರ್ತಿ ಹರ್ಮನ್‌ಪ್ರೀತ್ ಏಕದಿನ ಸರಣಿಯ ಆರಂಭದ ಮೊದಲು ಅಭ್ಯಾಸದ ಅವಧಿಯಲ್ಲಿ ಹೆಬ್ಬೆರಳಿಗೆ ಗಾಯವಾಗಿತ್ತು. ಈ ಕಾರಣದಿಂದಾಗಿ ಅವರು ಮೊದಲ ಪಂದ್ಯದಲ್ಲೂ ಆಡಲು ಸಾಧ್ಯವಾಗಲಿಲ್ಲ. ಅದರಿಂದ ಅವರು ಇನ್ನೂ ಚೇತರಿಸಿಕೊಂಡಿಲ್ಲ. ಮೆಕ್ಕಾಯ್‌ನಲ್ಲಿ ಎರಡನೇ ಪಂದ್ಯದ ಮೊದಲು ಪತ್ರಿಕಾಗೋಷ್ಠಿಯಲ್ಲಿ ಹರ್ಮನ್‌ಪ್ರೀತ್ ಅವರ ಫಿಟ್‌ನೆಸ್ ಕುರಿತು ಮಾತನಾಡುತ್ತಾ ದಾಸ್, ಅವರು ಇನ್ನೂ ಸಂಪೂರ್ಣವಾಗಿ ಫಿಟ್ ಆಗಿಲ್ಲ ಮತ್ತು ಎರಡನೇ ಪಂದ್ಯಕ್ಕೂ ಆಕೆ ಲಭ್ಯವಿಲ್ಲ ಎಂದು ನಾನು ಭಾವಿಸುತ್ತೇನೆ. ಮೂರನೇ ಏಕದಿನ ಪಂದ್ಯಕ್ಕೆ ಅವರು ಫಿಟ್ ಆಗುವ ಭರವಸೆ ಇದೆ ಎಂದರು.
ಆಸ್ಟ್ರೇಲಿಯಾದ ಆರಂಭಿಕ ಆಟಗಾರ್ತಿ ಹೇನ್ಸ್ಗೂ ಗಾಯ ಎರಡನೇ ಏಕದಿನಕ್ಕೂ ಮುನ್ನ ಗಾಯದ ಸಮಸ್ಯೆ ಎದುರಿಸುತ್ತಿರುವುದು ಕೇವಲ ಭಾರತ ತಂಡ ಮಾತ್ರವಲ್ಲ, ಆತಿಥೇಯ ಆಸ್ಟ್ರೇಲಿಯಾ ತಂಡ ಕೂಡ ಇದೇ ರೀತಿಯ ಸಮಸ್ಯೆಯನ್ನು ಎದುರಿಸುತ್ತಿದೆ. ತಂಡದ ಆರಂಭಿಕ ಆಟಗಾರ್ತಿ ರಾಚೆಲ್ ಹೇನ್ಸ್ ಅವರ ಫಿಟ್ನೆಸ್ ಕೂಡ ಕಾಳಜಿಯ ವಿಷಯವಾಗಿದೆ. ಮೊದಲ ಏಕದಿನ ಪಂದ್ಯದಲ್ಲಿ ಉತ್ತಮ ಅರ್ಧಶತಕ ಆಡಿದ ಹೇನ್ಸ್, ಅಭ್ಯಾಸದ ಅವಧಿಯಲ್ಲಿ ಗಾಯಗೊಂಡರು.
ಹೇನ್ಸ್ ಮೊಣಕೈಯನ್ನು ಸ್ಕ್ಯಾನ್ ಮಾಡಲಾಗಿದೆ ಎಂದು ಆಸ್ಟ್ರೇಲಿಯಾ ಕ್ಯಾಂಪ್ ಮಾಹಿತಿ ನೀಡಿದೆ. ಹರ್ಮನ್‌ಪ್ರೀತ್‌ನಂತೆ, ಅವರು ಪಂದ್ಯದಿಂದ ಹೊರಗುಳಿಯುವ ಸಾಧ್ಯತೆ ಕಡಿಮೆ ಇದೆ. ಮೊದಲ ಪಂದ್ಯದಲ್ಲಿ ಹೇನ್ಸ್ ಅಜೇಯ 93 ರನ್ ಗಳಿಸಿದ್ದರಿಂದ ಆಸ್ಟ್ರೇಲಿಯಾ ಒಂಬತ್ತು ವಿಕೆಟ್ ಜಯ ಸಾಧಿಸಿತು. ಮುಂದಿನ ಪಂದ್ಯದಲ್ಲಿ ಹೇನ್ಸ್ ಆಡಲು ಸಾಧ್ಯವಾಗದಿದ್ದರೆ, ಬೆಥ್ ಮೂನಿ ಅಲಿಸಾ ಹೀಲಿಯೊಂದಿಗೆ ಇನ್ನಿಂಗ್ಸ್ ತೆರೆಯಬಹುದು.