AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

MI vs KKR, IPL 2021: ತ್ರಿಪಾಠಿ, ಅಯ್ಯರ್ ಅಬ್ಬರ: ಬಲಿಷ್ಠ ಮುಂಬೈಗೆ ಸೋಲುಣಿಸಿದ ಕೆಕೆಆರ್​

Mumbai Indians vs Kolkata Knight Riders: ಉಭಯ ತಂಡಗಳು ಇದುವರೆಗೆ 28 ​​ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದು, ಅದರಲ್ಲಿ ಮುಂಬೈ ಇಂಡಿಯನ್ಸ್​ 22 ಗೆಲುವು ದಾಖಲಿಸಿ ಮೇಲುಗೈ ಹೊಂದಿದೆ. ಇನ್ನುಳಿದ 6 ಪಂದ್ಯಗಳಲ್ಲಿ ಮಾತ್ರ ಕೆಕೆಆರ್​ ಜಯ ಸಾಧಿಸಿತ್ತು.

MI vs KKR, IPL 2021: ತ್ರಿಪಾಠಿ, ಅಯ್ಯರ್ ಅಬ್ಬರ: ಬಲಿಷ್ಠ ಮುಂಬೈಗೆ ಸೋಲುಣಿಸಿದ ಕೆಕೆಆರ್​
KKR
TV9 Web
| Edited By: |

Updated on:Sep 23, 2021 | 11:15 PM

Share

ಅಬುಧಾಬಿಯ ಶೇಖ್ ಝಾಯೆದ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಐಪಿಎಲ್​ನ 34ನೇ ಪಂದ್ಯದಲ್ಲಿ ಬಲಿಷ್ಠ ಮುಂಬೈ ಇಂಡಿಯನ್ಸ್​ಗೆ ಕೊಲ್ಕತ್ತಾ ನೈಟ್​ ರೈಡರ್ಸ್​ ಸೋಲುಣಿಸಿದೆ. ಮುಂಬೈ ನೀಡಿದ 156 ರನ್​ಗಳ ಟಾರ್ಗೆಟ್​ ಅನ್ನು ಕೇವಲ 15.1 ಓವರ್​ನಲ್ಲಿ ಚೇಸ್ ಮಾಡುವ ಮೂಲಕ ಕೆಕೆಆರ್ 7 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿತು. ಇದಕ್ಕೂ ಮುನ್ನ ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಅವಕಾಶ ಪಡೆದ ಮುಂಬೈಗೆ ನಾಯಕ ರೋಹಿತ್ ಶರ್ಮಾ ಹಾಗೂ ಡಿಕಾಕ್ ಉತ್ತಮ ಆರಂಭ ಒದಗಿಸಿದರು. ಹಿಟ್​ಮ್ಯಾನ್ ಜೊತೆಗೂಡಿ ಡಿಕಾಕ್ ಮೊದಲ ವಿಕೆಟ್​ಗೆ 78 ರನ್​ ಪೇರಿಸಿದರು. ಇದೇ ವೇಳೆ ರೋಹಿತ್ ಶರ್ಮಾ (33) ಸುನೀಲ್ ನರೈನ್​ಗೆ ವಿಕೆಟ್ ಒಪ್ಪಿಸಿ ಹೊರ ನಡೆದರು. ಇದರ ಬೆನ್ನಲ್ಲೇ ಸೂರ್ಯಕುಮಾರ್ (5) ಕೂಡ ವಿಕೆಟ್ ಒಪ್ಪಿಸಿದರು. ಮತ್ತೊಂದೆಡೆ 44 ಎಸೆತಗಳಲ್ಲಿ 55 ರನ್​ ಬಾರಿಸಿದ ಡಿಕಾಕ್ ತಂಡಕ್ಕೆ ಆಸರೆಯಾದರು. ತಂಡದ ಮೊತ್ತ 106 ಆಗಿದ್ದ ವೇಳೆ ನರೈನ್​ಗೆ ಕ್ಯಾಚ್ ನೀಡಿ ಡಿಕಾಕ್ ನಿರ್ಗಮಿಸಿದರು. ಇನ್ನು ಅಂತಿಮ ಹಂತದಲ್ಲಿ ಕೀರನ್ ಪೊಲಾರ್ಡ್​ 21 ರನ್ ಕಲೆಹಾಕುವ ಮೂಲಕ ತಂಡದ ಮೊತ್ತವನ್ನು ನಿಗದಿತ 20 ಓವರ್​ನಲ್ಲಿ 6 ವಿಕೆಟ್ ನಷ್ಟಕ್ಕೆ 155 ಕ್ಕೆ ತಂದು ನಿಲ್ಲಿಸಿದರು.

156 ರನ್​ಗಳ ಗುರಿ ಪಡೆದ ಕೆಕೆಆರ್​ಗೆ ವೆಂಕಟೇಶ್ ಅಯ್ಯರ್ ಹಾಗೂ ಶುಭ್​ಮನ್​ ಗಿಲ್ ಸ್ಪೋಟಕ ಆರಂಭ ಒದಗಿಸಿದ್ದರು. ಮೊದಲ 3 ಓವರ್​ನಲ್ಲಿ ಈ ಜೋಡಿ 40 ರನ್​ ಪೇರಿಸುವ ಮೂಲಕ ಚೇಸಿಂಗ್​ಗೆ ಭದ್ರ ಬುನಾದಿ ಹಾಕಿಕೊಟ್ಟರು. ಇದೇ ವೇಳೆ ಶುಭ್​ಮನ್ ಗಿಲ್ (13) ಬುಮ್ರಾ ಎಸೆತಕ್ಕೆ ಬೌಲ್ಡ್ ಆದರು. ಆ ಬಳಿಕ ಜೊತೆಗೂಡಿದ ರಾಹುಲ್ ತ್ರಿಪಾಠಿ-ವೆಂಕಟೇಶ್ ಅಯ್ಯರ್ ಮುಂಬೈ ಬೌಲರುಗಳ ಬೆಂಡೆತ್ತಿದರು.

ಬಿರುಸಿನ ಇನಿಂಗ್ಸ್ ಆಡಿದ ವೆಂಕಟೇಶ್ ಅಯ್ಯರ್ 25 ಎಸೆತಗಳಲ್ಲಿ ಚೊಚ್ಚಲ ಅರ್ಧಶತಕ ಪೂರೈಸಿದರು. ಮತ್ತೊಂದೆಡೆ ಅಬ್ಬರಿಸಲಾರಂಭಿಸಿದ ರಾಹುಲ್ ತ್ರಿಪಾಠಿ ಮುಂಬೈ ಬೌಲರುಗಳನ್ನು ನಿರಾಯಾಸವಾಗಿ ಎದುರಿಸಿದರು. ಈ ನಡುವೆ ವೆಂಕಟೇಶ್ ಅಯ್ಯರ್​ (53) ಅನ್ನು ಬೌಲ್ಡ್ ಮಾಡುವಲ್ಲಿ ಬುಮ್ರಾ ಯಶಸ್ವಿಯಾದರು. ಆದರೆ ಮತ್ತೊಂದೆಡೆ ಸಿಕ್ಸ್​-ಫೋರ್​ಗಳ ಸುರಿಮಳೆಗೈದ ರಾಹುಲ್ ತ್ರಿಪಾಠಿ 42 ಎಸೆತಗಳಲ್ಲಿ 3 ಸಿಕ್ಸರ್, 4 ಬೌಂಡರಿಗಳೊಂದಿಗೆ 74 ರನ್​ ಸಿಡಿಸಿದರು. ಪರಿಣಾಮ 15.1 ಓವರ್​ನಲ್ಲಿ 3 ವಿಕೆಟ್​ ನಷ್ಟದೊಂದಿಗೆ ಕೆಕೆಆರ್ 159 ರನ್​ ಬಾರಿಸಿ ಸುಲಭವಾಗಿ ಗುರಿಮುಟ್ಟಿತು. ಈ ಗೆಲುವಿನೊಂದಿಗೆ ಕೆಕೆಆರ್ ತಂಡವು ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೇರಿದೆ.

ಸಂಕ್ಷಿಪ್ತ ಸ್ಕೋರ್ ವಿವರ

ಮುಂಬೈ ಇಂಡಿಯನ್ಸ್-​ 155/6 (20)

ಕ್ವಿಂಟನ್ ಡಿಕಾಕ್- 55

ಪೊಲಾರ್ಡ್​-21

ಲೂಕಿ ಫರ್ಗುಸನ್- 27/2

ಕೊಲ್ಕತ್ತಾ ನೈಟ್​ ರೈಡರ್ಸ್​- 159/3 (15.1)

ರಾಹುಲ್ ತ್ರಿಪಾಠಿ- 74

ವೆಂಕಟೇಶ್ ಅಯ್ಯರ್- 53

ಬುಮ್ರಾ-43/3

ಇನ್ನು ಉಭಯ ತಂಡಗಳು ಇದುವರೆಗೆ 29 ​​ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದು, ಅದರಲ್ಲಿ ಮುಂಬೈ ಇಂಡಿಯನ್ಸ್​ 22 ಗೆಲುವು ದಾಖಲಿಸಿ ಮೇಲುಗೈ ಹೊಂದಿದೆ. ಇನ್ನುಳಿದ 7 ಪಂದ್ಯಗಳಲ್ಲಿ ಮಾತ್ರ ಕೆಕೆಆರ್​ ಗೆಲುವಿನ ರುಚಿ ನೋಡುವಲ್ಲಿ ಯಶಸ್ವಿಯಾಗಿದೆ.

ಕೋಲ್ಕತ್ತಾ ನೈಟ್ ರೈಡರ್ಸ್ ಪ್ಲೇಯಿಂಗ್ ಇಲೆವೆನ್: ಶುಭಮನ್ ಗಿಲ್, ವೆಂಕಟೇಶ್ ಅಯ್ಯರ್, ರಾಹುಲ್ ತ್ರಿಪಾಠಿ, ನಿತೀಶ್ ರಾಣಾ, ಇಯಾನ್ ಮೋರ್ಗನ್ (ನಾಯಕ), ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಆಂಡ್ರೆ ರಸೆಲ್, ಸುನಿಲ್ ನರೈನ್, ಲೂಕಿ ಫರ್ಗುಸನ್, ವರುಣ್ ಚಕ್ರವರ್ತಿ, ಪ್ರಸಿದ್ ಕೃಷ್ಣ

ಮುಂಬೈ ಇಂಡಿಯನ್ಸ್ ಪ್ಲೇಯಿಂಗ್ ಇಲೆವೆನ್: ಕ್ವಿಂಟನ್ ಡಿ ಕಾಕ್ (ವಿಕೆಟ್ ಕೀಪರ್), ರೋಹಿತ್ ಶರ್ಮಾ (ನಾಯಕ), ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್, ಸೌರಭ್ ತಿವಾರಿ, ಕೀರನ್ ಪೊಲಾರ್ಡ್, ಕೃನಾಲ್ ಪಾಂಡ್ಯ, ಆಡಮ್ ಮಿಲ್ನ್, ರಾಹುಲ್ ಚಹರ್, ಜಸ್ಪ್ರೀತ್ ಬುಮ್ರಾ, ಟ್ರೆಂಟ್ ಬೌಲ್ಟ್

LIVE NEWS & UPDATES

The liveblog has ended.
  • 23 Sep 2021 11:10 PM (IST)

    KKR ಗೆಲುವಿನ ಸಂಭ್ರಮ

  • 23 Sep 2021 11:01 PM (IST)

    ಕೆಕೆಆರ್​ಗೆ 7 ವಿಕೆಟ್​ಗಳ ಭರ್ಜರಿ ಜಯ

  • 23 Sep 2021 11:00 PM (IST)

    ಸಂಕ್ಷಿಪ್ತ ಸ್ಕೋರ್ ವಿವರ

    ಮುಂಬೈ ಇಂಡಿಯನ್ಸ್-​ 155/6 (20)

    ಕ್ವಿಂಟನ್ ಡಿಕಾಕ್- 55

    ಪೊಲಾರ್ಡ್​-21

    ಕೊಲ್ಕತ್ತಾ ನೈಟ್​ ರೈಡರ್ಸ್​- 159/3 (15.1)

    ರಾಹುಲ್ ತ್ರಿಪಾಠಿ- 74

    ವೆಂಕಟೇಶ್ ಅಯ್ಯರ್- 53

  • 23 Sep 2021 10:57 PM (IST)

    ಭರ್ಜರಿ ಬೌಂಡರಿಯೊಂದಿಗೆ ಕೆಕೆಆರ್​ಗೆ 7 ವಿಕೆಟ್​ಗಳ ಜಯ

    MI 155/6 (20)

    KKR 159/3 (15.1)

  • 23 Sep 2021 10:52 PM (IST)

    ಇಯಾನ್ ಮೋರ್ಗನ್ ಔಟ್

    ಮೂರನೇ ವಿಕೆಟ್ ಪಡೆದ ಜಸ್​ಪ್ರೀತ್ ಬುಮ್ರಾ- ಮೋರ್ಗನ್ (7) ಔಟ್

    ಕೆಕೆಆರ್ 147/3 (14.1)

    ಕೋಲ್ಕತ್ತಾ ನೈಟ್ ರೈಡರ್ಸ್‌ಗೆ 35 ಎಸೆತಗಳಲ್ಲಿ 9 ರನ್ ಅಗತ್ಯವಿದೆ
  • 23 Sep 2021 10:50 PM (IST)

    KKR 147/2 (14)

    ಕೆಕೆಆರ್ 147/2 (14)

     

    ಗೆಲ್ಲಲು ಕೋಲ್ಕತ್ತಾ ನೈಟ್ ರೈಡರ್ಸ್‌ಗೆ 36 ಎಸೆತಗಳಲ್ಲಿ 9 ರನ್ ಅಗತ್ಯವಿದೆ
  • 23 Sep 2021 10:46 PM (IST)

    ಗೆಲುವಿನತ್ತ ಕೆಕೆಆರ್​

    ಕೆಕೆಆರ್ 145/2 (13)

    ಕೋಲ್ಕತ್ತಾ ನೈಟ್ ರೈಡರ್ಸ್‌ಗೆ 42 ಎಸೆತಗಳಲ್ಲಿ 11 ರನ್ ಅವಶ್ಯಕತೆ
  • 23 Sep 2021 10:44 PM (IST)

    ತ್ರಿಪಾಠಿ ಭರ್ಜರಿ ಸಿಕ್ಸರ್

    ರಾಹುಲ್ ಚಹರ್​ಗೆ ಭರ್ಜರಿ ಸಿಕ್ಸರ್ ಉತ್ತರ ನೀಡಿದ ರಾಹುಲ್ ತ್ರಿಪಾಠಿ

  • 23 Sep 2021 10:42 PM (IST)

    ಅರ್ಧಶತಕದೊಂದಿಗೆ ಇನಿಂಗ್ಸ್​ ಅಂತ್ಯಗೊಳಿಸಿದ ಅಯ್ಯರ್

    30 ಎಸೆತಗಳಲ್ಲಿ 53 ರನ್ ಬಾರಿಸಿದ ವೆಂಕಟೇಶ್ ಅಯ್ಯರ್. ತಮ್ಮ ಇನಿಂಗ್ಸ್​ನಲ್ಲಿ 3 ಸಿಕ್ಸರ್ ಹಾಗೂ 4 ಬೌಂಡರಿ ಬಾರಿಸಿ ಅಬ್ಬರಿಸಿದ್ದ ಅಯ್ಯರ್. ಬುಮ್ರಾ ಎಸೆತದಲ್ಲಿ ಬೌಲ್ಡ್.

  • 23 Sep 2021 10:39 PM (IST)

    ಬುಮ್ರಾ ಮ್ಯಾಜಿಕ್- ಕ್ಲೀನ್ ಬೌಲ್ಡ್​

    ವೆಂಕಟೇಶ್ ಅಯ್ಯರ್ ಕ್ಲೀನ್ ಬೌಲ್ಡ್​

  • 23 Sep 2021 10:37 PM (IST)

    ಅರ್ಧಶತಕ ಪೂರೈಸಿದ ರಾಹುಲ್ ತ್ರಿಪಾಠಿ

    29 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ ರಾಹುಲ್ ತ್ರಿಪಾಠಿ.

    KKR 123/1 (11.1)

     

  • 23 Sep 2021 10:33 PM (IST)

    ಅಯ್ಯರ್ ಅಬ್ಬರ: ಚೊಚ್ಚಲ ಅರ್ಧಶತಕ ಬಾರಿಸಿದ ವೆಂಕಟೇಶ್ ಅಯ್ಯರ್

  • 23 Sep 2021 10:31 PM (IST)

    ವೆಂಕಟೇಶ್ ಅಯ್ಯರ್ ಅರ್ಧಶತಕ

    ಕೇವಲ 25 ಎಸೆತಗಳಲ್ಲಿ ಚೊಚ್ಚಲ ಅರ್ಧಶತಕ ಪೂರೈಸಿದ ವೆಂಕಟೇಶ್ ಅಯ್ಯರ್.

     

  • 23 Sep 2021 10:29 PM (IST)

    ಎಕ್ಸ್​​ಟ್ರಾ ಬೌನ್ಸ್​

    ಎಕ್ಸ್​​ಟ್ರಾ ಬೌನ್ಸರ್​ ಎಸೆದ ಬುಮ್ರಾ

    ಕೀಪರ್ ಮೇಲಿಂದ ಚೆಂಡು ಬೌಂಡರಿಗೆ…ಹೆಚ್ಚುವರಿ 4 ರನ್​ಗಳು

  • 23 Sep 2021 10:27 PM (IST)

    ರಾಹುಲ್ ಕಮಾಲ್

    ರಾಹುಲ್ ತ್ರಿಪಾಠಿ ಭರ್ಜರಿ ಬ್ಯಾಟಿಂಗ್

    ಬುಮ್ರಾ ಎಸೆತದಲ್ಲಿ ಕವರ್ಸ್​ನತ್ತ ಸೂಪರ್ ಶಾಟ್- ಫೋರ್

  • 23 Sep 2021 10:25 PM (IST)

    KKR 97/1 (9)

    ರಾಹುಲ್ ತ್ರಿಪಾಠಿ-ವೆಂಕಟೇಶ್ ಅಯ್ಯರ್ ಭರ್ಜರಿ ಜೊತೆಯಾಟ

    37 ಎಸೆತಗಳಲ್ಲಿ 57 ರನ್​ ಪಾಟರ್ನರ್​ಶಿಪ್​

  • 23 Sep 2021 10:24 PM (IST)

    ತ್ರಿಪಾಠಿ ಝಲಕ್

    ಅಬ್ಬರಿಸಲಾರಂಭಿಸಿದ ರಾಹುಲ್ ತ್ರಿಪಾಠಿ

    ಕೃನಾಲ್ ಪಾಂಡ್ಯ ಎಸೆತದಲ್ಲಿ ಆನ್​ ಆಫ್​ನತ್ತ ಭರ್ಜರಿ ಬೌಂಡರಿ

  • 23 Sep 2021 10:22 PM (IST)

    ರಾಕಿಂಗ್ ತ್ರಿಪಾಠಿ

    ಕೃನಾಲ್ ಪಾಂಡ್ಯ ಎಸೆತದಲ್ಲಿ ಭರ್ಜರಿ ಹೊಡೆತ

    ರಾಹುಲ್ ತ್ರಿಪಾಠಿ ಬ್ಯಾಟ್​ನಿಂದ ಸೂಪರ್ ಸಿಕ್ಸ್​.

  • 23 Sep 2021 10:15 PM (IST)

    ವೆಂಕಿ ಬೆಂಕಿ

    ರಾಹುಲ್ ಚಹರ್ ಎಸೆತದಲ್ಲಿ ಬಿಗ್ ಸಿಕ್ಸ್​ ಸಿಡಿಸಿದ ವೆಂಕಟೇಶ್ ಅಯ್ಯರ್. ಭರ್ಜರಿಯಾಗಿ ಬ್ಯಾಟ್ ಬೀಸುತ್ತಿರುವ ಯುವ ಆಟಗಾರ. 17 ಎಸೆತಗಳಲ್ಲಿ 40 ಬಾರಿಸಿ ಕ್ರೀಸ್​ನಲ್ಲಿ ಬ್ಯಾಟಿಂಗ್.

  • 23 Sep 2021 10:12 PM (IST)

    KKR 63/1 (6)

  • 23 Sep 2021 10:10 PM (IST)

    ಪವರ್​ಪ್ಲೇ ಮುಕ್ತಾಯ: ಕೆಕೆಆರ್​ ಬಿರುಸಿನ ಆರಂಭ

    KKR 63/1 (6)

    ಕ್ರೀಸ್​ನಲ್ಲಿ ವೆಂಕಟೇಶ್ ಅಯ್ಯರ್ (33) ಹಾಗೂ ರಾಹುಲ್ ತ್ರಿಪಾಠಿ (16) ಬ್ಯಾಟಿಂಗ್.

  • 23 Sep 2021 10:06 PM (IST)

    ತ್ರಿಪಾಠಿ ಸೂಪರ್ ಪ್ಲೇಸ್​ಮೆಂಟ್

    ಆ್ಯಡಂ ಮಿಲ್ನ್ ಎಸೆತದಲ್ಲಿ ಫೈನ್​ ಲೆಗ್​ನತ್ತ ಬೌಂಡರಿ ಬಾರಿಸಿದ ರಾಹುಲ್ ತ್ರಿಪಾಠಿ

  • 23 Sep 2021 10:00 PM (IST)

    ತ್ರಿಪಾಠಿ ಪಾರ್ಟಿ ಶುರು

    ಟ್ರೆಂಟ್ ಬೌಲ್ಟ್ ಎಸೆತದಲ್ಲಿ ಸ್ಕ್ವೇರ್ ಮೂಲಕ ಬೌಂಡರಿ ಬಾರಿಸಿದ ರಾಹುಲ್ ತ್ರಿಪಾಠಿ

  • 23 Sep 2021 09:57 PM (IST)

    KKR 42/1 (3.1)

    ಕೆಕೆಆರ್ ಮೊದಲ ವಿಕೆಟ್ ಪತನ- ಶುಭ್​ಮನ್ ಗಿಲ್ ಔಟ್

    ಕ್ರೀಸ್​ನಲ್ಲಿ ವೆಂಕಟೇಶ್ ಅಯ್ಯರ್-ರಾಹುಲ್ ತ್ರಿಪಾಠಿ

  • 23 Sep 2021 09:55 PM (IST)

    ಗಿಲ್ ಕ್ಲೀನ್ ಬೌಲ್ಡ್​

    ಜಸ್​ಪ್ರೀತ್ ಬುಮ್ರಾ ಎಸೆತದಲ್ಲಿ ಶುಭ್​ಮನ್ ಗಿಲ್ (13) ಬೌಲ್ಡ್​. ಮುಂಬೈ ಇಂಡಿಯನ್ಸ್​ಗೆ ಮೊದಲ ಯಶಸ್ಸು

  • 23 Sep 2021 09:54 PM (IST)

    ಅಯ್ಯರ್ ಅಬ್ಬರ ಶುರು

    9 ಎಸೆತಗಳಲ್ಲಿ 2 ಸಿಕ್ಸರ್ ಹಾಗೂ 3 ಬೌಂಡರಿ

    KKR 40/0 (2.5)

  • 23 Sep 2021 09:33 PM (IST)

    ಕೆಕೆಆರ್​ಗೆ 156 ರನ್ ಟಾರ್ಗೆಟ್

  • 23 Sep 2021 09:32 PM (IST)

    ಕೆಕೆಆರ್​ಗೆ 156 ರನ್ ಟಾರ್ಗೆಟ್ ನೀಡಿದ ಮುಂಬೈ ಇಂಡಿಯನ್ಸ್​

  • 23 Sep 2021 09:26 PM (IST)

    ಮುಂಬೈ ಇಂಡಿಯನ್ಸ್ ಇನಿಂಗ್ಸ್​ ಅಂತ್ಯ

    MI 155/6 (20)

  • 23 Sep 2021 09:25 PM (IST)

    20 ಓವರ್ ಮುಕ್ತಾಯ

    ಕೊನೆಯ ಓವರ್​ನಲ್ಲಿ ಕೇವಲ 6 ರನ್ ನೀಡಿದ ಲೂಕಿ ಫರ್ಗುಸನ್

  • 23 Sep 2021 09:23 PM (IST)

    ಬ್ಯಾಕ್ ಟು ಬ್ಯಾಕ್ ವಿಕೆಟ್

    ಪೊಲಾರ್ಡ್ ಬೆನ್ನಲ್ಲೇ ಕ್ಯಾಚ್ ನೀಡಿ ನಿರ್ಗಮಿಸಿದ ಕೃನಾಲ್ ಪಾಂಡ್ಯ (12)

    ಕೊನೆಯ ಓವರ್​ನಲ್ಲಿ ಫರ್ಗುಸನ್ ಉತ್ತಮ ಬೌಲಿಂಗ್

  • 23 Sep 2021 09:22 PM (IST)

    20ನೇ ಓವರ್ ಚಾಲ್ತಿಯಲ್ಲಿ

    ಮುಂಬೈ ಇಂಡಿಯನ್ಸ್​- 149/5 (19.2)

  • 23 Sep 2021 09:22 PM (IST)

    ಅಂತಿಮ ಓವರ್

    ರನ್​ ಕದಿಯುವ ಯತ್ನ ಫರ್ಗುಸಲ್ ಎಸೆತಕ್ಕೆ ಕೀರನ್ ಪೊಲಾರ್ಡ್​ ರನೌಟ್

  • 23 Sep 2021 09:16 PM (IST)

    ಸೂ…..ಪರ್ ಶಾಟ್​

    ಆಂಡ್ರೆ ರಸೆಲ್​ ಎಸೆತದಲ್ಲಿ ಸೂಪರ್ ಸಿಕ್ಸರ್ ಸಿಡಿಸಿದ ಕೃನಾಲ್ ಪಾಂಡ್ಯ.

    ಲಾಂಗ್ ಆಫ್​ನತ್ತ ಭರ್ಜರಿ ಸಿಕ್ಸ್​…

  • 23 Sep 2021 09:15 PM (IST)

    18 ರನ್

    ಪ್ರಸಿದ್ದ್ ಕೃಷ್ಣ ಎಸೆದ 18ನೇ ಓವರ್​ನಲ್ಲಿ 18 ರನ್​ ಕಲೆಹಾಕಿದ ಮುಂಬೈ ಇಂಡಿಯನ್ಸ್​ ಬ್ಯಾಟರುಗಳು.

    ಕ್ರೀಸ್​ನಲ್ಲಿ ಕೀರನ್ ಪೊಲಾರ್ಡ್ ಹಾಗೂ ಕೃನಾಲ್ ಪಾಂಡ್ಯ ಬ್ಯಾಟಿಂಗ್

    MI 139/4 (18)

  • 23 Sep 2021 09:14 PM (IST)

    ಕ್ಯಾಚ್ ಡ್ರಾಪ್

    ಪ್ರಸಿದ್ಧ್ ಕೃಷ್ಣ ಎಸೆತದಲ್ಲಿ ಕೃನಾಲ್ ಪಾಂಡ್ಯ ಬ್ಯಾಟ್ ತುದಿ ತಾಗಿ ಚೆಂಡು ಕೀಪರ್​ನತ್ತ- ಕ್ಯಾಚ್ ಕೈಚೆಲ್ಲಿದ ದಿನೇಶ್ ಕಾರ್ತಿಕ್

  • 23 Sep 2021 09:12 PM (IST)

    ಪೊಲಾರ್ಡ್ ಭರ್ಜರಿ ಬ್ಯಾಟಿಂಗ್

    ಪ್ರಸಿದ್ಧ್ ಕೃಷ್ಣ ಎಸೆತಕ್ಕೆ ಭರ್ಜರಿ ಬೌಂಡರಿ ಉತ್ತರ ನೀಡಿದ ಪೊಲಾರ್ಡ್

  • 23 Sep 2021 09:02 PM (IST)

    ರಸೆಲ್ ಉತ್ತಮ ಕ್ಯಾಚ್- ಕಿಶನ್ ಔಟ್

    ಲೂಕಿ ಫರ್ಗುಸನ್ ಎಸೆತದಲ್ಲಿ ರಸೆಲ್​ಗೆ ಕ್ಯಾಚ್ ನೀಡಿ ಹೊರನಡೆದ ಇಶಾನ್ ಕಿಶನ್ (14)

    MI 119/4 (16.2)

  • 23 Sep 2021 08:59 PM (IST)

    ಪೊಲಾರ್ಡ್ ಪವರ್

    ಆಂಡ್ರೆ ರಸೆಲ್ ಎಸೆತದಲ್ಲಿ ಬೌಂಡರಿ ಬಾರಿಸಿ ರನ್ ಖಾತೆ ತೆರೆದ ಕೀರನ್ ಪೊಲಾರ್ಡ್​.

  • 23 Sep 2021 08:58 PM (IST)

    ಮುಂಬೈ ಇಂಡಿಯನ್ಸ್​ 3 ವಿಕೆಟ್ ಪತನ

    ಮುಂಬೈ ಇಂಡಿಯನ್ಸ್​ 3 ವಿಕೆಟ್ ಪತನ:-

    ಔಟ್ ಆಗಿರುವ ಬ್ಯಾಟ್ಸ್​ಮನ್​

    ರೋಹಿತ್ ಶರ್ಮಾ (33)

    ಸೂರ್ಯ ಕುಮಾರ್ ಯಾದವ್ (5)

    ಕ್ವಿಂಟನ್ ಡಿಕಾಕ್ (55)

    ಕ್ರೀಸ್​ನಲ್ಲಿ ಕೀರನ್ ಪೊಲಾರ್ಡ್ ಹಾಗೂ ಇಶಾನ್ ಕಿಶನ್ ಬ್ಯಾಟಿಂಗ್

  • 23 Sep 2021 08:56 PM (IST)

    ಪಾಕೆಟ್ ಡೈನಾಮೊ

    ಆಂಡ್ರೆ ರಸೆಲ್​ ಎಸೆತದಲ್ಲಿ ಭರ್ಜರಿ ಸಿಕ್ಸರ್ ಸಿಡಿಸಿದ ಇಶಾನ್ ಕಿಶನ್

    ಶಾರ್ಟ್ ಎಸೆತವನ್ನು ಓವರ್ ಫೈನ್​ ಲೆಗ್​ನತ್ತ ಬಾರಿಸಿದ ಪಾಕೆಟ್ ಡೈನಾಮೊ

  • 23 Sep 2021 08:54 PM (IST)

    15 ಓವರ್ ಮುಕ್ತಾಯ

    MI 106/3 (15)

     

  • 23 Sep 2021 08:52 PM (IST)

    ಡಿಕಾಕ್ ಔಟ್

    ಸಿಂಪಲ್ ಸ್ಟ್ರೈಟ್ ಫಾರ್ವಡ್ ಕ್ಯಾಚ್​ ನೀಡಿ ಹೊರ ನಡೆದ ಕ್ವಿಂಟನ್ ಡಿಕಾಕ್ (55). ಪ್ರಸಿದ್ಧ್ ಕೃಷ್ಣ ಖಾತೆಗೆ ಮತ್ತೊಂದು ವಿಕೆಟ್.

    MI 106/3 (14.5)

  • 23 Sep 2021 08:51 PM (IST)

    ಫ್ರೀ ಹಿಟ್​

    15ನೇ ಓವರ್​ನ 4ನೇ ಎಸೆತದಲ್ಲಿ ಲೈನ್-ನೋಬಾಲ್ ಎಸೆದ ಪ್ರಸಿದ್ಧ್ ಕೃಷ್ಣ

    ಫ್ರೀ ಹಿಟ್ ಎಸೆತವನ್ನು ಬಳಸಿಕೊಳ್ಳುವಲ್ಲಿ  ಕ್ವಿಂಟನ್ ಡಿಕಾಕ್ ವಿಫಲ.

  • 23 Sep 2021 08:45 PM (IST)

    ಡಿಕಾಕ್ ಭರ್ಜರಿ ಬ್ಯಾಟಿಂಗ್

  • 23 Sep 2021 08:43 PM (IST)

    ವಾಟ್ ಎ ಶಾಟ್…ಡಿಕಾಕ್

    ಮಿಡ್ ವಿಕೆಟ್​ ಫೀಲ್ಡಿಂಗ್​ನತ್ತ ಭರ್ಜರಿ ಬೌಂಡರಿ ಬಾರಿಸಿ ತಂಡದ ಮೊತ್ತವನ್ನು ನೂರರ ಗಡಿದಾಟಿಸಿದ ಡಿಕಾಕ್

    MI 101/2 (14)

      

  • 23 Sep 2021 08:42 PM (IST)

    ಡಿಕಾಕ್​ ಅರ್ಧಶತಕ

    37 ಎಸೆತಗಳಲ್ಲಿ 3 ಸಿಕ್ಸರ್ ಹಾಗೂ 3 ಫೋರ್​ಗಳೊಂದಿಗೆ ಅರ್ಧಶತಕ ಪೂರೈಸಿದ ಕ್ವಿಂಟನ್ ಡಿಕಾಕ್.

  • 23 Sep 2021 08:37 PM (IST)

    ರನ್​ಗತಿ ನಿಯಂತ್ರಿಸುವಲ್ಲಿ ಕೆಕೆಆರ್ ಯಶಸ್ವಿ

    MI 93/2 (13)

  • 23 Sep 2021 08:34 PM (IST)

    ಪ್ರಸಿದ್ಧ್ ಕೃಷ್ಣಗೆ ಮೊದಲ ವಿಕೆಟ್

    ಕನ್ನಡಿಗ ಪ್ರಸಿದ್ಧ್ ಕೃಷ್ಣ ಸೂರ್ಯಕುಮಾರ್ ಯಾದವ್ ವಿಕೆಟ್ ಪಡೆಯುವ ಮೂಲಕ ಮೊದಲ ಯಶಸ್ಸು ಪಡೆದಿದ್ದಾರೆ. 13ನೇ ಓವರ್​ನ ಮೊದಲ ಎಸೆತದಲ್ಲಿ ಫ್ಲಿಕ್ ಶಾಟ್​ಗೆ ಮುಂದಾದ ಸೂರ್ಯ (5) ಕೀಪರ್​ಗೆ ಕ್ಯಾಚ್ ನೀಡಿ ನಿರ್ಗಮಿಸಿದರು.

    MI 89/2 (12.3)

  • 23 Sep 2021 08:32 PM (IST)

    ಕೆಕೆಆರ್​ಗೆ ಮತ್ತೊಂದು ಯಶಸ್ಸು

    ಸೂರ್ಯಕುಮಾರ್ ಯಾದವ್ ಔಟ್

  • 23 Sep 2021 08:22 PM (IST)

    10 ಓವರ್ ಮುಕ್ತಾಯ: ಮುಂಬೈ ಮೇಲುಗೈ

    MI 80/1 (10)

      ಕ್ರೀಸ್​ನಲ್ಲಿ ಡಿಕಾಕ್ ಹಾಗೂ ಸೂರ್ಯಕುಮಾರ್ ಯಾದವ್ ಬ್ಯಾಟಿಂಗ್

  • 23 Sep 2021 08:20 PM (IST)

    ರೋಹಿತ್ ಶರ್ಮಾ ಔಟ್

    ಸುನೀಲ್ ನರೈನ್ ಎಸೆತದಲ್ಲಿ ರೋಹಿತ್ ಶರ್ಮಾ ಔಟ್.

    ಭರ್ಜರಿ ಹೊಡೆತಕ್ಕೆ ಮುಂದಾಗಿ ಶುಭ್​ಮನ್ ಗಿಲ್​ಗೆ ಕ್ಯಾಚ್ ನೀಡಿದ ಹಿಟ್​ಮ್ಯಾನ್

    30 ಎಸೆತಗಳಲ್ಲಿ 33 ರನ್ ಬಾರಿಸಿದ ಹೊರನಡೆದ ರೋಹಿತ್ ಶರ್ಮಾ

  • 23 Sep 2021 08:17 PM (IST)

    ಡಿಕಾಕ್ ಬಿರುಸಿನ ಬ್ಯಾಟಿಂಗ್

    ಕೇವಲ 25 ಎಸೆತಗಳಲ್ಲಿ 41 ರನ್ ಬಾರಿಸಿರುವ ಡಿಕಾಕ್..3 ಫೋರ್, 3 ಸಿಕ್ಸರ್​ನೊಂದಿಗೆ ಕ್ರೀಸ್​ಬಲ್ಲಿ ಅಬ್ಬರ

    MI 77/0 (9)

  • 23 Sep 2021 08:14 PM (IST)

    ಬ್ಯಾಕ್ ಟು ಬ್ಯಾಕ್ ಬೌಂಡರಿ

    ಡಿಕಾಕ್ ಅಬ್ಬರ ಶುರು…ರಸೆಲ್​ ಅವರ 2ನೇ ಎಸೆತದಲ್ಲಿ ಸ್ಟ್ರೈಟ್ ಹಿಟ್​ ಮೂಲಕ ಬೌಂಡರಿ ಸಿಡಿಸಿದ ಡಿಕಾಕ್

  • 23 Sep 2021 08:12 PM (IST)

    ಡಿಕಾಕ್ ಡ್ರೈವ್

    9ನೇ ಓವರ್ ಎಸೆಯಲು ಬಂದ ಆಂಡ್ರೆ ರಸೆಲ್​ರನ್ನು ಸೂಪರ್ ಬೌಂಡರಿ ಮೂಲಕ ವೆಲ್ಕಂ ಮಾಡಿದ ಕ್ವಿಂಟನ್ ಡಿಕಾಕ್

  • 23 Sep 2021 08:10 PM (IST)

    8 ಓವರ್ ಮುಕ್ತಾಯ

    ರೋಹಿತ್ ಶರ್ಮಾ (30),  ಡಿಕಾಕ್ (31)

    MI 63/0 (8)

  • 23 Sep 2021 08:08 PM (IST)

    ಮುಂಬೈ ಇಂಡಿಯನ್ಸ್ ಉತ್ತಮ ಬ್ಯಾಟಿಂಗ್

    ಡಿಕಾಕ್-ರೋಹಿತ್ ಶರ್ಮಾ ಜುಗಲ್​ಬಂದಿ

    MI 62/0 (7.3)

  • 23 Sep 2021 08:03 PM (IST)

    ಮತ್ತೆ ಬೌಲಿಂಗ್​ನಲ್ಲಿ ಬದಲಾವಣೆ

    ದಾಳಿಗಿಳಿದ ಸುನೀಲ್ ನರೈನ್

    MI 57/0 (6.1)

  • 23 Sep 2021 08:01 PM (IST)

    ಪವರ್ ಪ್ಲೇ ಮುಕ್ತಾಯ: ಮುಂಬೈ ಭರ್ಜರಿ ಆರಂಭ

    ಪವರ್ ಪ್ಲೇ ಮುಕ್ತಾಯ: ಮುಂಬೈ ಭರ್ಜರಿ ಆರಂಭ

    ರೋಹಿತ್ ಶರ್ಮಾ (27)

    ಕ್ವಿಂಟನ್ ಡಿಕಾಕ್ (27)

    MI 56/0 (6)

  • 23 Sep 2021 07:59 PM (IST)

    ಮತ್ತೊಂದು ಭರ್ಜರಿ ಸಿಕ್ಸರ್

    ಪ್ರಸಿದ್ಧ್ ಕೃಷ್ಣ ಎಸೆತದಲ್ಲಿ ಮತ್ತೊಂದು ಭರ್ಜರಿ ಸಿಕ್ಸ್ ಸಿಡಿಸಿದ ಡಿಕಾಕ್

  • 23 Sep 2021 07:57 PM (IST)

    ವಾವ್ಹ್​…ಮ್ಯಾಕ್ಸಿಮಂ

    ಪ್ರಸಿದ್ಧ್ ಕೃಷ್ಣ ಎಸೆತದಲ್ಲಿ ಸೂಪರ್ ಶಾಟ್…ಸ್ಟ್ರೈಟ್ ಹಿಟ್​ ಮೂಲಕ ಚೆಂಡನ್ನು ಸ್ಟೇಡಿಯಂಗೆ ತಲುಪಿಸಿದ ಕ್ವಿಂಟನ್ ಡಿಕಾಕ್- ಸಿಕ್ಸ್

  • 23 Sep 2021 07:53 PM (IST)

    ಡೇಂಜರಸ್ ಡಿಕಾಕ್

    ಲೂಕಿ ಫರ್ಗುಸನ್ ಎಸೆತದಲ್ಲಿ ಓವರ್ ಫೈನ್​ ಲೆಗ್​ನತ್ತ ಭರ್ಜರಿ ಹೊಡೆತ

    ಕ್ವಿಂಟನ್ ಡಿಕಾಕ್​ ಬ್ಯಾಟ್​ನಿಂದ ಮುಂಬೈ ತಂಡದ ಮೊದಲ ಸಿಕ್ಸರ್

  • 23 Sep 2021 07:51 PM (IST)

    ಕೆಕೆಆರ್ ವಿರುದ್ದ ಹಿಟ್​ಮ್ಯಾನ್ ಅಬ್ಬರ

    ಕೊಲ್ಕತ್ತಾ ನೈಟ್ ರೈಡರ್ಸ್​ ವಿರುದ್ದ 1000 ರನ್ ಪೂರೈಸಿದ ರೋಹಿತ್ ಶರ್ಮಾ

  • 23 Sep 2021 07:48 PM (IST)

    ನಾಲ್ಕು ಓವರ್​ ಮುಕ್ತಾಯ

    ನಾಲ್ಕು ಓವರ್​ ಮುಕ್ತಾಯ

    ಮುಂಬೈ ಇಂಡಿಯನ್ಸ್​ ಉತ್ತಮ ಆರಂಭ

    ಯಾವುದೇ ವಿಕೆಟ್ ನಷ್ಟವಿಲ್ಲದೆ 29 ರನ್​ ಕಲೆಹಾಕಿದ ಆರಂಭಿಕರು

    MI 29/0 (4)

  • 23 Sep 2021 07:47 PM (IST)

    ಬ್ಯಾಕ್ ಟು ಬ್ಯಾಕ್ ಬೌಂಡರಿ

    ವರುಣ್ ಚಕ್ರವರ್ತಿ ಎಸೆತದಲ್ಲಿ ಬ್ಯಾಕ್ ಟು ಬ್ಯಾಕ್ ಬೌಂಡರಿ ಸಿಡಿಸಿದ ಹಿಟ್​ಮ್ಯಾನ್

    ಬ್ಯಾಕ್​ವರ್ಡ್​ ಸ್ಕ್ವೇರ್ ಲೆಗ್​ ಮೂಲಕ ತಂಡಕ್ಕೆ ನಾಲ್ಕು ರನ್ ತಂದುಕೊಟ್ಟ ಮುಂಬೈ ನಾಯಕ.

  • 23 Sep 2021 07:45 PM (IST)

    ರೋಹಿಟ್-​ಮ್ಯಾನ್

    ವರುಣ್ ಚಕ್ರವರ್ತಿ ಎಸೆದ 4ನೇ ಓವರ್​ನ ಮೊದಲ ಎಸೆತದಲ್ಲೇ ಬೌಂಡರಿ.

    ಮಿಡ್ ಆಫ್ ಮೂಲಕ ಚೆಂಡು ಬೌಂಡರಿಗೆ…ಫೋರ್ ರನ್

  • 23 Sep 2021 07:44 PM (IST)

    ರಿವರ್ಸ್​ ಸ್ವೀಪ್​

    3ನೇ ಓವರ್​ನ ಅಂತಿಮ ಎಸೆತದಲ್ಲಿ ರಿವರ್ಸ್ ಸ್ವೀಪ್​ ಮೂಲಕ ಬೌಂಡರಿ ಬಾರಿಸಿದ ಡಿಕಾಕ್ .

    MI 20/0

  • 23 Sep 2021 07:42 PM (IST)

    ರೋ-ಹಿಟ್​

    ಸುನಿಲ್ ನರೈನ್ ಸ್ಪಿನ್​ಗೆ ಮಿಡ್ ವಿಕೆಟ್ ಮೂಲಕ ಬೌಂಡರಿ ಉತ್ತರ ನೀಡಿದ ರೋಹಿತ್ ಶರ್ಮಾ.

  • 23 Sep 2021 07:41 PM (IST)

    ಕೆಕೆಆರ್ ಸ್ಪಿನ್​ಮಯ

    ಮೂರನೇ ಓವರ್ ಕೂಡ ಸ್ಪಿನ್ನರ್

    ಸುನಿಲ್ ನರೈನ್ ಕೈಗೆ ಚೆಂಡು ನೀಡಿದ ಇಯಾನ್ ಮೋರ್ಗನ್.

    ಮೊದಲ ಮೂರು ಓವರ್​ ಸ್ಪಿನ್ನರ್​ಗಳನ್ನೇ ಬಳಸಿದ ಕೆಕೆಆರ್

  • 23 Sep 2021 07:39 PM (IST)

    ಎರಡು ಓವರ್​ ಮುಕ್ತಾಯ

    MI 9/0 (2)

    ರೋಹಿತ್ ಶರ್ಮಾ (7), ಡಿಕಾಕ್ (1)

  • 23 Sep 2021 07:36 PM (IST)

    2ನೇ ಓವರ್ ಕೂಡ ಸ್ಪಿನ್ನರ್​

    ವರುಣ್ ಚಕ್ರವರ್ತಿ ಕೈಗೆ ಚೆಂಡು ನೀಡಿದ ಇಯಾನ್ ಮೋರ್ಗನ್

    ಮೊದಲ ಎರಡು ಓವರ್​ ಸ್ಪಿನ್ನರ್​ಗೆ ನೀಡಿದ ಕೆಕೆಆರ್ ನಾಯಕ

  • 23 Sep 2021 07:34 PM (IST)

    ಮುಂಬೈ ಉತ್ತಮ ಆರಂಭ

    ನಿತೀಶ್ ರಾಣಾ ಅವರ ಮೊದಲ ಓವರ್​ನಲ್ಲಿ 5 ರನ್​ ಕಲೆಹಾಕಿದ ಮುಂಬೈ ಇಂಡಿಯನ್ಸ್​

    ರೋಹಿತ್ ಶರ್ಮಾ (5)

    ಕ್ವಿಂಟನ್ ಡಿ ಕಾಕ್ (0)

  • 23 Sep 2021 07:33 PM (IST)

    ಮೊದಲ ಎಸೆತದಲ್ಲೇ ಬೌಂಡರಿ

    ಮೊದಲ ಎಸೆತದಲ್ಲೇ ಕವರ್ಸ್​ನತ್ತ ಬೌಂಡರಿ ಬಾರಿಸಿದ ರೋಹಿತ್ ಶರ್ಮಾ

  • 23 Sep 2021 07:32 PM (IST)

    ಕೆಕೆಆರ್ ಮೊದಲ ಓವರ್

    ಸ್ಪಿನ್ನರ್  ನಿತೀಶ್ ರಾಣಾ ಕೈಗೆ ಮೊದಲ ಓವರ್ ನೀಡಿದ ಇಯಾನ್ ಮೋರ್ಗನ್

  • 23 Sep 2021 07:31 PM (IST)

    ಮುಂಬೈ ಇಂಡಿಯನ್ಸ್​ ಆರಂಭಿಕರು

    ಮುಂಬೈ ಇಂಡಿಯನ್ಸ್​ ಆರಂಭಿಕರು

    ರೋಹಿತ್ ಶರ್ಮಾ (ಬಲಗೈ ಬ್ಯಾಟರ್)

    ಕ್ವಿಂಟನ್ ಡಿ ಕಾಕ್ (ಎಡಗೈ ಬ್ಯಾಟರ್)

  • 23 Sep 2021 07:29 PM (IST)

    ಮುಂಬೈ ಇಂಡಿಯನ್ಸ್​ ರೆಡಿ

  • 23 Sep 2021 07:15 PM (IST)

    ಕಣಕ್ಕಿಳಿಯುವ ಕಲಿಗಳು

    ಕೋಲ್ಕತ್ತಾ ನೈಟ್ ರೈಡರ್ಸ್ ಪ್ಲೇಯಿಂಗ್ ಇಲೆವೆನ್: ಶುಭಮನ್ ಗಿಲ್, ವೆಂಕಟೇಶ್ ಅಯ್ಯರ್, ರಾಹುಲ್ ತ್ರಿಪಾಠಿ, ನಿತೀಶ್ ರಾಣಾ, ಇಯಾನ್ ಮೋರ್ಗನ್ (ನಾಯಕ), ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಆಂಡ್ರೆ ರಸೆಲ್, ಸುನಿಲ್ ನರೈನ್, ಲೂಕಿ ಫರ್ಗುಸನ್, ವರುಣ್ ಚಕ್ರವರ್ತಿ, ಪ್ರಸಿದ್ ಕೃಷ್ಣ

    ಮುಂಬೈ ಇಂಡಿಯನ್ಸ್ ಪ್ಲೇಯಿಂಗ್ ಇಲೆವೆನ್: ಕ್ವಿಂಟನ್ ಡಿ ಕಾಕ್ (ವಿಕೆಟ್ ಕೀಪರ್), ರೋಹಿತ್ ಶರ್ಮಾ (ನಾಯಕ), ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್, ಸೌರಭ್ ತಿವಾರಿ, ಕೀರನ್ ಪೊಲಾರ್ಡ್, ಕೃನಾಲ್ ಪಾಂಡ್ಯ, ಆಡಮ್ ಮಿಲ್ನ್, ರಾಹುಲ್ ಚಹರ್, ಜಸ್ಪ್ರೀತ್ ಬುಮ್ರಾ, ಟ್ರೆಂಟ್ ಬೌಲ್ಟ್

  • 23 Sep 2021 07:11 PM (IST)

    ಟಾಸ್ ವೀಡಿಯೋ

  • 23 Sep 2021 07:09 PM (IST)

    KKR ತಂಡದಲ್ಲಿ ಯಾವುದೇ ಬದಲಾವಣೆ ಇಲ್ಲ

  • 23 Sep 2021 07:06 PM (IST)

    ಕೋಲ್ಕತ್ತಾ ನೈಟ್ ರೈಡರ್ಸ್ ಪ್ಲೇಯಿಂಗ್ ಇಲೆವೆನ್

    ಕೋಲ್ಕತ್ತಾ ನೈಟ್ ರೈಡರ್ಸ್ ಪ್ಲೇಯಿಂಗ್ ಇಲೆವೆನ್: ಶುಭಮನ್ ಗಿಲ್, ವೆಂಕಟೇಶ್ ಅಯ್ಯರ್, ರಾಹುಲ್ ತ್ರಿಪಾಠಿ, ನಿತೀಶ್ ರಾಣಾ, ಇಯಾನ್ ಮೋರ್ಗನ್ (ನಾಯಕ), ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಆಂಡ್ರೆ ರಸೆಲ್, ಸುನಿಲ್ ನರೈನ್, ಲೂಕಿ ಫರ್ಗುಸನ್, ವರುಣ್ ಚಕ್ರವರ್ತಿ, ಪ್ರಸಿದ್ ಕೃಷ್ಣ

  • 23 Sep 2021 07:05 PM (IST)

    ಮುಂಬೈ ಇಂಡಿಯನ್ಸ್ ಪ್ಲೇಯಿಂಗ್ ಇಲೆವೆನ್

    ಮುಂಬೈ ಇಂಡಿಯನ್ಸ್ ಪ್ಲೇಯಿಂಗ್ ಇಲೆವೆನ್: ಕ್ವಿಂಟನ್ ಡಿ ಕಾಕ್ (ವಿಕೆಟ್ ಕೀಪರ್), ರೋಹಿತ್ ಶರ್ಮಾ (ನಾಯಕ), ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್, ಸೌರಭ್ ತಿವಾರಿ, ಕೀರನ್ ಪೊಲಾರ್ಡ್, ಕೃನಾಲ್ ಪಾಂಡ್ಯ, ಆಡಮ್ ಮಿಲ್ನ್, ರಾಹುಲ್ ಚಹರ್, ಜಸ್ಪ್ರೀತ್ ಬುಮ್ರಾ, ಟ್ರೆಂಟ್ ಬೌಲ್ಟ್

  • 23 Sep 2021 07:02 PM (IST)

    ಟಾಸ್ ಗೆದ್ದ ಕೆಕೆಆರ್: ಬೌಲಿಂಗ್ ಆಯ್ಕೆ

    ಟಾಸ್ ಗೆದ್ದ ಕೆಕೆಆರ್ ನಾಯಕ ಇಯಾನ್ ಮೋರ್ಗನ್, ಬೌಲಿಂಗ್ ಆಯ್ಕೆ.

    ಮುಂಬೈ ಇಂಡಿಯನ್ಸ್ ಪರ ರೋಹಿತ್ ಶರ್ಮಾ ಕಣಕ್ಕೆ.

  • 23 Sep 2021 06:54 PM (IST)

    ರಸೆಲ್ vs ಪೊಲಾರ್ಡ್​: ಬಲಿಷ್ಠ ದಾಂಡಿಗರ ಕದನ

  • 23 Sep 2021 06:49 PM (IST)

    ಅಬುಧಾಬಿಯ ಶೇಖ್ ಝಾಯೆದ್ ಕ್ರಿಕೆಟ್ ಸ್ಟೇಡಿಯಂ

  • 23 Sep 2021 06:45 PM (IST)

    ನಾನೇ ಬೇರೆ…ನನ್ನ ಸ್ಟೈಲೇ ಬೇರೆ- ರಾಹುಲ್ ಚಹರ್

  • 23 Sep 2021 06:16 PM (IST)

    ಇಂದಿನ ಪಂದ್ಯದಲ್ಲಿ ಹಿಟ್​ಮ್ಯಾನ್ ಕಣಕ್ಕಿಳಿಯುವುದು ಬಹುತೇಕ ಖಚಿತ

  • 23 Sep 2021 06:12 PM (IST)

    ಮುಂಬೈಗೆ ಮಾಸ್ಟರ್​ ಬ್ಲಾಸ್ಟರ್ ಬಲ

  • 23 Sep 2021 06:08 PM (IST)

    ಉಭಯ ತಂಡಗಳ ಮುಖಾಮುಖಿ ಅಂಕಿ ಅಂಶಗಳು

Published On - Sep 23,2021 6:06 PM

ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು
ಬೋಗಸ್ ಮಾಡವ್ರೆ, ಯಶ್ ಹೆಸರು ಹಾಳು ಮಾಡ್ತಾವ್ರೆ: ಯಶ್ ತಾಯಿ ಆರೋಪ
ಬೋಗಸ್ ಮಾಡವ್ರೆ, ಯಶ್ ಹೆಸರು ಹಾಳು ಮಾಡ್ತಾವ್ರೆ: ಯಶ್ ತಾಯಿ ಆರೋಪ
ಫಿಲಂ ಚೇಂಬರ್ ನೂತನ ಅಧ್ಯಕ್ಷೆ ಜಯಮಾಲ ಹಾಕಿಕೊಂಡಿರುವ ಯೋಜನೆಗಳೇನು?
ಫಿಲಂ ಚೇಂಬರ್ ನೂತನ ಅಧ್ಯಕ್ಷೆ ಜಯಮಾಲ ಹಾಕಿಕೊಂಡಿರುವ ಯೋಜನೆಗಳೇನು?
ಮದ್ವೆಯಾಗಿ 5 ವರ್ಷವಾದರೂ ಅವ್ನ ಕೈಯಲ್ಲಿ ಮಗು ಮಾಡಿಕೊಳ್ಳಲಾಗಿಲ್ಲ
ಮದ್ವೆಯಾಗಿ 5 ವರ್ಷವಾದರೂ ಅವ್ನ ಕೈಯಲ್ಲಿ ಮಗು ಮಾಡಿಕೊಳ್ಳಲಾಗಿಲ್ಲ
ಕೇಂದ್ರ ಬಜೆಟ್ ಬಗ್ಗೆ ವ್ಯಂಗ್ಯ ಮಾಡುತ್ತಲ್ಲೇ ಕಟುವಾಗಿ ಟೀಕಿಸಿದ ಸಿಎಂ!
ಕೇಂದ್ರ ಬಜೆಟ್ ಬಗ್ಗೆ ವ್ಯಂಗ್ಯ ಮಾಡುತ್ತಲ್ಲೇ ಕಟುವಾಗಿ ಟೀಕಿಸಿದ ಸಿಎಂ!
ಆಸ್ಟ್ರೇಲಿಯನ್ ಓಪನ್ ಗೆದ್ದು ಇತಿಹಾಸ ನಿರ್ಮಿಸಿದ ಕಾರ್ಲೋಸ್ ಅಲ್ಕರಾಝ್
ಆಸ್ಟ್ರೇಲಿಯನ್ ಓಪನ್ ಗೆದ್ದು ಇತಿಹಾಸ ನಿರ್ಮಿಸಿದ ಕಾರ್ಲೋಸ್ ಅಲ್ಕರಾಝ್
ಚಿಮುಲ್ ಚುನಾವಣೆ: ಮತದಾರರಿಗೆ ಲಕ್ಷ ಲಕ್ಷ ನಗದು, ಬೆಳ್ಳಿ ತಟ್ಟೆ!
ಚಿಮುಲ್ ಚುನಾವಣೆ: ಮತದಾರರಿಗೆ ಲಕ್ಷ ಲಕ್ಷ ನಗದು, ಬೆಳ್ಳಿ ತಟ್ಟೆ!
ಟ್ಯಾಕ್ಸ್‌ ಟೆರರಿಸಂ: ಐಟಿ ದಾಳಿ ವಿರುದ್ಧ ತಿರುಗಿಬಿದ್ದ ಮೋಹನ್ ದಾಸ್ ಪೈ
ಟ್ಯಾಕ್ಸ್‌ ಟೆರರಿಸಂ: ಐಟಿ ದಾಳಿ ವಿರುದ್ಧ ತಿರುಗಿಬಿದ್ದ ಮೋಹನ್ ದಾಸ್ ಪೈ
ಅರಣ್ಯ ಇಲಾಖೆ ಸಿಬ್ಬಂದಿಯನ್ನೇ ಅಟ್ಟಾಡಿಸಿದ ಆನೆ, ಭಯಾನಕ ವಿಡಿಯೋ ನೋಡಿ
ಅರಣ್ಯ ಇಲಾಖೆ ಸಿಬ್ಬಂದಿಯನ್ನೇ ಅಟ್ಟಾಡಿಸಿದ ಆನೆ, ಭಯಾನಕ ವಿಡಿಯೋ ನೋಡಿ
Siddaramaiah Press Conference: ಸಿದ್ದರಾಮಯ್ಯ ಸುದ್ದಿಗೋಷ್ಠಿ ಲೈವ್​
Siddaramaiah Press Conference: ಸಿದ್ದರಾಮಯ್ಯ ಸುದ್ದಿಗೋಷ್ಠಿ ಲೈವ್​