World Cup 2025: ಭಾರತ ವಿಶ್ವಕಪ್‌ ಗೆದ್ದರೆ ಬಿಸಿಸಿಐನಿಂದ ಸಿಗಲಿದೆ ಶತಕೋಟಿಗೂ ಅಧಿಕ ಮೊತ್ತದ ಬಹುಮಾನ

BCCI Prize Money: 2025 ರ ಮಹಿಳಾ ಏಕದಿನ ವಿಶ್ವಕಪ್ ಫೈನಲ್‌ನಲ್ಲಿ ಭಾರತ ಮತ್ತು ದಕ್ಷಿಣ ಆಫ್ರಿಕಾ ನವೆಂಬರ್ 2 ರಂದು ಸೆಣಸಲಿವೆ. 25 ವರ್ಷಗಳ ನಂತರ ಹೊಸ ಚಾಂಪಿಯನ್ ಹೊರಹೊಮ್ಮಲಿದ್ದು, ಭಾರತ ತನ್ನ ಮೊದಲ ಪ್ರಶಸ್ತಿ ಗೆಲ್ಲುವ ಅವಕಾಶದಲ್ಲಿದೆ. ಐತಿಹಾಸಿಕ ರನ್ ಚೇಸ್‌ನೊಂದಿಗೆ ಫೈನಲ್ ತಲುಪಿರುವ ಭಾರತ ತಂಡ ಗೆದ್ದರೆ, ಬಿಸಿಸಿಐ ಪುರುಷರ ತಂಡಕ್ಕೆ ಸಮಾನವಾಗಿ 100 ಕೋಟಿಗೂ ಅಧಿಕ ಬಹುಮಾನ ನೀಡುವ ನಿರೀಕ್ಷೆಯಿದೆ. ಈ ಹಣವು ಆಟಗಾರ್ತಿಯರು ಹಾಗೂ ಸಿಬ್ಬಂದಿಗೆ ದೊರೆಯಲಿದೆ.

World Cup 2025: ಭಾರತ ವಿಶ್ವಕಪ್‌ ಗೆದ್ದರೆ ಬಿಸಿಸಿಐನಿಂದ ಸಿಗಲಿದೆ ಶತಕೋಟಿಗೂ ಅಧಿಕ ಮೊತ್ತದ ಬಹುಮಾನ
India Womens

Updated on: Nov 01, 2025 | 8:28 PM

2025 ರ ಮಹಿಳಾ ಏಕದಿನ ವಿಶ್ವಕಪ್‌ನ ( Women’s World Cup 2025) ಫೈನಲ್ ಪಂದ್ಯವು ನವೆಂಬರ್ 2 ರ ಭಾನುವಾರದಂದು ಭಾರತ ಮತ್ತು ದಕ್ಷಿಣ ಆಫ್ರಿಕಾ (India vs South Africa) ನಡುವೆ ನಡೆಯಲಿದೆ. ನವಿ ಮುಂಬೈನ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ನಡೆಯಲಿರುವ ಈ ಪಂದ್ಯಕ್ಕಾಗಿ ಅಭಿಮಾನಿಗಳು ಕಾದು ಕುಳಿತಿದ್ದಾರೆ. ಈ ವಿಶ್ವಕಪ್‌ನ ಇನ್ನೊಂದು ವಿಶೇಷತೆಯೆಂದರೆ 25 ವರ್ಷಗಳ ನಂತರ ಹೊಸ ತಂಡವು ಚಾಂಪಿಯನ್ ಆಗಿ ಹೊರಹೊಮ್ಮಲಿದೆ. ಭಾರತ ತಂಡವು ತನ್ನ ಮೂರನೇ ಫೈನಲ್ ಪಂದ್ಯವನ್ನು ಆಡುತ್ತಿದ್ದು, ಈ ಬಾರಿ ತನ್ನ ಮೊದಲ ಪ್ರಶಸ್ತಿಯನ್ನು ಗೆಲ್ಲುವ ಅವಕಾಶವನ್ನು ಹೊಂದಿದೆ. ಹರ್ಮನ್ಪ್ರೀತ್ ಕೌರ್ ಪಡೆ ಈ ಸಾಧನೆಯನ್ನು ಮಾಡಿದರೆ, ಬಿಸಿಸಿಐನಿಂದ ಹಣದ ಮಳೆಯೇ ಸುರಿಯಲಿದೆ.

ಎರಡನೇ ಸೆಮಿಫೈನಲ್‌ನಲ್ಲಿ ಹಾಲಿ ಚಾಂಪಿಯನ್ ಆಸ್ಟ್ರೇಲಿಯಾವನ್ನು ಸೋಲಿಸುವ ಮೂಲಕ ಭಾರತ ತಂಡ ಫೈನಲ್‌ಗೆ ಸ್ಥಾನ ಪಡೆದುಕೊಂಡಿದೆ. ಭಾರತ ತಂಡವು 339 ರನ್‌ಗಳ ವಿಶ್ವ ದಾಖಲೆಯ ರನ್ ಚೇಸ್‌ನೊಂದಿಗೆ ಪಂದ್ಯವನ್ನು ಗೆದ್ದಿರುವುದರಿಂದ ಪ್ರಶಸ್ತಿಯನ್ನು ಗೆಲ್ಲುವ ಸಾಧ್ಯತೆಯನ್ನು ಇನ್ನಷ್ಟು ಹೆಚ್ಚಿಸಿದೆ. ವಿಶ್ವಕಪ್ ಟ್ರೋಫಿಯನ್ನು ಯಾರು ಎತ್ತುತ್ತಾರೆ ಎಂಬ ನಿರ್ಧಾರವನ್ನು ನವೆಂಬರ್ 2 ರಂದು ನಡೆಯುವ 100 ಓವರ್‌ಗಳ ಪಂದ್ಯದಲ್ಲಿ ನಿರ್ಧರಿಸಲಾಗುತ್ತದೆ. ಆದಾಗ್ಯೂ ಫೈನಲ್ ಪಂದ್ಯವನ್ನು ಗೆಲ್ಲುವಲ್ಲಿ ಭಾರತ ಮಹಿಳಾ ತಂಡ ಯಶಸ್ವಿಯಾದರೆ, ಆಟಗಾರ್ತಿಯರು ಹಾಗೂ ಕೋಚಿಂಗ್ ಸಿಬ್ಬಂದಿಗಳಿಗೆ ಶತ ಕೋಟಿಗೂ ಅಧಿಕ ಮೊತ್ತದ ಬಹುಮಾನ ಸಿಗಲಿದೆ.

ಸಮಾನ ಬಹುಮಾನ ನೀಡಲಿದೆ ಬಿಸಿಸಿಐ

ವಿಶ್ವಕಪ್ ಗೆದ್ದ ನಂತರ ವಿಜೇತ ತಂಡಕ್ಕೆ ಐಸಿಸಿಯಿಂದಲೂ ಬಹುಮಾನದ ಹಣ ದೊರೆಯುವುದಲ್ಲದೆ. ಇದರ ಜೊತೆಗೆ ಬಿಸಿಸಿಐ ಟೀಂ ಇಂಡಿಯಾಗೆ ಭಾರಿ ಮೊತ್ತದ ಹಣವನ್ನು ನೀಡಲು ಸಿದ್ಧತೆ ನಡೆಸಿದೆ. ಬಿಸಿಸಿಐ ಮೂಲಗಳನ್ನು ಉಲ್ಲೇಖಿಸಿ ಪಿಟಿಐ ವರದಿಯ ಪ್ರಕಾರ, ಭಾರತ ತಂಡ ವಿಶ್ವಕಪ್ ಗೆದ್ದರೆ, ಕಳೆದ ವರ್ಷ ಟಿ20 ವಿಶ್ವಕಪ್ ಗೆದ್ದಿದ್ದಕ್ಕಾಗಿ ಭಾರತೀಯ ಪುರುಷರ ತಂಡ ಪಡೆದಷ್ಟೇ ಹಣವನ್ನು ಮಂಡಳಿಯಿಂದ ಪಡೆಯಬಹುದು ಎಂದು ಹೇಳಿದೆ.

ಪುರುಷ ಮತ್ತು ಮಹಿಳಾ ತಂಡಗಳಿಗೆ ಸಮಾನ ವೇತನ ನೀಡುವ ಬಿಸಿಸಿಐ ನೀತಿಯನ್ನು ಉಲ್ಲೇಖಿಸಿ, ಭಾರತ ತಂಡ ಪ್ರಶಸ್ತಿ ಗೆದ್ದರೆ, ಅದು ಪುರುಷರ ತಂಡಕ್ಕಿಂತ ಕಡಿಮೆ ಹಣವನ್ನು ಪಡೆಯುವುದಿಲ್ಲ ಎಂದು ಮೂಲಗಳು ತಿಳಿಸಿವೆ. ಆದಾಗ್ಯೂ, ಅಂತಿಮ ಪಂದ್ಯ ಇನ್ನೂ ನಡೆದಿಲ್ಲ ಮತ್ತು ವಿಜೇತರನ್ನು ನಿರ್ಧರಿಸುವ ಮೊದಲು ಬಹುಮಾನದ ಹಣವನ್ನು ಘೋಷಿಸುವುದು ಸರಿಯಾದ ವಿಧಾನವಲ್ಲ ಎಂದು ಮಂಡಳಿಯು ಇನ್ನೂ ಅಂತಹ ಯಾವುದೇ ಘೋಷಣೆಯನ್ನು ಮಾಡಿಲ್ಲ ಎಂದು ಸ್ಪಷ್ಟಪಡಿಸಿದೆ.

World Cup 2025: ಟೀಂ ಇಂಡಿಯಾಕ್ಕೆ ಆಘಾತ; ವಿಶ್ವಕಪ್​ನಿಂದ ಹೊರಬಿದ್ದ ಸ್ಟಾರ್ ಓಪನರ್

ಟೀಂ ಇಂಡಿಯಾಗೆ ಸಿಗುವ ಬಹುಮಾನ ಎಷ್ಟು?

ಈಗ ಪ್ರಶ್ನೆ ಏನೆಂದರೆ, ಭಾರತೀಯ ಮಹಿಳಾ ತಂಡ ಗೆದ್ದರೆ ಎಷ್ಟು ಹಣ ಪಡೆಯಬಹುದು? ಬಿಸಿಸಿಐ ಈ ನೀತಿಯನ್ನು ನಿಜವಾಗಿಯೂ ಅನುಸರಿಸಿದರೆ ಮತ್ತು ಬಹುಮಾನವನ್ನು ಘೋಷಿಸಿದರೆ, ಅದು 100 ಕೋಟಿಗಿಂತ ಹೆಚ್ಚಾಗಿರುತ್ತದೆ. ರೋಹಿತ್ ಶರ್ಮಾ ನಾಯಕತ್ವದಲ್ಲಿ, ಭಾರತೀಯ ಪುರುಷರ ತಂಡವು 2024 ರ ಟಿ20 ವಿಶ್ವಕಪ್ ಗೆದ್ದಾಗ ಬಿಸಿಸಿಐ, ಇಡೀ ತಂಡಕ್ಕೆ 125 ಕೋಟಿ ರೂ. ಬಹುಮಾನವನ್ನು ಘೋಷಿಸಿತು. ಇದರಲ್ಲಿ ತಂಡದಲ್ಲಿರುವ 15 ಆಟಗಾರರು, ಮುಖ್ಯ ಕೋಚ್, ಸಹಾಯಕ ಕೋಚ್ ಮತ್ತು ಸಹಾಯಕ ಸಿಬ್ಬಂದಿಯ ಇತರ ಸದಸ್ಯರು ಸೇರಿದ್ದರು. ಭಾನುವಾರ ನವಿ ಮುಂಬೈನಲ್ಲಿ ಟ್ರೋಫಿಯನ್ನು ಗೆದ್ದರೆ ಭಾರತೀಯ ಮಹಿಳಾ ತಂಡವೂ ಇದೇ ರೀತಿಯ ಬಹುಮಾನವನ್ನು ಪಡೆಯುವ ನಿರೀಕ್ಷೆಯಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:24 pm, Sat, 1 November 25