AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

World Cup 2025: ವಿಶ್ವಕಪ್‌ ಫೈನಲ್ ಪಂದ್ಯಕ್ಕೆ ಮಳೆ ಭೀತಿ; ಹೇಗಿರಲಿದೆ ಮುಂಬೈ ಹವಾಮಾನ?

Women's World Cup Final Weather: ಎಂಟು ವರ್ಷಗಳ ನಂತರ ಭಾರತೀಯ ಮಹಿಳಾ ಕ್ರಿಕೆಟ್ ತಂಡ ವಿಶ್ವಕಪ್ ಫೈನಲ್‌ಗೆ ತಲುಪಿದೆ. ನವೆಂಬರ್ 2 ರಂದು ನವಿ ಮುಂಬೈನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಪ್ರಶಸ್ತಿಗಾಗಿ ಹೋರಾಡಲಿದೆ. ಆದಾಗ್ಯೂ, ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ವರದಿ ಹೇಳಿದೆ. ಮೀಸಲು ದಿನವಿದ್ದರೂ, ಪಂದ್ಯ ರದ್ದಾದರೆ ಭಾರತ ಮತ್ತು ದಕ್ಷಿಣ ಆಫ್ರಿಕಾ ಜಂಟಿ ವಿಜೇತರು ಎಂದು ಘೋಷಿಸಲಾಗುವುದು. ತವರು ನೆಲದಲ್ಲಿ ಭಾರತ ಇತಿಹಾಸ ಸೃಷ್ಟಿಸುವ ನಿರೀಕ್ಷೆಯಲ್ಲಿದೆ.

World Cup 2025: ವಿಶ್ವಕಪ್‌ ಫೈನಲ್ ಪಂದ್ಯಕ್ಕೆ ಮಳೆ ಭೀತಿ; ಹೇಗಿರಲಿದೆ ಮುಂಬೈ ಹವಾಮಾನ?
Ind Vs Sa Women
ಪೃಥ್ವಿಶಂಕರ
|

Updated on: Nov 01, 2025 | 10:35 PM

Share

ಎಂಟು ವರ್ಷಗಳ ನಂತರ, ಭಾರತೀಯ ಮಹಿಳಾ ಕ್ರಿಕೆಟ್ ತಂಡ ಮತ್ತೊಮ್ಮೆ ವಿಶ್ವಕಪ್ ಫೈನಲ್​ಗೆ (Women’s T20 World Cup Final) ಅರ್ಹತೆ ಪಡೆದಿಕೊಂಡಿದೆ. 2017 ರ ವಿಶ್ವಕಪ್ ಫೈನಲ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಸೋತ ಭಾರತೀಯ ತಂಡವು ಈಗ ನವೆಂಬರ್ 2 ರ ಭಾನುವಾರದಂದು ತನ್ನ ಅಭಿಮಾನಿಗಳ ಮುಂದೆ ತವರು ನೆಲದಲ್ಲಿ ಇತಿಹಾಸವನ್ನು ರಚಿಸುವ ಅವಕಾಶ ಹೊಂದಿದೆ. ಲೀಗ್ ಹಂತದಲ್ಲಿ ಈಗಾಗಲೇ ಸೋಲು ಅನುಭವಿಸಿರುವ ದಕ್ಷಿಣ ಆಫ್ರಿಕಾದ ವಿರುದ್ಧ ಟೀಂ ಇಂಡಿಯಾ (India vs South Africa) ಗೆಲುವಿಗಾಗಿ ಸೆಣಸಾಡಬೇಕಿದೆ. ಆದಾಗ್ಯೂ ಪಂದ್ಯ ನಡೆಯುವುದು ಅನುಮಾನ ಎಂದು ಹವಾಮಾನ ವರದಿ ಹೇಳುತ್ತಿದೆ.

ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಐಸಿಸಿ ಮಹಿಳಾ ವಿಶ್ವಕಪ್ ಫೈನಲ್ ಪಂದ್ಯವು ನವಿ ಮುಂಬೈನ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಇದೇ ಮೈದಾನದಲ್ಲಿ ಟೀಂ ಇಂಡಿಯಾ ಎರಡನೇ ಸೆಮಿಫೈನಲ್‌ನಲ್ಲಿ ಆಸ್ಟ್ರೇಲಿಯಾವನ್ನು ಸೋಲಿಸಿ ದಾಖಲೆಯ ರನ್ ಚೇಸ್‌ನೊಂದಿಗೆ ಫೈನಲ್ ತಲುಪಿತು. ಆ ಸೆಮಿಫೈನಲ್ ಪಂದ್ಯದಲ್ಲೂ ಮಳೆ ಬರುವ ಸಾಧ್ಯತೆ ಇತ್ತು, ಆದರೆ ಹವಾಮಾನವು ಭಾರತೀಯ ತಂಡಕ್ಕೆ ಅನುಕೂಲಕರವಾಗಿತ್ತು.

ಮುಂಬೈನಲ್ಲಿ ಹವಾಮಾನ ಹೇಗಿರುತ್ತದೆ?

ಹವಾಮಾನ ಇಲಾಖೆಯ ಮುನ್ಸೂಚನೆಯ ಪ್ರಕಾರ, ನವೆಂಬರ್ 2 ರ ಭಾನುವಾರ ನವಿ ಮುಂಬೈನಲ್ಲಿ ಮಳೆ ಬೀಳಬಹುದು. ಮಳೆಯು ಬೆಳಿಗ್ಗೆ 4 ರಿಂದ 7 ಗಂಟೆಯ ನಡುವೆ ಬೀಳುವ ನಿರೀಕ್ಷೆಯಿದೆ. ಆದಾಗ್ಯೂ, ಸಂಜೆಯೂ ಸಹ ಹಗುರ ಮಳೆಯಾಗುವ ನಿರೀಕ್ಷೆಯಿದೆ. ಅಕ್ಯೂವೆದರ್ ಪ್ರಕಾರ, ಸಂಜೆ 5 ರಿಂದ 7 ಗಂಟೆಯ ನಡುವೆ ಸ್ವಲ್ಪ ಮಳೆ ಬೀಳಬಹುದು. ಇದು ಸಂಭವಿಸಿದಲ್ಲಿ, ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಪ್ರಶಸ್ತಿ ಪಂದ್ಯಕ್ಕೆ ಅಡ್ಡಿಯಾಗಬಹುದು ಮತ್ತು ಕೆಲವು ಓವರ್‌ಗಳನ್ನು ಕಡಿಮೆ ಮಾಡಬಹುದು.

World Cup 2025: ಭಾರತ- ಆಫ್ರಿಕಾ ವಿಶ್ವಕಪ್ ಪಂದ್ಯ ರದ್ದಾದರೆ ವಿಜೇತರ ಆಯ್ಕೆ ಹೇಗೆ?

ಫೈನಲ್ ರದ್ದಾದರೆ, ಚಾಂಪಿಯನ್ ಯಾರು?

ಆದರೆ, ರಾತ್ರಿಯಿಡೀ ಮಳೆ ಬರುವ ಯಾವುದೇ ಸೂಚನೆ ಇಲ್ಲ ಎಂಬುದು ಒಂದೇ ಸಮಾಧಾನ. ಸದ್ಯಕ್ಕೆ, ಸಣ್ಣಪುಟ್ಟ ಅಡಚಣೆಗಳನ್ನು ಹೊರತುಪಡಿಸಿ, ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಫೈನಲ್ ಪಂದ್ಯ ಭಾನುವಾರದಂದು ಪೂರ್ಣಗೊಳ್ಳುವ ಸಾಧ್ಯತೆಯಿದೆ. ಆದಾಗ್ಯೂ, ಐಸಿಸಿ ಈ ಪ್ರಶಸ್ತಿ ಪಂದ್ಯಕ್ಕೆ ಮೀಸಲು ದಿನವನ್ನು ಸಹ ಮೀಸಲಿರಿಸಿದ್ದು, ಭಾನುವಾರ ಪಂದ್ಯ ಪೂರ್ಣಗೊಳ್ಳದಿದ್ದರೆ, ನವೆಂಬರ್ 3 ರ ಸೋಮವಾರದಂದು ಪಂದ್ಯವನ್ನು ಪೂರ್ಣಗೊಳಿಸಬಹುದು. ಈ ಎರಡು ದಿನಗಳಲ್ಲಿ ಫೈನಲ್ ಪಂದ್ಯ ಪೂರ್ಣಗೊಳ್ಳದಿದ್ದರೆ, ಭಾರತ ಮತ್ತು ದಕ್ಷಿಣ ಆಫ್ರಿಕಾವನ್ನು ಜಂಟಿ ವಿಜೇತರು ಎಂದು ಘೋಷಿಸಲಾಗುತ್ತದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ