Harshal Patel: ಅಭ್ಯಾಸ ಪಂದ್ಯದಲ್ಲೂ ಹರ್ಷಲ್ ಪಟೇಲ್ ತುಂಬಾ ದುಬಾರಿ..!
Harshal Patel: 159 ರನ್ಗಳನ್ನು ಬೆನ್ನತ್ತಿದ ವೆಸ್ಟರ್ನ್ ಆಸ್ಟ್ರೇಲಿಯಾ ಟೀಮ್ ಇಂಡಿಯಾ ಬೌಲರ್ಗಳ ಮುಂದೆ ಉತ್ತಮ ಪ್ರದರ್ಶನವನ್ನೇ ನೀಡಿತು. ಏಕೆಂದರೆ ಬಲಿಷ್ಠ ಬೌಲಿಂಗ್ ಲೈನಪ್ ಹೊಂದಿದ್ದ ಟೀಮ್ ಇಂಡಿಯಾ ಬೌಲರ್ಗಳ ವಿರುದ್ದ 8 ವಿಕೆಟ್ ನಷ್ಟಕ್ಕೆ 145 ರನ್ ಬಾರಿಸಿತ್ತು.
T20 World Cup 2o22: ಟಿ20 ವಿಶ್ವಕಪ್ಗಾಗಿ ಟೀಮ್ ಇಂಡಿಯಾ (Team India) ಭರ್ಜರಿ ಸಿದ್ದತೆಯಲ್ಲಿದೆ. ಈಗಾಗಲೇ ಮೊದಲ ಅಭ್ಯಾಸ ಪಂದ್ಯವನ್ನು ಆಡಿದ್ದು, ಈ ಪಂದ್ಯದಲ್ಲಿ 13 ರನ್ಗಳಿಂದ ಜಯ ಸಾಧಿಸಿದೆ. ಆದರೆ ಈ ಗೆಲುವಿನ ಹೊರತಾಗಿಯೂ ಇದೀಗ ಟೀಮ್ ಇಂಡಿಯಾದ ಪ್ರದರ್ಶನದ ಬಗ್ಗೆ ಪ್ರಶ್ನೆಗಳೆದ್ದಿವೆ. ಏಕೆಂದರೆ ಭಾರತ ತಂಡವು ಮೊದಲ ಅಭ್ಯಾಸ ಪಂದ್ಯವಾಡಿರುವುದು ವೆಸ್ಟರ್ನ್ ಆಸ್ಟ್ರೇಲಿಯಾ ವಿರುದ್ದ. ದ್ವಿತೀಯ ದರ್ಜೆಯ ಆಟಗಾರರನ್ನು ಒಳಗೊಂಡ ಈ ತಂಡದ ವಿರುದ್ಧ ಅತ್ಯುತ್ತಮ ಪ್ರದರ್ಶನ ನೀಡುವಲ್ಲಿ ಟೀಮ್ ಇಂಡಿಯಾ ಆಟಗಾರರು ವಿಫಲವಾಗಿದ್ದಾರೆ.
ಏಕೆಂದೆರೆ ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಟೀಮ್ ಇಂಡಿಯಾ ಕಲೆಹಾಕಿದ್ದು ಕೇವಲ 158 ರನ್ಗಳು ಮಾತ್ರ. 35 ಎಸೆತಗಳಲ್ಲಿ 52 ರನ್ ಕಲೆಹಾಕಿದ ಸೂರ್ಯಕುಮಾರ್ ಯಾದವ್ ಅವರನ್ನು ಹೊರತುಪಡಿಸಿ ಉಳಿದ ಬ್ಯಾಟ್ಸ್ಮನ್ಗಳಿಂದ ನಿರೀಕ್ಷಿತ ಪ್ರದರ್ಶನ ಮೂಡಿಬಂದಿರಲಿಲ್ಲ.
ಇನ್ನು 159 ರನ್ಗಳನ್ನು ಬೆನ್ನತ್ತಿದ ವೆಸ್ಟರ್ನ್ ಆಸ್ಟ್ರೇಲಿಯಾ ಟೀಮ್ ಇಂಡಿಯಾ ಬೌಲರ್ಗಳ ಮುಂದೆ ಉತ್ತಮ ಪ್ರದರ್ಶನವನ್ನೇ ನೀಡಿತು. ಏಕೆಂದರೆ ಬಲಿಷ್ಠ ಬೌಲಿಂಗ್ ಲೈನಪ್ ಹೊಂದಿದ್ದ ಟೀಮ್ ಇಂಡಿಯಾ ಬೌಲರ್ಗಳ ವಿರುದ್ದ 8 ವಿಕೆಟ್ ನಷ್ಟಕ್ಕೆ 145 ರನ್ ಬಾರಿಸಿತ್ತು.
ಅಚ್ಚರಿ ಎಂದರೆ ಟೀಮ್ ಇಂಡಿಯಾ ಪ್ಲೇಯಿಂಗ್ ಇಲೆವೆನ್ನ ಖಾಯಂ ಸದಸ್ಯರಾಗಿರುವ ಹರ್ಷಲ್ ಪಟೇಲ್ ಈ ಪಂದ್ಯದಲ್ಲಿ 4 ಓವರ್ಗಳಲ್ಲಿ ಬರೋಬ್ಬರಿ 49 ರನ್ ನೀಡಿದ್ದರು. ಅಂದರೆ ದ್ವಿತೀಯ ದರ್ಜೆಯ ಟೀಮ್ ವಿರುದ್ಧವೇ ಹರ್ಷಲ್ ದುಬಾರಿಯಾಗಿದ್ದಾರೆ.
ಈ ಹಿಂದೆ ಸೌತ್ ಆಫ್ರಿಕಾ ವಿರುದ್ಧದ ಸರಣಿಯಲ್ಲೂ ಹರ್ಷಲ್ ಪಟೇಲ್ ದುಬಾರಿಯಾಗಿದ್ದರು. ಇದೀಗ ಯಾವುದೇ ಒತ್ತಡವಿಲ್ಲದೆ ಆಡಲಾದ ಅಭ್ಯಾಸ ಪಂದ್ಯದಲ್ಲೂ 24 ಎಸೆತಗಳಲ್ಲಿ 49 ರನ್ ಬಿಟ್ಟು ಕೊಟ್ಟಿದ್ದಾರೆ. ಟೀಮ್ ಇಂಡಿಯಾದ ಪ್ರಮುಖ ವೇಗಿಯ ಈ ಕಳಪೆ ಪ್ರದರ್ಶನವೇ ಇದೀಗ ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್ ಚಿಂತೆಯನ್ನು ಹೆಚ್ಚಿಸಿದೆ.
ಏಕೆಂದರೆ ಟೀಮ್ ಇಂಡಿಯಾ ಅಕ್ಟೋಬರ್ 23 ರಂದು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ್ ವಿರುದ್ಧದ ಪಂದ್ಯದ ಮೂಲಕ ಟಿ20 ವಿಶ್ವಕಪ್ ಅಭಿಯಾನ ಆರಂಭಿಸಲಿದೆ. ಆದರೆ ಈ ಬಾರಿ ತಂಡದಲ್ಲಿ ಜಸ್ಪ್ರೀತ್ ಬುಮ್ರಾ ಇಲ್ಲ. ಇತ್ತ ಟಿ20 ವಿಶ್ವಕಪ್ಗೆ ದಿನಗಳು ಮಾತ್ರ ಉಳಿದಿರುವಾಗಲೂ ಟೀಮ್ ಇಂಡಿಯಾ ಬೌಲಿಂಗ್ ಲೈನಪ್ ಲಯಕ್ಕೆ ಮರಳಿಲ್ಲ ಎಂಬುದು ಅಭ್ಯಾಸ ಪಂದ್ಯದ ಮೂಲಕ ನಿರೂಪಿತವಾಗಿದೆ. ಇದುವೇ ಈಗ ಟೀಮ್ ಇಂಡಿಯಾದ ಹೊಸ ಚಿಂತೆಗೆ ಕಾರಣವಾಗಿದೆ.
ಅಭ್ಯಾಸ ಪಂದ್ಯದಲ್ಲಿ ಟೀಮ್ ಇಂಡಿಯಾ ಆಟಗಾರರ ಪ್ರದರ್ಶನ ಹೀಗಿತ್ತು:
ಬ್ಯಾಟಿಂಗ್:
- ರೋಹಿತ್ ಶರ್ಮಾ- 3 (4)
- ರಿಷಭ್ ಪಂತ್- 9 (16)
- ದೀಪಕ್ ಹೂಡಾ- 22 (14)
- ಸೂರ್ಯಕುಮಾರ್ ಯಾದವ್ – 52 (35)
- ಹಾರ್ದಿಕ್ ಪಾಂಡ್ಯ – 27 (20)
- ದಿನೇಶ್ ಕಾರ್ತಿಕ್ – 19 (23)
- ಅಕ್ಷರ್ ಪಟೇಲ್ – 10 (5)
- ಹರ್ಷಲ್ ಪಟೇಲ್ – 5 (4)
ಬೌಲಿಂಗ್:
- ಭುವನೇಶ್ವರ್ ಕುಮಾರ್: 4-0-26-2
- ಅರ್ಷದೀಪ್ ಸಿಂಗ್: 3-1-6-3
- ಹರ್ಷಲ್ ಪಟೇಲ್: 4-0-49-1
- ಅಕ್ಷರ್ ಪಟೇಲ್: 3-0-23-0
- ದೀಪಕ್ ಹೂಡಾ: 2-0-24-0
- ಯುಜ್ವೇಂದ್ರ ಚಹಾಲ್: 4-0-15-2
Published On - 3:54 pm, Tue, 11 October 22