ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ RCB ವೇಗಿ ಹರ್ಷಲ್ ಪಟೇಲ್ ಹೊಸ ದಾಖಲೆ ಬರೆಯುವ ಸನಿಹದಲ್ಲಿದ್ದಾರೆ. ಸನ್ರೈಸರ್ಸ್ ಹೈದರಾಬಾದ್ ವಿರುದ್ದದ ಪಂದ್ಯದಲ್ಲಿ 3 ವಿಕೆಟ್ ಉರುಳಿಸಿದ್ದ ಹರ್ಷಲ್ ವಿಕೆಟ್ಗಳ ಸಂಖ್ಯೆಯನ್ನು 29ಕ್ಕೆ ಏರಿಸಿದ್ದಾರೆ. ಈ ಮೂಲಕ ಮುಂಬೈ ಇಂಡಿಯನ್ಸ್ ವೇಗಿ ಜಸ್ಪ್ರೀತ್ ಬುಮ್ರಾ ಹೆಸರಿನಲ್ಲಿದ್ದ ದಾಖಲೆಯನ್ನು ಹರ್ಷಲ್ ಪಟೇಲ್ ಮುರಿದಿದ್ದರು. ಕಳೆದ ಸೀಸನ್ನಲ್ಲಿ ಮುಂಬೈ ವೇಗಿ ಬುಮ್ರಾ ಒಟ್ಟು 27 ವಿಕೆಟ್ ಪಡೆಯುವ ಮೂಲಕ ಐಪಿಎಲ್ ಸೀಸನ್ ಒಂದರಲ್ಲಿ ಅತೀ ಹೆಚ್ಚು ವಿಕೆಟ್ ಪಡೆದ ಭಾರತೀಯ ಬೌಲರ್ ಎಂಬ ದಾಖಲೆ ಬರೆದಿದ್ದರು. ಇದೀಗ ಹರ್ಷಲ್ ಪಟೇಲ್ 29 ವಿಕೆಟ್ ಪಡೆಯುವ ಮೂಲಕ ಬುಮ್ರಾ ಹೆಸರಿನಲ್ಲಿದ್ದ ದಾಖಲೆ ಮುರಿದಿದ್ದಾರೆ. ಅಷ್ಟೇ ಅಲ್ಲದೆ ಐಪಿಎಲ್ ಇತಿಹಾಸದ ಸೀಸನ್ವೊಂದರ ಭಾರತದ ಅತ್ಯಂತ ಯಶಸ್ವಿ ಬೌಲರ್ ಎಂಬ ದಾಖಲೆಯನ್ನು ಹರ್ಷಲ್ ಪಟೇಲ್ ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ.
ಇದೀಗ ಹರ್ಷಲ್ ಪಟೇಲ್ ಸೀಸನ್ ಒಂದರಲ್ಲಿ ಅತೀ ಹೆಚ್ಚು ವಿಕೆಟ್ ಪಡೆದ ಬೌಲರುಗಳ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ. ಕಳೆದ ಸೀಸನ್ನಲ್ಲಿ 30 ವಿಕೆಟ್ ಪಡೆದಿರುವ ಕಗಿಸೊ ರಬಾಡ 2ನೇ ಸ್ಥಾನದಲ್ಲಿದ್ದು, ಅಗ್ರಸ್ಥಾನದಲ್ಲಿ 32 ವಿಕೆಟ್ ಪಡೆದಿರುವ ಡ್ವೇನ್ ಬ್ರಾವೊ ಇದ್ದಾರೆ. ಹೀಗಾಗಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ದದ ಪಂದ್ಯದಲ್ಲಿ ಹರ್ಷಲ್ ಪಟೇಲ್ 4 ವಿಕೆಟ್ ಪಡೆದರೆ ಹೊಸ ಇತಿಹಾಸ ನಿರ್ಮಾಣವಾಗಲಿದೆ.
ಡೆಲ್ಲಿ ವಿರುದ್ದ ಹರ್ಷಲ್ ಪಟೇಲ್ 4 ವಿಕೆಟ್ ಪಡೆದದ್ದೇಯಾದಲ್ಲಿ ಒಟ್ಟು ವಿಕೆಟ್ಗಳ ಸಂಖ್ಯೆ 33ಕ್ಕೇರಲಿದೆ. ಇದರೊಂದಿಗೆ ಡ್ವೇನ್ ಬ್ರಾವೊ 32 ವಿಕೆಟ್ ದಾಖಲೆಯನ್ನು ಮುರಿದು ಐಪಿಎಲ್ ಸೀಸನ್ನ ಅತ್ಯಂತ ಯಶಸ್ವಿ ಬೌಲರ್ ಎಂಬ ದಾಖಲೆ ಹರ್ಷಲ್ ಪಟೇಲ್ ಪಾಲಾಗಲಿದೆ. ಇನ್ನು ಎರಡು ವಿಕೆಟ್ ಪಡೆದರೆ ಕಗಿಸೊ ರಬಾಡ (30) ಅವರನ್ನು ಹಿಂದಿಕ್ಕಿ 2ನೇ ಸ್ಥಾನಕ್ಕೇರಲಿದ್ದಾರೆ.
ಇಂದು ಆರ್ಸಿಬಿ ಲೀಗ್ ಹಂತದ ಕೊನೆಯ ಪಂದ್ಯವನ್ನಾಡಲಿದೆ. ಈ ಪಂದ್ಯದಲ್ಲಿ ದಾಖಲೆ ಬರೆಯುವ ಅವಕಾಶ ಹರ್ಷಲ್ ಮುಂದಿದೆ. ಇದಾಗ್ಯೂ ಆರ್ಸಿಬಿ ಈಗಾಗಲೇ ಪ್ಲೇಆಫ್ ಪ್ರವೇಶಿಸಿದ್ದು, ಹೀಗಾಗಿ ಮುಂದಿನ ಪಂದ್ಯದಲ್ಲೂ ಈ ದಾಖಲೆ ಮುರಿಯುವ ಅವಕಾಶ ಹರ್ಷಲ್ಗೆ ಸಿಗಲಿದೆ. ಅದರಂತೆ 4 ವಿಕೆಟ್ಗಳೊಂದಿಗೆ ಹರ್ಷಲ್ ಪಟೇಲ್ ಐಪಿಎಲ್ನಲ್ಲಿ ಹೊಸ ಇತಿಹಾಸ ಬರೆಯಲಿದ್ದಾರಾ ಕಾದು ನೋಡಬೇಕಿದೆ.
ಇದನ್ನೂ ಓದಿ: KL Rahul: ಸಿಡಿಲಬ್ಬರದ ಬ್ಯಾಟಿಂಗ್ ಮೂಲಕ 7 ದಾಖಲೆ ಬರೆದ ಕೆಎಲ್ ರಾಹುಲ್
ಇದನ್ನೂ ಓದಿ: IPL 2021: ಐಪಿಎಲ್ನಲ್ಲಿ ಹೊಸ ಇತಿಹಾಸ ನಿರ್ಮಿಸಲಿದ್ದಾರೆ ಹರ್ಷಲ್ ಪಟೇಲ್
ಇದನ್ನೂ ಓದಿ: IPL 2021: ಅಚ್ಚರಿಯಾದರೂ ಇದು ಸತ್ಯ: 1 ವಿಕೆಟ್ಗೆ 1 ಕೋಟಿ ಪಡೆದ ಕ್ರಿಸ್ ಮೋರಿಸ್..!
(Harshal Patel Closes In On Rabada, Dwayne Bravo For Highest Wickets In A Single IPL Season)
Published On - 5:50 pm, Fri, 8 October 21