LSG vs RCB: ಆರ್​ಸಿಬಿಗೆ ಬಿಗ್ ಶಾಕ್: ಸ್ಟಾರ್ ಆಟಗಾರನಿಗೆ ಇಂಜುರಿ, ಲಖನೌ ವಿರುದ್ಧ ಆಡ್ತಾರಾ?

| Updated By: Vinay Bhat

Updated on: May 24, 2022 | 1:43 PM

Harshal Patel, Eliminator vs LSG: ರಾಯಲ್ ಚಾಲೆಂಜರ್ಸ್​ ಬೆಂಗಳೂರು (Royal Challengers Bangalore) ತಂಡ ಇದೀಗ ಲಖನೌ ಸೂಪರ್ ಜೇಂಟ್ಸ್ ವಿರುದ್ಧದ ಐಪಿಎಲ್ 2022 ಎಲಿಮಿನೇಟರ್ ಪಂದ್ಯಕ್ಕೆ ಸಜ್ಜಾಗುತ್ತಿದೆ. ಆದರೆ, ಇದಕ್ಕೂ ಮುನ್ನವೇ ಆರ್​ಸಿಬಿ ತಂಡಕ್ಕೆ ದೊಡ್ಡ ಆಘಾತ ಉಂಟಾಗಿದೆ.

LSG vs RCB: ಆರ್​ಸಿಬಿಗೆ ಬಿಗ್ ಶಾಕ್: ಸ್ಟಾರ್ ಆಟಗಾರನಿಗೆ ಇಂಜುರಿ, ಲಖನೌ ವಿರುದ್ಧ ಆಡ್ತಾರಾ?
RCB IPL 2022 Eliminator
Follow us on

ಅದೃಷ್ಟದಿಂದ ಐಪಿಎಲ್ 2022 (IPL 2022) ರಲ್ಲಿ ನಾಲ್ಕನೇ ತಂಡವಾಗಿ ಪ್ಲೇ ಆಫ್​ಗೆ ಪ್ರವೇಶ ಪಡೆದಿರುವ ರಾಯಲ್ ಚಾಲೆಂಜರ್ಸ್​ ಬೆಂಗಳೂರು (Royal Challengers Bangalore) ತಂಡ ಇದೀಗ ಎಲಿಮಿನೇಟರ್ ಪಂದ್ಯಕ್ಕೆ ಸಜ್ಜಾಗುತ್ತಿದೆ. ಈಗಾಗಲೇ ಕೋಲ್ಕತ್ತಾಕ್ಕೆ ಬಂದಿಳಿದಿರುವ ಫಾಪ್ ಡುಪ್ಲೆಸಿಸ್ ಪಡೆ ಅಭ್ಯಾಸದಲ್ಲಿ ನಿರತವಾಗಿದೆ. ಈಡನ್​​ ಗಾರ್ಡನ್ಸ್ ಮೈದಾನದಲ್ಲಿ ಮೇ 25 ರಂದು ಕೆಎಲ್ ರಾಹುಲ್ ನಾಯಕತ್ವದ ಲಖನೌ ಸೂಪರ್ ಜೇಂಟ್ಸ್ (LSG vs RCB) ವಿರುದ್ಧ ಅಗ್ನಿ ಪರೀಕ್ಷೆಗೆ ಇಳಿಯಲಿದೆ. ಆರ್​​ಸಿಬಿ ಇಲ್ಲಿ ಕೇವಲ ಗೆದ್ದರೆ ಸಾಲದು. ಫೈನಲ್ ತಲುಪಬೇಕಾದರೆ ಎಲಿಮಿನೇಟರ್ ಪಂದ್ಯದಲ್ಲಿ ಗೆದ್ದು ನಂತರ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಸೋತ ತಂಡದ ವಿರುದ್ಧ ಸೆಣೆಸಾಟ ನಡೆಸಬೇಕಿದೆ. ಇಲ್ಲೂ ಗೆದ್ದರೆ ಫೈನಲ್​ಗೆ ತೇರ್ಗಡೆಯಾಗಲಿದೆ. ಹೀಗಾಗಿ ಮುಂದಿನ ಪಂದ್ಯ ಆರ್​ಸಿಬಿಗೆ ಸಾಕಷ್ಟು ಮಹತ್ವದ್ದಾಗಿದೆ. ಆದರೆ, ಇದಕ್ಕೂ ಮುನ್ನವೇ ಬೆಂಗಳೂರು ತಂಡಕ್ಕೆ ದೊಡ್ಡ ಆಘಾತ ಉಂಟಾಗಿದೆ. ತಂಡದ ಸ್ಟಾರ್ ಬೌಲರ್ ಇಂಜುರಿಗೆ ತುತ್ತಾಗಿದ್ದು ನಾಯಕ ಡುಪ್ಲೆಸಿಸ್ ತಲೆಕೆಡಿಸಿದೆ.

ಹೌದು, ಆರ್​ಸಿಬಿ ತಂಡಕ್ಕೆ ಮಧ್ಯಮ ಓವರ್​ನಲ್ಲಿ ಪ್ರತಿ ಬಾರಿ ಆಸರೆಯಾಗುವ ಹರ್ಷಲ್ ಪಟೇಲ್ ಗಾಯಕ್ಕೀಡಾಗಿದ್ದಾರೆ. ಕಳೆದ ಗುಜರಾತ್ ಟೈಟನ್ಸ್ ವಿರುದ್ಧದ ಪಂದ್ಯದಲ್ಲಿ ಫೀಲ್ಡಿಂಗ್ ಮಾಡುವ ವೇಳೆ ಹರ್ಷಲ್ ತಮ್ಮ ಬಲಗೈಗೆ ಗಾಯ ಮಾಡಿಕೊಂಡಿದ್ದರು. ಕ್ಯಾಚ್ ಹಿಡಿಯಲು ಪ್ರಯತ್ನಿಸಿದ್ದ ವೇಳೆ ಬಲಗೈಗೆ ಚೆಂಡು ಜೋರಾಗಿ ಬಡಿದಿದ್ದ ಕಾರಣ ತೀವ್ರ ಗಾಯ ಉಂಟಾಗಿತ್ತು. ಇದಕ್ಕಾಗಿ ಕೈಗೆ ಹೊಲಿಗೆ ಕೂಡ ಹಾಕಿದ್ದರು. ಹೀಗಾಗಿ ಹರ್ಷಲ್ ಪಟೇಲ್ ಬುಧವಾರ ನಡೆಯಲಿರುವ ಲಖನೌ ವಿರುದ್ಧದ ಎಲಿಮಿನೇಟರ್ ಪಂದ್ಯದಲ್ಲಿ ಕಣಕ್ಕಿಳಿಯುತ್ತಾರಾ ಅಥವಾ ಇಲ್ಲವಾ ಎಂಬ ಆತಂಕ ಮೂಡಿದೆ.

Dinesh Karthik: ಟೀಮ್ ಇಂಡಿಯಾಕ್ಕೆ ಆಯ್ಕೆಯಾಗಿದ್ದಕ್ಕೆ ಆರ್​ಸಿಬಿಗೆ ಧನ್ಯವಾದ ಹೇಳಿದ ದಿನೇಶ್ ಕಾರ್ತಿಕ್

ಇದನ್ನೂ ಓದಿ
GT vs RR: ಕೋಲ್ಕತ್ತಾ ಹವಾಮಾನ ಹೇಗಿದೆ?: ಕ್ವಾಲಿಫೈಯರ್ 1 ಪಂದ್ಯ ಮಳೆಯಿಂದ ರದ್ದಾದರೆ ಏನಾಗಲಿದೆ?
GT vs RR: ಐಪಿಎಲ್​​ನಲ್ಲಿಂದು ಗುಜರಾತ್-ರಾಜಸ್ಥಾನ್ ನಡುವೆ ಮೊದಲ ಕ್ವಾಲಿಫೈಯರ್: ಗೆದ್ದ ತಂಡ ಫೈನಲ್​ಗೆ ಲಗ್ಗೆ
Women’s T20 Challenge 2022: ಪೂಜಾ ಮಾರಕ ದಾಳಿಗೆ ನಲುಗಿದ ಟ್ರೇಲ್‌ಬ್ಲೇಜರ್ಸ್: ಸೂಪರ್‌ನೋವಾಸ್ 49 ರನ್​ಗಳ ಭರ್ಜರಿ ಜಯ
IPL 2022: ಇಡೀ ಸೀಸನ್​ನಲ್ಲಿ ಒಂದೇ ಒಂದು ಅವಕಾಶ ಪಡೆಯದ ಅರ್ಜುನ್ ತೆಂಡೂಲ್ಕರ್​ಗೆ ಅಕ್ಕನ ಭಾವನಾತ್ಮಕ ಸಾಂತ್ವನ

ಇದರ ನಡುವೆ ರಾಯಲ್ ಚಾಲೆಂಜರ್ಸ್​ ಬೆಂಗಳೂರು ಫ್ರಾಂಚೈಸಿ ತನ್ನ ಟ್ವಿಟರ್​ ಖಾತೆಯಲ್ಲಿ ಎಲಿಮಿನೇಟರ್ ಆಟಗಾರರು ಪಂದ್ಯಕ್ಕೆ ಅಭ್ಯಾಸ ನಡೆಸುತ್ತಿರುವ ಫೋಟೋವನ್ನು ಹಂಚಿಕೊಂಡಿದೆ. ಇದರಲ್ಲಿ ಹರ್ಷಲ್ ಪಟೇಲ್ ಕೂಡ ಕಣಕ್ಕಿಳಿದಿದ್ದಾರೆ. ಮೇಲ್ನೋಟಕ್ಕೆ ಇವರು ಚೇರಿಸಿಕೊಂಡಂತೆ ಕಂಡರೂ ಗಾಯದ ಪ್ರಮಾಣ ಇನ್ನೂ ಇದ್ದರೆ ಲಖನೌ ವಿರುದ್ಧ ಆಡಿಸುವುದು ಅನುಮಾನ ಎನ್ನಲಾಗಿದೆ. ಎಲ್ಲದರೂ ಇವರು ಅಲಭ್ಯರಾದರೆ ಯಾವ ಆಟಗಾರನನ್ನು ಆಡಿಸುತ್ತಾರೆ ಎಂಬ ಕುತೂಹಲ ಕೂಡ ಮೂಡಿದೆ.

ಆರ್​ಸಿಬಿ ಪಾಲಿಗಿದೆಯೇ ಅದೃಷ್ಟ?:

ರಾಯಲ್ ಚಾಲೆಂಜರ್ಸ್ ತಂಡ ಪ್ಲೇ ಆಫ್​ಗೆ ಪ್ರವೇಶ ಪಡೆದಿದ್ದು ಅದೃಷ್ಟ ಎಂದೇ ಹೇಳಬಹುದು. ಆಡಿದ 14 ಪಂದ್ಯಗಳಲ್ಲಿ ಆರರಲ್ಲಿ ಸೋಲು ಎಂಟರಲ್ಲಿ ಗೆಲುವು ಕಂಡಿದೆ. 16 ಅಂಕದೊಂದಿಗೆ ಆರ್​ಸಿಬಿ ನಿವ್ವಳ ರನ್ ರೇಟ್ -0.253 ಆಗಿದೆ. ಒಂದು ವೇಳೆ ಕಳೆದ ಶನಿವಾರದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ಗೆಲುವು ಸಾಧಿಸಿದ್ದರೆ ರನ್‍ರೇಟ್ ಆಧಾರದಲ್ಲಿ ಆರ್​ಸಿಬಿಯನ್ನು ಹಿಂದಿಕ್ಕಿ 4ನೇ ತಂಡವಾಗಿ ಪ್ಲೇ ಆಫ್ ಪ್ರವೇಶಿಸುತ್ತಿತ್ತು. ಆದರೆ ವಿಜಯಲಕ್ಷ್ಮಿ ರಿಷಭ್ ಪಂತ್ ಪಡೆಗೆ ಒಲಿಯಲಿಲ್ಲ. ಮುಂಬೈ ವಿರುದ್ಧ ಹೀನಾಯ ಸೋಲು ಕಾಣುವ ಮೂಲಕ ಡೆಲ್ಲಿ ತಂಡದ ನಿರಾಸೆ ಅನುಭವಿಸಿತು. ಇದರ ಲಾಭವನ್ನು ಆರ್​ಸಿಬಿ ತಂಡವು ಪಡೆದುಕೊಂಡಿತು. ಇಂದಿನಿಂದ ಪ್ಲೇ ಆಫ್ ಪಂದ್ಯಗಳು ಆರಂಭವಾಗಲಿದೆ. ಗುಜರಾತ್ ಟೈಟಾನ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್ ತಂಡಗಳು ಸೆಣೆಸಾಟ ನಡೆಸಲಿದೆ. ಇಲ್ಲಿ ಗೆದ್ದ ತಂಡ ನೇರವಾಗಿ ಫೈನಲ್​ಗೇರಲಿದೆ. ಒಟ್ಟಾರೆ ರಾಜಸ್ಥಾನ್, ಗುಜರಾತ್, ಲಖನೌ, ಆರ್​​ಸಿಬಿ ಇದೀಗ ಒಂದು ಪ್ರಶಸ್ತಿಗಾಗಿ ಹೋರಾಟ ನಡೆಸಲು ತುದಿಗಾಲಿನಲ್ಲಿ ನಿಂತಿದೆ.

ಹೆಚ್ಚಿನ IPL 2022 ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 1:43 pm, Tue, 24 May 22