IPL 2022: ಐಪಿಎಲ್ನಲ್ಲಿ ಭಾರತೀಯ ಬೌಲರ್ಗಳು ಭರ್ಜರಿ ಪ್ರದರ್ಶನ ನೀಡುತ್ತಿದ್ದಾರೆ. ಅದರಲ್ಲೂ ಆರ್ಸಿಬಿ ವೇಗಿ ಹರ್ಷಲ್ ಪಟೇಲ್ ಅತ್ಯುತ್ತಮ ಬೌಲರ್ ಆಗಿ ಗುರುತಿಸಿಕೊಂಡಿದ್ದಾರೆ. ಕಳೆದ ಸೀಸನ್ನಲ್ಲಿ 32 ವಿಕೆಟ್ ಪಡೆಯುವ ಮೂಲಕ ದಾಖಲೆ ಬರೆದಿದ್ದ ಹರ್ಷಲ್ ಪಟೇಲ್ ಈ ಬಾರಿ ಕೂಡ ಪ್ರಭಾವಿ ಬೌಲರ್ ಆಗಿ ಕಾಣಿಸಿಕೊಂಡಿದ್ದಾರೆ. ಓವರ್ಗೆ ಕೇವಲ 5.50 ರ ಎಕನಾಮಿ ರೇಟ್ನಲ್ಲಿ ನಾಲ್ಕು ಪಂದ್ಯಗಳಿಂದ ಆರು ವಿಕೆಟ್ಗಳನ್ನು ಪಡೆದಿರುವ ಹರ್ಷಲ್ ಆರ್ಸಿಬಿ ತಂಡದ ಟ್ರಂಪ್ ಕಾರ್ಡ್ ಎಂಬುದರಲ್ಲಿ ಸಂದೇಹವೇ ಇಲ್ಲ. ಹೀಗಾಗಿ ಮುಂಬರುವ ಟಿ20 ವಿಶ್ವಕಪ್ನಲ್ಲೂ ಪಟೇಲ್ಗೆ ಸ್ಥಾನ ಸಿಗುವ ಸಾಧ್ಯತೆಯಿದೆ. ಇತ್ತ ಹರ್ಷಲ್ ಪಟೇಲ್ ಅವರ ಅದ್ಭುತ ಬೌಲಿಂಗ್ ಪ್ರದರ್ಶನವನ್ನು ಹೊಗಳಿರುವ ಟೀಮ್ ಇಂಡಿಯಾದ ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ, ಆರ್ಸಿಬಿ ವೇಗಿ ಭಾರತದ ಎರಡನೇ ಅತ್ಯುತ್ತಮ T20 ಬೌಲರ್ ಎಂದು ಬಣ್ಣಿಸಿದ್ದಾರೆ.
ನನ್ನ ಪ್ರಕಾರ ಈಗಲೂ ಜಸ್ಪ್ರೀತ್ ಬುಮ್ರಾ ಭಾರತದ ಅತ್ಯುತ್ತಮ ಟಿ20 ವೇಗಿ. 2ನೇ ಸ್ಥಾನದಲ್ಲಿ ಹರ್ಷಲ್ ಪಟೇಲ್ ಕಾಣಿಸಿಕೊಳ್ಳಲಿದ್ದಾರೆ. ಅವರ ಬೌಲಿಂಗ್ ಲೈನಪ್ ಹಾಗೂ ವೇರಿಯೇಷನ್ ಅತ್ಯುತ್ತಮವಾಗಿದೆ. ಹೀಗಾಗಿ ಬುಮ್ರಾ ಬಿಟ್ಟರೆ ಹರ್ಷಲ್ ಪಟೇಲ್ ಭಾರತದ ಅತ್ಯುತ್ತಮ ಟಿ20 ಬೌಲರ್ ಎಂದು ಆಕಾಶ್ ಚೋಪ್ರಾ ಹೇಳಿದ್ದಾರೆ.
ಇದೇ ವೇಳೆ ಮುಂಬರುವ T20 ವಿಶ್ವಕಪ್‌ನಲ್ಲಿ ಭಾರತದ ಇತರ ಆಯ್ಕೆಗಳ ಕುರಿತು ಮಾತನಾಡಿದ ಆಕಾಶ್ ಚೋಪ್ರಾ, ದೀಪಕ್ ಹೂಡಾ ಮತ್ತು ಅನುಭವಿ ದಿನೇಶ್ ಕಾರ್ತಿಕ್ ಅವರಂತಹ ಬ್ಯಾಟ್ಸ್ಮನ್ಗಳು ತಮ್ಮ ಜವಾಬ್ದಾರಿಯನ್ನು ಪರಿಪೂರ್ಣವಾಗಿ ನಿರ್ವಹಿಸಿದ್ದಾರೆ. ದೀಪಕ್ ಹೂಡಾ ಇಲ್ಲಿಯವರೆಗೆ ಉತ್ತಮವಾಗಿ ಬ್ಯಾಟಿಂಗ್ ಮಾಡಿದ್ದಾರೆ. ಅವರು ಕೆಳ ಕ್ರಮಾಂಕದಲ್ಲಿ ಆಯ್ಕೆಯಾಗಬಹುದು. ಹಾಗೆಯೇ ದಿನೇಶ್ ಕಾರ್ತಿಕ್ ಬಗ್ಗೆಯೂ ಯೋಚಿಸಬಹುದು. ಏಕೆಂದರೆ ವಯಸ್ಸಿಗೂ ಇದಕ್ಕೂ ಏನು ಸಂಬಂಧ? ನೀವು ಚೆನ್ನಾಗಿ ಆಡುತ್ತಿದ್ದರೆ, ನೀವು ಚೆನ್ನಾಗಿ ಆಡುತ್ತೀರಿ. ಸೂರ್ಯಕುಮಾರ್ ಕುಲದೀಪ್ ಕೂಡ ಚೆನ್ನಾಗಿ ಬ್ಯಾಟಿಂಗ್ ಮಾಡುತ್ತಿದ್ದಾರೆ.
ಆದಾಗ್ಯೂ, ಆಯ್ಕೆಗಾರರು ಹೆಚ್ಚು ರನ್ ಗಳಿಸಿದವರು ಮತ್ತು ಹೆಚ್ಚು ವಿಕೆಟ್ ಪಡೆದವರು ಯಾರು ಎಂಬುದನ್ನು ನೋಡುವುದಕ್ಕಿಂತ ಅತ್ಯುತ್ತಮ ಪ್ರದರ್ಶನ ನೀಡಿದ ಆಟಗಾರರನ್ನು ಆಯ್ಕೆ ಮಾಡುವುದು ಉತ್ತಮ ಎಂದು ಆಕಾಶ್ ಚೋಪ್ರಾ ಅಭಿಪ್ರಾಯಪಟ್ಟಿದ್ದಾರೆ. ಏಕೆಂದರೆ ಆಟಗಾರರು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದರೆ ಅವರಿಗೆ ಅವಕಾಶಗಳನ್ನು ನೀಡಿ, ಅದು ಮುಖ್ಯವಾಗಿದೆ. ಆರಂಭಿಕ ಆಟಗಾರನು ಹೆಚ್ಚು ರನ್ ಗಳಿಸಿದ ಮಾತ್ರಕ್ಕೆ ಮಧ್ಯಮ ಕ್ರಮಾಂಕದಲ್ಲಿ ಅವರಿಗೆ ಅವಕಾಶ ನೀಡಬೇಡಿ ಅಥವಾ ಮಧ್ಯಮ-ಓವರ್‌ಗಳ ಬೌಲರ್ಗಳನ್ನು ಆಯ್ಕೆ ಮಾಡಬೇಡಿ. ಬದಲಾಗಿ ಯಾರು ಪ್ರಸ್ತುತ ಉತ್ತಮ ಪ್ರದರ್ಶನ ನೀಡುತ್ತಿದ್ದಾರೋ ಅವರ ಬಗ್ಗೆ ಆಯ್ಕೆದಾರರು ಯೋಚಿಸಬೇಕು ಎಂದು ನಾನು ಭಾವಿಸುತ್ತೇನೆ ಎಂದು ಆಕಾಶ್ ಚೋಪ್ರಾ ಹೇಳಿದರು.
ಇದನ್ನೂ ಓದಿ: Hardik Pandya: ಪಾಂಡ್ಯ ಪವರ್: ಸಿಕ್ಸ್ ಸಿಡಿಸಿ ದಾಖಲೆ ಬರೆದ ಹಾರ್ದಿಕ್
ಇದನ್ನೂ ಓದಿ: ಐಪಿಎಲ್ನಲ್ಲಿ ಅತೀ ವೇಗವಾಗಿ ಅರ್ಧಶತಕ ಬಾರಿಸಿದ 10 ಬ್ಯಾಟರ್ಗಳು ಯಾರು ಗೊತ್ತಾ?
Published On - 4:58 pm, Thu, 14 April 22