Hasan Ali: ಔಟ್ ಕೊಟ್ಟಿಲ್ಲವೆಂದು ಅಂಪೈರ್ ಕೈಯನ್ನು ಬಲವಂತವಾಗಿ ಎತ್ತಿದ ಪಾಕ್ ಕ್ರಿಕೆಟಿಗ: ವಿಡಿಯೋ

Pakistan Cricket Team: ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಗಾಗಿ ಪಾಕಿಸ್ತಾನ ತಂಡ ಈಗಿನಿಂದಲೇ ಅಭ್ಯಾಸ ಪಂದ್ಯವಾಡುತ್ತಿದೆ. ಇದರಲ್ಲಿ ವಿಶೇಷ ಘಟನೆಯೊಂದು ನಡೆದಿದ್ದು, ಹಸನ್ ಅಲಿ ಅವರು ಔಟ್ ಕೊಡಿ ಎಂದು ಅಂಪೈರ್ ಬಳಿ ತೆರಳಿ ಕೈ ಎತ್ತಲು ಬಲವಂತ ಮಾಡಿದ್ದಾರೆ.

Hasan Ali: ಔಟ್ ಕೊಟ್ಟಿಲ್ಲವೆಂದು ಅಂಪೈರ್ ಕೈಯನ್ನು ಬಲವಂತವಾಗಿ ಎತ್ತಿದ ಪಾಕ್ ಕ್ರಿಕೆಟಿಗ: ವಿಡಿಯೋ
Hasan Ali and Umpire
Edited By:

Updated on: Jun 30, 2022 | 10:22 AM

ಪಾಕಿಸ್ತಾನ ಕ್ರಿಕೆಟ್ ತಂಡ ಬಾಬರ್ ಅಜಂ (Babar Azam) ನಾಯಕತ್ವದಲ್ಲಿ ಮುಂದಿನ ತಿಂಗಳು ಶ್ರೀಲಂಕಾ ಪ್ರವಾಸ ಬೆಳೆಸಲಿದೆ. ಸಿಂಹಳೀಯರ ವಿರುದ್ಧ ಪಾಕ್ (Sri Lanka vs Pakistan) ಎರಡು ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡಲಿದೆ. ಇದು ಗಾಲೆ ಮತ್ತು ಕೊಲಂಬೋದಲ್ಲಿ ಜುಲೈ 16 ಮತ್ತು 24 ರಂದು ಆಯೋಜಿಸಲಾಗಿದೆ. ಈ ಸರಣಿಗಾಗಿ ಪಾಕಿಸ್ತಾನ ತಂಡ ಈಗಿನಿಂದಲೇ ಭರ್ಜರಿ ಅಭ್ಯಾಸ ನಡೆಸುತ್ತಿದ್ದು ತನ್ನದೇ ಎರಡು ತಂಡದ ವಿರುದ್ಧ ಇನ್​​ಸ್ಟ್ರಾ ಸ್ವ್ಯಾಡ್ ವಾರ್ಮ್​-ಅಪ್ ಮ್ಯಾಚ್ ಅನ್ನು ಆಡುತ್ತಿದೆ. ಈ ಪಂದ್ಯದ ಮಧ್ಯೆ ವಿಶೇಷ ಘಟನೆಯೊಂದು ನಡೆದಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ಪಾಕಿಸ್ತಾನ ತಂಡದ ವೇಗಿ ಹಸನ್ ಅಲಿ (Hasan Ali) ಅವರು ಔಟ್ ಕೊಡಿ ಎಂದು ಅಂಪೈರ್ ಬಳಿ ತೆರಳಿ ಕೈ ಎತ್ತಲು ಬಲವಂತ ಮಾಡಿದ್ದಾರೆ.

ಅಗ್ಮಾ ಸಲ್ಮಾನ್ ಬ್ಯಾಟಿಂಗ್ ಮಾಡುತ್ತಿರುವ ವೇಳೆ ಬೌಲಿಂಗ್ ಮಾಡಿದ ಹಸನ್ ಅಲಿ ಎಲ್​​ಬಿಡಬ್ಲ್ಯೂಗೆ ಮನವಿ ಮಾಡಿದರು. ಆದರೆ, ಅಂಪೈರ್ ನಾಟೌಟ್ ಎಂದು ಹೇಳಿದರು. ಈ ಸಂದರ್ಭ ಅಲಿ ಅಂಪೈರ್ ಬಳಿ ತೆರಳಿ ಅವರ ಕೈ ಹಿಡಿದುಕೊಂಡ ಬಲವಂತವಾಗಿ ಕೈಯನ್ನು ಮೇಲೆತ್ತಲು ಮುಂದಾಗಿದ್ದಾರೆ. ಇದೊಂದು ತಮಾಷೆಯ ಕ್ಷಣವಾಗಿದ್ದು ಆಟಗಾರರೆಲ್ಲರು ನಗುತ್ತಾ ಇರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಇಲ್ಲಿದೆ ನೋಡಿ ಆ ವಿಡಿಯೋ.

KL Rahul: ಜರ್ಮನಿಯಿಂದ ಅಭಿಮಾನಿಗಳಿಗೆ ಸಂತಸದ ಸುದ್ದಿ ಕೊಟ್ಟ ಕೆಎಲ್ ರಾಹುಲ್: ಏನದು..?

ಇದನ್ನೂ ಓದಿ
Rohit Sharma: ರೋಹಿತ್ ಶರ್ಮಾ ಅಲಭ್ಯ: ಟೀಮ್ ಇಂಡಿಯಾಗೆ ಹೊಸ ನಾಯಕ
David Warner: ಎಲ್ಲರೂ LBWಗೆ ಮನವಿ ಮಾಡಿದ್ರೆ, ಡೇವಿಡ್ ವಾರ್ನರ್ ಸೂಪರ್​ ಮ್ಯಾನ್ ಕ್ಯಾಚ್ ಹಿಡಿದ್ರು..!
Moeen Ali: ನಾನಾಗಿದ್ರೆ ವಿರಾಟ್ ಕೊಹ್ಲಿಗೆ ನಾಯಕತ್ವ ನೀಡುತ್ತಿದ್ದೆ: ಮೊಯೀನ್ ಅಲಿ
Unmukt Chand: ಟೀಮ್ ಇಂಡಿಯಾಗೆ ಗುಡ್ ಬೈ ಹೇಳಿ ಅಮೆರಿಕದಲ್ಲಿ ಅಬ್ಬರಿಸುತ್ತಿರುವ ಮಾಜಿ ನಾಯಕ..!

ಆಸ್ಟ್ರೇಲಿಯಾ ವಿರುದ್ಧ ಆಡುತ್ತಿದೆ ಶ್ರೀಲಂಕಾ:

ಪಾಕಿಸ್ತಾನ ತಂಡ ಮುಂದಿನ ತಿಂಗಳು ಶ್ರೀಲಂಕಾ ಪ್ರವಾಸ ಬೆಳೆಸಲಿದೆ. ಇಲ್ಲಿ ಎರಡು ಪಂದ್ಯಗಳ ಟೆಸ್ಟ್​ ಸರಣಿಯನ್ನು ಆಡಬೇಕಿದೆ. ಸದ್ಯ ಲಂಕಾ ತಂಡ ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಪಂದ್ಯವನ್ನು ಆಡುತ್ತಿದೆ. ಪಂದ್ಯದ ಮೊದಲ ದಿನವೇ ಉಭಯ ತಂಡಗಳು ಸ್ಪಿನ್‌ ದಾಳಿಗೆ ನಲುಗಿ ಹೋದವು. 13 ವಿಕೆಟ್‌ಗಳಲ್ಲಿ 10 ವಿಕೆಟ್‌ ಸ್ಪಿನ್ನರ್‌ಗಳ ಪಾಲಾಯಿತು. ಟಾಸ್‌ ಗೆದ್ದು ಬ್ಯಾಟಿಂಗ್‌ ಆಯ್ದುಕೊಂಡ ಶ್ರೀಲಂಕಾ 212 ರನ್ನುಗಳ ಸಾಮಾನ್ಯ ಮೊತ್ತಕ್ಕೆ ಕುಸಿಯಿತು. ಸ್ಪಿನ್ನರ್‌ಗಳಾದ ನಥನ್‌ ಲಿಯೋನ್‌ 5, ಮಿಚೆಲ್‌ ಸ್ವೆಪ್ಸನ್‌ 2 ವಿಕೆಟ್‌ ಕೆಡವಿದರು. ಜವಾಬಿತ್ತ ಆಸ್ಟ್ರೇಲಿಯ 3 ವಿಕೆಟಿಗೆ 98 ರನ್‌ ಮಾಡಿದೆ. 2 ವಿಕೆಟ್‌ ರಮೇಶ್‌ ಮೆಂಡಿಸ್‌ ಪಾಲಾಯಿತು.

ಶ್ರೀಲಂಕಾ ಪರ ನಿಸ್ಸಾಂಕ 23, ನಾಯಕ ಕರುಣರತ್ನೆ 28, ಕುಸಾಲ್ ಮೆಂಡೀಸ್ 3, ಏಂಜೆಲೊ ಮ್ಯಾಥ್ಯೂಸ್ 39, ಧನಂಜಯ ಡಿ ಸಿಲ್ವಾ 14, ಚಂಡೀಮಲ್ 0, ಡಿಕ್ವೆಲ್ಲಾ 58, ಆರ್‌. ಮೆಂಡೀಸ್ 22, ವಾಂಡೆರ್ಸೆ 6, ಎಂಬುದೆಲ್ನಿಯಾ 6, ಫರ್ನಾಂಡೊ ಅಜೇಯ 2 ರನ್‌ಗಳಿಸಿದರು. ಲಂಕಾದ 212ರನ್‌ಗಳಿಗೆ ಉತ್ತರವಾಗಿ ಆಸ್ಟ್ರೇಲಿಯಾ ದಿನದಾಟದಂತ್ಯಕ್ಕೆ ಮೂರು ವಿಕೆಟ್ ನಷ್ಟಕ್ಕೆ 98 ರನ್ ಕಲೆಹಾಕಿದೆ. ಡೇವಿಡ್ ವಾರ್ನರ್ 25, ಮಾರ್ನಸ್ ಲ್ಯಾಬುಸ್ಚಾಗ್ನೆ 13, ಸ್ಟೀವನ್ ಸ್ಮಿತ್ 6 ರನ್‌ಗಳಿಸಿ ಔಟಾದ್ರು. ಓಪನರ್ ಉಸ್ಮಾನ್ ಖವಾಜ ಅಜೇಯ 47, ಟ್ರಾವಿಸ್ ಹೆಡ್ ಅಜೇಯ 6 ರನ್ ಕಲೆಹಾಕಿ ಎರಡನೇ ದಿನಕ್ಕೆ ಕ್ರೀಸ್ ಕಾಯ್ದುಕೊಂಡಿದ್ದಾರೆ. ಮಳೆಯಿಂದಾಗಿ ಎರಡನೇ ದಿನದಾಟ ಇನ್ನೂ ಆರಂಭವಾಗಿಲ್ಲ.

Rohit Sharma: ರೋಹಿತ್ ಶರ್ಮಾ ಬಗ್ಗೆ ಶಾಕಿಂಗ್ ಹೇಳಿಕೆ ನೀಡಿದ ಕೋಚ್ ರಾಹುಲ್ ದ್ರಾವಿಡ್