David Warner: ಎಲ್ಲರೂ LBWಗೆ ಮನವಿ ಮಾಡಿದ್ರೆ, ಡೇವಿಡ್ ವಾರ್ನರ್ ಸೂಪರ್ ಮ್ಯಾನ್ ಕ್ಯಾಚ್ ಹಿಡಿದ್ರು..!
David Warner Catch Video: ಚೆಂಡು ಬ್ಯಾಟ್‌ಗೆ ತಾಗಿ ಸ್ಲಿಪ್ ಕಡೆಗೆ ಚಿಮ್ಮಿತ್ತು. ಇತ್ತ ಆಸ್ಟ್ರೇಲಿಯದ ಆಟಗಾರರಿಗೆ ಚೆಂಡು ಬ್ಯಾಟ್‌ಗೆ ಬಡಿದಿದೆ ಎಂದು ತಿಳಿದಿರಲಿಲ್ಲ.
ಶ್ರೀಲಂಕಾ-ಆಸ್ಟ್ರೇಲಿಯಾ ನಡುವೆ ಲಂಕಾದ ಗಾಲೆಯಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದ ಮೊದಲ ದಿನ ಅಧ್ಭುತ ಕ್ಯಾಚ್ವೊಂದಕ್ಕೆ ಸಾಕ್ಷಿಯಾಗಿದೆ. ಎಲ್ಲರನ್ನೂ ದಂಗಾಗಿಸುವಂತೆ ಕ್ಯಾಚ್ ಹಿಡಿದ ಆಟಗಾರನೆಂದರೆ ಡೇವಿಡ್ ವಾರ್ನರ್. ಡೇವಿಡ್ ವಾರ್ನರ್ ವಿಶ್ವದ ಅತ್ಯುತ್ತಮ ಫೀಲ್ಡರ್‌ಗಳಲ್ಲಿ ಒಬ್ಬರು ಎಂಬುದು ಗೊತ್ತಿರುವ ವಿಚಾರ. ಇದೀಗ ಅದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಶ್ರೀಲಂಕಾ ನಾಯಕ ದಿಮುತ್ ಕರುಣರತ್ನೆ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಆದರೆ ಆಸ್ಟ್ರೇಲಿಯಾ ಬೌಲರ್ಗಳ ಮುಂದೆ ಕ್ರೀಸ್ ಕಚ್ಚಿ ನಿಲ್ಲಲು ಪರದಾಡಿದ ಶ್ರೀಲಂಕಾ ತಂಡ ಮೊದಲ ಇನ್ನಿಂಗ್ಸ್‌ನಲ್ಲಿ 212 ರನ್ ಗಳಿಸಿ ಆಲೌಟ್ ಆಗಿದೆ. ಲಂಕಾ ಪರ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ನಿರೋಶನ್ ಡಿಕ್ವೆಲ್ಲಾ ಅತ್ಯಧಿಕ 58 ರನ್ ಗಳಿಸಿದ್ದಾರೆ.
ಆರಂಭಿಕರಾಗಿ ಕಾಣಿಸಿಕೊಂಡ ಪಾತುಂ ನಿಸ್ಸಾಂಕ ಬೇಗನೆ ನಿರ್ಗಮಿಸಿದರು. ಇನ್ನು ಕುಸಾಲ್ ಮೆಂಡಿಸ್ ಕೇವಲ 3 ರನ್ ಗಳಿಸಲಷ್ಟೇ ಶಕ್ತರಾದರು. 42 ರನ್‌ಗಳಿಗೆ 2 ವಿಕೆಟ್ ಪತನಗೊಂಡ ಬಳಿಕ ದಿಮುತ್ ಕರುಣರತ್ನೆ ತಂಡವನ್ನು ನಿಭಾಯಿಸುವ ಹೊಣೆ ಹೊತ್ತರು. ಅದರಂತೆ ಎಚ್ಚರಿಕೆಯ ಆಟವಾಡಿದ್ದ ಕರುಣಾರತ್ನೆಯನ್ನು ಅವರನ್ನುಆಫ್ ಸ್ಪಿನ್ನರ್ ನಾಥನ್ ಲಿಯಾನ್ ಕಾಡಲಾರಂಭಿಸಿದರು. ಪಂದ್ಯದ 30ನೇ ಓವರ್ನ ಎರಡನೇ ಎಸೆತವನ್ನು ಕರುಣರತ್ನೆ ರಕ್ಷಣಾತ್ಮಕವಾಗಿ ಆಡಿದ್ದರು. ಆದರೆ ಚೆಂಡು ಬ್ಯಾಟ್‌ಗೆ ತಾಗಿ ಸ್ಲಿಪ್ ಕಡೆಗೆ ಚಿಮ್ಮಿತ್ತು. ಇತ್ತ ಆಸ್ಟ್ರೇಲಿಯದ ಆಟಗಾರರಿಗೆ ಚೆಂಡು ಬ್ಯಾಟ್‌ಗೆ ಬಡಿದಿದೆ ಎಂದು ತಿಳಿದಿರಲಿಲ್ಲ. ಎಲ್ಲರೂ ಎಲ್‌ಬಿಡಬ್ಲ್ಯುಗಾಗಿ ಮನವಿ ಮಾಡಿದ್ದರು.
ಇದೇ ವೇಳೆ ಡೇವಿಡ್ ವಾರ್ನರ್ ಮಾತ್ರ ಡೈವ್ ಹೊಡೆಯುವ ಮೂಲಕ ಒಂದೇ ಕೈಯಲ್ಲಿ ಅದ್ಭುತ ಕ್ಯಾಚ್ ಹಿಡಿದರು. ಅದರಂತೆ ಕರುಣರತ್ನೆ ಎಲ್ಬಿಡಬ್ಲ್ಯೂ ಬದಲಾಗಿ ಕ್ಯಾಚ್ ಆಗಿ ಹೊರನಡೆದರು. ಅಂದರೆ ಡೇವಿಡ್ ವಾರ್ನರ್ ಈ ಸೂಪರ್ ಮ್ಯಾನ್ ಕ್ಯಾಚ್ ಫಲವಾಗಿ 84 ಎಸೆತಗಳಲ್ಲಿ 28 ರನ್ ಗಳಿಸಿದ್ದ ಕರುಣರತ್ನೆ ಪೆವಿಲಿಯನ್ಗೆ ಮರಳಬೇಕಾಯಿತು. ಇದೀಗ ಡೇವಿಡ್ ವಾರ್ನರ್ ಹಿಡಿದ ಈ ಅದ್ಭುತ ಕ್ಯಾಚ್ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅಲ್ಲದೇ ವಾರ್ನರ್ ಅವರ ಅದ್ಭುತ ಫೀಲ್ಡಿಂಗ್ ಬಗ್ಗೆ ಭಾರೀ ಮೆಚ್ಚುಗೆಗಳು ವ್ಯಕ್ತವಾಗುತ್ತಿದೆ.
Everyone went up for LBW.. David Warner kept his eye on the prize and took an absolute ripper! #SLvAUS pic.twitter.com/f7cdguPs39
— Chloe-Amanda Bailey (@ChloeAmandaB) June 29, 2022
ಇದನ್ನೂ ಓದಿ: T20I Rankings: ರ್ಯಾಂಕಿಂಗ್ನಲ್ಲೂ ಕೊಹ್ಲಿಯ ವಿಶ್ವ ದಾಖಲೆ ಮುರಿದ ಬಾಬರ್ ಆಜಂ
Published On - 4:33 pm, Wed, 29 June 22