ಐಪಿಎಲ್ 2022 (IPL 2022)ರಲ್ಲಿ, ಶ್ರೇಯಸ್ ಅಯ್ಯರ್ (Shreyas Iyer) ನಾಯಕತ್ವದ ಕೋಲ್ಕತ್ತಾ ನೈಟ್ ರೈಡರ್ಸ್ ಶುಕ್ರವಾರ ಸನ್‌ರೈಸರ್ಸ್ ಹೈದರಾಬಾದ್ (Sunrisers Hyderabad) ತಂಡವನ್ನು ಎದುರಿಸಲಿದೆ. ಇದು ಲೀಗ್‌ನ 25ನೇ ಪಂದ್ಯವಾಗಿದೆ. ಕೆಕೆಆರ್ ತಂಡ ತನ್ನ ಹೊಸ ನಾಯಕನೊಂದಿಗೆ ಉತ್ತಮ ಪ್ರದರ್ಶನ ನೀಡುತ್ತಿದೆ. ಮತ್ತೊಂದೆಡೆ, ಸನ್‌ರೈಸರ್ಸ್ ಹೈದರಾಬಾದ್ ಹ್ಯಾಟ್ರಿಕ್ ಸೋಲಿನ ನಂತರ ಗೆಲುವಿನ ಹಾದಿ ಹಿಡಿದಿದೆ. ಇವರಿಬ್ಬರ ನಡುವಿನ ಈ ಪಂದ್ಯ ಮುಂಬೈನ ಬ್ರಬನ್ ಸ್ಟೇಡಿಯಂನಲ್ಲಿ ನಡೆಯಲಿದ್ದು, ಕೆಕೆಆರ್ ಅಗ್ರಸ್ಥಾನಕ್ಕೇರುವ ಅವಕಾಶ ಹೊಂದಿದೆ. ಮತ್ತೊಂದೆಡೆ ಹೈದರಾಬಾದ್ ತಂಡ ಅಗ್ರ ನಾಲ್ಕರ ಘಟ್ಟಕ್ಕೆ ಬರಲು ಪ್ರಯತ್ನಿಸುತ್ತಿದೆ.
ಕೋಲ್ಕತ್ತಾ ನೈಟ್ ರೈಡರ್ಸ್ ತಂಡವು ಯಾವಾಗಲೂ ಹೈದರಾಬಾದ್‌ಗೆ ಕಂಟಕವಾಗಿರಲಿದೆ. ಎರಡು ಸೀಸನ್‌ಗಳ ಹಿಂದೆ 2019 ರಲ್ಲಿ ಹೈದರಾಬಾದ್ KKR ವಿರುದ್ಧ ಕೊನೆಯ ಗೆಲುವು ಸಾಧಿಸಿದೆ. ಆದರೆ, ಈ ಬಾರಿ ಬದಲಾದ ತಂಡಗಳೊಂದಿಗೆ, ಫಲಿತಾಂಶದಲ್ಲಿ ವ್ಯತ್ಯಾಸವನ್ನು ಕಾಣಬಹುದು. ಕಳೆದ ಪಂದ್ಯದಲ್ಲಿ ಕೆಕೆಆರ್ ತಂಡ ಸೋಲನುಭವಿಸಬೇಕಾಯಿತು, ಇನ್ನೊಂದೆಡೆ ಹೈದರಾಬಾದ್ ತಂಡ ಹ್ಯಾಟ್ರಿಕ್ ಗೆಲುವಿನತ್ತ ದಾಪುಗಾಲಿಟ್ಟಿದೆ.
ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಕೆಕೆಆರ್ ಮೇಲುಗೈ
ಸನ್‌ರೈಸರ್ಸ್ ಹೈದರಾಬಾದ್ 2013 ರಿಂದ ಲೀಗ್‌ನ ಭಾಗವಾಗಿದೆ. ಅಂದಿನಿಂದ ಎರಡು ತಂಡಗಳ ನಡುವೆ 21 ಪಂದ್ಯಗಳು ನಡೆದಿವೆ. ಈ 21 ಪಂದ್ಯಗಳಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ 14 ಪಂದ್ಯಗಳನ್ನು ಗೆದ್ದಿದ್ದರೆ, ಕೆಕೆಆರ್ ಪಾಲು ಏಳರಲ್ಲಿ ಮಾತ್ರ ಗೆದ್ದಿದೆ. ಕಳೆದ ಋತುವಿನ ಬಗ್ಗೆ ಮಾತನಾಡುವುದಾದರೆ, ಕಳೆದ ಸೀಸನ್‌ನಲ್ಲಿ ಎರಡೂ ತಂಡಗಳು ಎರಡು ಬಾರಿ ಮುಖಾಮುಖಿಯಾಗಿದ್ದು, ಕೆಕೆಆರ್ ಎರಡೂ ಬಾರಿ ಗೆದ್ದಿದೆ. ಚೆನ್ನೈನಲ್ಲಿ ನಡೆದ ಮೊದಲ ಪಂದ್ಯದಲ್ಲಿ ಕೆಕೆಆರ್ ಗೆಲುವು ಸಾಧಿಸಿದರೆ, ದುಬೈನಲ್ಲಿ ನಡೆದ ಲೀಗ್‌ನ ಎರಡನೇ ಪಂದ್ಯದಲ್ಲಿ ಮತ್ತೊಮ್ಮೆ ಗೆಲುವು ಸಾಧಿಸಿದೆ.
ಕಳೆದ ಬಾರಿ ಕೆಕೆಆರ್ ಸುಲಭ ಗೆಲುವು ಸಾಧಿಸಿತ್ತು
ಕಳೆದ ಬಾರಿ ದುಬೈನ ದುಬೈ ಅಂತಾರಾಷ್ಟ್ರೀಯ ಸ್ಟೇಡಿಯಂನಲ್ಲಿ ಎರಡೂ ತಂಡಗಳು ಮುಖಾಮುಖಿಯಾಗಿದ್ದವು. ಮೊದಲು ಬ್ಯಾಟ್ ಮಾಡಿದ ಹೈದರಾಬಾದ್ ಕೇವಲ 115 ರನ್ ಗಳಿಸಿತ್ತು. ನಾಯಕ ವಿಲಿಯಮ್ಸನ್ 26 ಮತ್ತು ಅಬ್ದುಲ್ ಸಮದ್ 25 ರನ್ ಗಳಿಸಿದರು. ಮತ್ತೊಂದೆಡೆ ಕೆಕೆಆರ್ ಪರ ಟಿಮ್ ಸೌಥಿ, ಶಿವಂ ಮಾವಿ ಮತ್ತು ವರುಣ್ ತಲಾ ಎರಡು ವಿಕೆಟ್ ಪಡೆದರು. ಕೆಕೆಆರ್ ಎರಡು ಎಸೆತು ಬಾಕಿಯಿರುವಂತೆ ಈ ಗುರಿಯನ್ನು ಸಾಧಿಸಿತು. ಈ ಪಂದ್ಯದಲ್ಲಿ, ಶುಭಮನ್ ಗಿಲ್ 57 ರನ್‌ಗಳ ಅರ್ಧಶತಕದ ಆಟವನ್ನು ಆಡಿದರೆ, ನಿತೀಶ್ ರಾಣಾ 25 ರನ್ ಗಳಿಸಿದರು. ಹೈದರಾಬಾದ್ ಪರ ಜೇಸನ್ ಹೋಲ್ಡರ್ ಎರಡು ವಿಕೆಟ್ ಪಡೆದರು. ಈ ಋತುವಿನಲ್ಲಿ ಕೆಕೆಆರ್ ಫೈನಲ್ ತಲುಪಿತ್ತು.
ಇದನ್ನೂ ಓದಿ:IPL 2022: ಮುಂಬೈನ ಸತತ 5 ಸೋಲುಗಳಿಗೆ ರೋಹಿತ್ ಬಳಗದ ಈ ಐದು ನ್ಯೂನತೆಗಳೇ ಕಾರಣ