Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2022: ಮುಂಬೈನ ಸತತ 5 ಸೋಲುಗಳಿಗೆ ರೋಹಿತ್ ಬಳಗದ ಈ ಐದು ನ್ಯೂನತೆಗಳೇ ಕಾರಣ

IPL 2022: ಮುಂಬೈ ಇಂಡಿಯನ್ಸ್ ಅದೃಷ್ಟ ಕೆಟ್ಟಿದೆ. ಈ ಲೀಗ್‌ನ ಇತಿಹಾಸದಲ್ಲಿ ಅತ್ಯಂತ ಯಶಸ್ವಿ ತಂಡವು ಪ್ರಸ್ತುತ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ. ಮುಂಬೈ ಇಂಡಿಯನ್ಸ್ ಇನ್ನೂ ಮೊದಲ ಗೆಲುವಿನ ಹುಡುಕಾಟದಲ್ಲಿದೆ.

IPL 2022: ಮುಂಬೈನ ಸತತ 5 ಸೋಲುಗಳಿಗೆ ರೋಹಿತ್ ಬಳಗದ ಈ ಐದು ನ್ಯೂನತೆಗಳೇ ಕಾರಣ
ರೋಹಿತ್ ಶರ್ಮಾ
Follow us
TV9 Web
| Updated By: ಪೃಥ್ವಿಶಂಕರ

Updated on: Apr 14, 2022 | 5:08 PM

ಮುಂಬೈ ಇಂಡಿಯನ್ಸ್ (Mumbai Indians) ಅದೃಷ್ಟ ಕೆಟ್ಟಿದೆ. ಈ ಲೀಗ್‌ನ ಇತಿಹಾಸದಲ್ಲಿ ಅತ್ಯಂತ ಯಶಸ್ವಿ ತಂಡವು ಪ್ರಸ್ತುತ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ. ಮುಂಬೈ ಇಂಡಿಯನ್ಸ್ ಇನ್ನೂ ಮೊದಲ ಗೆಲುವಿನ ಹುಡುಕಾಟದಲ್ಲಿದೆ. ಬುಧವಾರ ನಡೆದ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲೂ ಸೋಲನ್ನು ಎದುರಿಸಬೇಕಾಯಿತು . ಈ ಋತುವಿನಿಂದ ಐಪಿಎಲ್ (IPL 2022) ನಲ್ಲಿ ಹತ್ತು ತಂಡಗಳು ಆಡುತ್ತಿರುವುದರಿಂದ, ಈಗ ಮುಂಬೈ ತಂಡವು ಟಾಪ್-4 ರೇಸ್‌ನಿಂದ ಬಹುತೇಕ ಹೊರಗುಳಿದಿದೆ. ಕಳಪೆ ಆರಂಭದ ನಂತರ ಮುಂಬೈ ಇಂಡಿಯನ್ಸ್ ಹಲವು ಲೀಗ್‌ನಲ್ಲಿ ಮತ್ತೆ ಗೆಲುವಿನ ಟ್ರ್ಯಾಕ್​ಗೆ ಬಂದು ಚಾಂಪಿಯನ್ ಆಗಿರುವ ಸಾಕಷ್ಟು ನಿದರ್ಶನಗಳಿವೆ. ಆದರೆ ಈ ಬಾರಿ ಅದು ನಡೆಯುವಂತೆ ಕಾಣುತ್ತಿಲ್ಲ. ಇದು ನಾಯಕನಾಗಿ ರೋಹಿತ್ ಶರ್ಮಾ (Rohit Sharma)ಗೆ ದೊಡ್ಡ ಹಿನ್ನಡೆಯಾಗಿದೆ. ರೋಹಿತ್ ಈಗ ಟೀಂ ಇಂಡಿಯಾ ನಾಯಕ ಕೂಡ. ಆದ್ದರಿಂದ, ಲೀಗ್‌ನಲ್ಲಿ ಅವರ ತಂಡದ ಗ್ರಾಫ್ ಬಿದ್ದ ತಕ್ಷಣ, ಭಾರತೀಯ ಕ್ರಿಕೆಟ್ ಅಭಿಮಾನಿಗಳ ಆತಂಕವೂ ಹೆಚ್ಚಾಗಲು ಶುರುವಾಗಿದೆ. ಇದುವರೆಗೆ ಆಡಿರುವ ಐದು ಪಂದ್ಯಗಳಲ್ಲಿ ಒಂದು ಬಾರಿಯೂ ಗೆಲ್ಲದಿರುವುದು ಮುಂಬೈ ಇಂಡಿಯನ್ಸ್‌ಗೆ ದೊಡ್ಡ ಚಿಂತೆಯಾಗಿದೆ.

ಇದುವರೆಗೂ ಮುಂಬೈ ಇಂಡಿಯನ್ಸ್ ಗೆಲುವಿನ ಸನಿಹ ಕೂಡ ಬಂದಿಲ್ಲ ಮುಂಬೈ ಇಂಡಿಯನ್ಸ್ ತನ್ನ ಮೊದಲ ಪಂದ್ಯವನ್ನು ಮಾರ್ಚ್ 27 ರಂದು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಆಡಿತು. ಆ ಪಂದ್ಯದಲ್ಲಿ ಅವರು ನಾಲ್ಕು ವಿಕೆಟ್‌ಗಳಿಂದ ಸೋಲನ್ನು ಎದುರಿಸಬೇಕಾಯಿತು. ಮುಂದಿನ ಪಂದ್ಯ ರಾಜಸ್ಥಾನ್ ರಾಯಲ್ಸ್ ವಿರುದ್ಧವಾಗಿತ್ತು. ಮುಂಬೈ ಇಂಡಿಯನ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ 23 ರನ್ ಗಳಿಂದ ಜಯ ಸಾಧಿಸಿತು. ಮೂರನೇ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಜೊತೆ ಪೈಪೋಟಿ ಏರ್ಪಟ್ಟಿತ್ತು. ಈ ಬಾರಿಯೂ ಮುಂಬೈ ಸೋಲನ್ನು ಎದುರಿಸಬೇಕಾಯಿತು. ಈ ಬಾರಿ ನಾಲ್ಕು ಓವರ್‌ಗಳ ಆಟ ಬಾಕಿ ಇರುವಾಗಲೇ ಐದು ವಿಕೆಟ್‌ಗಳಿಂದ ಸೋತಿತು. ಮುಂಬೈನ ನಾಲ್ಕನೇ ಸೋಲು ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧವಾಗಿತ್ತು. ಮುಂಬೈ ತಂಡವನ್ನು ಆರ್‌ಸಿಬಿ 7 ವಿಕೆಟ್‌ಗಳಿಂದ ಸೋಲಿಸಿತು. ಈ ಬಾರಿಯೂ ಪಂದ್ಯದಲ್ಲಿ ಇನ್ನೂ 9 ಎಸೆತಗಳು ಬಾಕಿ ಉಳಿದಿದ್ದವು. ಪಂಜಾಬ್ ವಿರುದ್ಧದ ಪಂದ್ಯ ಸ್ವಲ್ಪ ರೋಚಕವಾಗಿರಬಹುದಿತ್ತು. ಆದರೆ ಮಧ್ಯಮ ಕ್ರಮಾಂಕ ಮತ್ತು ಕೆಳ ಮಧ್ಯಮ ಕ್ರಮಾಂಕದ ವೈಫಲ್ಯದಿಂದಾಗಿ ಮುಂಬೈ ಇಂಡಿಯನ್ಸ್ 12 ರನ್‌ಗಳಿಂದ ಸೋಲನುಭವಿಸಬೇಕಾಯಿತು. ಹೀಗೆ ಮುಂಬೈ ತನ್ನ ಚಾರ್ಮ್​ ಕಳೆದುಕೊಳ್ಳಲ್ಲು ಕಾರಣವೇನು ಎಂಬುದನ್ನು ನಾವು ನಿಮಗೆ ಹೇಳಲಿದ್ದೇವೆ.

ಸತತ ಐದನೇ ಸೋಲಿಗೆ ಮೊದಲ ಕಾರಣ ಈ ಬಾರಿಯ ಐಪಿಎಲ್‌ಗೆ ಮೆಗಾ ಹರಾಜು ಪ್ರಕ್ರಿಯೆ ನಡೆಯಬೇಕಿತ್ತು. ಆಯ್ದ ಕೆಲವು ಆಟಗಾರರನ್ನು ಹೊರತುಪಡಿಸಿ ಇಡೀ ತಂಡಕ್ಕೆ ಹೊಸ ರೂಪ ನೀಡಬೇಕಿತ್ತು. ಹರಾಜಿನ ಮೊದಲ ದಿನ, ಮುಂಬೈ ತಂಡವು ಸಂಪೂರ್ಣವಾಗಿ ಶಾಂತವಾಗಿತ್ತು. ಹೌದು, ಇಶಾನ್ ಕಿಶನ್ ಸರದಿ ಬಂದಾಗ ಮುಂಬೈ ತನ್ನ ಸಂಪೂರ್ಣ ಖಜಾನೆ ತೆರೆಯಿತು. 2 ಕೋಟಿ ಮೂಲ ಬೆಲೆಯಿಂದ ಆರಂಭವಾದ ಇಶಾನ್ 15.25 ಕೋಟಿಗೆ ಖರೀದಿಯಾದರು. ಇದು ಈ ವರ್ಷದ ಅತ್ಯಂತ ದುಬಾರಿ ಖರೀದಿಯಾಗಿದೆ. ಮುಂಬೈ ಇಂಡಿಯನ್ಸ್ ಇಶಾನ್‌ಗಾಗಿ ಸನ್‌ರೈಸರ್ಸ್ ಹೈದರಾಬಾದ್, ಗುಜರಾತ್ ಟೈಟಾನ್ಸ್ ಮತ್ತು ಪಂಜಾಬ್ ಕಿಂಗ್ಸ್‌ನೊಂದಿಗೆ ಪೈಪೋಟಿ ನಡೆಸಿತು. ಇಶಾನ್ ತನ್ನ ಸಾಮರ್ಥ್ಯವನ್ನು ಸಾಬೀತುಪಡಿಸಿದರೂ, ಒಬ್ಬ ಆಟಗಾರ ಮಾತ್ರ ತಂಡವನ್ನು ಚಾಂಪಿಯನ್ ಮಾಡಲು ಸಾಧ್ಯವಿಲ್ಲ ಎಂದು ಅರ್ಥಮಾಡಿಕೊಳ್ಳಬೇಕು.

ಐದನೇ ಸೋಲಿಗೆ ಎರಡನೇ ಕಾರಣವಿದು ಐದನೇ ಸೋಲಿಗೆ ಎರಡನೇ ಕಾರಣವೆಂದರೆ, ಮುಂಬೈನ ಸ್ಟಾರ್ ಬೌಲರ್ ಜಸ್ಪ್ರೀತ್ ಬುಮ್ರಾ ಸರಿಯಾದ ಪಾಲುದಾರರನ್ನು ಹೊಂದಿಲ್ಲದಿರುವುದಾಗಿದೆ. ಜೋಫ್ರಾ ಆರ್ಚರ್ ಬುಮ್ರಾ ಅವರ ಪರಿಪೂರ್ಣ ಪಾಲುದಾರರಾಗಬಹುದಿತ್ತು ಆದರೆ ಅವರು ಇನ್ನೂ ಆಟಕ್ಕೆ ಲಭ್ಯವಿಲ್ಲ. ಅವರ ಅನುಪಸ್ಥಿತಿಯಲ್ಲಿ ಮುಂಬೈನ ವೇಗದ ಬೌಲಿಂಗ್ ದುರ್ಬಲವಾಗಿ ಕಾಣುತ್ತಿದೆ. ಜಯದೇವ್ ಉನದ್ಕತ್, ಟೈಮಲ್ ಮಿಲ್ಸ್, ಬಸಿಲ್ ಥಂಪಿ ಬೌಲಿಂಗ್‌ನಲ್ಲಿ ಅಗತ್ಯ ಮಟ್ಟದ ಬೆಂಬಲ ನೀಡಲು ಸಾಧ್ಯವಾಗುತ್ತಿಲ್ಲ. 8ಕ್ಕಿಂತ ಕಡಿಮೆ ಎಕಾನಮಿಯಲ್ಲಿ ರನ್ ನೀಡಿದ ಮುಂಬೈನ ಏಕೈಕ ವೇಗದ ಬೌಲರ್ ಬುಮ್ರಾ. ಇತರ ಎಲ್ಲಾ ವೇಗದ ಬೌಲರ್‌ಗಳು 10 ರ ಸಮೀಪವಿರುವ ಎಕಾನಮಿಯಲ್ಲಿ ರನ್ ನೀಡುತ್ತಿದ್ದಾರೆ.

ಮೂರನೇ ಕಾರಣ ಸ್ಪಿನ್ ವಿಭಾಗದ ದೌರ್ಬಲ್ಯ ಐಪಿಎಲ್‌ನಲ್ಲಿ ಯಶಸ್ಸು ಕಾಣಬೇಕಾದರೆ ತಂಡದಲ್ಲಿ ಉತ್ತಮ ಸ್ಪಿನ್ ಬೌಲರ್ ಇರಲೇಬೇಕು ಎಂಬುದು ವರ್ಷದಿಂದ ವರ್ಷಕ್ಕೆ ಸಾಬೀತಾಗಿದೆ. ಪ್ರಸ್ತುತ, ಲೀಗ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದವರ ಪಟ್ಟಿಯಲ್ಲಿ ಇಬ್ಬರು ಅಗ್ರ ಬೌಲರ್‌ಗಳು ಸ್ಪಿನ್ನರ್‌ಗಳಾಗಿದ್ದಾರೆ ಎಂಬುದನ್ನು ಈ ಅಂಕಿಅಂಶಗಳಿಂದ ಅರ್ಥಮಾಡಿಕೊಳ್ಳಬಹುದು. ಯುಜ್ವೇಂದ್ರ ಚಹಾಲ್ ಅವರ ಖಾತೆಯಲ್ಲಿ 11 ವಿಕೆಟ್ ಮತ್ತು ಕುಲದೀಪ್ ಯಾದವ್ ಖಾತೆಯಲ್ಲಿ 10 ವಿಕೆಟ್‌ಗಳಿವೆ. ಆದರೆ ಮುಂಬೈನ ಸ್ಪಿನ್ ವಿಭಾಗವನ್ನು ಮುರುಗನ್ ಅಶ್ವಿನ್ ನಿಭಾಯಿಸುತ್ತಿದ್ದಾರೆ. ಅವರು 5 ಪಂದ್ಯಗಳಲ್ಲಿ 7.70 ರ ಎಕಾನಮಿಯಲ್ಲಿ ರನ್ ನೀಡುವ ಮೂಲಕ ಐದು ವಿಕೆಟ್ಗಳನ್ನು ಪಡೆದಿದ್ದಾರೆ. ಆದರೆ ತಂಡದ ಗೆಲುವಿಗೆ ಈ ಪ್ರದರ್ಶನ ಸಾಕಾಗುವುದಿಲ್ಲ.

ಕೈರಾನ್ ಪೊಲಾರ್ಡ್ ವೈಫಲ್ಯ ಸೋಲಿಗೆ ನಾಲ್ಕನೇ ಕಾರಣ ಟಿ20 ಮಾದರಿಯ ಅತ್ಯಂತ ಅಪಾಯಕಾರಿ ಆಟಗಾರರಲ್ಲಿ ಕೀರಾನ್ ಪೊಲಾರ್ಡ್ ಕೂಡ ಒಬ್ಬರು. ಮುಂಬೈ ಇಂಡಿಯನ್ಸ್ ಅವರನ್ನು ತನ್ನ ತಂಡದಲ್ಲಿ ಉಳಿಸಿಕೊಂಡಿದೆ. ಆಲ್ ರೌಂಡರ್ ಆಗಿ ಅವರು ಮುಂಬೈ ಇಂಡಿಯನ್ಸ್ ತಂಡದ ಪ್ರಮುಖ ಭಾಗವಾಗಿದ್ದಾರೆ. ಆದರೆ ಅವರು ಇಲ್ಲಿಯವರೆಗೆ ನಿರಸ ಪ್ರದರ್ಶನ ನೀಡಿದ್ದಾರೆ. ಇದುವರೆಗೆ ಆಡಿರುವ ಐದು ಪಂದ್ಯಗಳಲ್ಲಿ ಅವರ ಖಾತೆಯಲ್ಲಿ 57 ರನ್‌ಗಳಷ್ಟೇ ಇವೆ. ಅವರ ಸರಾಸರಿ 14.25. ಸ್ಟ್ರೈಕ್ ರೇಟ್‌ನಲ್ಲೂ ಅವರು ತುಂಬಾ ದುರ್ಬಲರಾಗಿದ್ದಾರೆ. ಅವರ ಸ್ಟ್ರೈಕ್ ರೇಟ್ 121.27. ಮಧ್ಯಮ ಕ್ರಮಾಂಕದಲ್ಲಿ ಕೀರನ್ ಪೊಲಾರ್ಡ್ ವೇಗವಾಗಿ ರನ್ ಗಳಿಸುವ ನಿರೀಕ್ಷೆಯಿದೆ. ಆದರೆ ಸದ್ಯಕ್ಕೆ ಅವರು ಆ ನಿರೀಕ್ಷೆಗೆ ತಕ್ಕಂತೆ ಆಟವಾಡಿಲ್ಲ.

ಸ್ವತಃ ರೋಹಿತ್ ಶರ್ಮಾ ಸೋಲಿಗೆ ಐದನೇ ಕಾರಣ ರೋಹಿತ್ ಶರ್ಮಾ ಪ್ರಸ್ತುತ ವಿಶ್ವದ ಅತ್ಯಂತ ಅಪಾಯಕಾರಿ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರು. ಅವರು ಲೀಗ್‌ನ ಅತ್ಯಂತ ಯಶಸ್ವಿ ನಾಯಕ ಕೂಡ. ತಂಡಕ್ಕೆ ಉತ್ತಮ ಆರಂಭ ದೊರಕಿಸಿಕೊಡುವ ಹೊಣೆಗಾರಿಕೆ ಅವರ ಮೇಲಿದೆ. ಆದರೆ ರೋಹಿತ್ ಶರ್ಮಾ ಇದುವರೆಗೆ ಈ ಜವಾಬ್ದಾರಿಯನ್ನು ನಿಭಾಯಿಸುವಲ್ಲಿ ವಿಫಲರಾಗಿದ್ದಾರೆ. ಇದುವರೆಗೆ ಆಡಿರುವ ಐದು ಪಂದ್ಯಗಳಲ್ಲಿ 108 ರನ್ ಗಳಿಸಿದ್ದಾರೆ. ಅವರ ಸರಾಸರಿ 21.60 ಮತ್ತು ಸ್ಟ್ರೈಕ್ ರೇಟ್ 133.33. ಮುಂಬೈ ತಂಡ ಈ ಋತುವಿನಲ್ಲಿ ಇನ್ನೂ 9 ಪಂದ್ಯಗಳನ್ನು ಆಡಬೇಕಿದೆ. ಈ 9 ಪಂದ್ಯಗಳಲ್ಲಿ ಸೋಲು-ಗೆಲುವು ಹೆಚ್ಚಿನ ವ್ಯತ್ಯಾಸವನ್ನು ಉಂಟುಮಾಡುವುದಿಲ್ಲ, ಆದರೆ ಕನಿಷ್ಠ ತಂಡದ ವಿಶ್ವಾಸಾರ್ಹತೆ ಹಾಗೇ ಉಳಿದಿದೆ.

ಇದನ್ನೂ ಓದಿ:IPL 2022: ಮುಂಬೈ ನಾಯಕತ್ವದಿಂದ ಕೆಳಗಿಳಿಯುತ್ತಾರಾ ರೋಹಿತ್ ಶರ್ಮಾ?- ಸಂಜಯ್ ಮಂಜ್ರೇಕರ್ ಸ್ಫೋಟಕ ಹೇಳಿಕೆ

ಲಾಲು ಯಾದವ್ ಸರ್ಕಾರ ಜಂಗಲ್ ರಾಜ್ ಎಂದೇ ನೆನಪುಳಿಯುತ್ತದೆ; ಅಮಿತ್ ಶಾ
ಲಾಲು ಯಾದವ್ ಸರ್ಕಾರ ಜಂಗಲ್ ರಾಜ್ ಎಂದೇ ನೆನಪುಳಿಯುತ್ತದೆ; ಅಮಿತ್ ಶಾ
ಉಪ್ಪಿ, ಶಿವಣ್ಣ, ರಾಜ್ ಶೆಟ್ಟಿ ನಟನೆ ‘45’ ಸಿನಿಮಾ ಟೀಸರ್ ಲಾಂಚ್ ಲೈವ್ ನೋಡಿ
ಉಪ್ಪಿ, ಶಿವಣ್ಣ, ರಾಜ್ ಶೆಟ್ಟಿ ನಟನೆ ‘45’ ಸಿನಿಮಾ ಟೀಸರ್ ಲಾಂಚ್ ಲೈವ್ ನೋಡಿ
ಯುಗಾದಿ ಹಬ್ಬದಂದು ಗೃಹ ಲಕ್ಷ್ಮೀಯರಿಗೆ ಸಿಹಿ ಸುದ್ದಿ ನೀಡಿದ ಸಚಿವೆ
ಯುಗಾದಿ ಹಬ್ಬದಂದು ಗೃಹ ಲಕ್ಷ್ಮೀಯರಿಗೆ ಸಿಹಿ ಸುದ್ದಿ ನೀಡಿದ ಸಚಿವೆ
ಬುಡಕಟ್ಟು ನೃತ್ಯದ ಮೂಲಕ ಛತ್ತೀಸ್​ಗಢದಲ್ಲಿ ಮೋದಿಗೆ ಸಾಂಪ್ರದಾಯಿಕ ಸ್ವಾಗತ
ಬುಡಕಟ್ಟು ನೃತ್ಯದ ಮೂಲಕ ಛತ್ತೀಸ್​ಗಢದಲ್ಲಿ ಮೋದಿಗೆ ಸಾಂಪ್ರದಾಯಿಕ ಸ್ವಾಗತ
ಮೋದಿ ಭೇಟಿಗೂ ಕೆಲವೇ ಗಂಟೆ ಮೊದಲು ಛತ್ತೀಸ್‌ಗಢದಲ್ಲಿ 50 ನಕ್ಸಲರ ಶರಣಾಗತಿ
ಮೋದಿ ಭೇಟಿಗೂ ಕೆಲವೇ ಗಂಟೆ ಮೊದಲು ಛತ್ತೀಸ್‌ಗಢದಲ್ಲಿ 50 ನಕ್ಸಲರ ಶರಣಾಗತಿ
ನಾಗ್ಪುರದಲ್ಲಿ ರೋಡ್ ಶೋ ನಡೆಸಿದ ಮೋದಿ; ಜೈ ಶ್ರೀರಾಮ್ ಘೋಷಣೆ ಕೂಗಿದ ಜನರು
ನಾಗ್ಪುರದಲ್ಲಿ ರೋಡ್ ಶೋ ನಡೆಸಿದ ಮೋದಿ; ಜೈ ಶ್ರೀರಾಮ್ ಘೋಷಣೆ ಕೂಗಿದ ಜನರು
ಟ್ರಕ್​ ಕದ್ದವನ ಅತಿಯಾದ ವೇಗವೇ ಸಿಕ್ಕಿಬೀಳಲು ಕಾರಣವಾಯ್ತು
ಟ್ರಕ್​ ಕದ್ದವನ ಅತಿಯಾದ ವೇಗವೇ ಸಿಕ್ಕಿಬೀಳಲು ಕಾರಣವಾಯ್ತು
ಭಟ್ಕಳದಲ್ಲಿ ಬಾಂಬ್ ಸ್ಕ್ವಾಡ್​​ ಹಾಗೂ ಶ್ವಾನದಳದಿಂದ ಪರಿಶೀಲನೆ
ಭಟ್ಕಳದಲ್ಲಿ ಬಾಂಬ್ ಸ್ಕ್ವಾಡ್​​ ಹಾಗೂ ಶ್ವಾನದಳದಿಂದ ಪರಿಶೀಲನೆ
ವಿಜಯದಶಮಿಗೆ ಹೊಸ ಪಕ್ಷ ಕಟ್ಟುವ ಸುಳಿವು ನೀಡಿದ ಬಸನಗೌಡ ಪಾಟೀಲ್​ ಯತ್ನಾಳ್​
ವಿಜಯದಶಮಿಗೆ ಹೊಸ ಪಕ್ಷ ಕಟ್ಟುವ ಸುಳಿವು ನೀಡಿದ ಬಸನಗೌಡ ಪಾಟೀಲ್​ ಯತ್ನಾಳ್​
Video: ಒಡಿಶಾದಲ್ಲಿ ಹಳಿ ತಪ್ಪಿದ ಬೆಂಗಳೂರು- ಕಾಮಾಖ್ಯ ಎಕ್ಸ್​ಪ್ರೆಸ್ ರೈಲು
Video: ಒಡಿಶಾದಲ್ಲಿ ಹಳಿ ತಪ್ಪಿದ ಬೆಂಗಳೂರು- ಕಾಮಾಖ್ಯ ಎಕ್ಸ್​ಪ್ರೆಸ್ ರೈಲು