ಒಂದೇ ದಿನ ಎರಡೆರಡು ದುರಂತ: ಕೊನೆಯುಸಿರೆಳೆದ ರಣಜಿ ಕ್ರಿಕೆಟರ್; ಮಹಿಳಾ ಕ್ರಿಕೆಟರ್ ಅನುಮಾನಾಸ್ಪದ ಸಾವು!

ಒಂದೇ ದಿನ ಇಬ್ಬರು ಕ್ರಿಕೆಟಿಗರು ಇಹಲೋಕ ತ್ಯಜಿಸಿರುವ ಘಟನೆ ಭಾರತೀಯ ಕ್ರಿಕೆಟ್‌ನಲ್ಲಿ ನಡೆದಿದೆ. ಸಾವನ್ನಪ್ಪಿದವರಲ್ಲಿ ಒಬ್ಬ ಮಹಿಳಾ ಕ್ರಿಕೆಟಿರ್ ಕೂಡ ಸೇರಿದ್ದಾರೆ.

ಒಂದೇ ದಿನ ಎರಡೆರಡು ದುರಂತ: ಕೊನೆಯುಸಿರೆಳೆದ ರಣಜಿ ಕ್ರಿಕೆಟರ್; ಮಹಿಳಾ ಕ್ರಿಕೆಟರ್ ಅನುಮಾನಾಸ್ಪದ ಸಾವು!
ರಾಜಶ್ರೀ ಸ್ವೈನ್, ಸಿದ್ಧಾರ್ಥ್
Follow us
TV9 Web
| Updated By: ಪೃಥ್ವಿಶಂಕರ

Updated on:Jan 14, 2023 | 12:27 PM

ಒಂದೇ ದಿನ ಇಬ್ಬರು ಕ್ರಿಕೆಟಿಗರು ಇಹಲೋಕ ತ್ಯಜಿಸಿರುವ ಘಟನೆ ಭಾರತೀಯ ಕ್ರಿಕೆಟ್‌ನಲ್ಲಿ (Indian cricket) ನಡೆದಿದೆ. ಸಾವನ್ನಪ್ಪಿದವರಲ್ಲಿ ಒಬ್ಬ ಮಹಿಳಾ ಕ್ರಿಕೆಟಿರ್ ಕೂಡ ಸೇರಿದ್ದಾರೆ. ಹಿಮಾಚಲ ಪ್ರದೇಶದ ಪರ ಪ್ರಥಮ ದರ್ಜೆ ಕ್ರಿಕೆಟ್ ತಂಡದಲ್ಲಿ ಆಟುವ ಸ್ಟಾರ್ ಬೌಲರ್ ಸಿದ್ಧಾರ್ಥ್ ಶರ್ಮಾ (Siddharth Sharma) ಕೇವಲ 28 ವರ್ಷ ವಯಸ್ಸಿನಲ್ಲೇ ವಿಧಿವಶರಾಗಿದ್ದಾರೆ. ಕಳೆದ ಕೆಲವು ದಿನಗಳಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಗುಜರಾತ್‌ನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಪ್ರಸ್ತುತ ರಣಜಿ ಟ್ರೋಫಿಗಾಗಿ ಸಿದ್ದಾರ್ಥ್ ತನ್ನ ತಂಡದೊಂದಿಗೆ ಗುಜರಾತ್‌ನಲ್ಲಿದ್ದರು. ಆದರೆ ಕೆಲ ದಿನಗಳ ಹಿಂದೆ ತೀವ್ರ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಸಿದ್ಧಾರ್ಥ್​ ಚಿಕಿತ್ಸೆ ಪಡೆಯುತ್ತಿರುವಾಗಲೇ ಅವರು ಕೊನೆಯುಸಿರೆಳೆದಿದ್ದಾರೆ.

ಮೊದಲ ಬಾರಿಗೆ ವಿಜಯ್ ಹಜಾರೆ ಟ್ರೋಫಿ ಗೆದ್ದ ಹಿಮಾಚಲ ಪ್ರದೇಶ ತಂಡದ ಭಾಗವಾಗಿದ್ದ ಸಿದ್ಧಾರ್ಥ್ ಶರ್ಮಾ ನಿಧನಕ್ಕೆ ಹಿಮಾಚಲ ಪ್ರದೇಶ ಮುಖ್ಯಮಂತ್ರಿ ಸುಖವಿಂದರ್ ಸಿಂಗ್ ಸಂತಾಪ ವ್ಯಕ್ತಪಡಿಸಿದ್ದಾರೆ. ಹಿಮಾಚಲ ಪ್ರದೇಶದ ಉಪ ಮುಖ್ಯಮಂತ್ರಿ ಮುಖೇಶ್ ಅಗ್ನಿಹೋತ್ರಿ, ಕೇಂದ್ರ ಸಚಿವ ಅನುರಾಗ್ ಠಾಕೂರ್ ಮತ್ತು ಐಪಿಎಲ್ ಅಧ್ಯಕ್ಷ ಅರುಣ್ ಧುಮಾಲ್ ಅವರೊಂದಿಗೆ ಸಂತಾಪ ಸೂಚಿಸಿದ್ದಾರೆ. ಶುಕ್ರವಾರ ಭಭೋರ್ ಸಾಹೇಬ್ ಸ್ಮಶಾನದಲ್ಲಿ ಸಿದ್ಧಾರ್ಥ್ ಅಂತ್ಯಕ್ರಿಯೆ ಮಾಡಲಾಯಿತು.

IND vs AUS: ಆಸೀಸ್ ವಿರುದ್ಧದ ಟೆಸ್ಟ್ ಸರಣಿಗೆ ಟೀಂ ಇಂಡಿಯಾ ಪ್ರಕಟ; ತಂಡದಲ್ಲಿ ಸೂರ್ಯ- ಕಿಶನ್​ಗೆ ಸ್ಥಾನ

ಮಹಿಳಾ ಕ್ರಿಕೆಟರ್ ಅನುಮಾನಾಸ್ಪದ ಸಾವು

ಮತ್ತೊಂದೆಡೆ, ಒಡಿಶಾದ ರಾಜಶ್ರೀ ಸ್ವೈನ್ ಎಂಬ ಮಹಿಳಾ ಕ್ರಿಕೆಟರ್ ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ್ದಾರೆ. ಕಟಕ್ ನಗರದ ಸಮೀಪ ದಟ್ಟ ಕಾಡಿನಲ್ಲಿ ಮಹಿಳಾ ಕ್ರಿಕೆಟರ್ ಮೃತದೇಹವನ್ನು ಪೊಲೀಸರು ಪತ್ತೆ ಮಾಡಿದ್ದಾರೆ. ಆದರೆ ರಾಜಶ್ರೀ ಅವರ ಸಾವಿಗೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಆದರೆ ಯಾರೋ ತಮ್ಮ ಮಗಳನ್ನು ಕೊಂದಿದ್ದಾರೆ ಎಂದು ರಾಜಶ್ರೀ ಕುಟುಂಬಸ್ಥರು ಆರೋಪಿಸುತ್ತಿದ್ದಾರೆ. ರಾಜಶ್ರೀ ಮೃತದೇಹದಲ್ಲಿ ಹಲವೆಡೆ ಗಾಯಗಳಾಗಿದ್ದು, ಕಣ್ಣುಗಳಿಗೂ ಹಾನಿಯಾಗಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

ಘಟನೆ ನಡೆದ ಸ್ಥಳದಿಂದ ಸ್ವಲ್ಪ ದೂರದಲ್ಲಿ ರಾಜಶ್ರೀ ಅವರ ಸ್ಕೂಟಿ ಕಂಡುಬಂದಿದೆ. ಇದಲ್ಲದೆ ಆಕೆಯ ಫೋನ್ ಕೂಡ ಸ್ವಿಚ್ ಆಫ್ ಆಗಿದೆ. ಒಡಿಶಾ ಮಾಧ್ಯಮ ವರದಿಗಳ ಪ್ರಕಾರ, ಒಡಿಶಾ ಕ್ರಿಕೆಟ್ ಸಂಸ್ಥೆಯು ಪುದುಚೇರಿಯಲ್ಲಿ ನಡೆಯಲಿರುವ ರಾಷ್ಟ್ರೀಯ ಮಟ್ಟದ ಪಂದ್ಯಾವಳಿಗಾಗಿ ತರಬೇತಿ ಶಿಬಿರವನ್ನು ಆಯೋಜಿಸಿತ್ತು. ರಾಜಶ್ರೀ ಜತೆಗೆ 25 ಮಂದಿಯನ್ನು ಇದಕ್ಕಾಗಿ ಆಯ್ಕೆ ಮಾಡಲಾಗಿತ್ತು. ಆದರೆ ಒಸಿಎ ಇತ್ತೀಚೆಗೆ ಟೂರ್ನಿಗೆ ಆಯ್ಕೆಯಾದವರ ಹೆಸರನ್ನು ಪ್ರಕಟಿಸಿದ್ದು, ಆ ಪಟ್ಟಿಯಲ್ಲಿ ರಾಜಶ್ರೀ ಹೆಸರಿರಲಿಲ್ಲ. ಹೀಗಾಗಿ ರಾಜಶ್ರೀ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರಾ ಎಂಬ ಪ್ರಶ್ನೆ ಈಗ ಉದ್ಭವಿಸಿದೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 12:24 pm, Sat, 14 January 23