Virat Kohli: ಹೋಳಿ ಸಂದರ್ಭ ನೀರು ಮಿತವಾಗಿ ಬಳಸಿ ಎಂದು ಶುಭಕೋರಿದ ಕೊಹ್ಲಿಗೆ ರವಿಶಾಸ್ತ್ರಿ ಟಾಂಗ್

| Updated By: Vinay Bhat

Updated on: Mar 18, 2022 | 11:52 AM

Holi 2022: ಈ ಇಬ್ಬರ ನಡುವೆ ಒಂದೊಳ್ಳೆ ರೀತಿಯ ಸ್ನೇಹ ಸಂಬಂಧವಿದೆ. ಹೀಗಾಗಿ ವಿರಾಟ್ ಕೊಹ್ಲಿ ಮತ್ತು ರವಿಶಾಸ್ತ್ರಿ ಜೋಡಿ ಹಲವಾರು ಕೊಹ್ಲಿ ಅಭಿಮಾನಿಗಳಿಗೂ ಕೂಡ ಅಚ್ಚುಮೆಚ್ಚು.

Virat Kohli: ಹೋಳಿ ಸಂದರ್ಭ ನೀರು ಮಿತವಾಗಿ ಬಳಸಿ ಎಂದು ಶುಭಕೋರಿದ ಕೊಹ್ಲಿಗೆ ರವಿಶಾಸ್ತ್ರಿ ಟಾಂಗ್
Ravi Shastri and Virat Kohli
Follow us on

ಟೀಮ್ ಇಂಡಿಯಾ (Team India) ಮಾಜಿ ಕೋಚ್ ರವಿಶಾಸ್ತ್ರಿ (Ravi Shastri) ಹಾಗೂ ಮಾಜಿ ನಾಯಕ ವಿರಾಟ್ ಕೊಹ್ಲಿ (Virat Kohli) ನಡುವೆ ದೊಡ್ಡ ಮಟ್ಟದ ಪ್ರೀತಿಯಿದೆ. ಈ ಇಬ್ಬರ ನಡುವೆ ಒಂದೊಳ್ಳೆ ರೀತಿಯ ಸ್ನೇಹ ಸಂಬಂಧವಿದೆ. ಹೀಗಾಗಿ ವಿರಾಟ್ ಕೊಹ್ಲಿ ಮತ್ತು ರವಿಶಾಸ್ತ್ರಿ ಜೋಡಿ ಹಲವಾರು ಕೊಹ್ಲಿ ಅಭಿಮಾನಿಗಳಿಗೂ ಕೂಡ ಅಚ್ಚುಮೆಚ್ಚು. ಈ ಬಗ್ಗೆ ಕೊಹ್ಲಿಯೇ ಅನೇಕ ಬಾರಿ ಹೇಳಿಕೊಂಡಿದ್ದಾರೆ. ಅಲ್ಲದೆ ರವಿಶಾಸ್ತ್ರಿ ಕೂಡ ತಮ್ಮ ಪುಸ್ತಕದಲ್ಲಿ ಕೊಹ್ಲಿ ಹಾಗೂ ತಮ್ಮ ನಡುವಣ ಸ್ನೇಹದ ಬಗ್ಗೆ ವಿಶೇಷವಾಗಿ ಬರೆದುಕೊಂಡಿದ್ದರು. ಇವರಿಬ್ಬರು ಭಾರತ ತಂಡವನ್ನು ಬಲಿಷ್ಠವಾಗಿಸಲು ಸಾಕಷ್ಟು ಶ್ರಮಪಟ್ಟಿದ್ದು ನಿಜ. ಶಾಸ್ತ್ರಿ ಕೋಚ್ ಆಗಿ ತಮ್ಮ ಕೊನೇಯ ಪಂದ್ಯ ಮುಗಿದ ನಂತರ ಕೊಹ್ಲಿ ಭಾವುಕರಾಗಿ ಪರಸ್ಪರ ಅಪ್ಪುಗೆಯನ್ನು ನೀಡಿದ ದೃಶ್ಯದ ಚಿತ್ರಗಳು ವೈರಲ್ ಆಗಿದ್ದು ಗೊತ್ತೇ ಇದೆ.

ಹಾಗಂತ ಇವರಿಬ್ಬರ ನಡುವೆ ಇರುವುದು ಗಂಭೀರವಾದ ಸ್ನೇಹವಲ್ಲ. ಅದೊಂದು ಮಕ್ಕಳಾಟಿಕೆಗೂ ಮೀರಿದ ಬಾಂಧವ್ಯ ಎನ್ನಬಹುದು. ಇದಕ್ಕೆ ಅನೇಕ ಘಟನೆಗಳೇ ಸಾಕ್ಷಿ. ಅದರಲ್ಲೂ ಮುಖ್ಯವಾಗಿ 2017 ರಲ್ಲಿ ಹೋಳಿ ಹಬ್ಬದ ಸಂದರ್ಭ ವಿರಾಟ್ ಕೊಹ್ಲಿ ಅಭಿಮಾನಿಗಳಿಗೆ ಶುಭಕೋರುವಾಗ ರವಿಶಾಸ್ತ್ರಿ ಮಾಡಿ ಕಾಮಿಡಿ ನೆನಪಾಗುತ್ತದೆ. ಹೌದು, 2017 ರಲ್ಲಿ ಹರ್ಭಜನ್ ಸಿಂಗ್, ರೋಹಿತ್ ಶರ್ಮಾ, ಅಜಿಂಕ್ಯಾ ರಹಾನೆ ಎಲ್ಲ ಜೊತೆಗಿರುವ ಬಸ್​​ನಲ್ಲಿ ಕೊಹ್ಲಿ ಹಾಗೂ ರವಿ ಶಾಸ್ತ್ರಿ ಕೂಡ ಒಂದು ಸರಣಿಗೆ ತೆರಳುತ್ತಿದ್ದರು. ಆ ಸಂದರ್ಭ ಬಸ್​ನಲ್ಲಿ ಕೊಹ್ಲಿ ಅಭಿಮಾನಿಗಳಿಗೆ, “ಎಲ್ಲರಿಗೂ ಹೋಳಿ ಹಬ್ಬದ ಶುಭಾಶಯ. ಈ ದಿನ ನಿಮಗೆ ಉತ್ತಮವಾಗಿರಲಿ, ಖುಷಿ ಪಡಿ. ನೀರು ಮಿತವಾಗಿ ಬಳಸಿ ಬಣ್ಣವನ್ನು ಹೆಚ್ಚು ಹಚ್ಚಿ” ಎಂಬ ಸಂದೇಶ ರವಾನೆ ಮಾಡಿದರು. ಇದಕ್ಕೆ ಪಕ್ಕದಲ್ಲೇ ಕೂತಿದ್ದ ಶಾಸ್ತ್ರಿ, “ಎಲ್ಲವನ್ನೂ ಉಪಯೋಗಿಸಿ. ಇಂದಿನ ದಿನವನ್ನು ಭರ್ಜರಿಯಾಗಿ ಆಚರಿಸಿ. ಹೋಳಿ ಹಬ್ಬದ ಶುಭಾಶಯಗಳು,” ಕೊಹ್ಲಿ ಮಾತಿಗೆ ಟಾಂಗ್ ಕೊಟ್ಟು ನಗೆ ಚಟಾಕಿ ಹಾರಿಸಿದ್ದರು. ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಕೂಡ ಆಗುತ್ತಿದೆ.

ರವಿಶಾಸ್ತ್ರಿ ಹೆಡ್​ ಕೋಚ್​​ ಆಗಿದ್ದ ಅವಧಿಯಲ್ಲಿ ಮತ್ತು ವಿರಾಟ್ ಕೊಹ್ಲಿ ನಾಯಕನಾಗಿದ್ದಾಗ ಆಸ್ಟ್ರೇಲಿಯಾದಲ್ಲಿ 2 ಬಾರಿ ಬಾರ್ಡರ್​​ – ಗವಾಸ್ಕರ್​ ಸರಣಿಯನ್ನ ಟೀಮ್​ ಇಂಡಿಯಾ ಜಯಿಸಿತ್ತು. ಇಂಗ್ಲೆಂಡ್​ನಲ್ಲಿಯೂ ಟೀಮ್​ ಇಂಡಿಯಾ ಯಶಸ್ಸು ಕಂಡಿತ್ತು. ತವರಿನಲ್ಲೂ ಹಲವು ಸರಣಿಗಳನ್ನ ಟೀಮ್​ ಇಂಡಿಯಾ ಗೆದ್ದು ಬೀಗಿತ್ತು. ಕೊಹ್ಲಿ ಹಾಗೂ ತಮ್ಮ ನಡುವಣ ಬಾಂಧವ್ಯದ ಬಗ್ಗೆ ಶಾಸ್ತ್ರಿ ಅನೇಕ ಭಾರಿ ಮಾತನಾಡಿದ್ದಾರೆ. ಅದರಲ್ಲೂ ತಾವು ಕೋಚ್​ ಆಗಿದ್ದ ಅವಧಿಯಲ್ಲಿ ಟೆಸ್ಟ್​ ಸರಣಿಗಳನ್ನ ಜಯಿಸಿದರ ಬಗ್ಗೆಯೂ ರವಿಶಾಸ್ತ್ರಿ ಮಾತನಾಡಿದ್ದಾರೆ. ನಾಯಕ ವಿರಾಟ್​ ಕೊಹ್ಲಿ ಮತ್ತು ತಮ್ಮ ನಡುವಿನ ಕಾರ್ಯವೈಖರಿಯ ಶೈಲಿ ಗೆಲುವಿನಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದೆ ಎಂದು ಅಭಿಪ್ರಾಯಪಟ್ಟಿದ್ದರು.

“ವಿರಾಟ್ ಕೊಹ್ಲಿ ಮತ್ತು ನಾನು ಇಬ್ಬರೂ ಆಕ್ರಮಣಶೀಲ ಸ್ವಭಾವದವರು. ಪ್ರತಿಯೊಂದು ಪಂದ್ಯವನ್ನು ಜಯಿಸುವುದೇ ನಮ್ಮ ಗುರಿಯಾಗಿರುತ್ತಿತ್ತು. ಒಂದು ಟೆಸ್ಟ್‌ ಪಂದ್ಯದಲ್ಲಿ ಜಯಿಸಬೇಕಾದರೆ 20 ವಿಕೆಟ್‌ಗಳನ್ನು ಗಳಿಸುವುದು ಅತ್ಯಂತ ಮುಖ್ಯ ಎಂದು ತಿಳಿದಿತ್ತು. ಈ ದಿಕ್ಕಿನಲ್ಲಿ ನಾವು ಯಶಸ್ಸು ಕಾಣಬೇಕು ಎಂದು ನಿರ್ಧರಿಸಿದೆವು. ಇದಕ್ಕೆ ತಕ್ಕಂತೆ ಯೋಜನೆ ಹೆಣೆಯುತ್ತಿದ್ದೆವು” ಎಂದು ಕೊಹ್ಲಿ ಜೊತೆಗಿ ಗೇಮ್ ಪ್ಲಾನ್ ರಿವೀಲ್ ಮಾಡಿದ್ದರು.

All England Championships: ಲಕ್ಷ್ಯ ಸೇನ್‍ಗೆ ಅಚ್ಚರಿಯ ಜಯ: ಟೂರ್ನಿಯಿಂದ ಹೊರಬಿದ್ದ ಸೈನಾ, ಸಿಂಧು

IPL 2022: ಅಬ್ಬರಿಸಲು ತಯಾರಾಗಿದ್ದಾರೆ ಐಪಿಎಲ್​ನಲ್ಲಿ ನೀವು ನೋಡಿರದ ಈ ಹೊಸ ಮುಖಗಳು