ಕ್ರಿಕೆಟ್ ದೇವರು ಏಕದಿನ ಕ್ರಿಕೆಟ್ಗೆ ವಿದಾಯ ಹೇಳಿ ಇಂದಿಗೆ 10 ವರ್ಷ! ಪಾಕ್ ಎದುರಿನ ಆ ಪಂದ್ಯ ಹೇಗಿತ್ತು ಗೊತ್ತಾ?
Sachin Tendulkar: ಸಚಿನ್ ತೆಂಡೂಲ್ಕರ್ 200 ಟೆಸ್ಟ್‌ಗಳಲ್ಲಿ 15921 ರನ್ ಮತ್ತು 463 ಏಕದಿನ ಪಂದ್ಯಗಳಲ್ಲಿ 18426 ರನ್ ಗಳಿಸಿದ್ದಾರೆ. ಅವರು ಟೆಸ್ಟ್‌ನಲ್ಲಿ 51 ಮತ್ತು ODIಗಳಲ್ಲಿ 49 ಶತಕಗಳನ್ನು ಗಳಿಸಿದ್ದಾರೆ. ಸಚಿನ್ ಆಡಿದ್ದು ಒಂದೇ ಒಂದು ಟಿ20 ಪಂದ್ಯ. ಅದರಲ್ಲಿ ಸಚಿನ್ ಗಳಿಸಿದ್ದು ಕೇವಲ 10 ರನ್.
ಸಚಿನ್ ತೆಂಡೂಲ್ಕರ್ (Sachin Tendulkar) ಭಾರತೀಯ ಕ್ರಿಕೆಟ್‌ನ ಶ್ರೇಷ್ಠ ಆಟಗಾರ ಎಂಬುದಷ್ಟೇ ಅಲ್ಲದೆ ಅವರನ್ನು ಕ್ರಿಕೆಟ್ ದೇವರು ಎಂತಲೂ ಕರೆಯುವುದು ಕ್ರಿಕೆಟ್ ಪ್ರಪಂಚಕ್ಕೆ ಚಿರಪರಿಚಿತವಾಗಿದೆ. ಸಚಿನ್ ತಮ್ಮ ವೃತ್ತಿ ಜೀವನದಲ್ಲಿ ಹಲವಾರು ದಾಖಲೆಗಳನ್ನು ನಿರ್ಮಿಸಿದ್ದಾರೆ ಮತ್ತು ಹಲವಾರು ಅಭಿಮಾನಿಗಳ ಪ್ರೀತಿಯನ್ನು ಗೆದ್ದಿದ್ದಾರೆ. ಸಚಿನ್ ಭಾರತೀಯ ಕ್ರಿಕೆಟ್ ಅನ್ನು ಮುನ್ನಡೆಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಇಂತಹ ಸಚಿನ್ ತೆಂಡೂಲ್ಕರ್ 2012 ರಲ್ಲಿ ಇದೇ ದಿನ ತಮ್ಮ ವೃತ್ತಿಜೀವನದ ಕೊನೆಯ ODI ಆಡಿದ್ದರು. ಅಂದರೆ, ಇಂದಿಗ ಸಚಿನ್ ಏಕದಿನ ಕ್ರಿಕೆಟ್ ಬದುಕು ಮುಗಿದು 10 ವರ್ಷಗಳು ಕಳೆದಿವೆ. ತೆಂಡೂಲ್ಕರ್ ತಮ್ಮ 16 ನೇ ವಯಸ್ಸಿನಲ್ಲಿ ತಮ್ಮ ಅಂತರಾಷ್ಟ್ರೀಯ ಚೊಚ್ಚಲ ಪಂದ್ಯವನ್ನು ಆಡಿದರು. ತಮ್ಮ ಕೊನೆಯ ODI ಪಂದ್ಯವನ್ನು ಬಾಂಗ್ಲಾದೇಶದ ಮೀರ್ಪುರದಲ್ಲಿ ಪಾಕಿಸ್ತಾನದ ವಿರುದ್ಧ (India vs Pakistan) ಆಡಿದ್ದರು. ಕಾಕತಾಳಿಯವೆಂಬಂತೆ ತೆಂಡೂಲ್ಕರ್ ತಮ್ಮ ಮೊದಲ ಅಂತಾರಾಷ್ಟ್ರೀಯ ಟೆಸ್ಟ್ ಪಂದ್ಯವನ್ನು ಪಾಕಿಸ್ತಾನದ ವಿರುದ್ಧ ನವೆಂಬರ್ 15, 1989 ರಂದು ಕರಾಚಿಯಲ್ಲಿ ಆಡಿದ್ದರು. ತಮ್ಮ ಕೊನೆಯ ಏಕದಿನ ಪಂದ್ಯದಲ್ಲಿ ಸಚಿನ್ 52 ರನ್ ಗಳಿಸಿ ಮ್ಯಾಚ್ ವಿನ್ನಿಂಗ್ ಇನ್ನಿಂಗ್ಸ್ ಆಡಿದ್ದರು. ಈ ಪಂದ್ಯದಲ್ಲಿ ಟೀಂ ಇಂಡಿಯಾ 6 ವಿಕೆಟ್‌ಗಳ ಜಯ ಸಾಧಿಸಿತು. ಅದೇ ಪಂದ್ಯದಲ್ಲಿ ವಿರಾಟ್ ಕೊಹ್ಲಿ 148 ಎಸೆತಗಳಲ್ಲಿ ದಾಖಲೆಯ 183 ರನ್ ಗಳಿಸಿದ್ದರು.
ಟಾಸ್ ಗೆದ್ದ ಭಾರತ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡರು. ನಾಸಿರ್ ಜಮ್ಶೆಡ್ 112 ರನ್ ಗಳಿಸಿದರೆ ಮೊಹಮ್ಮದ್ ಹಫೀಜ್ 105 ರನ್ ಗಳಿಸಿದರು. ಆ ಪಂದ್ಯದಲ್ಲಿ ಪಾಕಿಸ್ತಾನ 6 ವಿಕೆಟ್ ನಷ್ಟಕ್ಕೆ 329 ರನ್ ಗಳಿಸಿತ್ತು. ಭಾರತದ ಪರ ಪ್ರವೀಣ್ ಕುಮಾರ್ ಮತ್ತು ಅಶೋಕ್ ದಿಂಡಾ ತಲಾ 2 ವಿಕೆಟ್ ಪಡೆದರು. ಇರ್ಫಾನ್ ಪಠಾಣ್ ಮತ್ತು ರವಿಚಂದ್ರನ್ ಅಶ್ವಿನ್ ತಲಾ ನಾಲ್ಕು ವಿಕೆಟ್ ಪಡೆದರು.
ಕೊಹ್ಲಿ ಜೊತೆ ಸಚಿನ್ ಜೊತೆಯಾಟ ಗುರಿ ಭೇದಿಸಲು ಅಖಾಡಕ್ಕಿಳಿದ ಭಾರತ ತಂಡಕ್ಕೆ ಅತ್ಯಂತ ಕೆಟ್ಟ ಆರಂಭ ಸಿಕ್ಕಿತು. ಮೊಹಮ್ಮದ್ ಹಫೀಜ್ ಮೊದಲ ಓವರ್ ನಲ್ಲೇ ಗೌತಮ್ ಗಂಭೀರ್ ಅವರನ್ನು ಪೆವಿಲಿಯನ್ಗೆ ಕಳುಹಿಸಿದರು. ಆ ನಂತರ ಸಚಿನ್ ಮತ್ತು ಕೊಹ್ಲಿ ಇನ್ನಿಂಗ್ಸ್ ಕೈಗೆತ್ತಿಕೊಂಡರು. ಇವರಿಬ್ಬರು ಎರಡನೇ ವಿಕೆಟ್‌ಗೆ 133 ರನ್‌ಗಳ ಜೊತೆಯಾಟ ನೀಡಿದರು.
ಸಚಿನ್ ಔಟಾದ ನಂತರ ವಿರಾಟ್‌ಗೆ ರೋಹಿತ್ ಶರ್ಮಾ ಬೆಂಬಲ ಸಿಕ್ಕಿತು. ಇವರಿಬ್ಬರು ಮೂರನೇ ವಿಕೆಟ್‌ಗೆ 172 ರನ್‌ಗಳ ಜೊತೆಯಾಟ ನೀಡಿದರು. ರೋಹಿತ್ 83 ಎಸೆತಗಳಲ್ಲಿ 68 ರನ್ ಗಳಿಸಿ ಔಟಾದರು. ಪಾಕ್ ಬೌಲರ್ ಉಮರ್ ಗುಲ್ 2 ವಿಕೆಟ್ ಪಡೆದರು.
ಟೆಸ್ಟ್‌ನಲ್ಲಿ 51 ಮತ್ತು ಏಕದಿನದಲ್ಲಿ 49 ಶತಕಗಳು. ಸಚಿನ್ ತೆಂಡೂಲ್ಕರ್ 200 ಟೆಸ್ಟ್‌ಗಳಲ್ಲಿ 15921 ರನ್ ಮತ್ತು 463 ಏಕದಿನ ಪಂದ್ಯಗಳಲ್ಲಿ 18426 ರನ್ ಗಳಿಸಿದ್ದಾರೆ. ಅವರು ಟೆಸ್ಟ್‌ನಲ್ಲಿ 51 ಮತ್ತು ODIಗಳಲ್ಲಿ 49 ಶತಕಗಳನ್ನು ಗಳಿಸಿದ್ದಾರೆ. ಸಚಿನ್ ಆಡಿದ್ದು ಒಂದೇ ಒಂದು ಟಿ20 ಪಂದ್ಯ. ಅದರಲ್ಲಿ ಸಚಿನ್ ಗಳಿಸಿದ್ದು ಕೇವಲ 10 ರನ್.
ವಿರಾಟ್, ಸಚಿನ್ ವಾರಸುದಾರ ಸಚಿನ್ ತೆಂಡೂಲ್ಕರ್ ಟೀಂ ಇಂಡಿಯಾ ಪರ 200 ಟೆಸ್ಟ್ ಹಾಗೂ 463 ಏಕದಿನ ಪಂದ್ಯಗಳನ್ನು ಆಡಿದ್ದಾರೆ. 2013 ರಲ್ಲಿ ಸಚಿನ್ ನಿವೃತ್ತಿಯ ನಂತರ ವಿರಾಟ್ ಕೊಹ್ಲಿ ಸಚಿನ್ ಅವರ ಸ್ಥಾನವನ್ನು ಅಲಂಕರಿಸಲಿದ್ದಾರೆ. ಸಚಿನ್ ದಾಖಲೆಯನ್ನು ಮುರಿಯುವ ಹೊಸ್ತಿಲಿನಲ್ಲಿರುವ ಕೊಹ್ಲಿ, ಸಚಿನ್ ನಂತರ ಅತಿ ಹೆಚ್ಚು ಏಕದಿನ ಶತಕಗಳನ್ನು ಗಳಿಸಿದ ದಾಖಲೆಯನ್ನು ವಿರಾಟ್ ಹೊಂದಿದ್ದಾರೆ. 2011ರ ವಿಶ್ವಕಪ್ ಗೆದ್ದ ತಂಡದಲ್ಲಿ ವಿರಾಟ್ ಮತ್ತು ಸಚಿನ್ ಕೂಡ ಇದ್ದರು.
1990 ರಲ್ಲಿ ಮೊದಲ ಟೆಸ್ಟ್ ಶತಕ ನವೆಂಬರ್ 15, 1989 ರಂದು ಪಾಕಿಸ್ತಾನದ ವಿರುದ್ಧ ಸಚಿನ್ ತಮ್ಮ ಮೊದಲ ಟೆಸ್ಟ್ ಪಂದ್ಯವನ್ನು ಆಡಿದರು. ನಂತರ ಆಗಸ್ಟ್ 1990 ರಲ್ಲಿ ಇಂಗ್ಲೆಂಡ್ ಪ್ರವಾಸದಲ್ಲಿ ಇಂಗ್ಲೆಂಡ್ ತಂಡವು ಸರಣಿಯ ಎರಡನೇ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ 519 ರನ್ ಗಳಿಸಿತು. ಆದರೆ ಭಾರತ ಕೇವಲ 432 ರನ್ ಗಳಿಸಲಷ್ಟೇ ಸಾಧ್ಯವಾಯಿತು. ನಂತರ 408 ರನ್‌ಗಳ ಗುರಿಯೊಂದಿಗೆ ರಿಂಗ್‌ಗೆ ಇಳಿದ ಇಂಗ್ಲೆಂಡ್ 320 ರನ್‌ಗಳಿಗೆ ಆಲೌಟ್ ಆಯಿತು.
ಭಾರತ 183 ರನ್‌ಗಳಿಗೆ 6 ವಿಕೆಟ್ ಕಳೆದುಕೊಂಡಿತು. ಇಂತಹ ಪರಿಸ್ಥಿತಿಯಲ್ಲಿ ಆರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ ಸಚಿನ್ ಅಜೇಯ 119 ರನ್ ಗಳಿಸಿದರು. ಅಂತಿಮ ದಿನ ಭಾರತ ಎರಡನೇ ಇನಿಂಗ್ಸ್ನಲ್ಲಿ 6 ವಿಕೆಟ್ ನಷ್ಟಕ್ಕೆ 343 ರನ್ ಗಳಿಸಿ ಪಂದ್ಯ ಡ್ರಾ ಮಾಡಿಕೊಂಡಿತು. ಮನೋಜ್ ಪ್ರಭಾಕರ್ ಕೂಡ ಸಚಿನ್ ಜೊತೆಗೂಡಿ ಅಜೇಯ 67 ರನ್ ಗಳಿಸಿದರು.
ಇದನ್ನೂ ಓದಿ: Sachin Tendulkar 100th century: ಸಚಿನ್ ತೆಂಡೂಲ್ಕರ್ ನೂರನೇ ಶತಕ ಸಿಡಿಸಿ ಇಂದಿಗೆ 10 ವರ್ಷ! ಆದರೆ..?