Sachin Tendulkar 100th century: ಸಚಿನ್ ತೆಂಡೂಲ್ಕರ್ ನೂರನೇ ಶತಕ ಸಿಡಿಸಿ ಇಂದಿಗೆ 10 ವರ್ಷ! ಆದರೆ..?
Sachin Tendulkar 100th century: ಸಚಿನ್ ತೆಂಡೂಲ್ಕರ್ ಶತಕಗಳ ಶತಕ ಬಾರಿಸಿ ಇತಿಹಾಸ ಸೃಷ್ಟಿಸಿರಬಹುದು, ಆದರೆ ಈ ಪಂದ್ಯವನ್ನು ಟೀಂ ಇಂಡಿಯಾ ಸೋಲಬೇಕಾಯಿತು. ಇದಕ್ಕೆ ಸಚಿನ್ ಅವರ ನಿಧಾನಗತಿಯ ಇನ್ನಿಂಗ್ಸ್ ಕಾರಣ ಎಂದು ಹಲವು ವಿಮರ್ಶಕರು ಹೇಳಿಕೊಂಡಿದ್ದಾರೆ.
ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ 100 ಶತಕಗಳು… ಪ್ರಪಂಚದ ಯಾವುದೇ ಬ್ಯಾಟ್ಸ್‌ಮನ್‌ಗಳು ಈ ಅಂಕಿಅಂಶವನ್ನು ಸಾಧಿಸುವ ಕನಸನ್ನು ಹೊತ್ತುಕೊಂಡೆ ಕ್ರಿಕೆಟ್ ಮೈದಾನಕ್ಕಿಳಿಯುತ್ತಾರೆ. ಆದರೆ ಅದನ್ನು ಸಾಧಿಸಲು ಸಾಧ್ಯವಾಗದೆ ಅವಕಾಶ ಸಿಕ್ಕಷ್ಟು ದಿನ ಆಡಿ, ನಂತರ ಕ್ರಿಕೆಟ್ನಿಂದ ನಿವೃತ್ತರಾಗಿಬಿಡುತ್ತಾರೆ. ಆದರೆ ಸಚಿನ್ ತೆಂಡೂಲ್ಕರ್ (Sachin Tendulkar) ಯಾರು ಊಹಿಸಲಾಗದ 100 ಶತಕಗಳನ್ನು ಬಾರಿಸಿ ಇತಿಹಾಸ ನಿರ್ಮಿಸಿದರು. 2012ರ ಇದೇ ದಿನ ಸಚಿನ್ ತೆಂಡೂಲ್ಕರ್ ತಮ್ಮ 100ನೇ ಶತಕ ಸಿಡಿಸಿ ವಿಶ್ವದಾಖಲೆ ನಿರ್ಮಿಸಿದರು. 2012ರ ಏಷ್ಯಾಕಪ್ (Asia Cup 2012)ನಲ್ಲಿ ಬಾಂಗ್ಲಾದೇಶ ವಿರುದ್ಧ ಸಚಿನ್ ಮೀರ್‌ಪುರ ಮೈದಾನದಲ್ಲಿ 100 ಶತಕ ಬಾರಿಸಿದ ಮೊದಲ ಆಟಗಾರ ಎನಿಸಿಕೊಂಡರು. ಸಚಿನ್ ತೆಂಡೂಲ್ಕರ್ ಅವರು ಕೇವಲ 17 ನೇ ವಯಸ್ಸಿನಲ್ಲಿ ತಮ್ಮ ವೃತ್ತಿಜೀವನದ ಮೊದಲ ಅಂತರರಾಷ್ಟ್ರೀಯ ಶತಕವನ್ನು ಗಳಿಸಿ, ನಂತರದ ಎರಡು ದಶಕಗಳಲ್ಲಿ ಅವರು 100 ಶತಕಗಳನ್ನು ಗಳಿಸಿದ ಬ್ಯಾಟ್ಸ್‌ಮನ್ ಆದರು. ಮೀರ್ಪುರದಲ್ಲಿ ಸಚಿನ್ ತೆಂಡೂಲ್ಕರ್ 147 ಎಸೆತಗಳಲ್ಲಿ 114 ರನ್ ಗಳಿಸಿದರು. ಶತಕಕ್ಕಾಗಿ ಸಚಿನ್ 138 ಎಸೆತಗಳನ್ನು ಆಡಿದರು.
ಸಚಿನ್ ತೆಂಡೂಲ್ಕರ್ ಶತಕಗಳ ಶತಕ ಬಾರಿಸಿ ಇತಿಹಾಸ ಸೃಷ್ಟಿಸಿರಬಹುದು, ಆದರೆ ಈ ಪಂದ್ಯವನ್ನು ಟೀಂ ಇಂಡಿಯಾ ಸೋಲಬೇಕಾಯಿತು. ಇದಕ್ಕೆ ಸಚಿನ್ ಅವರ ನಿಧಾನಗತಿಯ ಇನ್ನಿಂಗ್ಸ್ ಕಾರಣ ಎಂದು ಹಲವು ವಿಮರ್ಶಕರು ಹೇಳಿಕೊಂಡಿದ್ದಾರೆ. ಆ ಪಂದ್ಯದಲ್ಲಿ ಭಾರತ 50 ಓವರ್‌ಗಳಲ್ಲಿ 289 ರನ್ ಗಳಿಸಿತ್ತು. ನಂತರ ಬ್ಯಾಟಿಂಗ್ಗೆ ಇಳಿದ ಬಾಂಗ್ಲಾದೇಶ ಕೊನೆಯ ಓವರ್‌ನಲ್ಲಿ 5 ವಿಕೆಟ್ ಕಳೆದುಕೊಂಡು ಗುರಿ ಸಾಧಿಸಿತು.
#OnThisDay in 2012 ?️
The legendary @sachin_rt scripted history when he became the only batter in the history of cricket to score ? international hundreds. ? ?#TeamIndia pic.twitter.com/O736mqwV7m
— BCCI (@BCCI) March 16, 2022
ಸಚಿನ್ ದಾಖಲೆ ಮುರಿಯುವುದು ತುಂಬಾ ಕಷ್ಟ ಈ ದಾಖಲೆಯ ಹೊರತಾಗಿಯೂ ಸಚಿನ್ ತೆಂಡೂಲ್ಕರ್ ಟೀಕೆಗೆ ಒಳಗಾದರು ಆದರೆ ಸಚಿನ್ ಅವರ ಈ ದಾಖಲೆಯನ್ನು ಮುರಿಯುವುದು ತುಂಬಾ ಕಷ್ಟ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರವೇ. ಸಚಿನ್ ನಂತರ ಪಾಂಟಿಂಗ್ 71 ಅಂತರಾಷ್ಟ್ರೀಯ ಶತಕಗಳನ್ನು ಗಳಿಸಿದ್ದಾರೆ. ಕೊಹ್ಲಿ ಕೂಡ 70 ಶತಕಗಳನ್ನು ಬಾರಿಸಿದ್ದು, ಸಚಿನ್ ಅವರ ಈ ದಾಖಲೆಯನ್ನು ಮುರಿಯಬಲ್ಲರು ಎಂಬ ನಂಬಿಕೆ ಇದೆ. ಆದರೆ ಕಳೆದ ಎರಡೂವರೆ ವರ್ಷಗಳಿಂದ ವಿರಾಟ್ ಕೊಹ್ಲಿಗೆ ಶತಕ ಬಾರಿಸಲು ಸಾಧ್ಯವಾಗುತ್ತಿಲ್ಲ, ಹೀಗಾಗಿ ಈ ವಿಷಯದಲ್ಲಿ ಎಲ್ಲರಿಗೂ ಅನುಮಾನ ಶುರುವಾಗಿದೆ.
ಇದನ್ನೂ ಓದಿ:Shane Warne Demise: ಶೇನ್ ವಾರ್ನ್ ನಿಧನಕ್ಕೆ ಭಾವನಾತ್ಮಕ ಟ್ವೀಟ್ ಮೂಲಕ ಸಂತಾಪ ಸೂಚಿಸಿದ ಸಚಿನ್ ತೆಂಡೂಲ್ಕರ್
Published On - 1:26 pm, Wed, 16 March 22