IPL 2022: ಡೆಲ್ಲಿ ಕ್ಯಾಪಿಟಲ್ಸ್ ಆಟಗಾರರ ಬಸ್ ಮೇಲೆ ದಾಳಿ: ಇಲ್ಲಿದೆ ವಿಡಿಯೋ
Delhi Capitals: ಡೆಲ್ಲಿ ಕ್ಯಾಪಿಟಲ್ಸ್ ತಂಡ ಹೀಗಿದೆ: ರಿಷಭ್ ಪಂತ್ (ನಾಯಕ), ಡೇವಿಡ್ ವಾರ್ನರ್, ಪೃಥ್ವಿ ಶಾ, ಮಿಚೆಲ್ ಮಾರ್ಷ್, ಸರ್ಫರಾಜ್ ಖಾನ್, ಕೆಎಸ್ ಭರತ್, ಮನದೀಪ್ ಸಿಂಗ್, ಅಕ್ಷರ್ ಪಟೇಲ್, ಶಾರ್ದೂಲ್ ಠಾಕೂರ್, ಕುಲದೀಪ್ ಯಾದವ್.
ಐಪಿಎಲ್ (IPL 2022) ಆರಂಭಕ್ಕೆ ಇನ್ನು ದಿನಗಳು ಮಾತ್ರ ಉಳಿದಿವೆ. ಈಗಾಗಲೇ ಎಲ್ಲಾ ತಂಡಗಳು ಅಭ್ಯಾಸಕ್ಕಾಗಿ ಮುಂಬೈನತ್ತ ಧಾವಿಸಿದ್ದಾರೆ. ಅಲ್ಲದೆ ಮೊದಲೇ ನಿಗದಿಯಾಗಿರುವ ಪಂಚತಾರಾ ಹೊಟೇಲ್ಗಳಲ್ಲಿ ತಂಡಗಳ ಆಟಗಾರರು ಉಳಿದುಕೊಂಡಿದ್ದಾರೆ. ಈ ಹೊಟೇಲ್ಗಳ ಬಳಿ ನಿಲ್ಲಿಸಿದ್ದ ಡೆಲ್ಲಿ ಕ್ಯಾಪಿಟಲ್ಸ್ (Delhi Capitals Bus attacked) ತಂಡದ ಆಟಗಾರರ ಬಸ್ ಮೇಲೆ ರಾಜ್ ಠಾಕ್ರೆ ಅವರ ಮಹಾರಾಷ್ಟ್ರ ನವನಿರ್ಮಾಣ ಸೇನೆಯ (MNS) ಕಾರ್ಯಕರ್ತರು ದಾಳಿ ಮಾಡಿದ್ದಾರೆ. ಹೋಟೆಲ್‌ಗಳ ಹೊರಗೆ ನಿಲ್ಲಿಸಿದ್ದ ಐಪಿಎಲ್ ತಂಡದ ಬಸ್‌ಗಳ ಮೇಲೆ ದಾಳಿ ಮಾಡಿರುವ ಎಂಎನ್‌ಎಸ್ ಕಾರ್ಯಕರ್ತರು ಗಾಜುಗಳನ್ನು ಹೊಡೆದುಹಾಕಿದ್ದಾರೆ.
ಎಂಎನ್‌ಎಸ್-ವಾಹತುಕ್ ಸೇನಾ (ಸಾರಿಗೆ ವಿಭಾಗ) ದ ಸುಮಾರು ಅರ್ಧ ಡಜನ್ ಕಾರ್ಯಕರ್ತರು ಮಧ್ಯರಾತ್ರಿಯಲ್ಲಿ ಹೊಟೇಲ್ ಬಳಿ ಬಂದು ಬಸ್‌ನ ಮುಂಭಾಗದಲ್ಲಿ ತಮ್ಮ ಬೇಡಿಕೆಗಳ ಪೋಸ್ಟರ್‌ಗಳನ್ನು ಅಂಟಿಸಿ, ಘೋಷಣೆಗಳನ್ನು ಕೂಗಿದರು. ಅಷ್ಟೇ ಅಲ್ಲದೆ ಗಾಜುಗಳನ್ನು ಹೊಡೆಯಲು ಪ್ರಾರಂಭಿಸಿದರು. ಈ ದಾಳಿಗೆ ಕಾರಣ ಹೊರರಾಜ್ಯಗಳಿಂದ ಬಸ್ಗಳನ್ನು ಕರೆಸಿರುವುದು ಎಂದು ತಿಳಿದು ಬಂದಿದೆ.
ಈ ಬಗ್ಗೆ ಮಾತನಾಡಿರುವ ಎಂಎಸ್ಎಸ್ನ ಸ್ಥಳೀಯ ನಾಯಕ ಸಂಜಯ್ ನಾಯ್ಕ್, ಹೊರ ರಾಜ್ಯಗಳ ಬಸ್ ಗಳನ್ನು ಬಾಡಿಗೆಗೆ ಪಡೆದಿದ್ದಾರೆ. ಇದರಿಂದ ಸ್ಥಳೀಯರು ಉದ್ಯೋಗಾವಕಾಶದಿಂದ ವಂಚಿತರಾಗುತ್ತಿದ್ದಾರೆ. ಇದನ್ನು ವಿರೋಧಿಸಿ ನಾವು ಪ್ರತಿಭಟನೆ ನಡೆಸುತ್ತಿದ್ದೇವೆ ಎಂದು ತಿಳಿಸಿದ್ದಾರೆ.
ನಮ್ಮ ಪ್ರತಿಭಟನೆಗಳ ಹೊರತಾಗಿಯೂ, ಅವರು ದೆಹಲಿ ಮತ್ತು ಇತರ ಭಾಗಗಳಿಂದ ಇಲ್ಲಿಗೆ ಹಲವಾರು ಬಸ್‌ಗಳು ಮತ್ತು ಇತರ ಸಣ್ಣ ವಾಹನಗಳನ್ನು ಬಾಡಿಗೆಗೆ ಪಡೆದುಕೊಂಡಿದ್ದಾರೆ. ಇದು ಸ್ಥಳೀಯ ಜನರ ಜೀವನೋಪಾಯದ ಮೇಲೆ ಪರಿಣಾಮ ಬೀರುತ್ತಿದೆ” ಎಂದು ನಾಯ್ಕ್ ತಿಳಿಸಿದ್ದಾರೆ. ಈ ದಾಳಿ ವಿಚಾರ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ಎಫ್‌ಐಆರ್ ದಾಖಲಿಸಿದ ನಂತರ ಕೊಲಾಬಾ ಪೊಲೀಸರು ಮಹಾರಾಷ್ಟ್ರ ನವನಿರ್ಮಾಣ ಸೇನೆಯ ಸಾರಿಗೆ ವಿಭಾಗದ ಉಪಾಧ್ಯಕ್ಷ ಪ್ರಶಾಂತ್ ಗಾಂಧಿ ಸೇರಿದಂತೆ ನಾಲ್ವರನ್ನು ಬಂಧಿಸಿದ್ದಾರೆ.
ಅಲ್ಲದೆ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಬಸ್ ಮೇಲೆ ನಡೆಸಿದ ಆರೋಪದ ಮೇಲೆ ಐಪಿಸಿಯ 143,147,149,427 ಸೆಕ್ಷನ್‌ಗಳ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಇನ್ನು ಈ ದಾಳಿ ವೇಳೆ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಯಾವುದೇ ಆಟಗಾರರು ಮತ್ತು ಸಿಬ್ಬಂದಿಗಳು ಬಸ್ನಲ್ಲಿ ಇರಲಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.
ಡೆಲ್ಲಿ ಕ್ಯಾಪಿಟಲ್ಸ್ ತಂಡವು ಐಪಿಎಲ್ ಸೀಸನ್ 15 ನಲ್ಲಿನ ತನ್ನ ಮೊದಲ ಪಂದ್ಯವನ್ನು ಮಾರ್ಚ್ 27 ರಂದು ಮುಂಬೈ ಇಂಡಿಯನ್ಸ್ ವಿರುದ್ದ ಆಡಲಿದೆ. ಈ ಪಂದ್ಯದೊಂದಿಗೆ ಮುಂಬೈ-ಡೆಲ್ಲಿ ಐಪಿಎಲ್ ಅಭಿಯಾನ ಆರಂಭಿಸಲಿದೆ.
Delhi Capital IPL team parked bus allegedly attacked#IPL2022pic.twitter.com/hzmdb60yXm
— Himalayan Guy (@RealHimalayaGuy) March 16, 2022
ಡೆಲ್ಲಿ ಕ್ಯಾಪಿಟಲ್ಸ್ ತಂಡ ಹೀಗಿದೆ: ರಿಷಭ್ ಪಂತ್ (ನಾಯಕ), ಡೇವಿಡ್ ವಾರ್ನರ್, ಪೃಥ್ವಿ ಶಾ, ಮಿಚೆಲ್ ಮಾರ್ಷ್, ಸರ್ಫರಾಜ್ ಖಾನ್, ಕೆಎಸ್ ಭರತ್, ಮನದೀಪ್ ಸಿಂಗ್, ಅಕ್ಷರ್ ಪಟೇಲ್, ಶಾರ್ದೂಲ್ ಠಾಕೂರ್, ಕುಲದೀಪ್ ಯಾದವ್, ಅನ್ರಿಕ್ ನೋಕಿಯಾ, ಕಮಲೇಶ್ ನಾಗರಕೋಟಿ, ಮುಸ್ತಾಫಿಜುರ್ ರೆಹಮಾನ್, ಚೇತನ್ ಸಕರಿಯಾ, ಖಲೀಲ್ ಅಹ್ಮದ್, ಅಶ್ವಿನ್ ಹೆಬ್ಬಾರ್, ಅಶ್ವಿನ್ ಹೆಬ್ಬಾರ್ , ಯಶ್ ಧುಲ್, ವಿಕ್ಕಿ ಓಸ್ಟ್ವಾಲ್, ಲುಂಗಿ ಎನ್‌ಗಿಡಿ, ಟಿಮ್ ಸೀಫರ್ಟ್, ಪ್ರವೀಣ್ ದುಬೆ, ರೋವ್‌ಮನ್ ಪೊವೆಲ್, ಲಲಿತ್ ಯಾದವ್.
ಇದನ್ನೂ ಓದಿ: PSL vs IPL Prize Money: ಪಾಕಿಸ್ತಾನ್ ಸೂಪರ್ ಲೀಗ್ ಗೆದ್ರೆ ಸಿಗುವ ಪ್ರಶಸ್ತಿ ಮೊತ್ತವೆಷ್ಟು ಗೊತ್ತಾ?
ಇದನ್ನೂ ಓದಿ: IPL 2022: ಐಪಿಎಲ್ಗೆ ಕಂಬ್ಯಾಕ್ ಮಾಡಬಲ್ಲ 5 ಆಟಗಾರರು..!
ಇದನ್ನೂ ಓದಿ: Ab de villiers: IPL ನಲ್ಲಿ ಎಬಿಡಿ ಹೆಸರಿನಲ್ಲಿರುವ ಅಪರೂಪದ ದಾಖಲೆಗಳಿವು..!
ಇದನ್ನೂ ಓದಿ: IPL ಇತಿಹಾಸದಲ್ಲೇ ಹೊಸ ದಾಖಲೆ ಬರೆದ ಆರೋನ್ ಫಿಂಚ್
(IPL 2022: Delhi Capitals Bus attacked by MNS, Watch Video)