Asia Cup 2022: ಏಷ್ಯಾಕಪ್ 2022 ಕ್ಕೆ ಅರ್ಹತಾ ಸುತ್ತಿನ ಮೂಲಕ ಎಂಟ್ರಿ ಕೊಟ್ಟಿರುವ ಹಾಂಗ್ ಕಾಂಗ್ ತಂಡವು ಇದೀಗ ಭರ್ಜರಿ ಹುಮ್ಮಸ್ಸಿನಲ್ಲಿದೆ. ಏಕೆಂದರೆ ಇದೇ ಮೊದಲ ಬಾರಿ ಹಾಂಗ್ ಕಾಂಗ್ ತಂಡವು ಏಷ್ಯಾಕಪ್ನಲ್ಲಿ ಭಾರತ ತಂಡವನ್ನು ಎದುರಿಸುತ್ತಿದೆ. ಇನ್ನು 2ನೇ ಪಂದ್ಯದಲ್ಲಿ ಪಾಕಿಸ್ತಾನ್ ತಂಡದ ವಿರುದ್ದ ಸೆಣಸುವ ಅವಕಾಶ ದೊರೆತಿದೆ. ಅಂದರೆ ಏಷ್ಯಾದ ಬಲಿಷ್ಠ ಪಡೆಗಳೊಂದಿಗೆ ಕಣಕ್ಕಿಳಿಯುವ ಚಾನ್ಸ್ ಸಿಕ್ಕಿರುವ ಖುಷಿಯಲ್ಲಿದೆ ಕ್ರಿಕೆಟ್ ಕೂಸು ಹಾಂಗ್ ಕಾಂಗ್. ಇದಕ್ಕೂ ಮುನ್ನ ಯುಎಇ ವಿರುದ್ದದ ಅರ್ಹತಾ ಸುತ್ತಿನ ಪಂದ್ಯದಲ್ಲಿ ಹಾಂಗ್ ಕಾಂಗ್ ತಂಡವು ಭರ್ಜರಿ ಜಯ ಸಾಧಿಸಿತು. ಈ ಜಯದೊಂದಿಗೆ ಅರ್ಹತಾ ಸುತ್ತಿನ ಮೂರು ಪಂದ್ಯಗಳನ್ನು ಗೆದ್ದು ಏಷ್ಯಾಕಪ್ಗೆ ಎಂಟ್ರಿ ಕೊಟ್ಟಿತ್ತು. ಇತ್ತ ಭಾರತ ಮತ್ತು ಪಾಕಿಸ್ತಾನ್ ವಿರುದ್ದ ಆಡುವ ಅವಕಾಶ ಸಿಗುತ್ತಿದ್ದಂತೆ ಹಾಂಗ್ ಕಾಂಗ್ ತಂಡವು ಭರ್ಜರಿ ಡ್ಯಾನ್ಸ್ನೊಂದಿಗೆ ಸಂಭ್ರಮಿಸಿದ್ದು ವಿಶೇಷ.
ಏಷ್ಯಾಕಪ್ಗೆ ಅರ್ಹತೆ ಪಡೆಯುತ್ತಿದ್ದಂತೆ ಡ್ರೆಸ್ಸಿಂಗ್ ರೂಮ್ನಲ್ಲಿ ಹಾಂಗ್ ಕಾಂಗ್ ತಂಡದ ಆಟಗಾರರು ನೃತ್ಯದ ಮೂಲಕ ಸಂಭ್ರಮಿಸಿದರು. ಅದು ಕೂಡ ಬಾಲಿವುಡ್ ಗೀತೆ ಕಾಲಾ ಚಶ್ಮಾ ಹಾಡಿಗೆ ಎಂಬುದು ಮತ್ತೊಂದು ವಿಶೇಷ. ಇತ್ತೀಚೆಗೆ ಇದೇ ಗೀತೆಗೆ ಟೀಮ್ ಇಂಡಿಯಾ ಆಟಗಾರರು ಕೂಡ ನರ್ತಿಸಿದ್ದರು. ಜಿಂಬಾಬ್ವೆ ವಿರುದ್ದದ ಸರಣಿಯ ಬಳಿಕ ಭಾರತೀಯ ಆಟಗಾರರು ಕಾಲಾ ಚಶ್ಮಾ ಹಾಡಿಗೆ ಭರ್ಜರಿ ಸ್ಟೆಪ್ಸ್ ಹಾಕುವ ಮೂಲಕ ಸಂಭ್ರಮಿಸಿದ್ದರು. ಇದೀಗ ಅದೇ ಗೀತೆಗೆ ಅದೇ ಸ್ಟೈಲ್ನಲ್ಲಿ ಹಾಂಗ್ ಕಾಂಗ್ ಟೀಮ್ ಕುಣಿದು ಕುಪ್ಪಳಿಸುವ ಖುಷಿಯೊಂದಿಗೆ ನಲಿದಾಡಿದ್ದಾರೆ. ಈ ಭರ್ಜರಿ ಡ್ಯಾನ್ಸ್ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಭಾರೀ ಮೆಚ್ಚುಗೆಗಳು ವ್ಯಕ್ತವಾಗುತ್ತಿದೆ.
ವಿಶೇಷ ಎಂದರೆ ಕಾಲಾ ಚಶ್ಮಾ ಗೀತೆಗೆ ನಾರ್ವೆಯ ಡ್ಯಾನ್ಸ್ ಟೀಮ್ ವಿಭಿನ್ನ ಸ್ಟೆಪ್ಸ್ ಹಾಕುವ ಮೂಲಕ ಇತ್ತೀಚೆಗೆ ಇಡೀ ವಿಶ್ವದ ಗಮನ ಸೆಳೆದಿದ್ದರು. ಕ್ವಿಕ್ ಸ್ಟೆಪ್ಸ್ ಹೆಸರಿನಲ್ಲಿ ವೈರಲ್ ಆಗಿದ್ದ ಈ ಡ್ಯಾನ್ಸ್ ಸ್ಟೆಪ್ಸ್ನಲ್ಲೇ ಟೀಮ್ ಇಂಡಿಯಾ ಆಟಗಾರರು ಕಾಲಾ ಚಶ್ಮಾ ಹಾಡಿಗೆ ನೃತ್ಯ ಮಾಡಿದ್ದರು. ಇದೀಗ ಅದೇ ಸ್ಟೈಲ್ನಲ್ಲೇ ಹಾಂಗ್ ಕಾಂಗ್ ಟೀಮ್ ಇಂಡಿಯಾ ಕೂಡ ಡ್ಯಾನ್ಸ್ ಮಾಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.
Winning celebration by team India. pic.twitter.com/ccVQEDppoc
— Mufaddal Vohra (@mufaddal_vohra) August 22, 2022
ಇನ್ನು ಏಷ್ಯಾಕಪ್ನಲ್ಲಿ ಹಾಂಗ್ ಕಾಂಗ್ ತಂಡವು ತನ್ನ ಮೊದಲ ಪಂದ್ಯದಲ್ಲಿ ಟೀಮ್ ಇಂಡಿಯಾ ವಿರುದ್ದ ಆಡಲಿದೆ. ಆಗಸ್ಟ್ 31 ರಂದು ನಡೆಯಲಿರುವ ಈ ಪಂದ್ಯದ ಬಳಿಕ ಹಾಂಗ್ ಕಾಂಗ್ ಸೆಪ್ಟೆಂಬರ್ 2 ರಂದು ಪಾಕಿಸ್ತಾನ್ ವಿರುದ್ದ ಕಣಕ್ಕಿಳಿಯಲಿದೆ.