IPL 2022: ಡ್ರೆಸ್ಸಿಂಗ್ ರೂಮ್​ನಲ್ಲಿ ಮೊಳಗಿದ RCB ವಿಜಯಗೀತೆ

| Updated By: ಝಾಹಿರ್ ಯೂಸುಫ್

Updated on: Apr 06, 2022 | 3:37 PM

IPL 2022 RCB: ಕಾರ್ತಿಕ್ ಪ್ರಸ್ತುತ ಅತ್ಯುತ್ತಮ ಫಾರ್ಮ್‌ನಲ್ಲಿದ್ದು, ಆರ್‌ಸಿಬಿ ಪರ ಕಳೆದ 3 ಪಂದ್ಯಗಳಲ್ಲಿ ಅಜೇಯ ಇನ್ನಿಂಗ್ಸ್‌ ಆಡಿದ್ದಾರೆ. ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ್ ರಾಯಲ್ಸ್​ ಆರ್‌ಸಿಬಿಗೆ 170 ರನ್‌ಗಳ ಟಾರ್ಗೆಟ್ ನೀಡಿತ್ತು.

IPL 2022: ಡ್ರೆಸ್ಸಿಂಗ್ ರೂಮ್​ನಲ್ಲಿ ಮೊಳಗಿದ RCB ವಿಜಯಗೀತೆ
RCB
Follow us on

ಐಪಿಎಲ್​ನ 13 ನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧದ ಅದ್ಭುತ ವಿಜಯವನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿಭಿನ್ನ ರೀತಿಯಲ್ಲಿ ಆಚರಿಸಿತು. ಡ್ರೆಸ್ಸಿಂಗ್ ರೂಂನಲ್ಲಿ ಗೆಲುವಿನ ನಂತರ ನಾಯಕ ಫಾಫ್ ಡು ಪ್ಲೆಸಿಸ್ ಮತ್ತು ಮಾಜಿ ನಾಯಕ ವಿರಾಟ್ ಕೊಹ್ಲಿ ತಂಡದಲ್ಲಿ ಉತ್ಸಾಹ ತುಂಬಿದರು. RCB ತನ್ನ ಆರಂಭಿಕ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಕೈಯಲ್ಲಿ ಸೋಲನ್ನು ಎದುರಿಸಬೇಕಾಯಿತು, ಆದರೆ ನಂತರ ತಂಡವು ಅಮೋಘ ಆಟ ಪ್ರದರ್ಶನ ಮುಂದುವರೆಸಿದೆ. ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ರಾಜಸ್ಥಾನ್ ವಿರುದ್ಧ ಅದ್ಭುತ ಗೆಲುವು ದಾಖಲಿಸಿತು. ಅದರಲ್ಲೂ ರಾಜಸ್ಥಾನ್ ವಿರುದ್ದ 23 ಎಸೆತಗಳಲ್ಲಿ ಅಜೇಯ 44 ರನ್ ಗಳಿಸಿದ ದಿನೇಶ್ ಕಾರ್ತಿಕ್ RCB ಗೆಲುವಿನ ಹೀರೋ ಎನಿಸಿಕೊಂಡರು.

ಕಾರ್ತಿಕ್ ಪ್ರಸ್ತುತ ಅತ್ಯುತ್ತಮ ಫಾರ್ಮ್‌ನಲ್ಲಿದ್ದು, ಆರ್‌ಸಿಬಿ ಪರ ಕಳೆದ 3 ಪಂದ್ಯಗಳಲ್ಲಿ ಅಜೇಯ ಇನ್ನಿಂಗ್ಸ್‌ ಆಡಿದ್ದಾರೆ. ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ್ ರಾಯಲ್ಸ್​ ಆರ್‌ಸಿಬಿಗೆ 170 ರನ್‌ಗಳ ಟಾರ್ಗೆಟ್ ನೀಡಿತ್ತು. ಇದಕ್ಕೆ ಉತ್ತರವಾಗಿ ಆರ್‌ಸಿಬಿ 5 ಎಸೆತ ಬಾಕಿಯಿರುವಾಗಲೇ 7 ವಿಕೆಟ್ ಕಳೆದುಕೊಂಡು ಗುರಿ ತಲುಪಿತು. ಇದರ ನಂತರ, RCB ಡ್ರೆಸ್ಸಿಂಗ್ ರೂಮ್‌ನಲ್ಲಿ ಅದ್ಧೂರಿಯಾಗಿ ಗೆಲುವನ್ನು ಸೆಲೆಬ್ರೇಟ್ ಮಾಡಿದೆ. ಅದು ಕೂಡ ವಿಶೇಷ ಗೆಲುವಿನ ಗೀತೆಯ ಮೂಲಕ ಎಂಬುದು ವಿಶೇಷ.

The pants are red. The shirt is blue. The golden lion is shining through. We are RCB. We are playing bold. Go to the final on our own. A finer team you’ll never see, a finer team there’ll never be. Those other teams don’t bother me, From RCB I am proud to be. We are RCB, RCB…ವಿಜಯ ಗೀತೆಯನ್ನು ಹಾಡುವ ಮೂಲಕ ಆರ್​ಸಿಬಿ ತಂಡವು ಗೆಲುವನ್ನು ಸಂಭ್ರಮಿಸಿತು.

‘ ಕೆಂಪು ಪ್ಯಾಂಟ್…ನೀಲಿ ಶರ್ಟ್​…ಅದರಲ್ಲಿ ಚಿನ್ನದ ಸಿಂಹ ಹೊಳೆಯುತ್ತಿದೆ. ನಾವು RCB… ನಾವು ಆತ್ಮ ವಿಶ್ವಾಸದಿಂದಲೇ ಆಡುತ್ತಿದ್ದೇವೆ. ಖಂಡಿತವಾಗಿಯೂ ಫೈನಲ್‌ಗೆ ಹೋಗುತ್ತೇವೆ. ನೀವು ಎಂದಿಗೂ ಕಂಡಿರದ ಉತ್ತಮ ತಂಡ ನಮ್ಮದು. ಉಳಿದ ತಂಡಗಳು ನಮ್ಮನ್ನು ಸೋಲಿಸಲು ಸಾಧ್ಯವಿಲ್ಲ. ನಾನು ಆರ್​ಸಿಬಿ ತಂಡದವನು ಎಂಬುದರ ಬಗ್ಗೆ ನನಗೆ ಹೆಮ್ಮೆ ಇದೆ. ನಾವು RCB…RCB….RCB…ಎಂಬಾರ್ಥದಲ್ಲಿ ಆಟಗಾರರಲ್ಲಿ ಉತ್ಸಾಹ ತುಂಬುವಂತಹ ವಿಜಯಗೀತೆಯನ್ನು ರಚಿಸಲಾಗಿದೆ.

ಇದೀಗ ಆರ್​ಸಿಬಿ ತಂಡದ ಈ ಗೆಲುವಿನ ಸಂಭ್ರಮದ ವಿಡಿಯೋವನ್ನು ವೈರಲ್ ಆಗಿದೆ. ಅಲ್ಲದೆ ಹೊಸ ವಿಜಯ ಗೀತೆಯನ್ನು ಆರ್​ಸಿಬಿ ಅಭಿಮಾನಿಗಳು ಕೂಡ ಮನನ ಮಾಡಿಕೊಳ್ಳುತ್ತಿದ್ದಾರೆ. ಈ ಮೂಲಕ ಮುಂಬರುವ ದಿನಗಳಲ್ಲಿ ಸ್ಟೇಡಿಯಂನಲ್ಲಿ ಆರ್​ಸಿಬಿ ವಿಜಯ ಗೀತೆ ಮೊಳಗಿದರೂ ಅಚ್ಚರಿಪಡಬೇಕಿಲ್ಲ.

 

ಇದನ್ನೂ ಓದಿ: KL Rahul: ಟಿ20 ಕ್ರಿಕೆಟ್​ನಲ್ಲಿ ಮತ್ತೊಂದು ಸಾಧನೆ ಮಾಡಿದ ಕೆಎಲ್ ರಾಹುಲ್