Team India: ಒಂದು ಸರಣಿಯಲ್ಲಿ 7 ಮಂದಿ ಪದಾರ್ಪಣೆ: ಈವರೆಗೆ ಟೀಮ್ ಇಂಡಿಯಾ ಪರ ಎಷ್ಟು ಮಂದಿ ಆಡಿದ್ದಾರೆ ಗೊತ್ತಾ?

| Updated By: ಝಾಹಿರ್ ಯೂಸುಫ್

Updated on: Jul 23, 2021 | 6:28 PM

ಭಾರತ-ಶ್ರೀಲಂಕಾ ನಡುವಣ ಮೂರನೇ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾ ಪರ 5 ಮಂದಿ ಪದಾರ್ಪಣೆ ಮಾಡಿದರು. ಈ ಮೂಲಕ 41 ವರ್ಷಗಳ ಬಳಿಕ ಮತ್ತೊಮ್ಮೆ ಭಾರತದ ಪರ ಒಂದೇ ಪಂದ್ಯದಲ್ಲಿ ಜೊತೆಯಾಗಿ ಐವರು ಆಟಗಾರರು ಚೊಚ್ಚಲ ಅವಕಾಶ ಪಡೆದರು. ಇದಕ್ಕೂ ಮುನ್ನ 1980ರಲ್ಲಿ ಭಾರತ ತಂಡವು ಇಂತಹದೊಂದು ಪ್ರಯೋಗ ಮಾಡಿತ್ತು. ಅಂದು ಆಸ್ಟ್ರೇಲಿಯಾ ವಿರುದ್ದ ದಿಲೀಪ್ ದೋಶಿ, ಕೀರ್ತಿ ಆಜಾದ್, ರೋಜರ್ ಬಿನ್ನಿ, ಸಂದೀಪ್ ಪಾಟೀಲ್ ಮತ್ತು ತಿರುಮಲೈ ಶ್ರೀನಿವಾಸನ್ ಅವರು ಚೊಚ್ಚಲ ಬಾರಿ ಜೊತೆಯಾಗಿ ಕಣಕ್ಕಿಳಿದಿದ್ದರು. […]

Team India: ಒಂದು ಸರಣಿಯಲ್ಲಿ 7 ಮಂದಿ ಪದಾರ್ಪಣೆ: ಈವರೆಗೆ ಟೀಮ್ ಇಂಡಿಯಾ ಪರ ಎಷ್ಟು ಮಂದಿ ಆಡಿದ್ದಾರೆ ಗೊತ್ತಾ?
Team India
Follow us on

ಭಾರತ-ಶ್ರೀಲಂಕಾ ನಡುವಣ ಮೂರನೇ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾ ಪರ 5 ಮಂದಿ ಪದಾರ್ಪಣೆ ಮಾಡಿದರು. ಈ ಮೂಲಕ 41 ವರ್ಷಗಳ ಬಳಿಕ ಮತ್ತೊಮ್ಮೆ ಭಾರತದ ಪರ ಒಂದೇ ಪಂದ್ಯದಲ್ಲಿ ಜೊತೆಯಾಗಿ ಐವರು ಆಟಗಾರರು ಚೊಚ್ಚಲ ಅವಕಾಶ ಪಡೆದರು. ಇದಕ್ಕೂ ಮುನ್ನ 1980ರಲ್ಲಿ ಭಾರತ ತಂಡವು ಇಂತಹದೊಂದು ಪ್ರಯೋಗ ಮಾಡಿತ್ತು. ಅಂದು ಆಸ್ಟ್ರೇಲಿಯಾ ವಿರುದ್ದ ದಿಲೀಪ್ ದೋಶಿ, ಕೀರ್ತಿ ಆಜಾದ್, ರೋಜರ್ ಬಿನ್ನಿ, ಸಂದೀಪ್ ಪಾಟೀಲ್ ಮತ್ತು ತಿರುಮಲೈ ಶ್ರೀನಿವಾಸನ್ ಅವರು ಚೊಚ್ಚಲ ಬಾರಿ ಜೊತೆಯಾಗಿ ಕಣಕ್ಕಿಳಿದಿದ್ದರು. ಇದೀಗ 41 ವರ್ಷಗಳ ಬಳಿಕ ಭಾರತ ತಂಡವು ಮತ್ತೊಮ್ಮೆ 5 ಹೊಸ ಆಟಗಾರರನ್ನು ಜೊತೆಯಾಗಿ ಕಣಕ್ಕಿಳಿಸಿ ಇತಿಹಾಸ ನಿರ್ಮಿಸಿದೆ. ಅಷ್ಟೇ ಅಲ್ಲದೆ ಒಂದೇ ಸರಣಿಯಲ್ಲಿ 7 ಹೊಸಮುಖಗಳಿಗೆ ಅವಕಾಶ ನೀಡಿ ಗಮನ ಸೆಳೆದಿದೆ.

ಶ್ರೀಲಂಕಾ ವಿರುದ್ದದ ಮೊದಲ ಏಕದಿನ ಪಂದ್ಯದಲ್ಲಿ ಇಶಾನ್ ಕಿಶನ್ ಹಾಗೂ ಸೂರ್ಯಕುಮಾರ್ ಯಾದವ್ ಪದಾರ್ಪಣೆ ಮಾಡಿದರೆ, 3ನೇ ಏಕದಿನದಲ್ಲಿ ಸಂಜು ಸ್ಯಾಮ್ಸನ್, ನಿತೀಶ್ ರಾಣಾ, ಚೇತನ್ ಸಕರಿಯಾ, ರಾಹುಲ್ ಚಹರ್ ಹಾಗೂ ಕನ್ನಡಿಗ ಕೃಷ್ಣಪ್ಪ ಗೌತಮ್ ಟೀಮ್ ಇಂಡಿಯಾ ಪರ ಅವಕಾಶ ಪಡೆದರು. ಇದರೊಂದಿಗೆ ಭಾರತಕ್ಕಾಗಿ ಏಕದಿನ ಕ್ರಿಕೆಟ್ ಆಡಿದ ಆಟಗಾರರ ಸಂಖ್ಯೆ 241 ತಲುಪಿದೆ. 50 ವರ್ಷಗಳ ಏಕದಿನ ಇತಿಹಾಸದಲ್ಲಿ, ಇಂಗ್ಲೆಂಡ್ ಮಾತ್ರ ಭಾರತಕ್ಕಿಂತ ಹೆಚ್ಚಿನ ಆಟಗಾರರನ್ನು ಕಣಕ್ಕಿಳಿಸಿದೆ. ಇಂಗ್ಲೆಂಡ್​ ತಂಡದ ಪರ 263 ಆಟಗಾರರು ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಅದೇ ರೀತಿ ಆಸ್ಟ್ರೇಲಿಯಾ ಪರ 233 ಆಟಗಾರರ ಏಕದಿನ ಕ್ರಿಕೆಟ್​ನಲ್ಲಿ ಕಣಕ್ಕಿಳಿದಿದೆ. ಹಾಗೆಯೇ ಪಾಕಿಸ್ತಾನ ತಂಡದಲ್ಲಿ ಈವರೆಗೆ 231 ಕ್ರಿಕೆಟಿಗರು ಏಕದಿನ ಪಂದ್ಯವನ್ನಾಡಿದ್ದಾರೆ.

ಇನ್ನು ಹೆಚ್ಚು ಏಕದಿನ ಪಂದ್ಯಗಳನ್ನು ಆಡಿದ ತಂಡಗಳ ಪಟ್ಟಿಯಲ್ಲಿ ಭಾರತ ತಂಡ ನಂಬರ್ -1 ಸ್ಥಾನದಲ್ಲಿದೆ. ಟೀಮ್ ಇಂಡಿಯಾ ಈವರೆಗೆ 996 ಏಕದಿನ ಪಂದ್ಯಗಳನ್ನು ಆಡಿದ್ದಾರೆ. ನಂತರದ ಸ್ಥಾನದಲ್ಲಿ ಆಸ್ಟ್ರೇಲಿಯಾ ಇದ್ದು, ಆಸೀಸ್ ಬಳಗ ಒಟ್ಟು 956 ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಇನ್ನು ಮೂರನೇ ಸ್ಥಾನದಲ್ಲಿ ಪಾಕಿಸ್ತಾನ (936) ಇದ್ದು, ಶ್ರೀಲಂಕಾ (863) ನಾಲ್ಕನೇ ಸ್ಥಾನ ಅಲಂರಿಸಿದೆ. ಹಾಗೆಯೇ ಐದನೇ ಸ್ಥಾನದಲ್ಲಿ ವೆಸ್ಟ್ ಇಂಡೀಸ್ (829) ಇದ್ದರೆ, ನ್ಯೂಜಿಲೆಂಡ್ 775 ಮತ್ತು ಇಂಗ್ಲೆಂಡ್ 761 ಏಕದಿನ ಪಂದ್ಯಗಳನ್ನು ಆಡುವ ಮೂಲಕ 6ನೇ ಮತ್ತು7ನೇ ಸ್ಥಾನ ಪಡೆದುಕೊಂಡಿದೆ. 8ನೇ ಸ್ಥಾನದಲ್ಲಿ ದಕ್ಷಿಣ ಆಫ್ರಿಕಾ (631) ಇದ್ದರೆ, ಜಿಂಬಾಬ್ವೆ (535) ಒಂಬತ್ತನೇ ಮತ್ತು ಬಾಂಗ್ಲಾದೇಶ (388) 10 ನೇ ಸ್ಥಾನದಲ್ಲಿದೆ.

 

ಇದನ್ನೂ ಓದಿ: Rahul Dravid: ಇಡೀ ಪಂದ್ಯದ ಗತಿ ಬದಲಿಸಿದ ರಾಹುಲ್ ದ್ರಾವಿಡ್ ಅವರ ಆ ಒಂದು ನಿರ್ಧಾರ..!

ಇದನ್ನೂ ಓದಿ: Ola Electric scooters: ಮೈಲೇಜ್ ಬರೋಬ್ಬರಿ 240 ಕಿ.ಮೀ: ಶೀಘ್ರದಲ್ಲೇ ರಸ್ತೆಗಿಳಿಯಲಿದೆ ಓಲಾ ಸ್ಕೂಟರ್..!

 

(How many cricketers played odi for india)