Mumbai Indians: ಪ್ಲೇಆಫ್ ಪ್ರವೇಶಿಸಲು ಮುಂಬೈ ಇಂಡಿಯನ್ಸ್ ತಂಡಕ್ಕಿದೆ ಎರಡು ಅವಕಾಶ

| Updated By: ಝಾಹಿರ್ ಯೂಸುಫ್

Updated on: Oct 05, 2021 | 3:47 PM

IPL 2021: ಪ್ಲೇಆಫ್​ ಅವಕಾಶವಿರುವ ಕೆಕೆಆರ್​ ತಂಡ ಮಾತ್ರ ಪ್ರಸ್ತುತ 12 ಅಂಕಗಳನ್ನು ಹೊಂದಿದೆ. ಇನ್ನುಳಿದ ಮೂರು ತಂಡಗಳು 10 ಅಂಕಗಳನ್ನು ಪಡೆದಿವೆ. ಹೀಗಾಗಿ ಇಂದಿನ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್​, ರಾಜಸ್ಥಾನ್ ವಿರುದ್ದ ಗೆದ್ದರೆ 2 ಅಂಕಗಳನ್ನು ಪಡೆಯಲಿದೆ.

Mumbai Indians: ಪ್ಲೇಆಫ್ ಪ್ರವೇಶಿಸಲು ಮುಂಬೈ ಇಂಡಿಯನ್ಸ್ ತಂಡಕ್ಕಿದೆ ಎರಡು ಅವಕಾಶ
Mumbai Indians
Follow us on

ಇಂಡಿಯನ್ ಪ್ರೀಮಿಯರ್ ಲೀಗ್​ ಸೀಸನ್ 14ನ (IPL 2021) ಲೀಗ್ ಹಂತವು ಮುಕ್ತಾಯದ ಹಂತಕ್ಕೆ ತಲುಪಿದೆ. ಈಗಾಗಲೇ ಡೆಲ್ಲಿ ಕ್ಯಾಪಿಟಲ್ಸ್ (Delhi Capitals)​, ಚೆನ್ನೈ ಸೂಪರ್ ಕಿಂಗ್ಸ್ (CSK)​ ಹಾಗೂ ರಾಯಲ್ ಚಾಲೆಂಜರ್ಸ್​ ಬೆಂಗಳೂರು (RCB) ತಂಡಗಳು ಪ್ಲೇ ಆಫ್ ಪ್ರವೇಶಿಸಿದೆ. ಆದರೆ ನಾಲ್ಕನೇ ತಂಡವಾಗಿ ಪ್ಲೇಆಫ್​ಗೇರಲು ನಾಲ್ಕು ತಂಡಗಳ ನಡುವೆ ಭರ್ಜರಿ ಪೈಪೋಟಿ ಏರ್ಪಟ್ಟಿದೆ. ಅದರಂತೆ ಪ್ಲೇಆಫ್ ರೇಸ್​ನಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ (KKR)​, ರಾಜಸ್ಥಾನ್ ರಾಯಲ್ಸ್ (RR)​, ಮುಂಬೈ ಇಂಡಿಯನ್ಸ್ (Mumbai Indians) ಹಾಗೂ ಪಂಜಾಬ್ ಕಿಂಗ್ಸ್ (PBKS)​ ನಡುವೆ ಪೈಪೋಟಿಯಿದೆ. ಆದರೆ ಮಂಗಳವಾರ ನಡೆಯಲಿರುವ ಪಂದ್ಯವು ರಾಜಸ್ಥಾನ್ ರಾಯಲ್ಸ್ ಹಾಗೂ ಮುಂಬೈ ಇಂಡಿಯನ್ಸ್​ಗೆ ನಿರ್ಣಾಯಕ. ಅದರಲ್ಲೂ ಅಂಕಪಟ್ಟಿಯಲ್ಲಿ 7ನೇ ಸ್ಥಾನದಲ್ಲಿದ್ದರೂ ರಾಜಸ್ಥಾನ್ ರಾಯಲ್ಸ್ ವಿರುದ್ದ ಗೆದ್ದರೆ ಮುಂಬೈಗೆ ಪ್ಲೇಆಫ್​ ಆಸೆಯನ್ನು ಜೀವಂತವಿರಿಸಿಕೊಳ್ಳಬಹುದು. ಅಲ್ಲದೆ ಮುಂದಿನ ಪಂದ್ಯದಲ್ಲಿ ಗೆಲ್ಲುವ ಮೂಲಕ ಪ್ಲೇಆಫ್​ ಪ್ರವೇಶಿಸುವ ಅವಕಾಶವನ್ನು ಪಡೆಯಬಹುದು. ಆದರೆ ಅದು ಇತರೆ ತಂಡಗಳ ಫಲಿತಾಂಶ ಹಾಗೂ  ನೆಟ್​ ರನ್​ ರೇಟ್​ನ ಆಧಾರದ ಮೇಲೆ ಎಂಬುದು ವಿಶೇಷ.

ಏಕೆಂದರೆ ಪ್ಲೇಆಫ್​ ಅವಕಾಶವಿರುವ ಕೆಕೆಆರ್​ ತಂಡ ಮಾತ್ರ ಪ್ರಸ್ತುತ 12 ಅಂಕಗಳನ್ನು ಹೊಂದಿದೆ. ಇನ್ನುಳಿದ ಮೂರು ತಂಡಗಳು 10 ಅಂಕಗಳನ್ನು ಪಡೆದಿವೆ. ಹೀಗಾಗಿ ಇಂದಿನ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್​, ರಾಜಸ್ಥಾನ್ ವಿರುದ್ದ ಗೆದ್ದರೆ 2 ಅಂಕಗಳನ್ನು ಪಡೆಯಲಿದೆ. ಅಲ್ಲದೆ ಒಟ್ಟು ಅಂಕವನ್ನು 12ಕ್ಕೇರಿಸಲಿದೆ. ಇನ್ನು ಮುಂದಿನ ಪಂದ್ಯದಲ್ಲಿ ಸನ್​ರೈಸರ್ಸ್​ ಹೈದರಾಬಾದ್​ನ್ನು ಮಣಿಸಿದರೆ ಮುಂಬೈಗೆ ಒಟ್ಟು 14 ಅಂಕ ಸಿಗಲಿದೆ. ಒಂದು ವೇಳೆ ಮುಂಬೈ ಮುಂದಿನ 2 ಪಂದ್ಯಗಳಲ್ಲಿ ಗೆದ್ದರೆ, ಅತ್ತ ರಾಜಸ್ಥಾನ್ ರಾಯಲ್ಸ್ ವಿರುದ್ದದ ಕೊನೆಯ ಪಂದ್ಯದಲ್ಲಿ ಕೆಕೆಆರ್ ಸೋಲುವುದನ್ನು ಎದುರು ನೋಡಬೇಕು.

ಒಂದು ವೇಳೆ ಕೆಕೆಆರ್​ ರಾಜಸ್ಥಾನ್ ವಿರುದ್ದ ಸೋತರೆ ಮುಂಬೈ 14 ಅಂಕಗಳೊಂದಿಗೆ ಪ್ಲೇಆಫ್​ಗೆ ಎಂಟ್ರಿ ಕೊಡಬಹುದು. ಇದಾಗ್ಯೂ ಕೆಕೆಆರ್​ ಆರ್​ಆರ್ ವಿರುದ್ದ ಜಯ ಸಾಧಿಸಿ ಒಟ್ಟು 14 ಅಂಕಗಳನ್ನು ಪಡೆದರೂ ನೆಟ್​ ರನ್​ರೇಟ್​ ಮೂಲಕ ಕೂಡ ಪ್ಲೇಆಫ್​ಗೆ ಎಂಟ್ರಿ ಕೊಡುವ ಅವಕಾಶ ಮುಂಬೈ ಇಂಡಿಯನ್ಸ್​ ತಂಡಕ್ಕಿದೆ. ಇದಕ್ಕಾಗಿ ಮುಂಬೈ ತಂಡವು ಮುಂದಿನ ಎರಡು ಪಂದ್ಯಗಳನ್ನು ಭರ್ಜರಿ ಅಂತರದಿಂದ ಗೆಲ್ಲಲೇಬೇಕು. ಈ ಮೂಲಕ ನೆಟ್​ ರನ್​ರೇಟ್​ಅನ್ನು ಕೆಕೆಆರ್​ಗಿಂತಲೂ ಹೆಚ್ಚಿಸಿಕೊಂಡರೆ ಪ್ಲೇ ಆಫ್​ ಪ್ರವೇಶಿಸಬಹುದು. ಒಟ್ಟಿನಲ್ಲಿ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್​ ತಂಡದ ಪ್ಲೇಆಫ್ ಪ್ರವೇಶ ಮುಂದಿನ 2 ಪಂದ್ಯಗಳ ಫಲಿತಾಂಶಗಳ ಮೇಲೆ ನಿಂತಿದೆ ಎನ್ನಬಹುದು.

ಇದನ್ನೂ ಓದಿ: David Warner: SRH ತಂಡದಲ್ಲಿಲ್ಲ ಸ್ಥಾನ: ಪ್ರೇಕ್ಷಕನಾಗಿ ಕಾಣಿಸಿಕೊಂಡ ಡೇವಿಡ್ ವಾರ್ನರ್

ಇದನ್ನೂ ಓದಿ: IPL 2021: ಐಪಿಎಲ್​ನಲ್ಲಿ ಹೊಸ ಇತಿಹಾಸ ನಿರ್ಮಿಸಲಿದ್ದಾರೆ ಹರ್ಷಲ್ ಪಟೇಲ್

ಇದನ್ನೂ ಓದಿ: KL Rahul: ಕೆಎಲ್ ರಾಹುಲ್ ಟೀಮ್ ಇಂಡಿಯಾಗೆ ನಾಯಕನಾಗಬಾರದು ಎಂದ ಮಾಜಿ ಕ್ರಿಕೆಟಿಗ

(How Mumbai Indians Can Qualify For IPL 2021 Playoffs)