IPL 2021: CSK ತಂಡಕ್ಕೆ ಬಿಗ್ ಶಾಕ್: ಸ್ಟಾರ್ ಆಲ್​ರೌಂಡರ್ ಐಪಿಎಲ್​ನಿಂದ ಹೊರಕ್ಕೆ

TV9 Digital Desk

| Edited By: Zahir Yusuf

Updated on:Oct 05, 2021 | 6:35 PM

Sam Curran ruled out: ರಾಜಸ್ಥಾನ ರಾಯಲ್ಸ್ ವಿರುದ್ಧ ಶನಿವಾರ ನಡೆದ ಪಂದ್ಯದ ವೇಳೆ ಕರನ್ ಬೆನ್ನು ನೋವಿನ ಸಮಸ್ಯೆಗೆ ತುತ್ತಾಗಿದ್ದರು. ಅಲ್ಲದೆ ಕೆಲ ಕಾಲ ಫೀಲ್ಡಿಂಗ್​ನಿಂದ ಹೊರಗುಳಿದಿದ್ದರು.

IPL 2021: CSK ತಂಡಕ್ಕೆ ಬಿಗ್ ಶಾಕ್: ಸ್ಟಾರ್ ಆಲ್​ರೌಂಡರ್ ಐಪಿಎಲ್​ನಿಂದ ಹೊರಕ್ಕೆ
csk
Follow us

Sam Curran ruled out: ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡದ ಯುವ ಆಲ್​ರೌಂಡರ್ ಸ್ಯಾಮ್ ಕರನ್ (Sam Curran) ಐಪಿಎಲ್​ನಿಂದ (IPL 2021) ಹೊರ ನಡೆದಿದ್ದಾರೆ. ಕಳೆದ ಕೆಲ ದಿನಗಳಿಂದ ಬೆನ್ನು ನೋವಿನಿಂದ ಬಳಲುತ್ತಿರುವ ಸ್ಯಾಮ್ ಇದೀಗ ಐಪಿಎಲ್​ನಿಂದ ಹಿಂದೆ ಸರಿದಿದ್ದು, ಹಾಗೆಯೇ ಮುಂಬರುವ ಟಿ20 ವಿಶ್ವಕಪ್​ಗೂ ಅಲಭ್ಯರಾಗಲಿದ್ದಾರೆ ಎಂದು ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ (ಇಸಿಬಿ) ಪ್ರಕಟಿಸಿದೆ. ಇನ್ನು ಟಿ20 ವಿಶ್ವಕಪ್​ನಿಂದ ಹೊರಗುಳಿದಿರುವ ಸ್ಯಾಮ್ ಅವರ ಸ್ಥಾನಕ್ಕೆ ಅವರ ಹಿರಿಯ ಸಹೋದರ ಟಾಮ್ ಕರನ್ (Tom Curran)​ ಅವರನ್ನು ಇಂಗ್ಲೆಂಡ್ ವಿಶ್ವಕಪ್ ತಂಡಕ್ಕೆ ಆಯ್ಕೆ ಮಾಡಲಾಗಿದೆ.

ರಾಜಸ್ಥಾನ ರಾಯಲ್ಸ್ ವಿರುದ್ಧ ಶನಿವಾರ ನಡೆದ ಪಂದ್ಯದ ವೇಳೆ ಕರನ್ ಬೆನ್ನು ನೋವಿನ ಸಮಸ್ಯೆಗೆ ತುತ್ತಾಗಿದ್ದರು. ಅಲ್ಲದೆ ಕೆಲ ಕಾಲ ಫೀಲ್ಡಿಂಗ್​ನಿಂದ ಹೊರಗುಳಿದಿದ್ದರು. ಇದೀಗ ಸಮಸ್ಯೆ ಗಂಭೀರವಾಗಿರುವುದರಿಂದ ವಿಶ್ರಾಂತಿ ಪಡೆಯಲು ವೈದ್ಯರು ಸೂಚಿಸಿದ್ದಾರೆ. ಅದರಂತೆ ಚೆನ್ನೈ ಸೂಪರ್ ಕಿಂಗ್ಸ್​ ತಂಡದ ಉಳಿದ ಪಂದ್ಯಗಳಿಗೆ ಅಲಭ್ಯರಾಗಲಿದ್ದಾರೆ. ಅಲ್ಲದೆ ಶೀಘ್ರದಲ್ಲೇ ಇಂಗ್ಲೆಂಡ್​ಗೆ ತೆರಳುವ ಕಾರಣ ಟಿ20 ವಿಶ್ವಕಪ್​ಗೂ ಲಭ್ಯರಿರುವುದಿಲ್ಲ ಎಂದು ತಿಳಿಸಿದ್ದಾರೆ.

ಸದ್ಯ ಚೆನ್ನೈ ಸೂಪರ್ ಕಿಂಗ್ಸ್​ ಪ್ಲೇ ಆಫ್ ಪ್ರವೇಶಿಸಿದೆ. ಇದಾಗ್ಯೂ ನಾಕೌಟ್ ಹಂತದ ಪಂದ್ಯದ ವೇಳೆ ಸ್ಯಾಮ್ ಕರನ್ ಅಲಭ್ಯತೆಯು ತಂಡದ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ. ಏಕೆಂದರೆ ಈ ಬಾರಿಯ ಐಪಿಎಲ್​ನಲ್ಲಿ 23 ವರ್ಷದ ಸ್ಯಾಮ್ ಕರನ್ ಒಂಬತ್ತು ಪಂದ್ಯಗಳಿಂದ 9 ವಿಕೆಟ್ ಪಡೆದಿದ್ದರು. ಇದೀಗ ಅಂತಿಮ ಹಂತದಲ್ಲಿ ಹೊರಗುಳಿಯುತ್ತಿರುವುದರಿಂದ ಪ್ರಸ್ತುತ ತಂಡದಲ್ಲಿರುವ ಆಟಗಾರರನ್ನೇ ಮುಂದುವರೆಸಬೇಕಾಗುತ್ತದೆ. ಹೀಗಾಗಿ ಕರನ್ ಅಲಭ್ಯತೆಯು ಸಿಎಸ್​ಕೆ ತಂಡದ ಪ್ಲೇಆಫ್ ಪಂದ್ಯಗಳ ಫಲಿತಾಂಶಗಳ ಮೇಲೆ ಪ್ರಭಾವ ಬೀರುವ ಸಾಧ್ಯತೆಯಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಅತ್ತ ಟಿ20 ವಿಶ್ವಕಪ್​ನಿಂದ ಇಂಗ್ಲೆಂಡ್​ ಆಲ್​ರೌಂಡರ್​ ಬೆನ್​ ಸ್ಟೋಕ್ಸ್​ ಕೂಡ ಹೊರಗುಳಿದಿದ್ದು, ಇದೀಗ ತಂಡದಲ್ಲಿದ್ದ ಯುವ ಆಲ್​ರೌಂಡರ್ ಗಾಯದ ಕಾರಣ ಅಲಭ್ಯರಾಗಿರುವುದು ತಂಡದ ಚಿಂತೆಯನ್ನು ಹೆಚ್ಚಿಸಿದೆ.

ಇದನ್ನೂ ಓದಿ:  IPL 2021: ಮುಂದಿನ 2 ಪಂದ್ಯಗಳನ್ನು RCB ಗೆಲ್ಲಲೇಬೇಕು, ಏಕೆಂದರೆ…

ಇದನ್ನೂ ಓದಿ: David Warner: SRH ತಂಡದಲ್ಲಿಲ್ಲ ಸ್ಥಾನ: ಪ್ರೇಕ್ಷಕನಾಗಿ ಕಾಣಿಸಿಕೊಂಡ ಡೇವಿಡ್ ವಾರ್ನರ್

ಇದನ್ನೂ ಓದಿ: IPL 2021: ಐಪಿಎಲ್​ನಲ್ಲಿ ಹೊಸ ಇತಿಹಾಸ ನಿರ್ಮಿಸಲಿದ್ದಾರೆ ಹರ್ಷಲ್ ಪಟೇಲ್

ತಾಜಾ ಸುದ್ದಿ

Related Stories

Click on your DTH Provider to Add TV9 Kannada