Mumbai Indians: ಪ್ಲೇಆಫ್ ಪ್ರವೇಶಿಸಲು ಮುಂಬೈ ಇಂಡಿಯನ್ಸ್ ತಂಡಕ್ಕಿದೆ ಎರಡು ಅವಕಾಶ
IPL 2021: ಪ್ಲೇಆಫ್ ಅವಕಾಶವಿರುವ ಕೆಕೆಆರ್ ತಂಡ ಮಾತ್ರ ಪ್ರಸ್ತುತ 12 ಅಂಕಗಳನ್ನು ಹೊಂದಿದೆ. ಇನ್ನುಳಿದ ಮೂರು ತಂಡಗಳು 10 ಅಂಕಗಳನ್ನು ಪಡೆದಿವೆ. ಹೀಗಾಗಿ ಇಂದಿನ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್, ರಾಜಸ್ಥಾನ್ ವಿರುದ್ದ ಗೆದ್ದರೆ 2 ಅಂಕಗಳನ್ನು ಪಡೆಯಲಿದೆ.
ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ 14ನ (IPL 2021) ಲೀಗ್ ಹಂತವು ಮುಕ್ತಾಯದ ಹಂತಕ್ಕೆ ತಲುಪಿದೆ. ಈಗಾಗಲೇ ಡೆಲ್ಲಿ ಕ್ಯಾಪಿಟಲ್ಸ್ (Delhi Capitals), ಚೆನ್ನೈ ಸೂಪರ್ ಕಿಂಗ್ಸ್ (CSK) ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡಗಳು ಪ್ಲೇ ಆಫ್ ಪ್ರವೇಶಿಸಿದೆ. ಆದರೆ ನಾಲ್ಕನೇ ತಂಡವಾಗಿ ಪ್ಲೇಆಫ್ಗೇರಲು ನಾಲ್ಕು ತಂಡಗಳ ನಡುವೆ ಭರ್ಜರಿ ಪೈಪೋಟಿ ಏರ್ಪಟ್ಟಿದೆ. ಅದರಂತೆ ಪ್ಲೇಆಫ್ ರೇಸ್ನಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ (KKR), ರಾಜಸ್ಥಾನ್ ರಾಯಲ್ಸ್ (RR), ಮುಂಬೈ ಇಂಡಿಯನ್ಸ್ (Mumbai Indians) ಹಾಗೂ ಪಂಜಾಬ್ ಕಿಂಗ್ಸ್ (PBKS) ನಡುವೆ ಪೈಪೋಟಿಯಿದೆ. ಆದರೆ ಮಂಗಳವಾರ ನಡೆಯಲಿರುವ ಪಂದ್ಯವು ರಾಜಸ್ಥಾನ್ ರಾಯಲ್ಸ್ ಹಾಗೂ ಮುಂಬೈ ಇಂಡಿಯನ್ಸ್ಗೆ ನಿರ್ಣಾಯಕ. ಅದರಲ್ಲೂ ಅಂಕಪಟ್ಟಿಯಲ್ಲಿ 7ನೇ ಸ್ಥಾನದಲ್ಲಿದ್ದರೂ ರಾಜಸ್ಥಾನ್ ರಾಯಲ್ಸ್ ವಿರುದ್ದ ಗೆದ್ದರೆ ಮುಂಬೈಗೆ ಪ್ಲೇಆಫ್ ಆಸೆಯನ್ನು ಜೀವಂತವಿರಿಸಿಕೊಳ್ಳಬಹುದು. ಅಲ್ಲದೆ ಮುಂದಿನ ಪಂದ್ಯದಲ್ಲಿ ಗೆಲ್ಲುವ ಮೂಲಕ ಪ್ಲೇಆಫ್ ಪ್ರವೇಶಿಸುವ ಅವಕಾಶವನ್ನು ಪಡೆಯಬಹುದು. ಆದರೆ ಅದು ಇತರೆ ತಂಡಗಳ ಫಲಿತಾಂಶ ಹಾಗೂ ನೆಟ್ ರನ್ ರೇಟ್ನ ಆಧಾರದ ಮೇಲೆ ಎಂಬುದು ವಿಶೇಷ.
ಏಕೆಂದರೆ ಪ್ಲೇಆಫ್ ಅವಕಾಶವಿರುವ ಕೆಕೆಆರ್ ತಂಡ ಮಾತ್ರ ಪ್ರಸ್ತುತ 12 ಅಂಕಗಳನ್ನು ಹೊಂದಿದೆ. ಇನ್ನುಳಿದ ಮೂರು ತಂಡಗಳು 10 ಅಂಕಗಳನ್ನು ಪಡೆದಿವೆ. ಹೀಗಾಗಿ ಇಂದಿನ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್, ರಾಜಸ್ಥಾನ್ ವಿರುದ್ದ ಗೆದ್ದರೆ 2 ಅಂಕಗಳನ್ನು ಪಡೆಯಲಿದೆ. ಅಲ್ಲದೆ ಒಟ್ಟು ಅಂಕವನ್ನು 12ಕ್ಕೇರಿಸಲಿದೆ. ಇನ್ನು ಮುಂದಿನ ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್ನ್ನು ಮಣಿಸಿದರೆ ಮುಂಬೈಗೆ ಒಟ್ಟು 14 ಅಂಕ ಸಿಗಲಿದೆ. ಒಂದು ವೇಳೆ ಮುಂಬೈ ಮುಂದಿನ 2 ಪಂದ್ಯಗಳಲ್ಲಿ ಗೆದ್ದರೆ, ಅತ್ತ ರಾಜಸ್ಥಾನ್ ರಾಯಲ್ಸ್ ವಿರುದ್ದದ ಕೊನೆಯ ಪಂದ್ಯದಲ್ಲಿ ಕೆಕೆಆರ್ ಸೋಲುವುದನ್ನು ಎದುರು ನೋಡಬೇಕು.
ಒಂದು ವೇಳೆ ಕೆಕೆಆರ್ ರಾಜಸ್ಥಾನ್ ವಿರುದ್ದ ಸೋತರೆ ಮುಂಬೈ 14 ಅಂಕಗಳೊಂದಿಗೆ ಪ್ಲೇಆಫ್ಗೆ ಎಂಟ್ರಿ ಕೊಡಬಹುದು. ಇದಾಗ್ಯೂ ಕೆಕೆಆರ್ ಆರ್ಆರ್ ವಿರುದ್ದ ಜಯ ಸಾಧಿಸಿ ಒಟ್ಟು 14 ಅಂಕಗಳನ್ನು ಪಡೆದರೂ ನೆಟ್ ರನ್ರೇಟ್ ಮೂಲಕ ಕೂಡ ಪ್ಲೇಆಫ್ಗೆ ಎಂಟ್ರಿ ಕೊಡುವ ಅವಕಾಶ ಮುಂಬೈ ಇಂಡಿಯನ್ಸ್ ತಂಡಕ್ಕಿದೆ. ಇದಕ್ಕಾಗಿ ಮುಂಬೈ ತಂಡವು ಮುಂದಿನ ಎರಡು ಪಂದ್ಯಗಳನ್ನು ಭರ್ಜರಿ ಅಂತರದಿಂದ ಗೆಲ್ಲಲೇಬೇಕು. ಈ ಮೂಲಕ ನೆಟ್ ರನ್ರೇಟ್ಅನ್ನು ಕೆಕೆಆರ್ಗಿಂತಲೂ ಹೆಚ್ಚಿಸಿಕೊಂಡರೆ ಪ್ಲೇ ಆಫ್ ಪ್ರವೇಶಿಸಬಹುದು. ಒಟ್ಟಿನಲ್ಲಿ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡದ ಪ್ಲೇಆಫ್ ಪ್ರವೇಶ ಮುಂದಿನ 2 ಪಂದ್ಯಗಳ ಫಲಿತಾಂಶಗಳ ಮೇಲೆ ನಿಂತಿದೆ ಎನ್ನಬಹುದು.
ಇದನ್ನೂ ಓದಿ: David Warner: SRH ತಂಡದಲ್ಲಿಲ್ಲ ಸ್ಥಾನ: ಪ್ರೇಕ್ಷಕನಾಗಿ ಕಾಣಿಸಿಕೊಂಡ ಡೇವಿಡ್ ವಾರ್ನರ್
ಇದನ್ನೂ ಓದಿ: IPL 2021: ಐಪಿಎಲ್ನಲ್ಲಿ ಹೊಸ ಇತಿಹಾಸ ನಿರ್ಮಿಸಲಿದ್ದಾರೆ ಹರ್ಷಲ್ ಪಟೇಲ್
ಇದನ್ನೂ ಓದಿ: KL Rahul: ಕೆಎಲ್ ರಾಹುಲ್ ಟೀಮ್ ಇಂಡಿಯಾಗೆ ನಾಯಕನಾಗಬಾರದು ಎಂದ ಮಾಜಿ ಕ್ರಿಕೆಟಿಗ
(How Mumbai Indians Can Qualify For IPL 2021 Playoffs)