ICC T20 World Cup 2022 ವೇಳಾಪಟ್ಟಿ ಪ್ರಕಟ: ಭಾರತದ ಮೊದಲ ಎದುರಾಳಿ ಪಾಕಿಸ್ತಾನ, ಯಾವಾಗ ಪಂದ್ಯ?
ICC T20 World Cup 2022 Schedule: ಐಸಿಸಿ ಟಿ20 ವಿಶ್ವಕಪ್ ಟೂರ್ನಿ 2022 ವೇಳಾಪಟ್ಟಿಯನ್ನು ಅಂತರರಾಷ್ಟ್ರೀಯ ಕ್ರಿಕೆಟ್ ಸಮಿತಿ ಪ್ರಕಟ ಮಾಡಿದೆ. ಅಕ್ಟೋಬರ್ 23 ರಂದು ಭಾರತ ತನ್ನ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ಆಡುವ ಮೂಲಕ ಅಭಿಯಾನವನ್ನು ಆರಂಭಿಸಲಿದೆ.
ಅಂತರರಾಷ್ಟ್ರೀಯ ಕ್ರಿಕೆಟ್ ಸಮಿತಿ 2022 ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿ (ICC T20 World Cup 2022) ವೇಳಾಪಟ್ಟಿಯನ್ನು ಪ್ರಕಟ ಮಾಡಿದೆ. ಇದರ ಪ್ರಕಾರ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಮಿನಿ ವಿಶ್ವಕಪ್ಗೆ ಅಕ್ಟೋಬರ್ 16 ರಂದು ಟೂರ್ನಿಗೆ ಚಾಲನೆ ಸಿಗಲಿದೆ. ಅಕ್ಟೋಬರ್ 23 ರಂದು ಭಾರತ ತನ್ನ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ (India vs Pakistan) ವಿರುದ್ಧ ಆಡುವ ಮೂಲಕ ಅಭಿಯಾನವನ್ನು ಆರಂಭಿಸಲಿದೆ. ನವೆಂಬರ್ 9 ರಂದು ಮೊದಲ ಸೆಮಿಫೈನಲ್ ನಡೆಯಲಿದೆ. ನವೆಂಬರ್ 10 ರಂದು ಎರಡನೇ ಸೆಮಿಫೈನಲ್ ಮತ್ತು ನವೆಂಬರ್ 13 ರಂದು ಫೈನಲ್ ಪಂದ್ಯವನ್ನು ಏರ್ಪಡಿಸಲಾಗಿದೆ. ಮೊದಲ ರೌಂಡ್ನ ಮೊದಲ ಪಂದ್ಯ ಶ್ರೀಲಂಕಾ ಮತ್ತು ನಮೀಬಿಯಾ ನಡುವೆ ನಡೆಯಲಿದೆ. ಅಕ್ಟೋಬರ್ 21ರವರೆಗೆ ನಡೆಯುವ ಈ ಪಂದ್ಯಗಳಲ್ಲಿ ಅರ್ಹತೆ ಪಡೆದ ತಂಡಗಳು ಸೂಪರ್-12 ಹಂತಕ್ಕೆ ಪ್ರವೇಶ ಪಡೆಯಲಿದೆ. ಮೊದಲ ರೌಂಡ್ನಲ್ಲಿ ಶ್ರೀಲಂಕಾ, ನಮೀಬಿಯಾ, ಸ್ಕಾಟ್ಲೆಂಡ್, ವೆಸ್ಟ್ ಇಂಡೀಸ್ ತಂಡಗಳು ಆಡಲಿವೆ.
ಇನ್ನು ಸೂಪರ್ 12 ಪಂದ್ಯಗಳು ಅಕ್ಟೋಬರ್ 22ರಿಂದ ಆರಂಭವಾಗಲಿದ್ದು, ಮೊದಲ ಪಂದ್ಯ ನ್ಯೂಜಿಲೆಂಡ್ ಮತ್ತು ಕಳೆದ ವರ್ಷ ಚಾಂಪಿಯನ್ ಪಟ್ಟ ಅಲಂಕರಿಸಿದ ಆಸ್ಟ್ರೇಲಿಯಾಗಳ ನಡುವೆ ಸಿಡ್ನಿ ಕ್ರಿಕೆಟ್ ಗ್ರೌಂಡ್ನಲ್ಲಿ ನಡೆಯಲಿದೆ. ಭಾರತ ಹಾಗೂ ಪಾಕಿಸ್ತಾನ ನಡುವಣ ಪಂದ್ಯವನ್ನು ಮೆಲ್ಬರ್ನ್ ಕ್ರಿಕೆಟ್ ಗ್ರೌಂಡ್ನಲ್ಲಿ ಆಯೋಜಿಸಲಾಗಿದೆ. ಮೊದಲ ಸೆಮಿಫೈನಲ್ ನವೆಂಬರ್ 9ರಂದು ಸಿಡ್ನಿ ಕ್ರಿಕೆಟ್ ಗ್ರೌಂಡ್ನಲ್ಲಿ ಮತ್ತು ಎರಡನೇ ಸೆಮಿಫೈನಲ್ ನವೆಂಬರ್ 10ರಂದು ಅಡಿಲೇಡ್ ಓವಲ್ ಗ್ರೌಂಡ್ನಲ್ಲಿ ನಡೆಯಲಿದೆ. ನಂತರ ನವೆಂಬರ್ 13ರಂದು ಫೈನಲ್ ಪಂದ್ಯ ಮೆಲ್ಬರ್ನ್ ಕ್ರಿಕೆಟ್ ಗ್ರೌಂಡ್ನಲ್ಲಿ ಆಯೋಜಿಸಲಾಗಿದೆ.
Fixtures of T20 World Cup 2022 have been announced. India placed alongside Pakistan, South Africa, Bangladesh & two qualifiers in Group 2 of Super 12 stage. India will square off against Pakistan in their first match of the tournament on October 23 at the MCG pic.twitter.com/M4QMuMaDOq
— ANI (@ANI) January 20, 2022
ಗ್ರೂಪ್ ಎ: ಶ್ರೀಲಂಕಾ, ನಮೀಬಿಯಾ, ಎರಡು ಕ್ವಾಲಿಫೈಯರ್ ತಂಡಗಳು
ಗ್ರೂಪ್ ಬಿ: ವೆಸ್ಟ್ ಇಂಡೀಸ್, ಸ್ಕಾಟ್ಲೆಂಡ್, ಎರಡು ಕ್ವಾಲಿಫೈಯರ್ ತಂಡಗಳು
ಸೂಪರ್ 12 ಹಂತ:
ಗ್ರೂಪ್ 1: ಆಸ್ಟ್ರೇಲಿಯಾ, ಅಫ್ಘಾನಿಸ್ತಾನ, ಇಂಗ್ಲೆಂಡ್, ನ್ಯೂಜಿಲೆಂಡ್, A1, A2
ಗ್ರೂಪ್ 2: ಬಾಂಗ್ಲಾದೇಶ, ಭಾರತ, ಪಾಕಿಸ್ತಾನ, ವೆಸ್ಟ್ ಇಂಡೀಸ್, B1, B2
ಭಾರತ ಪಂದ್ಯಗಳ ವೇಳಾಪಟ್ಟಿ:
ಭಾರತ vs ಪಾಕಿಸ್ತಾನ, ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್, ಅಕ್ಟೋಬರ್ 23
ಭಾರತ vs ಗ್ರೂಪ್ A ರನ್ನರ್ ಅಪ್, ಸಿಡ್ನಿ ಕ್ರಿಕೆಟ್ ಗ್ರೌಂಡ್, ಅಕ್ಟೋಬರ್ 27
ಭಾರತ vs ದಕ್ಷಿಣ ಆಫ್ರಿಕಾ, ಪರ್ತ್ ಸ್ಟೇಡಿಯಂ, ಅಕ್ಟೋಬರ್ 30
ಭಾರತ vs ಬಾಂಗ್ಲಾದೇಶ, ಅಡಿಲೇಡ್ ಓವಲ್, ನವೆಂಬರ್ 2
Pro Kabaddi 2022: ಬೆಂಗಳೂರು ಬುಲ್ಸ್ ವಿರುದ್ದ ಬೆಂಗಾಲ್ ವಾರಿಯರ್ಸ್ಗೆ ರೋಚಕ ಜಯ
Published On - 7:16 am, Fri, 21 January 22